Audi Q7 ಬೋಲ್ಡ್ ಎಡಿಷನ್ 97.84 ಲಕ್ಷ ರೂ.ಗೆ ಬಿಡುಗಡೆ
ಆಡಿ ಕ್ಯೂ7 2022-2024 ಗಾಗಿ samarth ಮೂಲಕ ಮೇ 22, 2024 07:01 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಲಿಮಿಟೆಡ್-ರನ್ ಬೋಲ್ಡ್ ಎಡಿಷನ್ ಗ್ರಿಲ್ ಮತ್ತು ಲೋಗೊಗಳಿಗಾಗಿ ಕಪ್ಪು-ಔಟ್ ಕಾಸ್ಮೆಟಿಕ್ ಅಂಶಗಳನ್ನು ಪಡೆಯುತ್ತದೆ ಮತ್ತು ಟಾಪ್-ಸ್ಪೆಕ್ Q7 ಟೆಕ್ನಾಲಜಿ ಆವೃತ್ತಿಗಿಂತ 3.39 ಲಕ್ಷ ರೂ.ವರೆಗೆ ಹೆಚ್ಚುವರಿ ಬೆಲೆಯನ್ನು ಹೊಂದಿದೆ.
- ಹೊಸ ಬೋಲ್ಡ್ ಎಡಿಷನ್ ಎಸ್‌ಯುವಿಯ ಸಂಪೂರ್ಣ ಲೋಡ್ ಮಾಡಲಾದ ಟೆಕ್ನಾಲಜಿ ಆವೃತ್ತಿಯನ್ನು ಆಧರಿಸಿದೆ.
- ವಿಶುವಲ್ ಬದಲಾವಣೆಗಳು ಸ್ಪೋರ್ಟಿಯರ್ ಲುಕ್‌ಗಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕಪ್ಪು ಆಡಿ ಲೋಗೋಗಳೊಂದಿಗೆ ಬ್ಲ್ಯಾಕ್ಡ್-ಔಟ್ ಗ್ರಿಲ್ ಅನ್ನು ಒಳಗೊಂಡಿವೆ.
- ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ಪ್ರಸ್ತುತವಿರುವ 3-ಲೀಟರ್ V6 TFSI ಪೆಟ್ರೋಲ್ ಎಂಜಿನ್ (340 PS/ 500 Nm) ನೊಂದಿಗೆ ಮಾತ್ರ ಲಭ್ಯವಿದೆ.
Q3ನಲ್ಲಿ ಇದನ್ನು ಪರಿಚಯಿಸಿದ ಸ್ವಲ್ಪ ಸಮಯದ ನಂತರ, ಆಡಿ ಈಗ Q7 ಎಸ್‌ಯುವಿಯಲ್ಲಿ ಬೋಲ್ಡ್ ಎಡಿಷನ್ ಅನ್ನು ಪರಿಚಯಿಸಿದೆ. ಈ ವಿಶೇಷ ಎಡಿಷನ್‌ನ ಬೆಲೆ 97.84 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ, ಹಾಗೆಯೇ ಖರೀದಿದಾರರು ಎಸ್‌ಯುವಿಯ ಟಾಪ್ ಮೊಡೆಲ್ ಟೆಕ್ನಾಲಜಿ ಆವೃತ್ತಿಗಿಂತ 3.39 ಲಕ್ಷ ರೂ.ವರೆಗೆ ಹೆಚ್ಚುವರಿ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆಡಿಯು ಇದನ್ನು ಗ್ಲೇಸಿಯರ್ ವೈಟ್, ಮೈಥೋಸ್ ಬ್ಲಾಕ್, ನವರ್ರಾ ಬ್ಲೂ ಮತ್ತು ಸಮುರಾಯ್ ಗ್ರೇ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ Q7 ಬೋಲ್ಡ್ ಎಡಿಷನ್ ಅನ್ನು ನೀಡುತ್ತಿದೆ.
ಹೊರಭಾಗ
Audi Q7 ಬೋಲ್ಡ್ ಎಡಿಷನ್ ಕಪ್ಪು ಸ್ಟೈಲಿಂಗ್ ಪ್ಯಾಕೇಜ್ ಅನ್ನು ಒಳಗೊಂಡಿದೆ, ಇದು ಗ್ರಿಲ್‌ನಲ್ಲಿ ಹೊಳಪುಳ್ಳ ಕಪ್ಪು ಅಂಶಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಕಪ್ಪು-ಔಟ್ "ಆಡಿ" ಲೋಗೊಗಳನ್ನು ಒಳಗೊಂಡಿದೆ. ಕಿಟಕಿಯ ಸುತ್ತುವರೆದಿರುವ ಭಾಗಗಳಲ್ಲಿ, ORVM ಗಳು ಮತ್ತು ರೂಫ್ ರೇಲ್ಸ್‌ಗಳ ಮೇಲೆ ಸೈಡ್ ಪ್ರೊಫೈಲ್ ಸಹ ಸಂಪೂರ್ಣ ಕಪ್ಪು ಅಂಶವನ್ನು ಪಡೆಯುತ್ತದೆ. ಈ 7-ಸೀಟರ್ ಎಸ್‌ಯುವಿಯು ಈಗಾಗಲೇ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಡ್ಯುಯಲ್ ಟೋನ್ ಪೇಂಟ್‌ನ ಆಯ್ಕೆಯೊಂದಿಗೆ 19-ಇಂಚಿನ 5-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಇಂಟೀರಿಯರ್
ಬೋಲ್ಡ್ ಎಡಿಷನ್ ಇಂಟಿರೀಯರ್‌ನಲ್ಲಿ ಯಾವುದೇ ಬದಲಾವಣೆಯನ್ನು ಪಡೆಯುತ್ತಿಲ್ಲ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 19-ಸ್ಪೀಕರ್ ಆಡಿಯೋ ಸಿಸ್ಟಮ್, 4-ಜೋನ್ ಹವಾನಿಯಂತ್ರಣ, ಪನೋರಮಿಕ್ ಸನ್‌ರೂಫ್ ಮತ್ತು ಪಾರ್ಕಿಂಗ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಸ್ಟ್ಯಾಂಡರ್ಡ್ ಮಾಡೆಲ್‌ನಂತೆಯೇ ಅದೇ ವೈಶಿಷ್ಟ್ಯಗಳೊಂದಿಗೆ ಇದು ಬರುತ್ತದೆ.
ಇದನ್ನು ಸಹ ಓದಿ: BMW X3 M ಸ್ಪೋರ್ಟ್ ಶ್ಯಾಡೋ ಎಡಿಷನ್ ಬಿಡುಗಡೆ, ಬೆಲೆಗಳು 74.90 ಲಕ್ಷ ರೂ.ನಿಂದ ಪ್ರಾರಂಭ
ಪವರ್‌ಟ್ರೇನ್
ಬೋಲ್ಡ್ ಆವೃತ್ತಿಯು ಯಾಂತ್ರಿಕವಾಗಿ ಯಾವುದೇ ಬದಲಾವಣೆಯನ್ನು ಪಡೆಯುವುದಿಲ್ಲ, ಇದು ಅದೇ 3-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗುತ್ತದೆ, ಸೌಮ್ಯ-ಹೈಬ್ರಿಡ್ ಟೆಕ್ನಾಲಾಜಿಯೊಂದಿಗೆ 340 ಪಿಎಸ್ ಮತ್ತು 500 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಜೊತೆ ಜೋಡಿಸಲಾಗಿದೆ. ಇದು ಆಟೋ, ಕಂಫರ್ಟ್, ಡೈನಾಮಿಕ್, ಎಫಿಶಿಯನ್ಶಿ, ಆಫ್-ರೋಡ್, ಆಲ್-ರೋಡ್ ಮತ್ತು ಇಂಡಿವಿಜುವಲ್ ಎಂಬ ಏಳು ಡ್ರೈವ್ ಮೋಡ್‌ಗಳನ್ನು ಸಹ ನೀಡುತ್ತದೆ. ಈ ಪೆಟ್ರೋಲ್ ಎಂಜಿನ್ ಕೇವಲ 5.6 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆಯುತ್ತದೆ ಮತ್ತು ಗಂಟೆಗೆ 250 ಕಿಮೀ.ವರೆಗೆ ಟಾಪ್ ಸ್ಪೀಡ್ ಅನ್ನು ಪಡೆಯುತ್ತದೆ. Q7 ಆಡಿಯ ಆಲ್-ವೀಲ್ ಡ್ರೈವ್‌ಟ್ರೇನ್ ಅನ್ನು ಹೊಂದಿದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
Audi Q7 ನ ಬೆಲೆಯು 86.92 ಲಕ್ಷದಿಂದ ಪ್ರಾರಂಭವಾಗುತ್ತದೆ, ಹೊಸದಾಗಿ ಬಿಡುಗಡೆಯಾದ ಟಾಪ್ ಮೊಡೆಲ್‌ನ ಬೋಲ್ಡ್ ಎಡಿಷನ್‌ನ ಬೆಲೆಯು 97.84 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಇದು Mercedes-Benz GLE, BMW X5, ಮತ್ತು Volvo XC90 ಜೊತೆಗೆ ಸ್ಪರ್ಧಿಸುತ್ತದೆ.
ಇನ್ನಷ್ಟು ಓದಿ : Q7 ಆಟೋಮ್ಯಾಟಿಕ್