GM ಮೋಟರ್ಸ್‌ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ

published on ಆಗಸ್ಟ್‌ 18, 2023 10:02 pm by tarun

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಘಟಕದೊಂದಿಗೆ, ಹ್ಯುಂಡೈ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.

Hyundai Exter

  •  ಹ್ಯುಂಡೈ, ಜನರಲ್ ಮೋಟರ್ಸ್‌ನ ಭೂಮಿ ಮತ್ತು ಕಟ್ಟಡಗಳು ಹಾಗೂ ನಿರ್ದಿಷ್ಟ ಯಂತ್ರೋಪಕರಣಗಳು ಮತ್ತು ತಯಾರಿಕಾ ಸಾಧನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.

  •  ಇದರ ಮೂರು ಘಟಕಗಳ ಸಂಯೋಜಿತ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 10 ಲಕ್ಷದಷ್ಟಾಗಲಿದೆ.

  •   ಕಾರು ತಯಾರಕರು ಈ ಘಟಕದಲ್ಲಿ 2025ರಿಂದ ತಯಾರಿಕಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದ್ದಾರೆ.

  •   ಈ ವಿಸ್ತರಣೆಯೊಂದಿಗೆ, ಹ್ಯುಂಡೈ ಭಾರತಕ್ಕೆ ಹೊಸ EVಗಳನ್ನು ತರುವುದರ ಬಗ್ಗೆ ಮೌಲ್ಯಮಾಪನ ಮಾಡುತ್ತಿದೆ.

  ಹ್ಯುಂಡೈ ಮಹಾರಾಷ್ಟ್ರದ ತಲೆಗಾಂವ್‌ನಲ್ಲಿನ ಜನರಲ್  ಮೋಟರ್ಸ್‌ನ (GM) ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು  ಅಸೆಟ್ ಪರ್ಚೇಸ್ ಎಂಗೇಜ್‌ಮೆಂಟ್ (APA) ಅನ್ನು ಸಹಿ ಮಾಡಿದೆ. ಈ ಘಟಕದೊಂದಿಗೆ ಹ್ಯುಂಡೈ ಭಾರತದಲ್ಲಿ ಮೂರು ತಯಾರಿಕಾ ಘಟಕವನ್ನು ಪಡೆಯಲಿದ್ದು ಉಳಿದೆರಡು ತಮಿಳುನಾಡಿನ ಶ್ರೀ ಪೆರಂಬುದೂರ್‌ನಲ್ಲಿ ಇದೆ.

Hyundai Plant

 ಇದರಲ್ಲಿ ಹ್ಯುಂಡೈ, ಜನರಲ್ ಮೋಟರ್ಸ್‌ನ ಭೂಮಿ, ಮತ್ತು ಕಟ್ಟಡಗಳು ಹಾಗೂ ನಿರ್ದಿಷ್ಟ ಯಂತ್ರೋಪಕರಣಗಳು ಮತ್ತು ತಯಾರಿಕಾ ಸಾಧನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಹೊಸ ಘಟಕದೊಂದಿಗೆ, ಕಾರು ತಯಾರಕರು ವರ್ಷಕ್ಕೆ 10 ಲಕ್ಷ ಯೂನಿಟ್‌ಗಳ ತನಕದ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿದೆ. ಇದರ ಉತ್ಪಾದನಾ ಕಾರ್ಯಾಚರಣೆಯು 2025 ರಿಂದ ಪ್ರಾರಂಭಗೊಳ್ಳಲಿದೆ. ಪ್ರಸ್ತುತ ತನ್ನ ಎರಡು ಘಟಕಗಳಲ್ಲಿ ಹ್ಯುಂಡೈನ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 8.2 ಲಕ್ಷ ಯೂನಿಟ್‌ಗಳಷ್ಟು ಆಗಿದೆ. GM ಘಟಕದ ಪ್ರಸ್ತುತ ಸಾಮರ್ಥ್ಯವು ವರ್ಷಕ್ಕೆ 1.3 ಲಕ್ಷದಷ್ಟು ಇದ್ದು ಒಟ್ಟಾರೆ ಗುರಿಯನ್ನು ತಲುಪಲು ಇದನ್ನು ಹೆಚ್ಚಿಸಲಾಗುತ್ತದೆ.

 ಇದನ್ನೂ ಓದಿ: ಈ ಹಬ್ಬದ ಸಮಯದಲ್ಲಿ ನಿಮಗಾಗಿ ಬರಲಿವೆ ಈ 5 ಹೊಸ SUVಗಳು 

  ಈ ಕಾರುತಯಾರಕರು ಭಾರತದಲ್ಲಿ ಇನ್ನಷ್ಟು EVಗಳನ್ನು ಬಿಡುಗಡೆ ಮಾಡುವ ವಿಮರ್ಶೆಯಲ್ಲಿದ್ದು, ಇದು ತಮಿಳುನಾಡಿನ ಒಂದು ಘಟಕದಲ್ಲಿ  ಉತ್ಪಾದನೆಯಾಗಲಿದೆ. ಮೂರು ಘಟಕಗಳೊಂದಿಗೆ, ಹ್ಯುಂಡೈ ಭಾರತದಲ್ಲಿ ಇನ್ನಷ್ಟು ಕಾರುಗಳನ್ನು ಉತ್ಪಾದಿಸಬಹುದು ಮಾತ್ರವಲ್ಲ ಕಾಯುವಿಕೆ ಅವಧಿಯನ್ನು ತಗ್ಗಿಸಬಹುದು ಹಾಗೆಯೇ ಇನ್ನಷ್ಟು ರಫ್ತುಗಳನ್ನೂ ಮಾಡಬಹುದು. APA ಅನ್ನು ಸಹಿ ಮಾಡಲಾಗಿದ್ದು, ಸ್ವಾಧೀನಪಡಿಸುವಿಕೆ ಪ್ರಕ್ರಿಯೆಯು ಇನ್ನೂ ಕೆಲವು ನಿಯಂತ್ರಕ ಅನುಮೋದನೆಗಳು ಮತ್ತು ಪೂರೈಸಬೇಕಾದ ಷರತ್ತುಗಳಿಗೆ ಒಳಪಟ್ಟಿದೆ.

2023 Hyundai i20 spied

 ಪ್ರಸ್ತುತ ಭಾರತದಲ್ಲಿ ಹ್ಯುಂಡೈನ 13 ಕಾರುಗಳು ಮಾರಾಟಕ್ಕೆ ಇದ್ದು, ಇದರಲ್ಲಿ ಎರಡು EVಗಳಾದ IONIQ 5 ಮತ್ತು ಕೋನಾ ಇಲೆಕ್ಟ್ರಿಕ್ ಸೇರಿದೆ. ಕ್ರೆಟಾ, i20, ಮತ್ತು ಕೋನಾ EV ಇಲೆಕ್ಟ್ರಿಕ್  ಮುಂತಾದ ಮಾಡೆಲ್‌ಗಳು ಅಪ್‌ಗ್ರೇಡ್‌ಗೆ ಕಾಯುತ್ತಿವೆ ಮತ್ತು ಅವುಗಳ ಹೊಸ ಆವೃತ್ತಿಗಳನ್ನು ನಾವು ಮುಂದಿನ ವರ್ಷ ನೋಡಬಹುದು.

 ಮುಂಬರುವ ದಿನಗಳಲ್ಲಿ ಹೊಸ ಭಾರತ-ಕೇಂದ್ರಿತ EV ಬಿಡುಗಡೆಯ ಯೋಜನೆಯನ್ನು ಪ್ರಕಟಿಸಿರುವ ಬೆನ್ನಲ್ಲೇ ಹ್ಯುಂಡೈ ಕ್ರೆಟಾ EV ಹಲವು ಬಾರಿ ಪರೀಕ್ಷೆಗೆ ಒಳಪಟ್ಟಿರುವುದರಿಂದ ಭರವಸೆಯ ಅಭ್ಯರ್ಥಿಯಂತೆ ತೋರುತ್ತಿದೆ. ಇದರ ಹೊರತಾಗಿ, ಕಾರೆನ್ಸ್‌ ಬೆಲೆಯಲ್ಲಿ ಟೊಯೋಟಾ ಇನ್ನೋವಾಗೆ ಪರ್ಯಾಯವಾಗಲಿರುವ MPVಯನ್ನು ಹೊರತರುವ ನಿರೀಕ್ಷೆ ಇದೆ.

 ಇದನ್ನೂ ಓದಿ: ಟಾಟಾ ಪಂಚ್ CNG vs ಹ್ಯುಂಡೈ ಎಕ್ಸ್‌ಟರ್ CNG – ಕ್ಲೈಮ್ ಮಾಡಲಾದ ಮೈಲೇಜ್ ಹೋಲಿಕೆ 

 ಈ ಕಾರುತಯಾರಕ ಸಂಸ್ಥೆಯು ದೀರ್ಘಕಾಲದಿಂದ ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಎರಡನೇ ಅತಿದೊಡ್ಡ ಹೆಸರಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಈಗ ಟಾಟಾ ಅದನ್ನು ಹಿಂದಿಕ್ಕುವ ಭರದಲ್ಲಿದೆ. ಈ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಹೆಚ್ಚಿದ ಉತ್ಪಾದನಾ ಸಾಮರ್ಥ್ಯವು ಹ್ಯುಂಡೈಗೆ ತನ್ನ ಮಾರುಕಟ್ಟೆ ಪಾಲನ್ನು ರಕ್ಷಿಸಿಕೊಳ್ಳುವಲ್ಲಿ ಮತ್ತು ಮುಂದಕ್ಕೆ ಬೆಳೆಯುವಲ್ಲಿ ಸಹಕಾರಿಯಾಗಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience