• English
  • Login / Register

ಉರೂಸ್ S ರೂಪದಲ್ಲಿ ಪರಿಚಯಿಸಲಾಗಿದೆ ನವೀಕೃತ ಲ್ಯಾಂಬೋರ್ಗಿನಿ SUV

ಲ್ಯಾಂಬೋರ್ಘಿನಿ ಉರ್ಸ್ ಗಾಗಿ shreyash ಮೂಲಕ ಏಪ್ರಿಲ್ 14, 2023 11:13 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

 ಈ ಉರೂಸ್ S ನಿರ್ಗಮಿತ ಸಾಮಾನ್ಯ ಉರೂಸ್‌ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಸ್ಪೋರ್ಟಿಯರ್ ಆಗಿದೆ, ಆದರೆ ಪರ್ಫಾರ್ಮೆಂಟೆ ವೇರಿಯೆಂಟ್‌ಗಿಂತ ಕೆಳಗಿನ ಹಂತದ್ದಾಗಿದೆ.

Lamborghini Urus S

  • ಈ ಉರೂಸ್ ಈಗ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: S ಮತ್ತು ಪರ್ಫಾರ್ಮೆಂಟೆ
  •  ಅದೇ 4.0-ಲೀಟರ್ V8 ಟರ್ಬೋಚಾರ್ಜ್ ಪೆಟ್ರೋಲ್ ಇಂಜಿನ್ ಅನ್ನು ಇದು ಪಡೆದಿದ್ದು, ಈಗ 666PS ಮತ್ತು 850Nm ಅನ್ನು ಉತ್ಪಾದಿಸುತ್ತದೆ.
  •  ಅಲ್ಲದೇ ಇದು ಆಫ್-ರೋಡ್ ಡ್ರೈವ್ ಮೋಡ್‌ಗಳಲ್ಲಿ ಆಲ್-ವ್ಹೀಲ್-ಡ್ರೈವ್ (AWD) ಸಿಸ್ಟಮ್ ಅನ್ನೂ ಪಡೆದಿದೆ.
  •  ಉರೂಸ್ ಪರ್ಫಾರ್ಮೆಂಟೆಗಿಂತ ಭಿನ್ನವಾಗಿ, ಈ ಉರೂಸ್ S ಸಕ್ರಿಯ ಏರ್ ಸಸ್ಪೆನ್ಷನ್ ಸಿಸ್ಟಮ್ ಅನ್ನು ಪಡೆದಿದೆ.
  •  ಹೊಸ ಬಂಪರ್‌ಗಳು ಮತ್ತು ಹೊಸ ಬೋನೆಟ್‌ಗಳ ಡಿಸೈನ್‌ನಲ್ಲಿ ಬದಲಾವಣೆಗಳು ಮತ್ತು ವೆಂಟ್‌ಗಳ ಸೇರ್ಪಡೆ ಗಮನಾರ್ಹವಾಗಿದೆ.
  •  ಈ ಉರೂಸ್ S ನ ಬೆಲೆಯನ್ನು ರೂ 4.18 ಕೋಟಿಗೆ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.

ಲ್ಯಾಂಬೋರ್ಗಿನಿ ಈ ಉರೂಸ್ ಪರ್ಫಾರ್ಮೆಂಟೆಯನ್ನು ಭಾರತದಲ್ಲಿ ನವೆಂಬರ್ 2022 ರಲ್ಲಿ ಪರಿಚಯಿಸಿತು, ಮತ್ತು ಈಗ ಸುಮಾರು ನಾಲ್ಕು ತಿಂಗಳ ನಂತರ, ಈ ಸೂಪರ್‌ಕಾರ್‌ನ ತಯಾರಕರು ಉರೂಸ್ S ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆಯನ್ನು ರೂ 4.18 (ಎಕ್ಸ್-ಶೋರೂಂ) ಕೋಟಿಗೆ ನಿಗದಿಪಡಿಸಿದ್ದಾರೆ. ಇದು ಸೂಪರ್ SUV ಯ ನವೀಕೃತ ಪ್ರಾರಂಭಿಕ-ಹಂತದ ಆವೃತ್ತಿಯಾಗಿದ್ದು ಸಾಮಾನ್ಯ ಉರೂಸ್‌ಗೆ ಬದಲಿಯಾಗಿದೆ ಮತ್ತು ಉರೂಸ್ ಪರ್ಫಾರ್ಮೆಂಟೆಯ ಔಟ್‌ಪುಟ್‌ಗೆ ಸಮನಾಗಿರುವ ಸುಧಾರಿತ ಪವರ್‌ಟ್ರೇನ್ ಅನ್ನು ಹೊಂದಿದೆ. ಈ ಹೊಸ SUVಯ ಸಂಪೂರ್ಣ ವಿವರಗಳು ಇಲ್ಲಿವೆ:

 

ಎಕ್ಸ್‌ಟೀರಿಯರ್ ಡಿಸೈನ್

Lamborghini Urus S

ತನ್ನ ಪರ್ಫಾರ್ಮೆಂಟೆ ಪ್ರತಿರೂಪದಂತೆ ಈ ಉರೂಸ್ S, ಮುಂಭಾಗದಲ್ಲಿ ತುಸು ಡಿಸೈನ್ ವ್ಯತ್ಯಾಸವನ್ನು ಪಡೆದಿದೆ. ಇದು ಬಣ್ಣದ ಸ್ಟೇನ್‌ಲೆಸ್ ಸ್ಟೀಲ್ ಸ್ಕಿಡ್ ಪ್ಲೇಟ್‌ನೊಂದಿಗೆ ಪರಿಷ್ಕೃತ ಮ್ಯಾಟ್ ಫ್ರಂಟ್ ಬಂಪರ್ ಹೊಂದಿದ್ದು, ಸುಧಾರಿತ ಏರೋಡೈನಾಮಿಕ್ ದಕ್ಷತೆಗಾಗಿ ಮುಂಭಾಗದ ವ್ಹೀಲ್‌ಗಳಲ್ಲಿ ಏರ್‌ ವೆಂಟಿಂಗ್ ಫಿನ್‌ಗಳನ್ನು ಹೊಂದಿದೆ. ಪರ್ಫಾರ್‌ಮೆಂಟೆನಂತೆಯೇ, ಈ ಉರೂಸ್‌ Sನ ಬೋನೆಟ್ ಮ್ಯಾಟ್ ಬ್ಲ್ಯಾಕ್ ಏರ್ ವೆಂಟ್‌ಗಳನ್ನು ಹೊಂದಿದೆ.

Lamborghini Urus S Alloy Wheels

 ಫ್ರೊಫೈಲ್ ಬಗ್ಗೆ ಹೇಳುವಾಗ, ಈ ಉರೂಸ್ S‌ ನಲ್ಲಿ 21-ಇಂಚಿನ ಅಲಾಯ್ ವ್ಹೀಲ್‌ಗಳು ಸ್ಟಾಂಡರ್ಡ್ ಆಗಿ ಬರುತ್ತವೆ. ಆದರೆ ಈ ಸೂಪರ್ ಕಾರುತಯಾರಕರು 22-ಇಂಚು ಮತ್ತು 23-ಇಂಚು ಅಲಾಯ್ ವ್ಹೀಲ್‌ಗಳನ್ನು ಆಯ್ಕೆಗಳಾಗಿ ನೀಡಿದ್ದಾರೆ. ಅಲ್ಲದೇ ಈ SUV ಹಿಂದಿನ ಊರುಸ್‌ಗಿಂತ ಹೆಚ್ಚು ಸುವ್ಯವಸ್ಥಿತವಾಗಿರುವ ಹೊಸ ರಿಯರ್ ಬಂಪರ್ ಅನ್ನೂ ಪಡೆದಿದೆ. ಆದಾಗ್ಯೂ, ಉರೂಸ್ ಪರ್ಫಾರ್‌ಮೆಂಟೆಯಲ್ಲಿ ಇರುವಂತೆ ಇದರಲ್ಲಿ ವಿಸ್ತರಿಸಿದ ರಿಯರ್ ಸ್ಪಾಯ್ಲರ್ ಇರುವುದಿಲ್ಲ.

 ಇದನ್ನೂ ಓದಿ: ಏಪ್ರಿಲ್ 2023 ಪಾದಾರ್ಪಣೆ ಮಾಡಬಹುದಾದ 5 ಕಾರುಗಳು

 S ಗೆ ಹೋಲಿಸಿದರೆ ಪರ್ಫಾರ್ಮೆಂಟೆ 20mm ನಷ್ಟು ತಗ್ಗು ಇರುವುದರಿಂದ ಇವುಗಳ ಸ್ಟಾನ್ಸ್ ಆಧಾರದ ಮೇಲೆ ಇವುಗಳನ್ನು ಪ್ರತ್ಯೇಕಿಸಬಹುದು. ಇದಕ್ಕೆ ಕಾರಣವೆಂದರೆ, ಎರಡು ಮೋಡ್‌ಗಳಲ್ಲಿ ಬಳಸಲಾಗುವ ವಿಭಿನ್ನ ಸಸ್ಪೆನ್ಷನ್ ಸಿಸ್ಟಮ್. S ಉರೂಸ್‌ನ ಹೆಚ್ಚು ಆರಾಮದಾಯಕ ಆವೃತ್ತಿಯಾಗಿದ್ದು, ಹಿಂದಿನ ಊರೂಸ್‌ನಂತೆಯೇ ಸಕ್ರಿಯ ಏರ್ ಸಸ್ಪೆನ್ಷನ್ ಅನ್ನು ಹೊಂದಿದೆ. ಇನ್ನೊಂದೆಡೆ, ಪರ್ಫಾರ್ಮೆಂಟೆ, ಸ್ಪೋರ್ಟಿಯರ್ ರೈಡ್ ಮತ್ತು ನಿರ್ವಹಣೆಗಾಗಿ ಕಡಿಮೆ ಮತ್ತು ಸ್ಥಿರ ಸ್ಟೀಲ್ ಸ್ಪ್ರಿಂಗ್ ಸಸ್ಪೆನ್ಷನ್ ಸಿಸ್ಟಮ್ ಅನ್ನು ಪಡೆದಿದೆ.

 

ಇಂಟೀರಿಯರ್ ಬಗ್ಗೆ

Lamborghini Urus S Cabin

ಇದರ ಇಂಟೀರಿಯರ್ ಲೇಔಟ್ ಹಿಂದಿನ ಊರುಸ್‌ನಂತೆಯೇ ಇರುತ್ತದೆ, ಆದರೆ ಲೆದರ್ ಅಪ್‌ಹೋಲ್ಸ್‌ಟ್ರಿಗೆ ಹೊಂದಿಕೆಯಾಗುವಂತೆ ಹೊಸ ಚಾಕ್ಲೇಟ್ ಬ್ರೌನ್ ಡ್ಯಾಶ್‌ಬೋರ್ಡ್ ಥೀಮ್ ಅನ್ನು ಪಡೆದಿದೆ. ಈ ಕಾರಿನ ಡ್ಯಾಶ್‌ಬೋರ್ಡ್ ಮತ್ತು ಕನ್ಸೋಲ್ ಒಂದೇ ರೀತಿಯ ಲೇಔಟ್ ಸ್ಕ್ರೀನ್‌ಗಳನ್ನು ಹೊಂದಿದ್ದರೂ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಎರಡಕ್ಕೂ ನವೀಕೃತ ಗ್ರ್ಯಾಫಿಕ್ಸ್ ಅನ್ನು ಪಡೆದಿದೆ. ಮೂಲ ಊರುಸ್ ಮಾಡೆಲ್‌ನಲ್ಲಿ ಇರುವಂತೆ, ಕ್ಲೈಮೇಟ್ ಕಂಟ್ರೋಲ್ ಕಾರ್ಯಗಳಿಗೆ ಇರುವಂತಹ ಮೂರನೇ ಡಿಸ್‌ಪ್ಲೇ ಕೂಡಾ ಟಚ್‌ಸ್ಕ್ರೀನ್ ಆಗಿದೆ. ಲ್ಯಾಂಬೋರ್ಗಿನಿಯ ಸ್ವಂತ ಅಪ್ಲಿಕೇಶನ್ ಮೂಲಕ, ಈ ಸೂಪರ್ SUV ಕಾರ್ ಲೋಕೇಶನ್ ಫೈಂಡರ್ ಮತ್ತು ಜಿಯೋ-ಫೆನ್ಸಿಂಗ್‌ನಂತ ಸಂಪರ್ಕಿತ ನ್ಯಾವಿಗೇಶನ್‌ಗಳನ್ನು ಪಡೆದಿದೆ.

 

ಯಾಂತ್ರಿಕತೆಗಳು ಮತ್ತು ಪವರ್‌ಟ್ರೇನ್

Lamborghini Urus S Multi-Drive Mode Selector Console

ಈ ಉರೂಸ್ S ಪರ್ಫಾರ್ಮೆಂಟೆಯಂತೆಯೇ 4.0-ಲೀಟರ್‌ ಟರ್ಬೋಚಾರ್ಜ್ V8 ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು 666PS ಮತ್ತು 850Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಯೂನಿಟ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದು ಎಲ್ಲಾ ನಾಲ್ಕು ವ್ಹೀಲ್‌ಗಳಿಗೂ ತನ್ನ ಆಲ್-ವ್ಹೀಲ್-ಡ್ರೈವ್ ಸಿಸ್ಟಮ್ ಮೂಲಕ ಶಕ್ತಿಯನ್ನು ನೀಡುತ್ತದೆ. ಉಲ್ಲೇಖಕ್ಕಾಗಿ, ಉರೂಸ್ S ಮತ್ತು ಉರೂಸ್ ಪರ್ಫಾರ್ಮೆಂಟೆಯ ತಾಂತ್ರಿಕ ನಿರ್ದಿಷ್ಟತೆಗಳನ್ನು ನಾವು ಈ ಕೆಳಗಿನ ಕೋಷ್ಟಕದಲ್ಲಿ ಹೋಲಿಸಿದ್ದೇವೆ:

ನಿರ್ದಿಷ್ಟತೆಗಳು

ಉರೂಸ್ S

ಉರೂಸ್ ಪರ್ಫರ್ಮೆಂಟೆ

ಪವರ್/ಟಾರ್ಕ್

666PS ಮತ್ತು 850Nm

666PS ಮತ್ತು 850Nm

ಟ್ರಾನ್ಸ್‌ಮಿಶನ್

8-ಸ್ಪೀಡ್ ಆಟೋಮ್ಯಾಟಿಕ್

8- ಸ್ಪೀಡ್ ಆಟೋಮ್ಯಾಟಿಕ್

ಆ್ಯಕ್ಸಿಲರೇಶನ್ (0-100kmph)

3.5 ಸೆಕೆಂಡುಗಳು

3.3 ಸೆಕೆಂಡುಗಳು

ಟಾಪ್ ಸ್ಪೀಡ್

305kmph

306kmph

ಕರ್ಬ್ ತೂಕ

2,197kg

2,150kg

 ಪರ್ಫಾರ್ಮೆಂಟೆಯ ಕಾರ್ಬನ್ ಫೈಬರ್ ಅಂಶಗಳು ಅದನ್ನು ಉರೂಸ್ S ಗಿಂತ 47kgಯಷ್ಟು ಹಗುರವಾಗಿಸಿದ್ದು, ಉರೂಸ್ ಸೊನ್ನೆಯಿಂದ 100kmph ಸ್ಪ್ರಿಂಟ್‌ನಲ್ಲಿ ಪರ್ಫಾರ್ಮೆಂಟೆಗಿಂತ 0.2 ಸೆಕೆಂಡುಗಳಷ್ಟು ನಿಧಾನವಾಗಿರುತ್ತದೆ.

 ಇದನ್ನೂ ಓದಿ: ಸಲ್ಮಾನ್ ಖಾನ್‌ ಅವರ ಹೊಸ ಮೂವಿ ರೋಸ್ಟರ್‌ ಆಫ್ ಬ್ಲ್ಯಾಕ್ SUVಗಳನ್ನು ಒಳಗೊಂಡಿದೆ

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Lamborghini Urus S Rear

ಉರೂಸ್ S ಬೆಲೆಯನ್ನು ಲ್ಯಾಂಬೋರ್ಗಿನಿ ರೂ 4.18 ಕೋಟಿಗೆ (ಎಕ್ಸ್-ಶೋರೂಂ) ನಿಗದಿಪಡಿಸಿದ್ದು, ಇದರ ಸ್ಪೋರ್ಟಿಯರ್ ಆವೃತ್ತಿಯಾದ ಉರೂಸ್ ಪರ್ಫಾರ್ಮೆಂಟೆಗೆ ರೂ 4.22 ಕೋಟಿ (ಎಕ್ಸ್-ಶೋರೂಂ) ನಿಗದಿಪಡಿಸಿರುತ್ತದೆ. ಇದು ಪೋರ್ಶಾ ಕಯೇನ್ ಟರ್ಬೋ, ಆಡಿ RS Q8 ಮತ್ತು ಮರ್ಸಿಡೀಸ್-ಬೆನ್ಝ್ GLE 63 S ಗೆ ಪ್ರತಿಸ್ಪರ್ಧಿಯಾಗಿದೆ.

 ಇನ್ನಷ್ಟು ಓದಿ : ಉರೂಸ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Lamborghini ಉರ್ಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience