ವಿಭಾಗದಲ್ಲಿನ ತೀವ್ರ ಪೈಪೋಟಿ: ಹುಂ ಡೈ ವೆರ್ನಾ vs ಹುಂಡೈ ಕ್ರೆಟಾ - ಯಾವುದನ್ನು ಕೊಳ್ಳಬೇಕು?
ಹುಂಡೈ ವೆರ್ನಾ 2017-2020 ಗಾಗಿ cardekho ಮೂಲಕ ಆಗಸ್ಟ್ 03, 2019 11:46 am ರಂದು ಪ್ರಕಟಿಸಲಾಗಿದೆ
- 70 Views
- ಕಾಮೆಂಟ್ ಅನ್ನು ಬರೆಯಿರಿ
ನೀವು ಸೆಡಾನ್ ಕೊಳ್ಳಬೇಕೆ ಅಥವಾ SUV ? ಯಾವುದು ಹೆಚ್ಚು ಮೌಲ್ಯಯುಕ್ತವಾಗಿದೆ ನೋಡೋಣ
ನಮ್ಮಲ್ಲಿ ಬಹಳಷ್ಟು ಮಂದಿ ಸೆಡಾನ್ ಮತ್ತು SUV ಗಳಲ್ಲಿ ಯಾವುದನ್ನೂ ಕೊಳ್ಳಬೇಕು ಎಂದು ತಮ್ಮ ಇಷ್ಟಕ್ಕೆ ಅನುಗುಣವಾದ ಬಾಡಿ ಇರುವಂತಹವನ್ನು ಸುಲಭವಾಗಿ ಆಯ್ಕೆ ಮಾಡುತ್ತಾರೆ ಆದರೆ, ಹಲವರು ಮೌಲ್ಯಯುಕ್ತತೆಗೆ ಹಾಗು ವಾಹನದ ಕಾರ್ಯದಕ್ಷತೆಗೆ ಬಹಳಷ್ಟು ಪ್ರಾಮುಖ್ಯತೆ ಕೊಡುತ್ತಾರೆ, ಹೊರಮೈ ವಿಶೇಷತೆಯ ಹೊರತಾಗಿ. ನೀವು ಈ ವಿಭಾಗಕ್ಕೆ ಸೇರಿದವರಾಗಿದ್ದರೆ ಮತ್ತು ನೀವು ಹುಂಡೈ ಶೋ ರೂಮ್ ನ ಒಳಗೆ ಪ್ರವೇಶಿಸಿ Rs 10 ಲಕ್ಷ ದಿಂದ Rs 15 ಲಕ್ಷದ ವರೆಗಿನ ವ್ಯಾಪ್ತಿಯ ಕಾರ್ ಕೊಳ್ಳಬೇಕೆಂದಿದ್ದರೆ ನಿಮಗೆ ವೆರ್ನಾ ಹಾಗು ಕ್ರೆಟಾ ಮದ್ಯ ಯಾವುದು ಕೊಳ್ಳಬೇಕು ಎಂಬ ಸಂಶಯ ಮೂಡಬಹುದು ಏಕೆಂದರೆ ಈ ಎರೆಡು ಕಾರ್ ಗಳ ವೇರಿಯೆಂಟ್ ಬೆಲೆಗಳು ಸಾಕಷ್ಟು ಸರಿಸಮನಾಗಿದೆ.
Petrol
- ಹುಂಡೈ ವೆರ್ನಾ EX (Rs 9.09 ಲಕ್ಷ) vs ಹುಂಡೈ ಕ್ರೆಟಾ E (Rs 9.29 ಲಕ್ಷ )
- ಹುಂಡೈ ವೆರ್ನಾ SX (Rs 9.75 ಲಕ್ಷ)) vs ಹುಂಡೈ ಕ್ರೆಟಾ E+ (Rs 9.99 ಲಕ್ಷ))
- ಹುಂಡೈ ವೆರ್ನಾ SX(O) (Rs 11.41 ಲಕ್ಷ) vs ಹುಂಡೈ ಕ್ರೆಟಾ SX+ (Rs 12.02 ಲಕ್ಷ))
- ಹುಂಡೈ ವೆರ್ನಾ 1.6 SX(O) ಆಟೋಮ್ಯಾಟಿಕ್ (Rs 12.55 ಲಕ್ಷ)) vs ಹುಂಡೈ ಕ್ರೆಟಾ1.6 SX+ ಆಟೋಮ್ಯಾಟಿಕ್ (Rs 13.03 ಲಕ್ಷ)
ಡೀಸೆಲ್
- ಹುಂಡೈ ವೆರ್ನಾ EX (Rs 10.31 ಲಕ್ಷ ) vs ಹುಂಡೈ ಕ್ರೆಟಾ E (Rs 9.99 ಲಕ್ಷ )
- ಹುಂಡೈ ವೆರ್ನಾ SX (Rs 11.44 ಲಕ್ಷ) vs ಹುಂಡೈ ಕ್ರೆಟಾ S (Rs 11.38 ಲಕ್ಷ)
- ಹುಂಡೈ ವೆರ್ನಾ SX(O) (Rs 12.75 ಲಕ್ಷ) vs ಹುಂಡೈ ಕ್ರೆಟಾ SX (Rs 12.50 ಲಕ್ಷ)
ಹಾಗಾದರೆ, ನೀವು ಯಾವ ಕಾರ್ ಕೊಳ್ಳಬೇಕು? ನಿಮಗೆ ಉತ್ತರಿಸುವ ಮುನ್ನ, ಇವೆರೆಡರ ಪ್ರಮುಖ ಬಿನ್ನತೆಗೆಳು ಕೆಳಗಿನಂತಿವೆ.
ಹುಂಡೈ ವೆರ್ನಾ |
ಹುಂಡೈ ಕ್ರೆಟಾ |
ಹುಂಡೈ ಹೊಸ ವೆರ್ನಾ ವನ್ನು 2017 ನಲ್ಲಿ ಬಿಡುಗಡೆ ಮಾಡಿತು. ಇದು 3-ಬಾಕ್ಸ್ ಸೆಡಾನ್ ಆಗಿದ್ದು, ಹೆಚ್ಚು ಪ್ರಖ್ಯಾತಿ ಪಡೆದ ಕಾರ್ ಗಳಲ್ಲಿ ಒಂದಾಗಿದೆ ಹೋಂಡಾ ಸಿಟಿ, ಮತ್ತು ಮಾರುತಿ ಸಿಯಾಜ್ ಒಂದಿಗೆ. ವೆರ್ನಾ ದಲ್ಲಿನ ಕ್ಯಾಬಿನ್ ಹೆಚ್ಚಿನ ಫೀಚರ್ ಗಳೊಂದಿಗೆ ಪ್ಯಾಸೆಂಜರ್ ಗಳಿಗೆ ಹೆಚ್ಚು ಆರಾಮದಾಯಕವಾಗಿದೆ. ಆದರೆ, ವೆರ್ನಾ ದಲ್ಲಿ ಇನ್ನು ಸ್ವಲ್ಪ ಸ್ಥಳಾಭಾವ ಇದೆ. ಅದು ಹಿಂದಿನ ಪೀಳಿಗೆಯ ಮಾಡೆಲ್ ಗಿಂತ ಉತ್ತಮವಾಗಿದ್ದರೂ ಸಹ. ಬೂಟ್ ಸ್ಪೇಸ್ 480 ಲೀಟರ್ ಗಳು ಇದೆ. |
ಹುಂಡೈ ಕ್ರೆಟಾ ಕಾಂಪ್ಯಾಕ್ಟ್ SUV ಆಗಿದ್ದು ಅಳತೆಯಲ್ಲಿ ದೊಡ್ಡದಾಗಿದೆ (ಎತ್ತರ ಮತ್ತು ಅಗಲದಲ್ಲಿ ) ವೆರ್ನಾ ಗಿಂತಲೂ ಹೆಚ್ಚಾಗಿ. ಅದು ಬಹಳಷ್ಟು ಸಮಯದಿಂದ ಪ್ರಚಲಿತದಲ್ಲಿದೆ, ಹುಂಡೈ ಅದಕ್ಕೆ ಈ ವರ್ಷ ನವೀಕರಣ ಮಾಡುವ ಸಾಧ್ಯತೆ ಇದೆ. ಈ ಮೇಕ್ ಓವರ್ ನಲ್ಲಿ ಹೊಸ ಫೀಚರ್ ಗಳಾದ ಸನ್ ರೂಫ್ ಮತ್ತು ಇತರ ಫೀಚರ್ ಗಳನ್ನು ಕೊಡಲಾಗಿದೆ. ಕ್ರೆಟಾ ಹೆಚ್ಚು ಮಾರಾಟವಾಗುತ್ತಿರುವ SUV ಆಗಿದೆ ಈ ವಿಭಾಗದಲ್ಲಿ ಮತ್ತು ಅದರಲ್ಲಿ ಕ್ಯಾಬಿನ್ ನಲ್ಲಿ ಅನುಕೂಲತೆಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಹಿಂಬದಿಯ ಸೀಟ್ ನಲ್ಲಿನ ವಿಶಾಲತೆ ಕ್ರೆಟಾ ದಲ್ಲಿ ವೆರ್ನಾ ಗಿಂತಲೂ ಹೆಚ್ಚಾಗಿದೆ. ಆದರೆ ಬೂಟ್ ಸ್ಪೇಸ್ 400 ಲೀಟರ್ ಮಾತ್ರ ಇದೆ, 80 ಲೀಟರ್ ಕಡಿಮೆ ಇದೆ ವೆರ್ನಾ ಗೆ ಹೋಲಿಸಿದರೆ. |
ವೆರ್ನಾ 2 ಪೆಟ್ರೋಲ್ ಎಂಜಿನ್ ಗಳು ಹಾಗು ಒಂದು ಡಿಎಎಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಅದು 1.6-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಕ್ರೆಟಾ ದೊಂದಿಗೆ ಹಂಚಿಕೊಂಡಿದೆ. ಮತ್ತೊಂದು ಪೆಟ್ರೋಲ್ ಎಂಜಿನ್ 1.4-ಲೀಟರ್ ಯುನಿಟ್ ಆಗಿದೆ. 1.4-ಲೀಟರ್ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಮಾತ್ರ ಬರುತ್ತದೆ ಮತ್ತು 1.6-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳು 6-ಸ್ಪೀಡ್ ಮಾನ್ಯುಯಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ. ಹೊಸ ವೆರ್ನಾ ಪಾಟ್ ಹೋಲ್ ಗಳನ್ನೂ ಮತ್ತು ಸಿಟಿ ಯಲ್ಲಿನ ರಸ್ತೆಯ ಅಂಕು ಡೊಂಕುಗಳನ್ನು ಚೆನ್ನಾಗಿ ನಿಭಾಯಿಸುತ್ತದೆ ಮತ್ತು ಹೈವೇ ಯಲ್ಲಿ ಡ್ರೈವ್ ಮಾಡಲು ಚೆನ್ನಾಗಿದೆ. ಹಿಂದಿನ ವೆರ್ನಾ ದಲ್ಲಿ ಇದ್ದಂತಹ ಬೌನ್ಸಿ ರೈಡ್ ಈಗ ಇಲ್ಲವಾಗಿದೆ, ಮತ್ತು ಕಾರ್ ಹೆಚ್ಚಿನ ವೇಗಗಗಳಲ್ಲಿ ದೃಢವಾಗಿ ಇರುತ್ತದೆ. ತಿರುವುಗಳಲ್ಲಿ ಸ್ವಲ್ಪ ಬಾಡಿ ರೋಲ್ ಅನುಭವ ಆಗುತ್ತದೆ ಆದರೆ ಅದು ಅಷ್ಟೇನೂ ಮೆಚ್ಚುವತಿಲ್ಲ. ಪ್ರತಿಸ್ಪರ್ದಿಗಳು: ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ವೋಕ್ಸ್ವ್ಯಾಗನ್ ವೆಂಟೋ, ಸ್ಕೊದ ರಾಪಿಡ್ ಮತ್ತು ಮುಂಬರುವ ಟೊಯೋಟಾ ಯಾರಿಸ್ . |
ಕ್ರೆಟಾ ದಲ್ಲಿ ಇರುವ 1.6-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವೆರ್ನಾ ದಲ್ಲೂ ಸಹ ಇರುವುದಲ್ಲದೆ, ಇದರಲ್ಲಿ 1.4-ಲೀಟರ್ ಡೀಸೆಲ್ ಎಂಜಿನ್ ಸಹ ಇದೆ. ದೊಡ್ಡ ಎಂಜಿನ್ 6-ಸ್ಪೀಡ್ ಮಾನ್ಯುಯಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ , ಚಿಕ್ಕ ಡೀಸೆಲ್ ಎಂಜಿನ್ ಯೂನಿಟ್ ಕೇವಲ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಮಾತ್ರ ಬರುತ್ತದೆ. ಕ್ರೆಟಾ ಟ್ರಾನ್ಸ್ಮಿಷನ್ ಸ್ವಲ್ಪ ಮೃದುವಾಗಿದೆ ಎನಿಸುತ್ತದೆ. ಅಂದರೆ ಅದು ಪಾಟ್ ಹೋಲ್ ಗಳನ್ನೂ ಹಾಗು ರೋಡ್ ನ ವೈಪರೀತ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತದೆ ಎಂದು. ಆದರೆ ಹೈವೇ ಯಲ್ಲಿ , ಕ್ರೆಟಾ ಹೋಲಿಕೆಯಲ್ಲಿ ವೆರ್ನಾ ಗಿಂತಲೂ ಹಿಂದೆ ಉಳಿಯುತ್ತದೆ. ಪ್ರತಿಸ್ಪರ್ದಿಗಳು: ರೆನಾಲ್ಟ್ ಡಸ್ಟರ್ ,ಮತ್ತು ಮಾರುತಿ ಸುಜುಕಿ S-ಕ್ರಾಸ್. |
ಪೆಟ್ರೋಲ್ ಹೋಲಿಕೆ
ಹುಂಡೈ ವೆರ್ನಾ 1.4 EX vs ಹುಂಡೈ ಕ್ರೆಟಾ 1.6 E
ಹುಂಡೈ ವೆರ್ನಾ 1.4 EX - 9.09 ಲಕ್ಷ
ಹುಂಡೈ ಕ್ರೆಟಾ 1.6 E - 9.29 ಲಕ್ಷ
ಫೀಚರ್ ಗಳು
ವೆರ್ನಾ EX ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS , ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಸೆನ್ಸಾರ್ ಗಳು ಹಾಗು ಡೈನಾಮಿಕ್ ಗೈಡ್ ಲೈನ್ ಗಳು, 5-ಇಂಚು ಟಚ್ ಸ್ಕ್ರೀನ್ ಆಡಿಯೋ ಸಿಸ್ಟಮ್ ಜೊತೆಗೆ ಅರ್ಕಾಯ್ಮ್ ಸೌಂಡ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್, ಡ್ರೈವರ್ ಸೀಟ್ ಎತ್ತರ ಸರಿಹೊಂದಿಸುವಿಕೆ ಮತ್ತು ಎಲ್ಲ ನಾಲ್ಕು ಪವರ್ ವಿಂಡೋ ಗಳು. ಕ್ರೆಟಾ E, ಇನ್ನೊಂದು ಬದಿಯಲ್ಲಿ ಎಲ್ಲ ಅವಶ್ಯಕತೆಗಳನ್ನು ಇದೆ ಎನ್ನುವಂತೆ ಮಾಡುತ್ತದೆ, ಅವುಗಳೆಂದರೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಡೇ/ನೈಟ್ IRVM, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್, ಎಲ್ಲ ನಾಲ್ಕು ಪವರ್ ವಿಂಡೋ ಗಳು, ಮತ್ತು AC ಜೊತೆಗೆ ರೇರ್ ವೆಂಟ್ ಗಳು. ಮ್ಯೂಸಿಕ್ ಸಿಸ್ಟಮ್ ಇಲ್ಲದಿರುವುದು ಪ್ರಮುಖ ಮಿಸ್ ಗಳಲ್ಲಿ ಒಂದು, ಇದರಲ್ಲಿ ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಹಾಗು ರೇರ್ ಪಾರ್ಕಿಂಗ್ ಸೆನ್ಸಾರ್ ಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಟೇಕ್ ಅವೇ ಗಳು
ಕೇವಲ ಫೀಚರ್ ಗಳ ಇರುವಿಕೆ ಮತ್ತು ಬೆಲೆ ಪಟ್ಟಿ ಆಧರಿಸಿ, ವೆರ್ನಾ EX ಸ್ಪಷ್ಟವಾದ ಗೆಲುವು ಪಡೆದುಕೊಂಡಿದೆ ಕ್ರೆಟಾ E ಗೆ ಹೋಲಿಸಿದರೆ. ಕ್ರೆಟಾ E ಕೇವಲ ಕಡಿಮೆ ಬಜೆಟ್ ನಲ್ಲಿ SUV ಕೊಳ್ಳಬೇಕೆಂದಿರುವವರಿಗೆ ಮಾತ್ರ ಒಪ್ಪುವಂತಿದೆ. ಆದರೆ ವೆರ್ನಾ EX ಗಿಂತ ಹೆಚ್ಚಿನ ಪ್ರೀಮಿಯಂ ಪರಿಗಣಿಸಿದರೆ ಕ್ರೆಟಾ E ಬೆಲೆಗೆ ತಕ್ಕ ಮೌಲ್ಯ ಕೊಡುವುದಿಲ್ಲ. ಗ್ರಾಹಕರು ಗಮನಿಸಬೇಕಾದ ವಿಷಯವೆಂದರೆ ವೆರ್ನಾ EX ಕಾರ್ಯದಕ್ಷತೆ 1.4L ಪೆಟ್ರೋಲ್ ಎಂಜಿನ್ ಹೊಂದಿರುವುದರೊಂದಿಗೆ ಸಾಕಷ್ಟು ಚೆನ್ನಾಗಿದೆ ಎನಿಸುವಂತಿದೆ.
ಸಂಬಂಧಿತ: ಮುಂದಿನ ಪೀಳಿಗೆಯ ಹ್ಯುಂಡೈ ಕ್ರೆಟಾ ಕಿಯಾ ಎಸ್ಪಿ ಕಾನ್ಸೆಪ್ಟ್‌ನ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ
ಹುಂಡೈ ವೆರ್ನಾ 1.6 SX vs ಹುಂಡೈ ಕ್ರೆಟಾ 1.6 E+
ಹುಂಡೈ ವೆರ್ನಾ 1.6 SX - 9.75 lakh
ಹುಂಡೈ ಕ್ರೆಟಾ 1.6 E+ - 9.99 lakh
ಫೀಚರ್ ಗಳು
ಹಿಂದಿನ ವೇರಿಯೆಂಟ್ ನಲ್ಲಿ ದೊರೆಯುವ ಫೀಚರ್ ಗಳನ್ನು ಹೊರತುಪಡಿಸಿ, ವೆರ್ನಾ ದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಆಟೋ ಡಿಮಿಂಗ್ IRVM, ಅಲಾಯ್ ವೀಲ್ ಗಳು ಮತ್ತು 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕೊಡಲಾಗಿದೆ 5-ಇಂಚು ಯೂನಿಟ್ ಬದಲಾಗಿ. ಹೆಚ್ಚಿನ ವಿಷಯಗಳು ಅದರ ಪ್ರೀಮಿಯಂ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಜೊತೆಗೆ ಒಳಭಾಗದಲ್ಲಿ ಹೆಚ್ಚಿನ ಅನುಕೂಲತೆ ಸಹ ಉಂಟಾಗಿದೆ.
ಹುಂಡೈ ಕ್ರೆಟಾ E+, ಇನ್ನೊಂದು ಬದಿಯಲ್ಲಿ E ವೇರಿಯೆಂಟ್ ಗಿಂತಲೂ ಹೆಚ್ಚೇನು ಪಡೆದಿಲ್ಲ, ರೂಫ್ ರೈಲ್, ಟಚ್ ಸ್ಕ್ರೀನ್ ಆಡಿಯೋ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಇಲ್ಲ ) ಮತ್ತು ವಿದ್ಯುತ್ ಅಳವಡಿಕೆಯ ORVM ಗಳು ( ಆದರೆ ವಿದ್ಯುತ್ ಮಡಚುವಿಕೆ ಇಲ್ಲ ) ಗಳು ಮಾತ್ರ ಗಮನಾರ್ಹ ಹೆಚ್ಚುವರಿಗಳು ಆಗಿವೆ. ವಾಹನದ ಬೆಲೆ Rs 10 ಲಕ್ಷ ಇದ್ದು, ಪಾರ್ಕಿಂಗ್ ಸೆನ್ಸಾರ್ ಗಳು ಇಲ್ಲದಿರುವುದು ಒಂದು ಕೊರತೆಯಾಗಿದೆ, ನಮ್ಮ ಅನಿಸಿಕೆ ಪ್ರಕಾರ. ಎರೆಡರಲ್ಲೂ ಹೋಲಿಸಿದಾಗ ವೆರ್ನಾ ದಲ್ಲಿ ಹೆಚ್ಚಿನ ಸಲಕರಣೆಗಳನ್ನು ಕೊಡಲಾಗಿದೆ.
ಟೇಕ್ ಅವೇ ಗಳು
ನಮ್ಮ ತೀರ್ಪು ಇಲ್ಲೂ ಸಹ ಹಾಗೆಯೆ ಉಳಿಯುತ್ತದೆ. ಕ್ರೆಟಾ , ತನ್ನ ಬೇಸ್ ವೇರಿಯೆಂಟ್ ನಂತರದ ವೇರಿಯೆಂತ್ ಆಗಿದ್ದರು ಸಹ, ಆರಂಭಿಕ ಹಂತದ ಕಾರ್ ಆಗಿದೆ. ವೆರ್ನಾ ದ ಕ್ಯಾಬಿನ್ ನಿಮಗೆ ಒಂದು ಆಧುನಿಕ ವಾಹನದಲ್ಲಿ ಕುಳಿತ ಅನುಭವ ಆಗುವಂತೆ ಮಾಡುತ್ತದೆ.
Also Read: Hyundai Creta Variants Explained
ಹುಂಡೈ ವೆರ್ನಾ 1.6 SX(O) vs ಹುಂಡೈ ಕ್ರೆಟಾ 1.6 SX+
ಹುಂಡೈ ವೆರ್ನಾ 1.6 SX(O) Rs 11.41 ಲಕ್ಷ
ಹುಂಡೈ ಕ್ರೆಟಾ 1.6 SX+ Rs 12.02 ಲಕ್ಷ
ಹುಂಡೈ ವೆರ್ನಾ 1.6 SX(O) ಆಟೋಮ್ಯಾಟಿಕ್ Rs 12.55 ಲಕ್ಷ
ಹುಂಡೈ ಕ್ರೆಟಾ 1.6 SX+ ಆಟೋಮ್ಯಾಟಿಕ್ Rs 13.03 ಲಕ್ಷ
ಫೀಚರ್ ಗಳು
ಟಾಪ್ ವೇರಿಯೆಂಟ್ ಗಳಲ್ಲಿ, ವೆರ್ನಾ ಮತ್ತು ಕ್ರೆಟಾ ಗಳಲ್ಲಿ ಉತ್ತಮ ಫೀಚರ್ ಗಳಿಂದ ಬಾರಿಸಲಾಗಿದೆ, ಮತ್ತು ಅದರಲ್ಲಿ ಹಲವು ಸಾಮಾನ್ಯವಾಗಿದೆ. ಎರೆಡು ಕಾರ್ ಗಳಲ್ಲಿ ರೇರ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಸೆನ್ಸಾರ್ ಗಳು ಮತ್ತು ಡೈನಾಮಿಕ್ ಗೈಡ್ ಲೈನ್ ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಪುಶ್ ಬಟನ್ ಸ್ಟಾರ್ಟ್ ಜೊತೆಗೆ ಸ್ಮಾರ್ಟ್ ಕೀ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ಕ್ಲಸ್ಟರ್ ಇಯೋನೈಝರ್ , ಟಚ್ ಸ್ಕ್ರೀನ್ ಆಡಿಯೋ ಸಿಸ್ಟಮ್ ಜೊತೆಗೆ ಅರ್ಕ್ಯಾಮ್ಸ್ ಸೌಂಡ್, ಡ್ರೈವರ್ ಸೀಟ್ ಎತ್ತರ ಅಳವಡಿಕೆ, ಮತ್ತು ಅಲಾಯ್ ವೀಲ್. ಇಲ್ಲಿ ಹೊಸ ಕಾರ್ ಆಗಿರುವುದರಿಂದ, ವೆರ್ನಾ ದಲ್ಲಿ ಹೆಚ್ಚು ಫೀಚರ್ ಗಳನ್ನೂ ಕೊಡಲಾಗಿದೆ ಅವುಗಳೆಂದರೆ ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್, ವಿದ್ಯುತ್ ಸನ್ ರೂಫ್, ಲೆಥರ್ ಮೇಲ್ಪದರಗಳು ಮತ್ತು ವೆಂಟಿಲೇಟೆಡ್ ಮುಂಬದಿಯ ಸೀಟ್ ಗಳು.
ಟೇಕ್ ಅವೇ ಗಳು
ಸನ್ ರೂಫ್ ಮತ್ತು ಹೆಚ್ಚಿನ ಏರ್ಬ್ಯಾಗ್ ಗಳನ್ನೂ ಕೊಡುವುದರೊಂದಿಗೆ, ವೆರ್ನಾ ದ ಟಾಪ್ ವೇರಿಯೆಂಟ್ ಸರಿಯಾದ ಕಾರ್ ಎನಿಸುವುದಲ್ಲದೆ ಮೆಚ್ಚುವಂತಹುದಾಗಿದೆ. ನಮಗೆಲ್ಲ ತಿಳಿದಿರುವಂತೆ ವೆಂಟಿಲೇಟೆಡ್ ಸೀಟ್ ಹೆಚ್ಚು ಉಪಯುಕ್ತವಾಗಿರುತ್ತದೆ, ನಮ್ಮಂತಹ ಬೆಚ್ಚಗಿರುವ ವಾತಾವರಣವುಳ್ಳ ದೇಶಗಳಲ್ಲಿ, ಸರಿಸುಮಾರು Rs 15 ಲಕ್ಷ ಒಳಗಡೆ ಇದ್ದು, ವೆರ್ನಾ ದ ಫೀಚರ್ ಗಳ ಪಟ್ಟಿ ಮೆಚ್ಚುವಂತಹುದಾಗಿದೆ. ನಾವು ಹೇಳಲೇಬೇಕಾಗುತ್ತದೆ ಕ್ರೆಟಾ ಟಾಪ್ ವೇರಿಯೆಂಟ್ Rs 50,000 ಹೆಚ್ಚು ದುಬಾರಿಯಾಗಿದ್ದು , ಹೋಲಿಕೆಯಲ್ಲಿ ನಿರಸವಾಗಿದೆ.
ಆದರೆ, ಈಗಿರುವಂತೆ, ಕ್ರೆಟಾ ವನ್ನು ಮಾತ್ರ ಪರಿಗಣಿಸಿದರೆ, ಅದು ಅಷ್ಟೇನೂ ಕೆಟ್ಟದಾಗಿಲ್ಲ , ಏಕೆಂದರೆ ಅದರಲ್ಲಿ ನಿಮಗೆ ಬೇಕಾದ ಎಲ್ಲ ಫೀಚರ್ ಗಳು ಲಭ್ಯವಿದೆ. ಹಾಗಾಗಿ, ನೀವು ಕ್ರೆಟಾ ದ ಬಗ್ಗೆ ಒಲವು ತೋರುತ್ತಿದ್ದರೆ ಈ ಎರೆಡು ಕಾರ್ ಗಳಲ್ಲಿರುವಂತಹ ಅಂತರ್ಗತ ಭಿನ್ನತೆ ಗಳನ್ನೂ ಪಟ್ಟಿಮಾಡಲಾಗಿದೆ ಅದನ್ನು ಈ ಹೋಲಿಕೆಯ ಮೇಲ್ಬಾಗದಲ್ಲಿ ತೋರಿಸಲಾಗಿದೆ. ನಮಗೆ ಅನಿಸುವಂತೆ ನೀವು SUV ಸಹ ಆಯ್ಕೆ ಮಾಡಬಹುದು. ಆದರೂ, ಗಮನದಲ್ಲಿರಿಸಿಕೊಳ್ಳಿ ಫೇಸ್ ಲಿಫ್ಟ್ ಮಾಡೆಲ್ ಇಷ್ಟರಲ್ಲೇ ಬರುವ ಸಾಧ್ಯತೆ ಇದೆ ಮತ್ತು ಅದರಲ್ಲಿ ಹೆಚ್ಚಿನ ಸಲಕರಣೆಗಳು ದೊರೆಯಲಿವೆ.
ಡೀಸೆಲ್
ಹುಂಡೈ ವೆರ್ನಾ 1.6 EX vs ಹುಂಡೈ ಕ್ರೆಟಾ 1.4 E
ಹುಂಡೈ ವೆರ್ನಾ 1.6 EX Rs 10.31 ಲಕ್ಷ
ಹುಂಡೈ ಕ್ರೆಟಾ 1.4 E Rs 9.99 ಲಕ್ಷ
ಫೀಚರ್ ಗಳು,
ವೆರ್ನಾ EX ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS , ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ AC ವೆಂಟ್ ಗಳು , ರೇರ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಸೆನ್ಸಾರ್ ಗಳು ಮತ್ತು ಡೈನಾಮಿಕ್ ಗೈಡ್ ಲೈನ್ ಗಳು, 5-ಟಚ್ ಸ್ಕ್ರೀನ್ ಆಡಿಯೋ ಸಿಸ್ಟಮ್ ಜೊತೆಗೆ ಅರ್ಕಾಯ್ಮ್ಸ್ ಸೌಂಡ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು, ಟೈಲ್ಟ್ ಅಳವಡಿಕೆಯ ಸ್ಟಿಯರಿಂಗ್, ಡ್ರೈವರ್ ಸೀಟ್ ಎತ್ತರ ಅಳವಡಿಕೆಗಳು ಮತ್ತು ಎಲ್ಲ ನಾಲ್ಕು ಪವರ್ ವಿಂಡೋ ಗಳು. ಕ್ರೆಟಾ E , ಇನ್ನೊಂದು ಬದಿಯಲ್ಲಿ ಕೇವಲ ಅವಶ್ಯಕತೆಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS, ಡೇ/ನೈಟ್ IRVM ಗಳು, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್ , ಎಲ್ಲ ನಾಲ್ಕು ಪವರ್ ವಿಂಡೋ ಗಳು, AC ಜೊತೆಗೆ ರೇರ್ ವೆಂಟ್ ಗಳು. ಮ್ಯೂಸಿಕ್ ಸಿಸ್ಟಮ್ ಇಲ್ಲದಿರುವುದು ಒಂದು ಕೊರತೆಯಾಗಿದೆ, ಮತ್ತು ಇದರಲ್ಲಿ ಎತ್ತರ ಅಳವಡಿಕೆಯ ಡ್ರೈವರ್ ಸೀಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಟೇಕ್ ಅವೇ ಗಳು,
ವೆರ್ನಾ ಈಗಲೂ ಉತ್ತಮ ಆಯ್ಕೆ ಆಗಿದೆ ಏಕೆಂದರೆ ಇದರಲ್ಲಿ ಡೀಸೆಲ್ ವೇರಿಯೆಂಟ್ ಆಯ್ಕೆಗಳಿದ್ದು ಪೆಟ್ರೋಲ್ ವೇರಿಯೆಂಟ್ ನಂತೆ ಫೀಚರ್ ಗಳಲ್ಲೂ ಸಾಮ್ಯತೆ ಇದೆ. ಈ ಬಾರಿ ವೆರ್ನಾ ಬೆಲೆಯು ಸ್ವಲ್ಪ ಹೆಚ್ಚು ಅನಿಸುತ್ತದೆ ಆದರೆ ಅದರ ಪ್ರೀಮಿಯಂ ನಿಲುವು ಸಮರ್ಥಿಸಿಕೊಳ್ಳುತ್ತದೆ.
ಹುಂಡೈ ವೆರ್ನಾ 1.6 SX vs ಹುಂಡೈ ಕ್ರೆಟಾ 1.4 S
ಹುಂಡೈ ವೆರ್ನಾ 1.6 SX Rs 11.44 ಲಕ್ಷ
ಹುಂಡೈ ಕ್ರೆಟಾ 1.4 S Rs 11.38 ಲಕ್ಷ
ಫೀಚರ್ ಗಳು,
ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಾಗಿ, ಕ್ರೆಟಾ S ನಲ್ಲಿ ಫೀಚರ್ ಗಳಾದ ಫಾಗ್ ಲ್ಯಾಂಪ್ ಗಳು, ಆಂಟೆನಾ, ವಿದ್ಯುತ್ ಅಳವಡಿಕೆಯ ಹೊರಬದಿಯ ರೇರ್ ವ್ಯೂ ಮಿರರ್ ಗಳು, ಸರಿಪಡಿಸಬಹುವುದಾದ ಮುಂಬದಿಯ ಹಾಗು ಹಿಂಬದಿಯ ಹೆಡ್ ರೆಸ್ಟ್ ಗಳು, ಮತ್ತು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಬ್ಲೂಟೂತ್ ಗಳನ್ನೂ ಕೊಡಲಾಗಿದೆ. ಆದರೆ ಅದು ವೆರ್ನಾ SX ದ ಫೀಚರ್ ಗಾಲ ಪಟ್ಟಿಗೆ ಸರಿಸಮನಾಗಿಲ್ಲ, ಅದರಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ ಕಾರ್ನೆರಿಂಗ್ ಲ್ಯಾಂಪ್ ಗಳು, ಮತ್ತು LED DRL ಗಳು, 16-ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ಗಳು, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಇನ್ನು ಹೆಚ್ಚು.
ಟೇಕ್ ಅವೇ ಗಳು
ಕ್ರೆಟಾ ತನ್ನ ಮಿಡ್ ವೇರಿಯೆಂಟ್ ನಲ್ಲೂ ಸಹ ಹೆಚ್ಚು ಸಲಕರಣೆಗಳನ್ನು ಹೊಂದಿಲ್ಲ, ನಾವು ಅದನ್ನು ವೆರ್ನಾ ಗಿಂತಲೂ ಹೆಚ್ಚಾಗಿ ಶಿಫಾರಸು ಮಾಡಲು. ಅದರಲ್ಲಿ ಅವಶ್ಯಕೆತೆ ಸುರಕ್ಷತೆ ಹಾಗು ಅನುಕೂಲತೆಗಳ ಫೀಚರ್ ಗಳನ್ನೂ ಮಾತ್ರ ಕೊಡಲಾಗಿದೆ. ವೆರ್ನಾ ದಲ್ಲಿ ಅವಶ್ಯಕತೆಗಳ ಹಾಗು ಬೇಡಿಕೆಗಳ ಸಮತೋಲನ ಕಾಯ್ದುಕೊಳ್ಳಲಾಗಿದೆ ಉದ್ದವಾದ ಫೀಚರ್ ಗಳ ಪಟ್ಟಿಯೊಂದಿಗೆ.
ಹುಂಡೈ ವೆರ್ನಾ SX(O) vs ಹುಂಡೈ ಕ್ರೆಟಾ SX
ಹುಂಡೈ ವೆರ್ನಾ SX(O) Rs 12.75 ಲಕ್ಷ
ಹುಂಡೈ ಕ್ರೆಟಾ SX Rs 12.50 ಲಕ್ಷ
ಫೀಚರ್ ಗಳು
SX(O) ಟಾಪ್ ಸ್ಪೆಕ್ ವೇರಿಯೆಂಟ್ ಆಗಿದ್ದು, ಎಲ್ಲ ಬಗೆಯ ಫೀಚರ್ ಗಳನ್ನೂ ಹೊಂದಿದೆ ಅವುಗಳೆಂದರೆ ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳು, ವಿದ್ಯುತ್ ಸನ್ ರೂಫ್, ವೆಂಟಿಲೇಟೆಡ್ ಸೀಟ್ ಗಳು, ಸ್ಮಾರ್ಟ್ ಕೀ, ಲೆಥರ್ ಮೇಲ್ಪದರಗಳು ಹಾಗು ಮತ್ತಷ್ಟು. ಕ್ರೆಟಾ SX ಇನ್ನೊಂದುಬದಿಯಲ್ಲಿ ಟಾಪ್ ವೇರಿಯೆಂಟ್ ಆಗಿಲ್ಲದಿದ್ದರು ಅದರಲ್ಲಿ ಫೇತ್ತ್ತುಎ ಗಳಾದ ರೇರ್ ಪಾರ್ಕಿಂಗ್ ಸೆನ್ಸಾರ್ ಗಳು( ಆದರೆ ರೇರ್ ಪಾರ್ಕಿಂಗ್ ಕ್ಯಾಮೆರಾ ಇಲ್ಲ ), 16-ಇಂಚು ಅಲಾಯ್ ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ ಕಾರ್ನೆರಿಂಗ್ ಲ್ಯಾಂಪ್ ಗಳು ಹಾಗು LED ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಿದ್ಯುತ್ ನಿಂದ ಮಡಚಬಹುದಾದ ಹೊರಗಡೆಯ ರೇರ್ ವ್ಯೂ ಮಿರರ್ ಗಳು ಮತ್ತು ರೇರ್ ವೈಪರ್ ಮತ್ತು ವಾಷರ್ ಗಳು, ಸಿಲ್ವರ್ ಕ್ರೋಮ್ ಹೊರಪದರಗಳು ಮುಂಬದಿಯ ಗ್ರಿಲ್ ಮೇಲೆ, ಕ್ರೋಮ್ ಗಾರ್ನಿಶ್ ಟೈಲ್ ಗೇಟ್ ಮೇಲೆ, ಮತ್ತು ಮೆಟಾಲಿಕ್ ಸ್ಖಫ್ ಪ್ಲೇಟ್ ಗಳು ಕೊಡಲಾಗಿದೆ.
ಟೇಕ್ ಅವೇ ಗಳು,
ಹೆಚ್ಚಿನ ಪ್ರೀಮಿಯಂ ಆದ Rs 25,000,ಒಂದಿಗೆ ಈ ಎರೆಡರಲ್ಲಿ ವೆರ್ನಾ ಉತ್ತಮ ಆಯ್ಕೆ ಆಗಿದೆ. ಆದರೆ, ಕ್ರೆಟಾ ಒಂದನ್ನೇ ಪರಿಗಣಿಸಿದಾಗ, ಕ್ರೆಟಾ ವೆರ್ನಾ ಜೊತೆಗೆ ಹೋಲಿಸಿದಾಗ ತೋರಿಬರುವಂತೆ ಕಡಿಮೆ ಫೀಚರ್ ಗಳನ್ನು ಹೊಂದಿಲ್ಲ. ಹಾಗಾಗಿ, ನಾವು ಮೇಲೆ ಪಟ್ಟಿಮಾಡಿದಂತೆ , ನಿಮಗೆ ಕ್ರೆಟಾ ಹೆಚ್ಚು ಸೂಕ್ತವಾಗಿದೆ ಎನಿಸಿದರೆ, ನೀವು ಅದರ SX ವೇರಿಯೆಂಟ್ ಅನ್ನು ಪರಿಗಣಿಸಬಹುದು ವೆರ್ನಾ ದ SX(O) ಗಿಂತಲೂ ಹೆಚ್ಚಾಗಿ.
ಅಂತಿಮ ಅನಿಸಿಕೆ: ಯಾವ ಕಾರನ್ನು ಕೊಳ್ಳಬೇಕು?
ಕ್ರೆಟಾ ವನ್ನು ಏಕೆ ಕೊಳ್ಳಬೇಕು?
1.ರೈಡ್ ಮತ್ತು ಗ್ರೌಂಡ್ ಕ್ಲಿಯರೆನ್ಸ್: ಕ್ರೆಟಾ ಸಾಂಪ್ರದಾಯಿಕ SUV ಆಗಿಲ್ಲದಿದ್ದರು, ಅದು ವೆರ್ನಾ ಗಿಂತಲೂ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಕಳಪೆ ಗುಣಮಟ್ಟದ ರಸ್ತೆ ಗಳಿಗೆ ಸೂಕ್ತವಾಗಿದೆ.
2. ಉಪಯುಕ್ತತೆ: ಮಡಚಬಹುದಾದ ರೇರ್ ಸೀಟ್ ಗಳಿಗೆ ಧನ್ಯವಾದಗಳು, ಕ್ರೆಟಾ ದಲ್ಲಿ ನಿಮಗೆ ಸೂಟ್ ಕೇಸ್ ನಿಂದ ಹಿಡಿದು ಸೈಕಲ್ ತನಕ ತೆಗೆಯುಕೊಂಡು ಹೋಗಲು ಅನುವುಮಾಡಿಕೊಡುತ್ತದೆ. ಜೊತೆಗೆ ಚಲನೆಯಲ್ಲಿರುವಾಗಲು ಸಹ ನಿಮ್ಮ ಲಗೇಜ್ ಅನ್ನು ಉಪಯೋಗಿಸಬಹುದು.
3. ಕ್ಯಾಬಿನ್ ವಿಶಾಲತೆ: ಇವೆರೆಡರಲ್ಲಿ ಕ್ರೆಟಾ ಹೆಚ್ಚು ವಿಶಾಲವಾಗಿದೆ.
Related: Spied: 2018 Hyundai Creta Facelift To Get A Sunroof || 8 Upcoming Hyundai Creta Rivals: Kia SP, MG SUV, Tata H5X, Skoda Vision X, VW T-Cross & More
ವೆರ್ನಾ ವನ್ನು ಏಕೆ ಕೊಳ್ಳಬೇಕು?
1. ಫೀಚರ್ ಗಳಿಂದ ಆವೃತವಾಗಿದೆ: ವೆರ್ನಾ ದಲ್ಲಿ ಹೆಚ್ಚು ಹೆಚ್ಚಾಗಿ ಫೀಚರ್ ಗಳನ್ನು ತುಂಬಲಾಗಿದೆ.
2. ದೊಡ್ಡ ಬೂಟ್: 480 ಲೀಟರ್ ಗಳೊಂದಿಗೆ, ವೆರ್ನಾ ದಲ್ಲಿ ಹೆಚ್ಚು ಲಗೇಜ್ ಸ್ಥಳಾವಕಾಶ ಇದೆ, ಕ್ರೆಟಾ ಗೆ ಹೋಲಿಸಿದಾಗ, 5 ಪ್ರಯಾಣಿಕರು ಇದ್ದಾಗಲೂ ಸಹ.
3. ಈಗಿನ ಕ್ರೆಟಾ ಹೆಚ್ಚು ಸಮಯದಿಂದ ಇರುವುದರಿಂದ ಅದು ಇಷ್ಟರಲ್ಲೇ ಫೇಸ್ ಲಿಫ್ಟ್ ಪಡೆಯಲಿದೆ. ವೆರ್ನಾ ಇನ್ನೊಂದು ಬದಿಯಲ್ಲಿ ನೂತನವಾಗಿದೆ ಮತ್ತು ಪೂರ್ಣವಾದ ಮಾಡೆಲ್ ನವೀಕರಣ ಮಾಡಲಾಗಿದೆ.
Related: Hyundai Verna vs Honda City: Comparison Review
ಸ್ಪೆಸಿಫಿಕೇಷನ್ ಗಳು: ಎಂಜಿನ್
ಕ್ರೆಟಾ
|
1.6L Petrol |
1.4L Diesel |
1.6L Diesel |
Power |
123PS |
90PS |
128PS |
Torque |
151Nm |
220Nm |
260Nm |
Transmission |
6MT/6AT |
6MT |
6MT/6AT |
ವೆರ್ನಾ
|
1.6L Petrol |
1.4L Petrol |
1.6L Diesel |
Power |
123PS |
100PS |
128PS |
Torque |
151Nm |
132Nm |
260Nm |
Transmission |
6MT/6AT |
6MT |
6MT/6AT |
Also Read: Clash Of Segments: Honda City vs WRV || Clash Of The Segments: Tata Nexon Vs Hyundai Creta
Read More on : Verna Automatic