• English
    • Login / Register

    Tata Punch EV ಗೆ ಹೋಲಿಸಿದರೆ Hyundai Inster ಹೊಂದಿರುವ 5 ಹೆಚ್ಚುವರಿ ವಿಶೇಷತೆಗಳು

    ಜುಲೈ 09, 2024 05:21 pm shreyash ಮೂಲಕ ಮಾರ್ಪಡಿಸಲಾಗಿದೆ

    • 24 Views
    • ಕಾಮೆಂಟ್‌ ಅನ್ನು ಬರೆಯಿರಿ

    ಕ್ಯಾಸ್ಪರ್‌ ಮೈಕ್ರೊ ಎಸ್‌ಯುವಿಯ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿ ಆಗಿರುವ ಹ್ಯುಂಡೈ ಇನ್ಸ್ಟರ್‌ ವಿದೇಶದಲ್ಲಿ ಮಾರಾಟಗೊಳ್ಳುತ್ತಿದ್ದು, ಪಂಚ್‌ ಇವಿಗೆ ಹೋಲಿಸಿದರೆ ಹೆಚ್ಚಿನ ತಾಂತ್ರಿಕತೆಯನ್ನು ನೀಡುವುದು ಮಾತ್ರವಲ್ಲದೆ ದೊಡ್ಡದಾದ ಬ್ಯಾಟರಿ ಪ್ಯಾಕ್‌ ಅನ್ನು ಸಹ ಹೊಂದಿರಲಿದೆ.

    5 Things Hyundai Inster Offers Over The Tata Punch EV

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಹ್ಯುಂಡೈ ಕ್ಯಾಸ್ಪರ್‌ ಕಾರಿನ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯಾಗಿ ಹ್ಯುಂಡೈ ಇನ್ಸ್ಟರ್ ಮೈಕ್ರೊ ಎಲೆಕ್ಟ್ರಿಕ್‌ ಎಸ್‌ಯುವಿ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇನ್ಸ್ಟರ್‌ ಕಾರು ಮೊದಲಿಗೆ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಲಿದ್ದು, ನಂತರ ಇದು ಇತರ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಹೀಗಾದಲ್ಲಿ ಇದು  ಟಾಟಾ ಪಂಚ್‌ EV ವಾಹನಕ್ಕೆ ನೇರ ಸ್ಪರ್ಧೆ ನೀಡಲಿದೆ. ಇದು ಪಂಚ್‌ EV ವಾಹನದ ನೇರ ಸ್ಪರ್ಧಿ ಆಗಿರುವುದರಿಂದ ಭಾರತದ ಈ ಕಾರಿಗೆ ಹೋಲಿಸಿದರೆ ಇದು ಯಾವೆಲ್ಲ ಅನುಕೂಲತೆಗಳನ್ನು ಹೊಂದಿದೆ ಎಂಬುದನ್ನು ಪರಿಶೀಲಿಸಲು ನಾವು ನಿರ್ಧರಿಸಿದೆವು. ಇದರ ಮಾಹಿತಿ ಇಲ್ಲಿದೆ:

    ಹೀಟೆಡ್‌ ಸ್ಟೀಯರಿಂಗ್‌ ವೀಲ್

    ಹ್ಯುಂಡೈ ಇನ್ಸ್ಟರ್‌ ವಾಹನವು ಹೀಟೆಡ್‌ ಸ್ಟೀಯರಿಂಗ್‌ ವೀಲ್‌ ಜೊತೆಗೆ ಬರಲಿದೆ. ಈ ವಿಶೇಷತೆಯು ಭಾರತದಲ್ಲಿ ಮಾಸ್‌ ಮಾರ್ಕೆಟ್‌ ಕಾರುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಚಳಿಯ ಪ್ರದೇಶಗಳಲ್ಲಿ ವಾಸಿಸುವವರಿಗೆ ಇದರಿಂದ ಸಾಕಷ್ಟು ಅನುಕೂಲವಿದ್ದು, ವಿಪರೀತ ಚಳಿಯಲ್ಲಿ ವಾಹನವನ್ನು ಚಲಾಯಿಸುವಾಗ ಇದು ನಿಮ್ಮ ಕೈಗಳನ್ನು ಬೆಚ್ಚಗೆ ಇರಿಸುತ್ತದೆ. ಇನ್ಸ್ಟರ್‌ ಇ.ವಿ ವಾಹನವು ಹೀಟೆಡ್‌ ಫ್ರಂಟ್‌ ಸೀಟ್‌ ಗಳನ್ನು ಸಹ ಹೊಂದಿರಲಿದೆ. ಇದಕ್ಕೆ ಪ್ರತಿಯಾಗಿ ಟಾಟಾ ಪಂಚ್‌ EV ವಾಹನವು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳನ್ನು ಹೊಂದಿದ್ದು, ಭಾರತದ ಹೆಚ್ಚಿನ ರಾಜ್ಯಗಳಲ್ಲಿ ವರ್ಷವಿಡೀ ಚಾಲ್ತಿಯಲ್ಲಿರುವ ಬಿಸಿ ಮತ್ತು ಆರ್ದ್ರ ವಾತಾಔರಣಕ್ಕೆ ಇದು ಸೂಕ್ತವೆನಿಸಿದೆ.

    V2L (ವೆಹಿಕಲ್-ಟು-ಲೋಡ್)

    ಹ್ಯುಂಡೈ ಇನ್ಸ್ಟರ್‌ ವಾಹನಕ್ಕೆ ಹೋಲಿಸಿದರೆ, ಪಂಚ್‌ ಇ.ವಿ ಕಾರು V2L (ವೆಹಿಕಲ್-ಟು-ಲೋಡ್) ಫಂಕ್ಷನಾಲಿಟಿಯನ್ನು ಹೊಂದಿಲ್ಲ. ಈ ವಿಶೇಷತೆಯು, ಇ.ವಿ ಯ ಬ್ಯಾಟರಿಯಲ್ಲಿ ಶೇಖರಿಸಲಾದ ಶಕ್ತಿಯನ್ನು ಬಳಸಿ ನಿಮ್ಮ ಎರಡನೇ ಸಾಧನವನ್ನು ಚಾರ್ಜ್‌ ಮಾಡಲು ಸಹಾಯ ಮಾಡುತ್ತದೆ. ಭಾರತದಲ್ಲಿ ಈ ವಿಶೇಷತೆಯು ಟಾಟಾ ನೆಕ್ಸನ್‌, ಹ್ಯುಂಡೈ ಅಯೋನಿಕ್‌ 5, ಮತ್ತು ಕಿಯಾ EV6 ಮುಂತಾದ EV ಗಳಲ್ಲಿ ದೊರೆಯುತ್ತಿದೆ.

    ದೊಡ್ಡದಾದ ಅಲೋಯ್‌ ವೀಲ್‌ ಗಳು

    5 Things Hyundai Inster Offers Over The Tata Punch EV

     ಹ್ಯುಂಡೈ ಸಂಸ್ಥೆಯು ಇನ್ಸ್ಟರ್‌ EV ಯಲ್ಲಿ 17 ಇಂಚಿನ ಅಲೋಯ್‌ ವೀಲ್‌ ಗಳನ್ನು ಒದಗಿಸಲಿದ್ದು, ಟಾಟಾ ಪಂಚ್‌ EV ಯ ಮಿಡ್‌ ಸ್ಪೆಕ್‌ ಎಂಪವರ್ಡ್‌ ವೇರಿಯಂಟ್‌ ನಲ್ಲಿ 16 ಇಂಚಿನ ಅಲೋಯ್‌ ವೀಲ್‌ ಗಳನ್ನು ಕಾಣಬಹುದಾಗಿದೆ. ಆದರೆ ಇನ್ಸ್ಟರ್‌ ವಾಹನದ ಮಿಡ್‌ ಸ್ಪೆಕ್‌ ಟ್ರಿಮ್‌ ಗಳಲ್ಲಿ 15 ಇಂಚಿನಷ್ಟು ಸಣ್ಣದಾದ ವೀಲ್‌ ಗಳನ್ನು ಅಳವಡಿಸಲಾಗುತ್ತದೆ.

    ADAS

    ಕಾರಿನ ಗಾತ್ರ ಮತ್ತು ಬೆಲೆ ಏನೇ ಇರಲಿ, ಕೆಲ ದೇಶದಲ್ಲಿ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS)ಗಳನ್ನು ಹೊಂದುವುದು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿದೆ. ಆರಂಭದಲ್ಲಿ ಕೊರಿಯಾ ಮತ್ತು ನಂತರದ ದಿನಗಳಲ್ಲಿ ಯೂರೋಪಿನ ಕೆಲವು ಮಾರುಕಟ್ಟೆಗಳಲ್ಲಿ ಮಾರಲ್ಪಡಲಿರುವ ಇನ್ಸ್ಟರ್‌ ಕಾರು ಈ ವೈಶಿಷ್ಟ್ಯಗಳೊಂದಿಗೆ ರಸ್ತೆಗಿಳಿಯಲಿದೆ. ಅವು ಲೇನ್‌ ಕೀಪ್‌ ಅಸಿಸ್ಟ್‌, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ಮತ್ತು ಅಟೋಮ್ಯಾಟಿಕ್‌ ಎಮರ್ಜೆನ್ಸಿ ಬ್ರೇಕಿಂಗ್‌ ಇತ್ಯಾದಿಗಳನ್ನು ಒಳಗೊಂಡಿರಲಿವೆ.

    ಗಮನಿಸಿ: ಭಾರತದಲ್ಲಿ ರಸ್ತೆಗಿಳಿಯಲಿರುವ ಹ್ಯುಂಡೈ ಇನ್ಸ್ಟರ್‌ ವಾಹನವು ADAS ಅನ್ನು ಹೊಂದಿಲ್ಲದೆ ಇರಬಹುದು.

    ದೊಡ್ಡದಾದ ಬ್ಯಾಟರಿ ಪ್ಯಾಕ್‌ ಆಯ್ಕೆಗಳು

    ಟಾಟಾ ಪಂಚ್‌ EV ಗೆ ಹೋಲಿಸಿದರೆ ಹ್ಯುಂಡೈ ಇನ್ಸ್ಟರ್‌ ವಾಹನವು ದೊಡ್ಡದಾದ ಬ್ಯಾಟರಿ ಪ್ಯಾಕ್‌ ಗಳನ್ನು ಹೊಂದಿರಲಿದೆ. ನಿಮ್ಮ ಉಲ್ಲೇಖಕ್ಕಾಗಿ ಅವುಗಳ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ಗಳ ಸವಿವರವಾದ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ:

     

    ವಿವರಗಳು

    ಹ್ಯುಂಡೈ ಇನ್ಸ್ಟರ್

    ಟಾಟಾ ಪಂಚ್ EV

    ಮಧ್ಯಮ ಶ್ರೇಣಿ

    ದೀರ್ಘ ಶ್ರೇಣಿ

    ಮಧ್ಯಮ ಶ್ರೇಣಿ

    ದೀರ್ಘ ಶ್ರೇಣಿ

    ಬ್ಯಾಟರಿ ಪ್ಯಾಕ್

    42 kWh

    49 kWh

    25 kWh

    35 kWh

    ಪವರ್

    97 PS

    115 PS

    82 PS

    122 PS

    ಟಾರ್ಕ್

    147 Nm

    147 Nm

    114 Nm

    190 Nm

    ಕ್ಲೇಮ್‌ ಮಾಡಲಾದ ಶ್ರೇಣಿ

    300 km (WLTP) ಗಿಂತ ಹೆಚ್ಚು

    355 km (WLTP) ತನಕ (15 ಇಂಚ್‌ ವೀಲ್‌ ಗಳೊಂದಿಗೆ)

    315 km (MIDC)

    421 km (MIDC)

    ಗಮನಿಸಿ: ಹ್ಯುಂಡೈ ಇನ್ಸ್ಟರ್‌ ಮಾದರಿಯ ಬ್ಯಾಟರಿ ಪ್ಯಾಕ್‌, ಶ್ರೇಣಿ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ವಿವರಗಳು ಭಾರತದಲ್ಲಿ ಮಾರಾಟಗೊಳ್ಳಲಿರುವ ಮೊಡೆಲ್‌ಗೆ ಅನ್ವಯವಾಗದೆ ಇರಬಹುದು.

    ಟಾಟಾ ಪಂಚ್‌ EV ಗೆ ಹೋಲಿಸಿದರೆ ಹ್ಯುಂಡೈ ಇನ್ಸ್ಟರ್‌ ಈ ಎಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ. ಇವುಗಳಲ್ಲಿ ಯಾವ ವಿಶೇಷತೆಗಳನ್ನು ಪಂಚ್‌ EV ವಾಹನವು ಸಹ ಹೊಂದಿರಬೇಕೆಂದು ನೀವು ಭಾವಿಸುತ್ತೀರಿ ಮತ್ತು ಯಾಕೆ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.

    ನಿರಂತರ ಮಾಹಿತಿಗಾಗಿ ಕಾರ್‌ ದೇಖೊ ವಾಟ್ಸಪ್‌ ಚಾನಲ್‌ ಅನ್ನು ಅನುಸರಿಸಿ

    ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಪಂಚ್ AMT

    was this article helpful ?

    Write your Comment on Hyundai inster

    explore similar ಕಾರುಗಳು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience