ಭಾರತದಲ್ಲಿ 2024ರ Kia Carnival ಬಿಡುಗಡೆ, ಬೆಲೆ 63.90 ಲಕ್ಷ ರೂ.ನಿಂದ ಪ್ರಾರಂಭ
ಕಿಯಾ ಕಾರ್ನಿವಲ್ ಗಾಗಿ rohit ಮೂಲಕ ಅಕ್ಟೋಬರ್ 03, 2024 05:03 pm ರಂದು ಪ್ರಕಟಿಸಲಾಗಿದೆ
- 91 Views
- ಕಾಮೆಂಟ್ ಅನ್ನು ಬರೆಯಿರಿ
2023 ರ ಮಧ್ಯದಲ್ಲಿ ಕಿಯಾವು ತನ್ನ ಕಾರ್ನಿವಲ್‌ನ ಎರಡನೇ ಜನ್ ಮೊಡೆಲ್‌ಅನ್ನು ಸ್ಥಗಿತಗೊಳಿಸಿದ ನಂತರ ಇದೀಗ ಸಣ್ಣ ಬ್ರೇಕ್‌ನ ನಂತರ ಭಾರತೀಯ ಮಾರುಕಟ್ಟೆಗೆ ಮತ್ತೆ ಆಗಮಿಸಿದೆ
-
ಇದು ಸಂಪೂರ್ಣ ಲೋಡ್ ಮಾಡಲಾದ ಲಿಮೋಸಿನ್ ಪ್ಲಸ್ ವೇರಿಯೆಂಟ್‌ನಲ್ಲಿ ಲಭ್ಯವಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ 63.90 ಲಕ್ಷ ರೂ. ಆಗಿದೆ.
-
ವಿನ್ಯಾಸದ ಹೈಲೈಟ್‌ಗಳು 4-ಪೀಸ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿವೆ.
-
3-ಸಾಲು ಆಸನ ವಿನ್ಯಾಸ ಮತ್ತು ಒಂದೇ ಕಪ್ಪು ಮತ್ತು ಕಂದು ಥೀಮ್ ಆಯ್ಕೆಯನ್ನು ಕ್ಯಾಬಿನ್ ಹೊಂದಿದೆ.
-
ಬೋರ್ಡ್‌ನಲ್ಲಿರುವ ಫೀಚರ್‌ಗಳು ಎರಡು ಸನ್‌ರೂಫ್‌ಗಳು, ಡ್ಯುಯಲ್ 12.3-ಇಂಚಿನ ಡಿಸ್‌ಪ್ಲೇಗಳು ಮತ್ತು ಲೆವೆಲ್-2 ADAS ಅನ್ನು ಒಳಗೊಂಡಿವೆ.
-
ಇದನ್ನು 8-ಸ್ಪೀಡ್ ಆಟೊಮ್ಯಾಟಿಕ್‌ಗೆ ಜೋಡಿಸಲಾದ ಒಂದೇ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ.
ಒಂದು ವರ್ಷದ ಬ್ರೇಕ್‌ನ ನಂತರ, ಕಿಯಾ ಕಾರ್ನಿವಲ್ ಮಾನಿಕರ್ ಭಾರತೀಯ ಮಾರುಕಟ್ಟೆಗೆ ಮರಳಿದೆ, ಇದೀಗ ಫೇಸ್‌ಲಿಫ್ಟೆಡ್ ನಾಲ್ಕನೇ ತಲೆಮಾರಿನ ಆವೃತ್ತಿಯಲ್ಲಿದೆ. ಕಿಯಾವು 2024ರ ಸೆಪ್ಟೆಂಬರ್‌ನ ಮಧ್ಯದಿಂದ ಈ ಪ್ರೀಮಿಯಂ ಎಮ್‌ಪಿವಿಗಾಗಿ ಆನ್‌ಲೈನ್ ಮತ್ತು ಅದರ ಡೀಲರ್‌ಶಿಪ್‌ಗಳಲ್ಲಿ 2 ಲಕ್ಷ ರೂ.ಗೆ ಬುಕಿಂಗ್ ಅನ್ನು ತೆರೆದಿತ್ತು. ಭಾರತದಾದ್ಯಂತ ಹೊಸ ಕಾರ್ನಿವಲ್ ಒಂದೇ ಸಂಪೂರ್ಣ ಲೋಡ್ ಮಾಡಲಾದ ಲಿಮೋಸಿನ್ ಪ್ಲಸ್ ವೆರಿಯೆಂಟ್‌ನಲ್ಲಿ 63.90 ಲಕ್ಷ ರೂಪಾಯಿ ಬೆಲೆಯಲ್ಲಿ (ಪರಿಚಯಾತ್ಮಕ ಎಕ್ಸ್-ಶೋರೂಮ್) ಲಭ್ಯವಿದೆ.
ಹೊಸ ಕಿಯಾ ಕಾರ್ನಿವಲ್‌ನ ಹೊರಭಾಗ
ಇಂಡಿಯಾ-ಸ್ಪೆಕ್ 2024ರ ಕಿಯಾ ಕಾರ್ನಿವಲ್ ಜಾಗತಿಕವಾಗಿ ಮಾರಾಟವಾಗುವ ಫೇಸ್‌ಲಿಫ್ಟೆಡ್ ನಾಲ್ಕನೇ-ಜನ್ ಮೊಡೆಲ್‌ಗೆ ಹೋಲುತ್ತದೆ. ಇದು ಪ್ರಮುಖ ಗ್ರಿಲ್ (ಕ್ರೋಮ್ ಅಲಂಕರಣಗಳನ್ನು ಒಳಗೊಂಡಿರುವ), ಲಂಬವಾಗಿ ಜೋಡಿಸಲಾದ 4-ಪೀಸ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್‌ಎಲಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿರುವ ಕಾರು ತಯಾರಕರ ಹೊಸ ವಿನ್ಯಾಸದ ಭಾಷೆಯನ್ನು ಒಳಗೊಂಡಿದೆ.
ಬದಿಯಿಂದ ಗಮನಿಸುವಾಗ, ಇದು ಭಾರತದಲ್ಲಿ ಮಾರಾಟವಾದ ಎರಡನೇ-ಜನ್ ಕಾರ್ನಿವಲ್‌ನಿಂದ ಹಿಂದಿನ ಪ್ರಯಾಣಿಕರಿಗೆ ಪವರ್-ಸ್ಲೈಡಿಂಗ್ ಬಾಗಿಲುಗಳನ್ನು ಉಳಿಸಿಕೊಂಡಿದೆ. ಇತರ ಎಕ್ಸ್‌ಟಿರಿಯರ್ ಹೈಲೈಟ್ಸ್‌ಗಳು ತಾಜಾ 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿವೆ.
ಇದನ್ನೂ ಓದಿ: ಈ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..
ಹೊಸ ಕಿಯಾ ಕಾರ್ನಿವಲ್ ಇಂಟೀರಿಯರ್
2024 ರ ಇಂಡಿಯಾ-ಸ್ಪೆಕ್ ಕಿಯಾ ಕಾರ್ನಿವಲ್‌ನ ಇಂಟಿರೀಯರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಮೊಡೆಲ್‌ನಂತೆಯೇ ಇದೆ. ಇದು 3-ಸಾಲಿನ ಸೀಟಿಂಗ್ ವಿನ್ಯಾಸದಲ್ಲಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಮತ್ತು ಕೊನೆಯ ಸಾಲಿನಲ್ಲಿ ಬೆಂಚ್ ಸೀಟ್‌ನಲ್ಲಿ ಬರುತ್ತದೆ. ಕಿಯಾ ಹೊಸ ಎಮ್‌ಪಿವಿಯನ್ನು ಸಿಂಗಲ್ ಟ್ಯಾನ್ ಮತ್ತು ಬ್ರೌನ್ ಕ್ಯಾಬಿನ್ ಥೀಮ್‌ನಲ್ಲಿ ನೀಡುತ್ತಿದೆ.
ಫೀಚರ್‌ಗಳ ವಿಷಯದಲ್ಲಿ, ಇದು ಎರಡು 12.3-ಇಂಚಿನ ಡಿಸ್‌ಪ್ಲೇಗಳನ್ನು(ಒಂದು ಇನ್ಫೋಟೈನ್‌ಮೆಂಟಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಶನ್‌ಗಾಗಿ), ಮತ್ತು 11-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು(HUD) ಪಡೆಯುತ್ತದೆ. ಇದು ಸೊಂಟದ ಬೆಂಬಲದೊಂದಿಗೆ 12-ರೀತಿಯಲ್ಲಿ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 8-ರೀತಿಯಲ್ಲಿ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಪ್ಯಾಸೆಂಜರ್ ಸೀಟ್ ಅನ್ನು ಸಹ ಹೊಂದಿದೆ. ಕಿಯಾ ಕಾರ್ನಿವಲ್ ಅನ್ನು ಎರಡು ಸಿಂಗಲ್-ಪೇನ್ ಸನ್‌ರೂಫ್‌ಗಳು, 3-ಜೋನ್ ಆಟೋ ಎಸಿ, ಚಾಲಿತ ಟೈಲ್‌ಗೇಟ್ ಮತ್ತು 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್‌ನೊಂದಿಗೆ ನೀಡುತ್ತಿದೆ.
ಪ್ರಯಾಣಿಕರ ಸುರಕ್ಷತೆಯನ್ನು 8 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಖಾತ್ರಿಪಡಿಸಲಾಗಿದೆ. ಇದು ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ, ಮುಂಭಾಗದ ಘರ್ಷಣೆ ಎಚ್ಚರಿಕೆ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು
ಹೊಸ ಇಂಡಿಯಾ-ಸ್ಪೆಕ್ ಕಾರ್ನಿವಲ್ ಅನ್ನು ಒಂದೇ ಎಂಜಿನ್-ಗೇರ್ ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ, ಅದರ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:
ವಿಶೇಷಣಗಳು |
2.2-ಲೀಟರ್ ಡೀಸೆಲ್ |
ಪವರ್ |
193ಪಿಎಸ್ |
ಟಾರ್ಕ್ |
441 ಎನ್‌ಎಮ್ |
ಗೇರ್‌ಬಾಕ್ಸ್ |
8-ಸ್ಪೀಡ್ ಆಟೋಮ್ಯಾಟಿಕ್ |
3.5-ಲೀಟರ್ V6 ಪೆಟ್ರೋಲ್ (287 ಪಿಎಸ್/353 ಎನ್‌ಎಮ್) ಮತ್ತು 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ (242 PS/367 ಎನ್‌ಎಮ್) ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಕಿಯಾವು ಅಂತರರಾಷ್ಟ್ರೀಯ-ಸ್ಪೆಕ್ ಕಾರ್ನಿವಲ್ ಅನ್ನು ನೀಡುತ್ತದೆ.
ಹೊಸ ಕಿಯಾ ಕಾರ್ನಿವಲ್ ಪ್ರತಿಸ್ಪರ್ಧಿಗಳು
2024ರ ಕಿಯಾ ಕಾರ್ನಿವಲ್ ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗೆ ಪ್ರೀಮಿಯಂ ಪರ್ಯಾಯವಾಗಿದೆ, ಆದರೆ ಲೆಕ್ಸಸ್ ಎಲ್‌ಎಮ್ ಮತ್ತು ಟೊಯೋಟಾ ವೆಲ್‌ಫೈರ್‌ಗೆ ಕೈಗೆಟುಕುವ ಆಯ್ಕೆಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
0 out of 0 found this helpful