ಏಪ್ರಿಲ್ 2023 ರಲ್ಲಿ ಪಾದಾರ್ಪಣೆ ಮಾಡಬಹುದಾದ 5 ಕಾರುಗಳು
ಟೊಯೋಟಾ ಇನೋವಾ ಕ್ರಿಸ್ಟಾ ಗಾಗಿ tarun ಮೂಲಕ ಮಾರ್ಚ್ 28, 2023 04:40 pm ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಈ ಪಟ್ಟಿಯು ಎಲೆಕ್ಟ್ರಿಕ್ ಕಾರು, ಹೊಚ್ಚ ಹೊಸ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಮತ್ತು ಎರಡು ಹೊಸ ಕಾರ್ಯಕ್ಷಮತೆ-ಕೇಂದ್ರಿತ ಕಾರುಗಳನ್ನು ಒಳಗೊಂಡಿದೆ.
ಏಪ್ರಿಲ್ ತಿಂಗಳಿನಲ್ಲಿ ಬಹಳಷ್ಟು ಕಾರುಗಳು ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅವೆಲ್ಲವೂ ಅತ್ಯಾಕರ್ಷಕವಾದ ಚೊಚ್ಚಲ ಕಾರುಗಳಾಗಿವೆ. ಮಾರುತಿಯು ಹೊಸ ಎಸ್‌ಯುವಿ-ಕ್ರಾಸ್ಒವರ್ ಅನ್ನು ಬಿಡುಗಡೆಗೊಳಿಸುತ್ತಿದ್ದರೆ, ಎಂಜಿ ಅತ್ಯಂತ ಉತ್ತಮ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದನ್ನು ನಮಗಾಗಿ ಬಿಡುಗಡೆಗೊಳಿಸಬಹುದಾಗಿದೆ. ಬಜೆಟ್ ವಿಭಾಗದ ಜೊತೆ ಜೊತೆಗೆ, ಎರಡು ವೇಗದ ಮತ್ತು ದುಬಾರಿ ಕಾರುಗಳು ಮಾರುಕಟ್ಟೆಗೆ ಬರುವುದನ್ನು ನಾವು ನೋಡಬಹುದು.
ಏಪ್ರಿಲ್ 2023 ರಲ್ಲಿ ಬಿಡುಗಡೆ ಅಥವಾ ಚೊಚ್ಚಲ ಪ್ರವೇಶ ಮಾಡಲಿರುವ ಐದು ಕಾರುಗಳು ಇಲ್ಲಿವೆ:
ಮಾರುತಿ ಫ್ರಾಂಕ್ಸ್
ನಿರೀಕ್ಷಿತ ಬಿಡುಗಡೆ ದಿನಾಂಕ – ಏಪ್ರಿಲ್ ಆರಂಭ
ನಿರೀಕ್ಷಿತ ಬೆಲೆ – ರೂ. 8 ಲಕ್ಷದಿಂದ ಮೇಲ್ಪಟ್ಟು
ಮಾರುತಿಯ ಫ್ರಾಂಕ್ಸ್ ಏಪ್ರಿಲ್ ಮೊದಲ ವಾರದಲ್ಲಿ ಮಾರಾಟಕ್ಕೆ ಬಿಡುಗಡೆಯಾಗಲಿದೆ. ಬಲೆನೊ-ಆಧಾರಿತ ಕ್ರಾಸ್ಒವರ್ ಅನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶನಗೊಳಿಸಲಾಯಿತು ಮತ್ತು ಬುಕಿಂಗ್ ಹಾಗೂ ಡಿಸ್‌ಪ್ಲೇಗಾಗಿ ಈಗಾಗಲೇ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಈ ಫ್ರಾಂಕ್ಸ್ ಅನ್ನು ಬಲೆನೊದ 90PS 1.2-ಲೀಟರ್ ಪೆಟ್ರೋಲ್ ಯೂನಿಟ್ ಮತ್ತು ಅತ್ಯಾಕರ್ಷಕ 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಜೊತೆಯಲ್ಲಿ ನೀಡಲಾಗುವುದು. ಇದು ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಆರರವರೆಗೆ ಏರ್‌ಬ್ಯಾಗ್‌ಗಳು, ಇಎಸ್‌ಸಿ, ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿರುತ್ತದೆ. ಈ ಫ್ರಾಂಕ್ಸ್ ಬ್ರೆಝಾದಂತೆಯೇ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪಟ್ಟಿಯಲ್ಲಿ ಸ್ಥಾನಪಡೆಯುತ್ತದೆ ಆದರೆ ಹೆಚ್ಚು ಕೈಗೆಟಕುವ ಬೆಲೆಯನ್ನು ಹೊಂದಿದೆ. ಇದು ಸುಮಾರು ರೂ. 8 ಲಕ್ಷ (ಎಕ್ಸ್-ಶೋರೂಮ್)ದಿಂದ ಮಾರಾಟವಾಗುವ ನಿರೀಕ್ಷೆಯಿದೆ.
ಎಂಜಿ ಕಾಮೆಟ್ ಇವಿ
ನಿರೀಕ್ಷಿತ ಬಿಡುಗಡೆ ದಿನಾಂಕ – ಏಪ್ರಿಲ್ ಮಧ್ಯಭಾಗ
ನಿರೀಕ್ಷಿತ ಬೆಲೆ – ರೂ. 9 ಲಕ್ಷದಿಂದ ಮೇಲ್ಪಟ್ಟು
ಎಂಜಿಯ ಚಿಕ್ಕ ಎರಡು ಬಾಗಿಲಿನ ಎಲೆಕ್ಟ್ರಿಕ್ ಕಾರಾದ ಕಾಮೆಟ್ ಇವಿ, ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಾಲ್ಕು ಸೀಟುಗಳ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಸಬ್-3-ಮೀಟರ್ ಉದ್ದವನ್ನು ಹೊಂದಿದ್ದು, ಇದು ಟಾಟಾ ನ್ಯಾನೋಗಿಂತಲೂ ಚಿಕ್ಕದಾಗಿದೆ. ಈ ಇಂಡೋನೇಷಿಯನ್-ಸ್ಪೆಕ್ ಏರ್ ಇವಿಯು, 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಇದು ಕ್ರಮವಾಗಿ 200 ಮತ್ತು 300 ಕಿಲೋಮೀಟರ್‌ಗಳವರೆಗಿನ ಚಾಲನಾ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ. ಈ ಎರಡೂ ಆಯ್ಕೆಗಳನ್ನು ಭಾರತದಲ್ಲಿಯೂ ಸಹ ನೀಡಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಇದರಲ್ಲಿರಬಹುದಾದ ಫೀಚರ್‌ಗಳೆಂದರೆ ಡ್ಯುಯಲ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸ್ಕ್ರೀನ್‌ಗಳು ಮತ್ತು ಡ್ರೈವರ್ ಡಿಸ್‌ಪ್ಲೇ, ಸ್ಟಿಯರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಎಸಿ, ಡ್ಯುಯಲ್ ಮುಂಭಾಗದ ಏರ್‌ಬ್ಯಾಗ್‌ಗಳು, ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ. ಈ ಕಾಮೆಟ್ ಇವಿಯು ಟಾಟಾ ಟಿಯಾಗೋ ಇವಿ ಮತ್ತು ಸಿಟ್ರೋಯೆನ್ eC3 ಗೆ ಪ್ರತಿಸ್ಪರ್ಧಿಯಾಗಿದ್ದು ಸುಮಾರು ರೂ. 9 ಲಕ್ಷದಿಂದ ಮೇಲ್ಪಟ್ಟು ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ.
ಟೊಯೋಟಾ ಇನೋವಾದ ಕ್ರೈಸ್ಟಾದ ಟಾಪ್-ಎಂಡ್ ವೇರಿಯೆಂಟ್‌ಗಳು
ನಿರೀಕ್ಷಿತ ಬಿಡುಗಡೆ ದಿನಾಂಕ – ಏಪ್ರಿಲ್ ಅಂತ್ಯ
ನಿರೀಕ್ಷಿತ ಬೆಲೆ – ರೂ. 22 ಲಕ್ಷದಿಂದ ಮೇಲ್ಪಟ್ಟು
ಟೊಯೋಟಾ ಇತ್ತೀಚಿಗೆ ಇನೋವಾ ಕ್ರೈಸ್ಟಾದ ಬೇಸ್-ಸ್ಪೆಕ್ G ಮತ್ತು GX ವೇರಿಯೆಂಟ್‌ಗಳ ಬೆಲೆಗಳನ್ನು ಘೋಷಿಸಿತು. ಆದಾಗ್ಯೂ, VX ಮತ್ತು ZX ವೇರಿಯೆಂಟ್‌ಗಳ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ ಮತ್ತು ಇದನ್ನು ಏಪ್ರಿಲ್‌ನಲ್ಲಿ ನಿರೀಕ್ಷಿಸಬಹುದಾಗಿದೆ. ಈ ಕ್ರೈಸ್ಟಾ ಈಗ ಡಿಸೇಲ್-ಮ್ಯಾನ್ಯುವಲ್ ಸಂಯೋಜನೆಯಲ್ಲಿ ಲಭ್ಯವಿದ್ದು ಅದರ 150PS 2.4-ಲೀಟರ್ ಡಿಸೇಲ್ ಎಂಜಿನ್ ಅನ್ನು ಫೈವ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಳಸುತ್ತದೆ. ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿ ಈಗಾಗಲೇ ಲಭ್ಯವಿರುವಂತೆ ಇದರ ಫೀಚರ್‌ಗಳು ಎಂಟು ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪವರ್ಡ್ ಡ್ರೈವರ್ ಸೀಟು, ಏಳು ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮರಾವನ್ನು ಹೊಂದಿರುತ್ತದೆ.
ಲ್ಯಾಂಬರ್ಗಿನಿ ಉರುಸ್ ಎಸ್
ಬಿಡುಗಡೆ ದಿನಾಂಕ - ಏಪ್ರಿಲ್ 13
ಈ ನವೀಕೃತ ಉರುಸ್ ಈ ತಿಂಗಳು ಭಾರತದಲ್ಲಿ ಎಸ್ ವೇರಿಯೆಂಟ್ ರೂಪದಲ್ಲಿ ಪಾದಾರ್ಪಣೆ ಮಾಡಲಿದೆ. ಇದು ಅದೇ 666PS 4.4-ಲೀಟರ್ ಟ್ವಿನ್-ಟರ್ಬೋ V8 ಅನ್ನು ಬಳಸಿಕೊಂಡು ಸೂಪರ್ ಎಸ್‌ಯುವಿಯ ಕಾರ್ಯಕ್ಷಮತೆಯ ವೇರಿಯೆಂಟ್‌ನಂತೆಯೇ ಶಕ್ತಿಯುತ ಮತ್ತು ತ್ವರಿತ ವಾಗಿದೆ. ಇದು ಕೇವಲ 3.7 ಸೆಕೆಂಡುಗಳಲ್ಲಿ 0-100kmph ಚಲಿಸಬಲ್ಲದು. ಈ ಉರುಸ್ ಎಸ್ ಅದರ ಪೂರ್ವಾವೃತ್ತಿಗಿಂತ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ, ಹೆಚ್ಚು ಕಠಿಣವಾದ ಕ್ರೀಸ್‌ಗಳು, ಮರುವಿನ್ಯಾಸಗೊಳಿಸಲಾದ ಬಂಪರ್‌ಗಳು ಮತ್ತು ಟ್ವೀಕ್ ಮಾಡಿದ ಹಿಂಭಾಗವನ್ನು ಹೊಂದಿದೆ. ಫೀಚರ್‌ಗಳು, ಏರ್ ಸಸ್ಪೆನ್ಷನ್ ಮತ್ತು ಡ್ರೈವಿಂಗ್ ಮೋಡ್‌ಗಳು ಮೊದಲಿನಂತೆಯೇ ಇರುತ್ತದೆ.
ಮರ್ಸಿಡಿಸ್ ಎಎಂಜಿ ಜಿಟಿ ಎಸ್ ಇ ಪರ್ಫಾರ್ಮೆನ್ಸ್
ಬಿಡುಗಡೆ ದಿನಾಂಕ - ಏಪ್ರಿಲ್ 11
ಜರ್ಮನ್‌ನ ಈ ಮಾರ್ಕ್ ಮೊದಲ ಪ್ಲಗ್-ಇನ್-ಹೈಬ್ರಿಡ್ ಎಎಂಜಿ ಏಪ್ರಿಲ್ ಆರಂಭದಲ್ಲಿ ಭಾರತಕ್ಕೆ ಕಾಲಿಡಲಿದೆ. ಇದು 4-ಲೀಟರ್ ಟ್ವಿನ್-ಟರ್ಬೋ V8 ನಿಂದ ಚಾಲಿತಗೊಳಿಸಲಾಗಿದ್ದು ಇದನ್ನು 639PS ಮತ್ತು 900Nm ಗೆ ಸಂಯೋಜಿಸಲಾಗಿದೆ. ಐಸಿಇ ಎಂಜಿನ್ ಅನ್ನು ಬೆಂಬಲಿಸುವುದು 204PS/320Nm ರಿಯರ್ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಆಗಿದೆ. ಸಂಪೂರ್ಣ ವಿನ್ಯಾಸವನ್ನು 843PS ಮತ್ತು 1470Nm ವರೆಗೆ ಅಳವಡಿಸಲಾಗಿದೆ! 6.1kWh ಬ್ಯಾಟರಿ ಪ್ಯಾಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು 12 ಕಿಲೋಮೀಟರ್‌ಗಳ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ. ನಾಲ್ಕು ಬಾಗಿಲಿನ ಜಿಟಿ ಕೂಪ್ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಒಳಗೆ ಮತ್ತು ಹೊರಗೆ ಸೂಕ್ಷ್ಮ ಸ್ಟೈಲಿಂಗ್ ಅನ್ನು ಬದಲಾಯಿಸುತ್ತದೆ; ಹಾಗೂ ಅವುಗಳಲ್ಲಿ ಹೆಚ್ಚಿನವು PHEV ಗೆ ಎಕ್ಸ್‌ಕ್ಲೂಸಿವ್ ಆಗಿವೆ.
BS6 ಫೇಸ್ 2 ಕಾಂಪ್ಲಿಯೆಂಟ್ ಕಾರುಗಳು
ಹಲವಾರು ಕಾರು ತಯಾರಕರು ತಮ್ಮ BS6 ಫೇಸ್ 2 ಕಾಂಪ್ಲಿಯೆಂಟ್ ಕಾರುಗಳನ್ನು ಹೊರತಂದಿದ್ದಾರೆ ಮತ್ತು ಮಹೀಂದ್ರಾ, ನಿಸಾನ್, ಹೋಂಡಾ, ಎಂಜಿ ಮತ್ತು ಟೊಯೋಟಾಗಳು ಇನ್ನೂ ಬಾಕಿಯಿವೆ. ಮುಂದುವರಿಯಬೇಕಾದ ಎಲ್ಲಾ ವಾಹನಗಳು ಏಪ್ರಿಲ್‌ನ ಆರಂಭಿಕ ದಿನಗಳಲ್ಲಿ ಆರ್‌ಡಿಇ-ಕಾಂಪ್ಲಿಯೆಂಟ್ ಆಗಿರಬೇಕು.