2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್‌ಯುವಿ ಗಳು
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 04, 2023 01:10 pm ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ಸಂಪೂರ್ಣವಾಗಿ ಹೊಸ ಎಲೆಕ್ಟ್ರಿಕ್ SUV, ಹೈಬ್ರೀಡ್ ಸೂಪರ್ ಕಾರ್, ಮತ್ತು ಹೊಸತನವನ್ನು ಪಡೆದಿರುವ SUV ಈ ಪಟ್ಟಿಯಲ್ಲಿ ಸೇರಿವೆ.
ಡಿಸೆಂಬರ್ ತಿಂಗಳಿಗೆ ನಾವು ಈಗಾಗಲೇ ಕಾಲಿಟ್ಟಿದ್ದು 2023ರ ಕಾರುಗಳ ಕಲರವ ಒಂದಷ್ಟು ಮಟ್ಟಿಗೆ ಮುಗಿದಿದೆ. ಆದರೆ ಈ ವರ್ಷವು ಮುಗಿಯುವ ಮೊದಲು ಇನ್ನೂ ಕೆಲವು ಮಾದರಿಗಳು ಭಾರತದ ರಸ್ತೆಗಿಳಿಯಲಿವೆ. ಲಂಬೋರ್ಗಿನಿ ಸೂಪರ್ ಕಾರ್ ಸೇರಿದಂತೆ ಮೂರು ಹೊಸ ಕಾರುಗಳು 2023ರ ಕೊನೆಯ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿವೆ. ಏನೆಲ್ಲ ಹೊಸತು ಬರಲಿದೆ ಎಂಬುದನ್ನು ನೋಡೋಣ:
ಲಂಬೋರ್ಗಿನಿ ರಿವ್ಯುಟೊ
ಬಿಡುಗಡೆಯ ದಿನಾಂಕ: ಡಿಸೆಂಬರ್ 6
ನಿರೀಕ್ಷಿತ ಬೆಲೆ: ರೂ 8 ಕೋಟಿ
ಲಂಬೋರ್ಗಿನಿ ರಿವ್ಯುಟೊ ಕಾರನ್ನು ದೀರ್ಘಕಾಲದಿಂದ ರಸ್ತೆ ಮೇಲೆ ಓಡಾಡುತ್ತಿರುವ ಲಂಬೋರ್ಗೀನಿ ಅವೆಂಟಡೋರ್ ಮಾದರಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಇದು 2023ರಲ್ಲಿ ಜಾಗತಿಕ ಬಿಡುಗಡೆ ಕಂಡ ಬಳಿಕ ಈಗ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧಗೊಂಡಿದೆ. ಎಲೆಕ್ಟ್ರಿಫೈಡ್ ಪವರ್ ಟ್ರೇನ್ ಪಡೆದ ಮೊದಲ ಲಂಬೋರ್ಗಿನಿ ಸರಣಿ ಇದಾಗಿದ್ದು, 8 ಸ್ಪೀಡ್ DCT (ಡ್ಯುವಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್) ಜೊತೆಗೆ ಹೊಂದಿಸಲಾದ ಮೂರು ಎಲೆಕ್ಟ್ರಿಕ್ ಮೋಟಾರ್ ಗಳುಳ್ಳ 6.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ V12 ಪೆಟ್ರೋಲ್ ಎಂಜಿನ್ ಮತ್ತು ಆಲ್ ವೀಲ್ ಡ್ರೈವ್ ಟ್ರೇನ್ (AWD) ಜೊತೆಗೆ ಇದು ರಸ್ತೆಗಿಳಿಯಲಿದೆ. ಇದು ಒಳಗಡೆಗೆ ಮೂರು ಸ್ಕ್ರೀನ್ ಗಳನ್ನು ಹೊಂದಿರಲಿದೆ: 12.3 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 8.4 ಇಂಚಿನ ಇನ್ಫೊಟೈನ್ ಮೆಂಟ್ ಸಿಸ್ಟಂ ಮತ್ತು ಪ್ರಯಾಣಿಕರಿಗಾಗಿ 9.1 ಇಂಚಿನ ಸ್ಕ್ರೀನ್. ರಿವ್ಯೂಟೊ ಕಾರು, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಸೂಟ್ ಗಳನ್ನು ಪಡೆದ ಮೊದಲ ಲಂಬೋರ್ಗಿನಿ ಕಾರು ಎನಿಸಲಿದೆ.
ಕಿಯಾ ಸೋನೆಟ್ ಫೇಸ್ ಲಿಫ್ಟ್
ಬಿಡುಗಡೆಯ ದಿನಾಂಕ: ಡಿಸೆಂಬರ್ 14
ನಿರೀಕ್ಷಿತ ಬೆಲೆ: ರೂ 8 ಲಕ್ಷ
ಕಿಯಾ ಸೋನೆಟ್ ಕಾರು ಮಧ್ಯಂತರ ಪರಿಷ್ಕರಣೆಗೆ ಒಳಗಾಗಿದ್ದು, 2020ರಲ್ಲಿ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಸಣ್ಣಪುಟ್ಟ ಬದಲಾವಣೆಗಳಿಗೆ ಒಳಗಾಗಿದೆ. ಈ ಪರಿಷ್ಕೃತ SUV ಯ ಸ್ಪೈ ಶಾಟ್ ಗಳು ಅನೇಕ ಬಾರಿ ಆನ್ಲೈನ್ ನಲ್ಲಿ ಕಾಣಿಸಿಕೊಂಡಿವೆ. ಹೊಸತನವನ್ನು ಗಳಿಸಿಕೊಂಡಿರುವ ಈ ಆರಂಭಿಕ ಹಂತದ ಕಿಯಾ SUV ಯು ಒಳಗಡೆ ಮತ್ತು ಹೊರಗಡೆಯ ಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಕಂಡಿದೆ. ಇದು ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮರಾ ಮತ್ತು ಬಹುಶಃ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅನ್ನು ಒಳಗೊಂಡಿರಲಿದೆ. ಕಿಯಾ ಸಂಸ್ಥೆಯು ಈ SUV ಯ ಪವರ್ ಟ್ರೇನ್ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವನ್ನು ಮಾಡಿಲ್ಲ. ಹೀಗಾಗಿ ಈಗಿನ ಮಾದರಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗೇರ್ ಬಾಕ್ಸ್ ಆಯ್ಕೆಯನ್ನೇ ಇದು ನೀಡಲಿದೆ.
ಟಾಟಾ ಪಂಚ್ EV
ಬಿಡುಗಡೆಯ ದಿನಾಂಕ: ಇನ್ನಷ್ಟೇ ಘೋಷಿಸಬೇಕು
ನಿರೀಕ್ಷಿತ ಬೆಲೆ: ರೂ 12 ಲಕ್ಷ
ಟಾಟಾ ಪಂಚ್ ಕಾರು ಎಲೆಕ್ಟ್ರಿಕ್ ರೂಪವನ್ನು ಪಡೆಯಲಿರುವ ಭಾರತೀಯ ಮೂಲದ ಭವಿಷ್ಯದ ಇಂಟರ್ನಲ್ ಕಂಬಷನ್ ಎಂಜಿನ್ (ICE) ಮಾದರಿ ಎನಿಸಿದೆ. ಇದು ಅನೇಕ ಬಾರಿ ಜನರ ಕಣ್ಣಿಗೆ ಬಿದ್ದಿದ್ದು, ನೋಟದ ವಿಚಾರದಲ್ಲಿ ತನ್ನ ಪ್ರಮಾಣಿತ ಮಾದರಿಗಿಂತ ಒಂದಷ್ಟು ಭಿನ್ನತೆಯನ್ನು ಕಾಯ್ದುಕೊಳ್ಳಲಿದೆ. ಅಲ್ಲದೆ ಶೈಲಿಯ ವಿಚಾರದಲ್ಲಿ ಪರಿಷ್ಕೃತ ಟಾಟಾ ನೆಕ್ಸನ್ Evಯೊಂದಿಗೆಯೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಇದರ ಎಲೆಕ್ಟ್ರಿಕ್ ಪವರ್ ಟ್ರೇನ್ ಕುರಿತ ವಿವರಗಳು ಇನ್ನೂ ದೊರೆಯದೆ ಇದ್ದರೂ ಈ ವಾಹನವು 500 km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಹೊಂದಿರಲಿದೆ ಎಂದು ಟಾಟಾ ಸಂಸ್ಥೆಯು ದೃಢೀಕರಿಸಿದೆ. ದೊಡ್ಡದಾದ ಟಚ್ ಸ್ಕ್ರೀನ್, 360 ಡಿಗ್ರಿ ಕ್ಯಾಮರಾ ಮತ್ತು ಆರು ಏರ್ ಬ್ಯಾಗ್ ಗಳನ್ನು ಇದು ಹೊಂದಿರಲಿದೆ.
ಈ ವರ್ಷವು ಕೊನೆಗೊಳ್ಳುವ ಮೊದಲು ಈ ಮೂರು ಕಾರುಗಳನ್ನು ನಾವು ಭಾರತೀಯ ರಸ್ತೆಗಳಲ್ಲಿ ಕಾಣಲಿದ್ದೇವೆ. ಇವುಗಳಲ್ಲಿ ಯಾವ ಕಾರಿನ ಕುರಿತು ನೀವು ಹೆಚ್ಚು ಉತ್ಸುಕರಾಗಿದ್ದೀರಿ ಮತ್ತು ಏಕೆ? ನಿಮ್ಮ ಉತ್ತರವನ್ನು ಪ್ರತಿಕ್ರಿಯೆಯ ರೂಪದಲ್ಲಿ ಹಂಚಿಕೊಳ್ಳಿರಿ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ
ಇದನ್ನು ಸಹ ನೋಡಿರಿ: ಎಂ.ಎಸ್ ಧೋನಿಯ ಗ್ಯಾರೇಜ್ ಶೋಭಿಸಿದ ಮರ್ಸಿಡಿಸ್-AMG G 63 SUV