• English
  • Login / Register

ಭಾರತದಲ್ಲಿ 2024ರ Mini Cooper S ಮತ್ತು Mini Countryman ಎಲೆಕ್ಟ್ರಿಕ್ ಬಿಡುಗಡೆ, ಬೆಲೆಗಳು 44.90 ಲಕ್ಷ ರೂ.ನಿಂದ ಪ್ರಾರಂಭ

published on ಜುಲೈ 24, 2024 05:59 pm by dipan for ಮಿನಿ ಕೂಪರ್ ಎಸ್‌

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಿನಿ ಕಂಟ್ರಿಮ್ಯಾನ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಪಾದಾರ್ಪಣೆ ಮಾಡುತ್ತಿದೆ

2024 Mini Cooper and Mini Countryman Electric launched in India

  • 2024ರ ಮಿನಿ ಕೂಪರ್‌ನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 44.90 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. 
  • ಕಂಟ್ರಿಮ್ಯಾನ್ ಇವಿಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 54.90 ಲಕ್ಷ ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.
  • ನಾಲ್ಕನೇ ತಲೆಮಾರಿನ ಕೂಪರ್ ಹೊಸ ರೌಂಡ್ ಹೆಡ್‌ಲೈಟ್‌ಗಳು, ಅಷ್ಟಭುಜಾಕೃತಿಯ ಗ್ರಿಲ್ ಮತ್ತು ಹೊಸ ಪಿಕ್ಸಲೇಟೆಡ್ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ, ಆದರೆ ಕಂಟ್ರಿಮ್ಯಾನ್ EV ವಿಭಿನ್ನ ಅಷ್ಟಭುಜಾಕೃತಿಯ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ.
  • ಎರಡೂ ಕಾರುಗಳ ಇಂಟಿರೀಯರ್‌ನ ವಿನ್ಯಾಸವು 9.4-ಇಂಚಿನ  ರೌಂಡ್‌ OLED ಟಚ್‌ಸ್ಕ್ರೀನ್‌ನೊಂದಿಗೆ ಕೇಂದ್ರಬಿಂದುವಾಗಿದೆ.
  • ಸಾಮಾನ್ಯ ಫೀಚರ್‌ಗಳೆಂದರೆ ಪನೋರಮಿಕ್ ಸನ್‌ರೂಫ್, ಒಪ್ಶನಲ್‌ ಹೆಡ್ಸ್-ಅಪ್ ಡಿಸ್ಪ್ಲೇ (HUD), ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು ಮತ್ತು ಎಂಬಿಯೆಂಟ್‌ ಲೈಟಿಂಗ್‌.
  • ಹೊಸ ಮಿನಿ ಕೂಪರ್ ಎಸ್ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (204 PS/300 Nm) ಅನ್ನು ಪಡೆಯುತ್ತದೆ. 
  • ಮಿನಿ ಕಂಟ್ರಿಮ್ಯಾನ್ ಇವಿಯು ಒಂದೇ ಮೋಟಾರ್ (204 PS/250 Nm) ಶಕ್ತಿಯೊಂದಿಗೆ 66.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ನಾಲ್ಕನೇ ತಲೆಮಾರಿನ ಮಿನಿ ಕೂಪರ್ ಎಸ್ ಮತ್ತು ಮೊಟ್ಟಮೊದಲ ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡು ಐಷಾರಾಮಿ ಕಾರುಗಳ ಬೆಲೆಗಳು ಈ ಕೆಳಗಿನಂತಿವೆ:

ಮಾಡೆಲ್‌

ಬೆಲೆಗಳು

2024ರ ಮಿನಿ ಕೂಪರ್‌ ಎಸ್‌ 

44.90 ಲಕ್ಷ ರೂ.

2024ರ ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್

54.90 ಲಕ್ಷ ರೂ.

ಭಾರತದಲ್ಲಿನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು

ನಾವು ಎರಡೂ ಮಿನಿ ಮೊಡೆಲ್‌ಗಳನ್ನು ವಿವರವಾಗಿ ನೋಡೋಣ:

2024 ಮಿನಿ ಕೂಪರ್ ಎಸ್

ಹೊರಭಾಗ

2024 Mini Cooper S front look

ಕೆಲವು ತಾಜಾ ಅಂಶಗಳನ್ನು ಪರಿಚಯಿಸುವಾಗಲೂ 2024 ಮಿನಿ ಕೂಪರ್ ತನ್ನ ಕ್ಲಾಸಿಕ್‌ ವಿನ್ಯಾಸವನ್ನು ಉಳಿಸಿಕೊಂಡಿದೆ. ಇದು ಸಂಕೀರ್ಣ ವಿನ್ಯಾಸದ ವಿವರಗಳು ಮತ್ತು 'S' ಬ್ಯಾಡ್ಜಿಂಗ್‌ನೊಂದಿಗೆ ಹೊಸ ಅಷ್ಟಭುಜಾಕೃತಿಯ ಗ್ರಿಲ್ ಅನ್ನು ಒಳಗೊಂಡಿದೆ. ಹ್ಯಾಚ್‌ಬ್ಯಾಕ್ ಹೊಸ ಸುತ್ತಿನ ಹೆಡ್‌ಲೈಟ್‌ಗಳನ್ನು ಹೊಂದಿದ್ದು ಅದು ಡಿಆರ್‌ಎಲ್‌ಗಾಗಿ ಕಸ್ಟಮೈಸ್‌ ಮಾಡಬಹುದಾದ ಲೈಟ್‌ ಪ್ಯಾಟರ್ನ್‌ಗಳನ್ನು ನೀಡುತ್ತದೆ.

2024 Mini Cooper S rear three-fourth

ಇದು ಎರಡೂ ಬದಿಯಲ್ಲಿ ಎರಡು ಬಾಗಿಲುಗಳು ಮತ್ತು 17-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಬರುತ್ತದೆ, ಇದನ್ನು 18-ಇಂಚಿನ ಟಯರ್‌ಗೆ ಆಪ್‌ಗ್ರೇಡ್‌ ಮಾಡಬಹುದು. ಹಿಂಭಾಗದಲ್ಲಿ, ಕಾರು ಅನುಕ್ರಮ ಇಂಡಿಕೇಟರ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ತ್ರಿಕೋನ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ. ಮಿನಿಯು ತನ್ನ ಕೂಪರ್ ಎಸ್ ಅನ್ನು ಓಷನ್ ವೇವ್ ಗ್ರೀನ್, ಸನ್ನಿ ಸೈಡ್ ಯೆಲ್ಲೋ, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ ರೆಡ್ II ಮತ್ತು ಬ್ಲೇಜಿಂಗ್ ಬ್ಲೂ ಎಂಬ ಐದು ಬಣ್ಣದ ಆಯ್ಕೆಗಳಲ್ಲಿ ನೀಡುತ್ತಿದೆ.

ಈ ಕಾರಿನ ಆಯಾಮಗಳು ಈ ಕೆಳಗಿನಂತಿವೆ:

ಉದ್ದ

3,876 ಮಿ.ಮೀ

ಅಗಲ

1,744 ಮಿ.ಮೀ

ಎತ್ತರ

1,432 ಮಿ.ಮೀ

ವೀಲ್‌ಬೇಸ್‌

2,495 ಮಿ.ಮೀ

ಬೂಟ್‌ಸ್ಪೇಸ್‌

210 ಲೀಟರ್‌

ಇಂಟಿರೀಯರ್‌

New Mini Cooper S interiors

ವೃತ್ತಾಕಾರದ ಥೀಮ್ ಒಳಭಾಗದಲ್ಲೂ ಕಾಣಬಹುದು, ಕೇಂದ್ರಬಿಂದುವಾಗಿ 9.4-ಇಂಚಿನ ಸುತ್ತಿನ OLED ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ. ಸಾಂಪ್ರದಾಯಿಕ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ ಬದಲಿಗೆ, ಎಲ್ಲಾ ಕಾರಿನ ಮಾಹಿತಿಯನ್ನು ಈ ಮಧ್ಯದ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಪಾರ್ಕಿಂಗ್ ಬ್ರೇಕ್, ಗೇರ್ ಸೆಲೆಕ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಅನುಭವ ಮೋಡ್ ಟಾಗಲ್ ಮತ್ತು ವಾಲ್ಯೂಮ್ ಕಂಟ್ರೋಲ್ ಅನ್ನು ಟಚ್‌ಸ್ಕ್ರೀನ್‌ನ ಕೆಳಗಿರುವ ಸೆಂಟರ್ ಕನ್ಸೋಲ್‌ನಲ್ಲಿ ಟಾಗಲ್ ಬಾರ್ ಘಟಕದಲ್ಲಿ ಜೋಡಿಸಲಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ, ಸಾಮಾನ್ಯವಾಗಿ ಇತರ ಕಾರುಗಳಲ್ಲಿ ಗೇರ್ ಲಿವರ್‌ಗೆ ಇರುವ ಜಾಗದಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್ ಟ್ರೇ ಅನ್ನು ಇರಿಸಲಾಗುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಮಿನಿ ಕೂಪರ್ ಎಸ್‌ನ ಫೀಚರ್‌ನ ವಿಭಾಗವು ಹೆಡ್-ಅಪ್ ಡಿಸ್‌ಪ್ಲೇ, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು, ಡ್ರೈವರ್ ಸೀಟಿಗೆ ಮಸಾಜ್ ಫಂಕ್ಷನ್, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರೋಕ್ರೋಮಿಕ್ ಇನ್ಸೈಡ್ ರಿಯರ್‌ವ್ಯೂ ಮಿರರ್ (IRVM), ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಲೆವೆಲ್-1 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿವೆ. ಇದು ಒಪ್ಶನಲ್‌  ಬ್ಲೈಂಡ್ ಸ್ಪಾಟ್ ವಾರ್ನಿಂಗ್‌ ಸಿಸ್ಟಮ್‌ ನೊಂದಿಗೆ ಪಾದಚಾರಿ ಎಚ್ಚರಿಕೆ ಸಿಸ್ಟಮ್‌ ಅನ್ನು ಪ್ರಮಾಣಿತವಾಗಿ ಸಹ ಹೊಂದಿದೆ.

ಪವರ್‌ಟ್ರೈನ್‌

 2024ರ ಮಿನಿ ಕೂಪರ್ ಎಸ್ 2-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

2-ಲೀಟರ್‌ ನಾಲ್ಕು ಸಿಲಿಂಡರ್‌ ಟಾರ್ಬೋ-ಪೆಟ್ರೋಲ್‌ ಎಂಜಿನ್‌

ಪವರ್‌

204 ಪಿಎಸ್‌

ಟಾರ್ಕ್‌

300 ಎನ್‌ಎಮ್‌

ಗೇರ್‌ಬಾಕ್ಸ್‌

7-ಸ್ಪೀಡ್‌ ಡಿಸಿಟಿ*

ಡ್ರೈವ್‌ಟ್ರೈನ್‌

FWD^

*ಡಿಸಿಟಿ = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್

^FWD =ಫ್ರಂಟ್‌-ವೀಲ್‌-ಡ್ರೈವ್‌

ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್

 ಮಿನಿ ಕಂಟ್ರಿಮ್ಯಾನ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಹೊಸ ಸಂಪೂರ್ಣ-ಎಲೆಕ್ಟ್ರಿಕ್ ಅವತಾರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ವಿವರಗಳು ಇಲ್ಲಿವೆ:

ಹೊರಭಾಗ

Mini Countryman electric front look

2024 ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ತನ್ನ ಸಾಂಪ್ರದಾಯಿಕ ಐದು-ಡೋರ್‌ನ ಆಕಾರವನ್ನು ಸಂರಕ್ಷಿಸುವಾಗ ಹೆಚ್ಚು ಸುವ್ಯವಸ್ಥಿತ ನೋಟವನ್ನು ನೀಡುತ್ತದೆ. ಇದು ಕ್ರೋಮ್ ಅಂಶದ ಎಕ್ಸೆಂಟ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಅಷ್ಟಭುಜಾಕೃತಿಯ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ, ಡಿಆರ್‌ಎಲ್‌ಗಳಿಗಾಗಿ ಕಸ್ಟಮೈಸ್‌ ಮಾಡಬಹುದಾದ ಲೈಟ್‌ ಪ್ಯಾಟರ್ನ್‌ನೊಂದಿಗೆ ಹೊಸ ಅಷ್ಟಭುಜಾಕೃತಿಯ ಎಲ್‌ಇಡಿ ಹೆಡ್‌ಲೈಟ್‌ಗಳಿಂದ ಪೂರಕವಾಗಿದೆ.

Mini Countryman Electric India side and rear

ಸೈಡ್ ಪ್ರೊಫೈಲ್ ಗಮನಿಸುವಾಗ ಈ ಹಿಂದಿನ ಕಂಟ್ರಿಮ್ಯಾನ್ ಅನ್ನು ನೆನಪಿಸುವ ಎತ್ತರದ ಎಸ್‌ಯುವಿ ವಿನ್ಯಾಸವನ್ನು ಉಳಿಸಿಕೊಂಡಿದೆ ಮತ್ತು 20 ಇಂಚುಗಳಷ್ಟು ಗಾತ್ರದಲ್ಲಿ ಲಭ್ಯವಿರುವ ಹೊಸ ಅಲಾಯ್‌ ವೀಲ್‌ ವಿನ್ಯಾಸಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ, ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲೈಟ್‌ಗಳು ಇನ್ನು ಮುಂದೆ ಐಕಾನಿಕ್ ಯೂನಿಯನ್ ಜ್ಯಾಕ್ ಮೋಟಿಫ್ ಅನ್ನು ಒಳಗೊಂಡಿರುವುದಿಲ್ಲ ಆದರೆ ಬದಲಿಗೆ ಆಧುನಿಕ ಪಿಕ್ಸಲೇಟೆಡ್ ನೋಟದೊಂದಿಗೆ ಆಯತಾಕಾರದ ಘಟಕಗಳನ್ನು ಹೊಂದಿವೆ. ಮಿನಿಯು ತನ್ನ ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಅನ್ನು ಸ್ಮೋಕಿ ಗ್ರೀನ್, ಸ್ಲೇಟ್ ಬ್ಲೂ, ಚಿಲ್ಲಿ ರೆಡ್ II, ಬ್ರಿಟಿಷ್ ರೇಸಿಂಗ್ ಗ್ರೀನ್, ಬ್ಲೇಜಿಂಗ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ಎಂಬ ಆರು ಬಣ್ಣದ ಆಯ್ಕೆಗಳಲ್ಲಿ ನೀಡುತ್ತಿದೆ.

ಈ ಎಲೆಕ್ಟ್ರಿಕ್  ಎಸ್‌ಯುವಿಯ ಆಯಾಮಗಳು ಈ ಕೆಳಗಿನಂತಿವೆ:

ಉದ್ದ

4,445 ಮಿ.ಮೀ

ಅಗಲ

2,069 ಮಿ.ಮೀ

ಎತ್ತರ

1,635 ಮಿ.ಮೀ

ವೀಲ್‌ಬೇಸ್‌

2,692 ಮಿ.ಮೀ

ಬೂಟ್‌ಸ್ಪೇಸ್‌

460 ಲೀಟರ್‌

ಇಂಟಿರೀಯರ್‌

Mini Countryman Electric interiors

2024 ಮಿನಿ ಕಂಟ್ರಿಮ್ಯಾನ್ ಇವಿಯ ಒಳಭಾಗವು ತಾಜಾ, ಕನಿಷ್ಠ ವಿನ್ಯಾಸವನ್ನು ಹೊಂದಿದೆ ಮತ್ತು 2024 ಮಿನಿ ಕೂಪರ್ ಎಸ್‌ನಲ್ಲಿ ಕಂಡುಬರುವ ಸಾಂಪ್ರದಾಯಿಕ ವೃತ್ತಾಕಾರದ ಥೀಮ್ ಅನ್ನು ಮುಂದುವರಿಸುತ್ತದೆ. ಡ್ಯಾಶ್‌ಬೋರ್ಡ್ 9.4-ಇಂಚಿನ ಸುತ್ತಿನ OLED ಟಚ್‌ಸ್ಕ್ರೀನ್ ಅನ್ನು ಹೊಂದಿದೆ, ಇದು ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಎಲ್ಲಾ ಡ್ರೈವರ್-ಸಂಬಂಧಿತ ಮಾಹಿತಿಗಾಗಿ ಡಿಸ್‌ಪ್ಲೇ ಆಗಿ ಕಾರ್ಯನಿರ್ವಹಿಸುತ್ತದೆ, ಹಾಗೆಯೇ ಇದು ಸಾಂಪ್ರದಾಯಿಕ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನ ಅಗತ್ಯವನ್ನು ತೆಗೆದುಹಾಕುತ್ತದೆ. ಒಂದು ಐಚ್ಛಿಕ ಹೆಡ್ಸ್-ಅಪ್ ಡಿಸ್‌ಪ್ಲೇ ಒಂದು ಎಕ್ಸಸ್ಸರಿಯಾಗಿ ಲಭ್ಯವಿದೆ.

ಪಾರ್ಕಿಂಗ್ ಬ್ರೇಕ್, ಗೇರ್ ಸೆಲೆಕ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಅನುಭವ ಮೋಡ್ ಟಾಗಲ್ ಮತ್ತು ವಾಲ್ಯೂಮ್ ಕಂಟ್ರೋಲ್ ಅನ್ನು ಈಗ 2024 ಕೂಪರ್ ಎಸ್ ನಂತಹ ಟಾಗಲ್ ಬಾರ್ ಕನ್ಸೋಲ್‌ನಲ್ಲಿ ಸ್ಕ್ರೀನ್‌ನ ಕೆಳಗೆ ಆಯೋಜಿಸಲಾಗಿದೆ. ಹಿಂದೆ ಗೇರ್ ಲಿವರ್ ಆಕ್ರಮಿಸಿಕೊಂಡ ಜಾಗದಲ್ಲಿ ವೈರ್ ಲೆಸ್ ಚಾರ್ಜಿಂಗ್ ಟ್ರೇ ಅಳವಡಿಸಲಾಗಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ವಿದ್ಯುನ್ಮಾನವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು, ಡ್ರೈವರ್ ಸೀಟಿನ ಮಸಾಜ್ ಕಾರ್ಯ, ಎಂಬಿಯೆಂಟ್‌ ಲೈಟಿಂಗ್‌, ಎಲೆಕ್ಟ್ರೋಕ್ರೊಮಿಕ್ ಇನ್ಸೈಡ್ ರಿಯರ್‌ವ್ಯೂ ಮಿರರ್ (IRVM), ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ.

ಸುರಕ್ಷತೆಯ ಭಾಗದಲ್ಲಿ, ಇವಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಅಸಿಸ್ಟ್ ಮತ್ತು ಲೇನ್-ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುವ ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ನೊಂದಿಗೆ ಬರುತ್ತದೆ. ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳು ಟ್ರಾಕ್ಷನ್‌ ಕಂಟ್ರೋಲ್‌, ಡೈನಾಮಿಕ್‌ ಸ್ಟೇಬಿಲಿಟಿ ಕಂಟ್ರೋಲ್‌ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿವೆ.

ಪವರ್‌ಟ್ರೈನ್‌

ಮಿನಿಯು ಎಲೆಕ್ಟ್ರಿಕ್ ಕಂಟ್ರಿಮ್ಯಾನ್‌ಗೆ 66.45 kWh ಬ್ಯಾಟರಿ ಪ್ಯಾಕ್‌ನಿಂದ ಇ ವೇರಿಯಂಟ್ ಅನ್ನು ಒದಗಿಸುತ್ತದೆ. ವಿಶೇಷಣಗಳು ಈ ಕೆಳಗಿನಂತಿವೆ:

ವಿಶೇಷಣೆಗಳು

ಇ-ವೇರಿಯೆಂಟ್‌

ಬ್ಯಾಟರಿ ಪ್ಯಾಕ್‌

66.4 ಕಿ.ವ್ಯಾಟ್‌

ಇಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1 (ಮುಂಭಾಗದ ಆಕ್ಸಲ್‌ನಲ್ಲಿ)

ಪವರ್‌

204 ಪಿಎಸ್‌

ಟಾರ್ಕ್‌

250 ಎನ್‌ಎಮ್‌

ರೇಂಜ್‌ (WLTP)

462 ಕಿ.ಮೀ

0-100 kmph

8.6 ಸೆಕೆಂಡ್‌ಗಳು

ಕಂಟ್ರಿಮ್ಯಾನ್ ಇವಿಯು 130 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ, ಇದು 30 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಪ್ರತಿಸ್ಪರ್ಧಿಗಳು

2024ರ ಮಿನಿ ಕೂಪರ್ ಎಸ್‌ ಹ್ಯಾಚ್‌ಬ್ಯಾಕ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಬಿಎಮ್‌ಡಬ್ಲ್ಯೂ ಎಕ್ಸ್‌1, ಮರ್ಸಿಡೀಸ್‌-ಬೆಂಝ್‌ ಜಿಎಲ್‌ಎ ಮತ್ತು ಆಡಿ ಕ್ಯೂ3 ಗೆ ಪರ್ಯಾಯವಾಗಲಿದೆ. 

ಮಿನಿ ಕಂಟ್ರಿಮ್ಯಾನ್ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂ ಐಎಕ್ಸ್‌1 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸಲಿದೆ.

2024ರ ಮಿನಿ ಕೂಪರ್ ಎಸ್ ಮತ್ತು ಮಿನಿ ಕಂಟ್ರಿಮ್ಯಾನ್ ಇವಿ ಕುರಿತು ನಿಮ್ಮ ಅಭಿಪ್ರಾಯಗಳು ಏನು ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ

ಕಾರಿನ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್‌ ಚಾನಲ್ ಅನ್ನು ಅನುಸರಿಸಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mini ಕೂಪರ್ ಎಸ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಕಿಯಾ ಇವಿ9
    ಕಿಯಾ ಇವಿ9
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಬಿವೈಡಿ emax 7
    ಬಿವೈಡಿ emax 7
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಸ್ಕೋಡಾ enyaq iv
    ಸ್ಕೋಡಾ enyaq iv
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ವೋಕ್ಸ್ವ್ಯಾಗನ್ id.4
    ವೋಕ್ಸ್ವ್ಯಾಗನ್ id.4
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
×
We need your ನಗರ to customize your experience