• English
  • Login / Register

2024ರ Nissan X-Trail ಎಷ್ಟು ಬಣ್ಣಗಳಲ್ಲಿ ಇರಲಿದೆ ? ಬೆಲೆ ಎಷ್ಟು ? ಇಲ್ಲಿದೆ ವಿವರ..

published on ಜುಲೈ 24, 2024 08:43 pm by samarth for ನಿಸ್ಸಾನ್ ಎಕ್ಜ್-ಟ್ರೈಲ್

  • 102 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ-ಜನ್ ಎಕ್ಸ್-ಟ್ರಯಲ್‌ನಲ್ಲಿ ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಮೂರು ಮೊನೊಟೋನ್ ಬಣ್ಣದ ಆಯ್ಕೆಗಳು ಲಭ್ಯವಿದೆ

2024 Nissan X-Trail Colour Options

  • ಹೊಸ-ಜನರೇಶನ್‌ನ ನಿಸ್ಸಾನ್ ಎಕ್ಸ್-ಟ್ರಯಲ್ ಭಾರತದಲ್ಲಿ ಕಾರು ತಯಾರಕರ ಪ್ರಮುಖ ಉತ್ಪನ್ನವಾಗಲಿದೆ. 
  • ಇದು ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಮೂರು ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ಮಾತ್ರ ಲಭ್ಯವಿರುತ್ತದೆ. 
  • ಪ್ರಮುಖ ಫೀಚರ್‌ಗಳಲ್ಲಿ 8-ಇಂಚಿನ ಟಚ್‌ಸ್ಕ್ರೀನ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಪ್ಯಾನರೋಮಿಕ್‌ ಸನ್‌ರೂಫ್ ಸೇರಿವೆ. 
  • ಇದನ್ನು 12V ಮೈಲ್ಡ್-ಹೈಬ್ರಿಡ್ ಟೆಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಕೇವಲ 1.5-ಲೀಟರ್ ಟರ್ಬೊ-ಪೆಟ್ರೋಲ್‌ನೊಂದಿಗೆ ನೀಡಲಾಗುವುದು.
  • ಎಕ್ಸ್ ಶೋರೂಂ ಬೆಲೆಗಳು 40 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. 

2024ರ ನಿಸ್ಸಾನ್ ಎಕ್ಸ್-ಟ್ರಯಲ್ ಭಾರತದಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು, ಮುಂಬರುವ ತಿಂಗಳಲ್ಲಿ ಬೆಲೆಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಜಪಾನಿ ಮೂಲದ ಕಾರು ತಯಾರಕ ಕಂಪೆನಿ ನಿಸ್ಸಾನ್‌ನ ಪ್ರಮುಖ ಎಸ್‌ಯುವಿ ಆಗಿರುತ್ತದೆ. ನಾಲ್ಕನೇ ತಲೆಮಾರಿನ ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು ಭಾರತದಲ್ಲಿ ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಈ ಎಸ್‌ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ಪರಿಗಣಿಸುತ್ತಿದ್ದರೆ, ಲಭ್ಯವಿರುವ ಬಣ್ಣ ಆಯ್ಕೆಗಳು ಇಲ್ಲಿವೆ.

ಬಣ್ಣದ ಆಯ್ಕೆಗಳು

  • ಪರ್ಲ್‌ ವೈಟ್‌

Nissan X-Trail Pearl White

  • ಡೈಮಂಡ್‌ ಬ್ಲ್ಯಾಕ್‌

Fourth-generation Nissan X-Trail Diamond Black

  • ಷಾಂಪೇನ್ ಸಿಲ್ವರ್‌

Fourth-generation Nissan X-Trail Champagne Silver

2024ರ ಎಕ್ಸ್-ಟ್ರಯಲ್ ಈ ಮೂರು ಮೊನೊಟೋನ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಇದನ್ನು ಸಹ ಓದಿt:  ನಿಸ್ಸಾನ್‌ನ ದೈತ್ಯ ಎಸ್‌ಯುವಿ 2024ರ Nissan X-Trailನ ಆಫ್‌ಲೈನ್ ಬುಕಿಂಗ್‌ಗಳು ಪ್ರಾರಂಭ

ಫೀಚರ್‌ಗಳು ಮತ್ತು ಸುರಕ್ಷತೆ

2024 Nissan X-Trail cabin

ನಿಸ್ಸಾನ್ ತನ್ನ ಪ್ರಮುಖ ಎಸ್‌ಯುವಿಯನ್ನು12.3-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪ್ಯಾನರೋಮಿಕ್‌ ಸನ್‌ರೂಫ್‌ನೊಂದಿಗೆ ಸಜ್ಜುಗೊಳಿಸುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ಇದು ಏಳು ಏರ್‌ಬ್ಯಾಗ್‌ಗಳು, ಆಟೋ-ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೈನ್-ಸೆನ್ಸಿಂಗ್ ವೈಪರ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Nissan ಎಕ್ಜ್-ಟ್ರೈಲ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience