• English
  • Login / Register

2024 Kia Carnival ಅಪ್ಡೇಟ್: ಬಿಡುಗಡೆಗೆ ತಿಂಗಳು ಇರುವಾಗಲೇ ಮೊದಲು ಬಾರಿಗೆ ಟೀಸರ್ ಔಟ್

ಕಿಯಾ ಕಾರ್ನಿವಲ್ ಗಾಗಿ shreyash ಮೂಲಕ ಸೆಪ್ಟೆಂಬರ್ 09, 2024 08:53 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಟೀಸರ್ ನಮಗೆ 2024 ಕಿಯಾ ಕಾರ್ನಿವಲ್‌ನ ಮುಂಭಾಗದ ಮತ್ತು ಹಿಂಭಾಗದ ಡಿಸೈನ್ ನ ಲುಕ್ ಅನ್ನು ತೋರಿಸುತ್ತದೆ

2024 Kia Carnival Teased For The First Time Ahead Of Launch In October

  •  2024 ಕಿಯಾ ಕಾರ್ನಿವಲ್ ಗೆ ವಿದೇಶದಲ್ಲಿ ಮಾರಾಟವಾಗುತ್ತಿರುವ ಮಾಡೆಲ್ ನ ಡಿಸೈನ್ ಅನ್ನು ನೀಡಲಾಗಿದೆ.

  •  ಹೊರಭಾಗದ ಫೀಚರ್ ಗಳಲ್ಲಿ ವರ್ಟಿಕಲ್ ಆಗಿ ಜೋಡಿಸಲಾದ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ LED ಲೈಟಿಂಗ್ ಸೆಟಪ್ ಗಳು ಸೇರಿವೆ.

  •  ಇಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಕುಳಿತ ಪ್ರಯಾಣಿಕರಿಗೆ ಎರಡು ಬೇರೆ ಬೇರೆ ಸನ್‌ರೂಫ್‌ಗಳನ್ನು ಕೂಡ ನೀಡಲಾಗಿದೆ.

  •  ಕ್ಯಾಬಿನ್ ನಲ್ಲಿ ಕನೆಕ್ಟೆಡ್ ಸ್ಕ್ರೀನ್ ಸೆಟಪ್ ಅನ್ನು ಪಡೆಯುತ್ತದೆ (ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್‌ ಡಿಸ್ಪ್ಲೇ).

  •  ಇದು ಅಂತಾರಾಷ್ಟ್ರೀಯವಾಗಿ 3.5-ಲೀಟರ್ V6 ಪೆಟ್ರೋಲ್ (287 PS/353 Nm) ಮತ್ತು 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ (242 PS/367 Nm) ನೊಂದಿಗೆ ಲಭ್ಯವಿದೆ.

  •  ಬೆಲೆಯು 40 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

 ಹೊಸ ಜನರೇಷನ್ ಕಿಯಾ ಕಾರ್ನಿವಲ್ ಅನ್ನು 2023 ರ ಹೊಸ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಲಾಂಚ್ ಮಾಡಲಾಗಿತ್ತು. ನಂತರ ಅಕ್ಟೋಬರ್‌ನಲ್ಲಿ, ಕಾರ್ನಿವಲ್‌ನ ಅಪ್ಡೇಟ್ ಆಗಿರುವ ವರ್ಷನ್ ಅನ್ನು ವಿಶ್ವಾದ್ಯಂತ ಪರಿಚಯಿಸಲಾಯಿತು. ಈಗ, ಅಪ್ಡೇಟ್ ಆಗಿರುವ ಕಿಯಾ MPV ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಮತ್ತು ಕಿಯಾ ಅದರ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಮರುಕಟ್ಟೆಯಲ್ಲಿದ್ದ ಕೊನೆಯ ಕಾರ್ನಿವಲ್ MPV ಹಳೆಯ ಜನರೇಷನ್ ಮಾಡೆಲ್ ಆಗಿದ್ದು, ಇದನ್ನು 2023 ರಲ್ಲಿ ನಿಲ್ಲಿಸಲಾಯಿತು.

 ಟೀಸರ್ ನಲ್ಲಿ ಏನೇನಿದೆ?

 ಟೀಸರ್ MPV ಯ ಡಿಸೈನ್ ಅನ್ನು ಸಂಪೂರ್ಣವಾಗಿ ತೋರಿಸದಿದ್ದರೂ ಕೂಡ, ಅದು ನಮಗೆ ಮುಂಭಾಗ ಮತ್ತು ಹಿಂಭಾಗದ ಒಂದು ಲುಕ್ ಅನ್ನು ತೋರಿಸಿದೆ. ಭಾರತದಲ್ಲಿ ಬರಲಿರುವ 2024 ರ ಕಾರ್ನಿವಲ್‌ನ ಮುಂಭಾಗ ಮತ್ತು ಹಿಂಭಾಗದ ಡಿಸೈನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿರುವ ವರ್ಷನ್ ನಂತೆಯೇ ಕಾಣುತ್ತದೆ. ಹೊಸ ಜನರೇಷನ್ ಕಾರ್ನಿವಲ್ ಕಿಯಾದ ಇತ್ತೀಚಿನ ಡಿಸೈನ್ ಜೊತೆಗೆ ದೊಡ್ಡ ಗ್ರಿಲ್, ವರ್ಟಿಕಲ್ ಆಗಿ ಜೋಡಿಸಲಾದ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ LED DRLಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಈ ಪ್ರೀಮಿಯಂ ಕಿಯಾ MPV ಕನೆಕ್ಟೆಡ್ LED ಟೈಲ್ ಲೈಟ್ ಗಳನ್ನು ಪಡೆಯುತ್ತದೆ.

 ಟೀಸರ್ ನಮಗೆ ಕ್ಯಾಬಿನ್ ನಲ್ಲಿ ಇರುವ ಕನೆಕ್ಟೆಡ್ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ತೋರಿಸಿದೆ ಮತ್ತು 2024 ಕಾರ್ನಿವಲ್ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಬೇರೆ ಬೇರೆ ಸನ್‌ರೂಫ್‌ಗಳನ್ನು ಹೊಂದಿರುವ ವಿಷಯವನ್ನು ಖಚಿತಪಡಿಸಿದೆ.

 ಇದನ್ನು ಕೂಡ ಓದಿ: ಹ್ಯುಂಡೈ ಎಕ್ಸ್‌ಟರ್ ನ್ಯೂ S ಪ್ಲಸ್ ಮತ್ತು S(O) ಪ್ಲಸ್ ವೇರಿಯಂಟ್ ಗಳು ಈಗ ಸನ್‌ರೂಫ್‌ನೊಂದಿಗೆ ಲಭ್ಯ, ಬೆಲೆಗಳು ರೂ 7.86 ಲಕ್ಷದಿಂದ ಪ್ರಾರಂಭ

 ನಿರೀಕ್ಷಿಸಲಾಗಿರುವ ಇತರ ಫೀಚರ್ ಗಳು

2024 Kia Carnival Facelift interiors

 MVPಯು ಎರಡು 12.3-ಇಂಚಿನ ಡಿಸ್‌ಪ್ಲೇಗಳು (ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), 3-ಝೋನ್ AC, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮತ್ತು ಪವರ್ಡ್ ಸೀಟ್ ಗಳು, ಹಿಂಬದಿ ಸೀಟ್ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು ಮತ್ತು ಹೆಡ್ಸ್-ಅಪ್ ಡಿಸ್ಪ್ಲೇಯಂತಹ ಫೀಚರ್ ಗಳೊಂದಿಗೆ ಬರುವ ನಿರೀಕ್ಷೆಯಿದೆ. ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಪಡೆಯಬಹುದು.

 ನಿರೀಕ್ಷಿಸಲಾಗಿರುವ ಎಂಜಿನ್ ಆಯ್ಕೆಗಳು

2024 Kia Carnival spied

 ವಿದೇಶದಲ್ಲಿ ಮಾರಾಟದಲ್ಲಿರುವ ಕಾರ್ನಿವಲ್ ಹಲವು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 3.5-ಲೀಟರ್ V6 ಪೆಟ್ರೋಲ್ (287 PS/353 Nm) ಮತ್ತು 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ (242 PS/367 Nm). ಭಾರತದಲ್ಲಿ ಬರಲಿರುವ ಮಾಡೆಲ್ ಗೆ ಯಾವ ಎಂಜಿನ್ ಆಯ್ಕೆಗಳು ಲಭ್ಯವಿರುತ್ತವೆ ಎಂಬುದನ್ನು ಕಿಯಾ ಇನ್ನೂ ತಿಳಿಸಿಲ್ಲ. ಹಿಂದಿನ ಜನರೇಷನ್ ಕಾರ್ನಿವಲ್ ನಲ್ಲಿ ಕೇವಲ 2.2-ಲೀಟರ್ ಡೀಸೆಲ್-ಆಟೋಮ್ಯಾಟಿಕ್ ಪವರ್‌ಟ್ರೇನ್ ಅನ್ನು ನೀಡಲಾಗಿತ್ತು.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 2024 ರ ಕಿಯಾ ಕಾರ್ನಿವಲ್ ಬೆಲೆಯು 40 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಾರುತಿ ಇನ್ವಿಕ್ಟೊಗೆ ಹೋಲಿಸಿದರೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಿದೆ. ಇದನ್ನು ಟೊಯೋಟಾ ವೆಲ್‌ಫೈರ್ ಮತ್ತು ಲೆಕ್ಸಸ್ LMಗೆ ಹೋಲಿಸಿದರೆ ಕಡಿಮೆ ಬೆಲೆಯ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Kia ಕಾರ್ನಿವಲ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience