• English
  • Login / Register

2024ರ Mercedes-AMG G 63 ಭಾರತದಲ್ಲಿ ರೂ 3.60 ಕೋಟಿಗೆ ಬಿಡುಗಡೆ, ಹೊಸ ಎಂಜಿನ್‌ ಮತ್ತು ಫೀಚರ್‌ಗಳ ಸೇರ್ಪಡೆ

ಮರ್ಸಿಡಿಸ್ ಜಿ ವರ್ಗ ಗಾಗಿ dipan ಮೂಲಕ ಅಕ್ಟೋಬರ್ 23, 2024 04:28 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ವಿನ್ಯಾಸದಲ್ಲಿನ ಮರ್ಪಾಡುಗಳು ಚಿಕ್ಕದಾಗಿದ್ದರೂ, G 63 ಫೇಸ್‌ಲಿಫ್ಟ್ ಮುಖ್ಯವಾಗಿ ಅದರ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪವರ್‌ಟ್ರೇನ್‌ಗೆ ಟೆಕ್ ಸೇರ್ಪಡೆಗಳನ್ನು ಪಡೆಯುತ್ತದೆ

2024 Mercedes-AMG G 63 Launched At Rs 3.60 Crore In India, Gets A New Mild-hybrid Engine And Updated Tech

  • ಮರ್ಸಿಡೀಸ್‌ ಎಎಮ್‌ಜಿ ಜಿ 63ಯು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 22-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಅನ್ನು ಪಡೆಯುತ್ತದೆ.

  • ಕ್ಯಾಬಿನ್‌ನಲ್ಲಿ ಆಪ್‌ಡೇಟ್‌ ಮಾಡಲಾದ ಸಾಫ್ಟ್‌ವೇರ್‌ನಿಂದ ರನ್‌ ಆಗುವ 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು ಮತ್ತು 3-ಝೋನ್‌ ಆಟೋ ಎಸಿಯನ್ನು ಹೊಂದಿರಲಿದೆ.

  • ಸುರಕ್ಷತೆಯ ದೃಷ್ಟಿಯಿಂದ, ಇದು ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಹೊಂದಿದೆ.

  • ಇದು 4-ಲೀಟರ್ ಟ್ವಿನ್-ಟರ್ಬೊ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 4WD ಸೆಟಪ್ ಅನ್ನು ಹೊಂದಿದೆ.

ಮರ್ಸಿಡಿಸ್-ಬೆನ್ಜ್, 2024 ರ ಇ-ಕ್ಲಾಸ್ ಬಿಡುಗಡೆಯ ಸಂದರ್ಭದಲ್ಲಿ, ಭಾರತದಲ್ಲಿ ಇನ್ನೂ ಎರಡು ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆ ನಿಟ್ಟಿನಲ್ಲಿ, ಇದು ಮರ್ಸಿಡೀಸ್‌-ಎಎಮ್‌ಜಿ 63 ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ, ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆಗಳು ರೂ 3.60 ಕೋಟಿಯಿಂದ ಪ್ರಾರಂಭವಾಗುತ್ತವೆ. ಜನಪ್ರಿಯ ಫೇಸ್‌ಲಿಫ್ಟ್ ಶೈಲಿಯಲ್ಲಿ, ಇದು ಹೊಸ ವಿನ್ಯಾಸದ ಅಂಶಗಳು, ಕ್ಯಾಬಿನ್‌ಗೆ ಆಪ್‌ಡೇಟ್‌ಗಳು, ಸಕ್ರಿಯ ಸಸ್ಪೆನ್ಶನ್ ಸೆಟಪ್ ಮತ್ತು ಹುಡ್‌ನ ಕೆಳಗೆ ಮಾರ್ಪಾಡುಗಳನ್ನು ಪಡೆಯುತ್ತದೆ.

ನೀವು ಇದನ್ನು ಖರೀದಿಸಲು ಬಯಸುವುದಾದರೆ, ದೀರ್ಘ ಸಮಯದವರೆಗೆ ಕಾಯಬೇಕಾಗುತ್ತದೆ. ಹೊಸ G 63 ನ ಎಲ್ಲಾ 120 ಯೂನಿಟ್‌ಗಳನ್ನು ಈಗಾಗಲೇ ಬುಕ್‌ ಮಾಡಲಾಗಿದ್ದು,  2025 ರ ಮೂರನೇ ತ್ರೈಮಾಸಿಕದಲ್ಲಿ  ಡೆಲಿವರಿ ಪ್ರಾರಂಭವಾಗಲಿದೆ. 

2024 ಮರ್ಸೀಡೀಸ್‌-ಎಎಮ್‌ಜಿ ಜಿ 63 ನೀಡುವ ಎಲ್ಲವನ್ನೂ ನಾವು ನೋಡೋಣ:

ಎಕ್ಸ್‌ಟಿರಿಯರ್‌

2024 Mercedes-AMG G 63 Launched At Rs 3.60 Crore In India, Gets A New Mild-hybrid Engine And Updated Tech

ಮೊದಲ ನೋಟದಲ್ಲಿ, 2024ರ ಮರ್ಸಿಡೀಸ್‌-ಎಎಮ್‌ಜಿ ಜಿ 63 ಹೊರಹೋಗುವ ಮೊಡೆಲ್‌ಗೆ ಹೋಲುತ್ತದೆ. ಇದು G-ಕ್ಲಾಸ್ ಮೊಡೆಲ್‌ಗಳೊಂದಿಗೆ ಸಂಯೋಜಿತವಾಗಿರುವ ಐಕಾನಿಕ್ ಬಾಕ್ಸಿ ಬಾಡಿ ಆಕೃತಿಯನ್ನು ಪಡೆಯುವುದನ್ನು ಮುಂದುವರೆಸಿದೆ, ಮೊದಲಿನಂತೆ ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ರೌಂಡ್ ಪ್ರೊಜೆಕ್ಟರ್ ಆಧಾರಿತ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಫೆಂಡರ್-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಆದರೆ ಹತ್ತಿರದಿಂದ ಗಮನಿಸಿದಾಗ, ಸಂಪೂರ್ಣ ಕಪ್ಪಾದ ಹೊರಗಿನ ಗ್ರಿಲ್ ಮತ್ತು ಮರ್ಸಿಡಿಸ್ ಲೋಗೋ ಮತ್ತು ಮಾರ್ಪಾಡು ಮಾಡಿದ ಬಂಪರ್‌ನಂತಹ ಬದಲಾವಣೆಗಳನ್ನು ಗುರುತಿಸಬಹುದು. ಚಕ್ರದ ವಿನ್ಯಾಸವು ಸಹ ಹೊಸದು ಮತ್ತು 22-ಇಂಚಿನ ಗಾತ್ರದವರೆಗೆ ಅದನ್ನು ಆಯ್ಕೆ ಮಾಡಬಹುದು. ಅದರ ಹೊರತಾಗಿ, ಕಾರು ಹೆಚ್ಚು- ಕಡಿಮೆ ಫೇಸ್‌ಲಿಫ್ಟ್‌ಗಿಂತ ಹಿಂದಿನ ಆವೃತ್ತಿಯನ್ನು ಹೋಲುತ್ತದೆ.

ಇಂಟಿರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆ

2024 Mercedes-AMG G 63 Launched At Rs 3.60 Crore In India, Gets A New Mild-hybrid Engine And Updated Tech

ಒಳಭಾಗದಲ್ಲಿ ಸಹ, ಮೊದಲ ನೋಟದಲ್ಲಿ, 2024 AMG G 63 ಪೂರ್ವ-ಫೇಸ್‌ಲಿಫ್ಟ್ ಮೊಡೆಲ್‌ನ ರೀತಿಯ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ. ಸ್ಟೀರಿಂಗ್ ಚಕ್ರವು ಹೊಸದಾಗಿದೆ ಮತ್ತು ವಿಭಿನ್ನ ಕಾರ್ಯಗಳನ್ನು ಆಯ್ಕೆ ಮಾಡಲು ರೋಟರಿ ಡಯಲ್‌ಗಳೊಂದಿಗೆ ಪ್ರಸ್ತುತ-ಜನರೇಶನ್‌ನ ಮರ್ಸಿಡಿಸ್-AMG ಕಾರುಗಳಿಗೆ ಹೋಲುತ್ತದೆ.

ಸೀಟುಗಳು ನಪ್ಪಾ ಲೆದರ್ ಕವರ್‌ನಲ್ಲಿ ಫಿನಿಶ್‌ ಆಗಿದ್ದು ಮತ್ತು ಈ ಎಸ್‌ಯುವಿ ಕಾರ್ಬನ್ ಫೈಬರ್ ಆಕ್ಸೆಂಟ್‌ಗಳು ಮತ್ತು ಕಸ್ಟಮೈಸ್‌ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ. ಆದರೆ ಇಲ್ಲಿ ಹೊಸದೇನೆಂದರೆ, ಡ್ಯುಯಲ್ 12.3-ಇಂಚಿನ ಪರದೆಗಳು, ಇದು ಈಗ ಆಪ್‌ಡೇಟ್‌ ಮಾಡಲಾದ ಸಾಫ್ಟ್‌ವೇರ್ ಅನ್ನು ಪಡೆಯುತ್ತವೆ ಮತ್ತು ಆಪ್‌ಡೇಟ್‌ ಮಾಡಿದ ಆಫ್-ರೋಡ್ ಕಾಕ್‌ಪಿಟ್ (ಪ್ರಮುಖ ಅಂಕಿಅಂಶಗಳನ್ನು ತೋರಿಸುವುದು) ಮತ್ತು ಆಗ್ಮೆಂಟೆಡ್ ರಿಯಾಲಿಟಿಯನ್ನು ನ್ಯಾವಿಗೇಷನ್ ಸಿಸ್ಟಮ್‌ಗೆ ಸಂಯೋಜಿಸಲಾಗಿದೆ.

ಫೀಚರ್‌ಗಳ ವಿಷಯದಲ್ಲಿ, ಇದು ಡ್ಯಾಶ್‌ಬೋರ್ಡ್‌ನಲ್ಲಿ ಮೇಲೆ ತಿಳಿಸಲಾದ ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು(ಒಂದು ಟಚ್‌ಸ್ಕ್ರೀನ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), 18-ಸ್ಪೀಕರ್ ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಸಿಸ್ಟಮ್, 3-ಜೋನ್ ಆಟೋ ಎಸಿ ಮತ್ತು ಸನ್‌ರೂಫ್ ಅನ್ನು ಹೊಂದಿದೆ. 

ಇದರ ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಇದು ಸಕ್ರಿಯ ಬ್ರೇಕ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಆಪ್‌ಡೇಟ್‌ ಮಾಡಲಾದ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸಹ ಹೊಂದಿದೆ.

ಇದನ್ನೂ ಓದಿ: 2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ..

ಪವರ್‌ಟ್ರೈನ್‌ ಆಯ್ಕೆಗಳು

2024 Mercedes-AMG G 63 Launched At Rs 3.60 Crore In India, Gets A New Mild-hybrid Engine And Updated Tech

ಮರ್ಸಿಡೀಸ್‌-ಬೆಂಝ್‌ ಎಎಮ್‌ಜಿ ಜಿ 63ಯು 4-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ, ಇದನ್ನು ಈಗ ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಆಪ್‌ಡೇಟ್‌ ಮಾಡಲಾಗಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್

ಪವರ್‌

585 ಪಿಎಸ್‌

ಟಾರ್ಕ್‌

850 ಎನ್‌ಎಮ್‌

ಟ್ರಾನ್ಸ್‌ಮಿಷನ್‌

9-ಸ್ಪೀಡ್‌ DCT*

ಡ್ರೈವ್‌ಟ್ರೈನ್‌

4WD^

*DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

^4WD = 4-ವೀಲ್-ಡ್ರೈವ್

ಎಎಮ್‌ಜಿ ಜಿ 63ನಲ್ಲಿರುವ ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ 20 ಪಿಎಸ್‌ನ ಹೆಚ್ಚುವರಿ ಬೂಸ್ಟ್‌ ಅನ್ನು ನೀಡುತ್ತದೆ. ಇದು ಹೊಸ ಲಾಂಚ್‌ ಕಂಟ್ರೋಲ್‌ ಫಂಕ್ಷನ್‌ ಅನ್ನು ಪಡೆಯುತ್ತದೆ ಮತ್ತು 4.3 ಸೆಕೆಂಡುಗಳಲ್ಲಿ 0-100 kmph ವೇಗದಲ್ಲಿ ಚಲಿಸುತ್ತದೆ. ಇದು ಆಕ್ಟಿವ್‌ ಸಸ್ಪೆನ್ಸನ್‌ ಸೆಟಪ್‌ ಅನ್ನು ಸಹ ಹೊಂದಿದೆ.

ಪ್ರತಿಸ್ಪರ್ಧಿಗಳು

2024 Mercedes-AMG G 63 Launched At Rs 3.60 Crore In India, Gets A New Mild-hybrid Engine And Updated Tech

ಮರ್ಸಿಡೀಸ್‌-ಬೆಂಝ್‌ ಎಎಮ್‌ಜಿ ಜಿ 63 ಅದರ ಬೆಲೆ ರೇಂಜ್‌ನಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಆದರೆ ಆಫ್-ರೋಡಿಂಗ್ ಪರಾಕ್ರಮಕ್ಕೆ ಬಂದಾಗ ಜೀಪ್ ರಾಂಗ್ಲರ್ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಜಿ ವರ್ಗ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience