Facelifted Skoda Octavia ಟೀಸರ್ ಸ್ಕೆಚ್‌ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ
ರೆಗುಲರ್ ಆಕ್ಟೇವಿಯಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸದಿದ್ದರೂ, 2024ರ ದ್ವಿತೀಯಾರ್ಧದಲ್ಲಿ ನಾವು ಅದರ ಸ್ಪೋರ್ಟಿಯರ್ ವಿಆರ್‌ಎಸ್ ಆವೃತ್ತಿಯನ್ನು ಇಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.
- ಸ್ಕೋಡಾವು 2024ರ ಫೆಬ್ರುವರಿ 14ರಂದು ಫೇಸ್‌ಲಿಫ್ಟೆಡ್ ಆಕ್ಟೇವಿಯಾವನ್ನು ಪರಿಚಯಿಸಲಿದೆ.
- ಸ್ಕೆಚ್‌ಗಳು ತೀಕ್ಷ್ಣವಾದ ಎಲ್‌ಇಡಿ ಹೆಡ್‌ಲೈಟ್‌ಗಳು, ಆಪ್‌ಗ್ರೇಡ್ ಆಗಿರುವ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಬಹಿರಂಗಪಡಿಸುತ್ತವೆ.
- ಕ್ಯಾಬಿನ್‌ನ ಹೊಸ ಲೇಔಟ್ ಮತ್ತು ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಬರುವ ನಿರೀಕ್ಷೆಯಿದೆ.
- ಸ್ಕೋಡಾವು ಡೀಸೆಲ್ ಸೇರಿದಂತೆ ಬಹು ಪವರ್‌ಟ್ರೇನ್‌ಗಳೊಂದಿಗೆ ಗ್ಲೋಬಲ್-ಸ್ಪೆಕ್ ಸೆಡಾನ್ ಅನ್ನು ನೀಡಲಿದೆ.
- ಇದರ ವಿಆರ್‌ಎಸ್ ಆವೃತ್ತಿಯು 2024ರಲ್ಲಿಯೇ ಭಾರತದಲ್ಲಿ ಮಾರಾಟಕ್ಕೆ ಬರಬಹುದು ಮತ್ತು 40 ಲಕ್ಷ ರೂ.ಕ್ಕಿಂತ ಹೆಚ್ಚಿನ ಎಕ್ಸ್ ಶೋರೂಂ ಬೆಲೆಯಿರಬಹುದುದೆಂದು ಅಂದಾಜಿಸಲಾಗಿದೆ.
ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಫೇಸ್‌ಲಿಫ್ಟ್ ಫೆಬ್ರವರಿ 14 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಆದರೆ ಅದಕ್ಕೂ ಮೊದಲು, ಜೆಕ್ ಮೂಲದ ಈ ಕಾರು ತಯಾರಕರು ಕೆಲವು ಟೀಸರ್ ಸ್ಕೆಚ್‌ಗಳ ಮೂಲಕ ನಮಗೆ ರಿಫ್ರೆಶ್ಡ್ ಸೆಡಾನ್‌ನ ಒಂದು ನೋಟವನ್ನು ನೀಡಿದ್ದಾರೆ.
ಸ್ಕೆಚ್‌ಗಳು ಏನನ್ನು ಬಹಿರಂಗಪಡಿಸುತ್ತವೆ?
ಪರಿಷ್ಕೃತ ಗ್ರಿಲ್, ತೀಕ್ಷ್ಣವಾದ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಸ್ಪೋರ್ಟಿಯರ್ ಬಂಪರ್ ಸೇರಿದಂತೆ ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಆಕ್ಟೇವಿಯಾ ಪಡೆಯುತ್ತದೆ. ಆದರೆ ಅಸಾಧಾರಣ ವಿನ್ಯಾಸದ ವೈಶಿಷ್ಟ್ಯವೆಂದರೆ ಹೊಸ ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು ಹೊಸ ಮುಂಭಾಗಕ್ಕೆ ಆಕ್ರಮಣಕಾರಿ ನೋಟವನ್ನು ನೀಡುತ್ತದೆ.
ಸೈಡ್ ಪ್ರೊಫೈಲ್ ಹೆಚ್ಚು ಕಡಿಮೆ ಬದಲಾಗದೆ ಉಳಿದಿದ್ದರೂ, ಸ್ಕೋಡಾ ಸೆಡಾನ್‌ಗೆ ಹೊಸ ಅಲಾಯ್‌ವೀಲ್‌ಗಳನ್ನು ನೀಡಿದೆ. ಹಿಂಭಾಗದಲ್ಲಿ, ಟೇಲ್‌ಲೈಟ್‌ಗಳು ತಮ್ಮ ಹಿಂದಿನ ಆಕಾರವನ್ನು ಉಳಿಸಿಕೊಳ್ಳುತ್ತವೆ, ಆದರೆ ಬೆಳಕಿನ ಮಾದರಿಯನ್ನು ನವೀಕರಿಸಲಾಗಿದೆ. ಇದರ ಹಿಂಭಾಗದ ಬಂಪರ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಈಗ ಸ್ಪೋರ್ಟಿಯಾಗಿ ತೀಕ್ಷ್ಣವಾದ ಕಟ್‌ಗಳು ಮತ್ತು ಕ್ರೀಸ್‌ಗಳನ್ನು ಹೊಂದಿದೆ.
ಕಾರು ತಯಾರಕರು ಫೇಸ್‌ಲಿಫ್ಟೆಡ್ ಆಕ್ಟೇವಿಯಾ ವಿಆರ್‌ಎಸ್‌ನ ಟೀಸರ್ ಸ್ಕೆಚ್ ಅನ್ನು ಹಂಚಿಕೊಂಡಿದ್ದಾರೆ, ಇದು ಅದರ ಪರಿಷ್ಕೃತ ವಿನ್ಯಾಸವನ್ನು ತೋರಿಸುತ್ತದೆ. ಇದು ವಿಭಿನ್ನ ಶೈಲಿಯ ಬಂಪರ್‌ನೊಂದಿಗೆ ಬೃಹತ್, ಆಕ್ರಮಣಕಾರಿ ಏರ್ ವೆಂಟ್‌ಗಳು, ಸ್ಪೋರ್ಟಿ ಅಲಾಯ್ ವೀಲ್‌ಗಳು ಮತ್ತು ಸ್ಪೋರ್ಟಿ ರಿಯರ್ ಬಂಪರ್ ಅನ್ನು ಪಡೆಯುತ್ತದೆ. ಸ್ಕೋಡಾ ಆಕ್ಟೇವಿಯಾವನ್ನು ಸೆಡಾನ್ ಮತ್ತು ಎಸ್ಟೇಟ್ ಬಾಡಿ ಸ್ಟೈಲ್‌ಗಳಲ್ಲಿ ಜಾಗತಿಕವಾಗಿ ನೀಡುವುದನ್ನು ಮುಂದುವರಿಸುತ್ತದೆ.
ಕ್ಯಾಬಿನ್ ಮತ್ತು ವೈಶಿಷ್ಟ್ಯದ ನವೀಕರಣಗಳು
ಸುಧಾರಿಸಿದ ಆಕ್ಟೇವಿಯಾದ ಒಳಭಾಗವನ್ನು ಸ್ಕೋಡಾ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಇದು ತಾಜಾ ಅಪ್ಹೋಲ್ಸ್‌ಟೆರಿ, ಪರಿಷ್ಕೃತ ಡ್ಯಾಶ್‌ಬೋರ್ಡ್, ಹೆಚ್ಚುವರಿ ಬಣ್ಣದ ಆಯ್ಕೆಗಳು ಮತ್ತು ದೊಡ್ಡ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಯಂತಹ ಸಂಭಾವ್ಯ ವೈಶಿಷ್ಟ್ಯಗಳ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Mercedes-Benz EQS-580 ನೊಂದಿಗ ಎಲೆಕ್ಟ್ರಿಫೈಯಿಂಗ್ ಖರೀದಿಯನ್ನು ಮಾಡಿದ ಜನಪ್ರೀಯ ಗಾಯಕ ಮತ್ತು ಬಾಲಿವುಡ್ ಐಕಾನ್ ಶಾನ್
ಅದರ ಪವರ್‌ಟ್ರೇನ್‌ಗಳ ಬಗ್ಗೆ?
ಆಕ್ಟೇವಿಯಾಗೆ ಜಾಗತಿಕವಾಗಿ 1.4-ಲೀಟರ್ ಪ್ಲಗ್-ಇನ್ ಹೈಬ್ರಿಡ್ (ವಿಆರ್‌ಎಸ್ ಮೊಡೆಲ್‌ಗಾಗಿ), 1.5-ಲೀಟರ್ ಟರ್ಬೊ-ಪೆಟ್ರೋಲ್, 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ನಂತಹ ವಿವಿಧ ಎಂಜಿನ್ ಆಯ್ಕೆಗಳನ್ನು ಒದಗಿಸಲು ಸ್ಕೋಡಾ ಯೋಜಿಸಿದೆ. 2024ರ ಆಕ್ಟೇವಿಯಾವನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಒದಗಿಸಲಾಗುವುದು.
ನಿರೀಕ್ಷಿತ ಬೆಲೆ ಮತ್ತು ಭಾರತಕ್ಕೆ ಆಗಮನ
ಸ್ಟ್ಯಾಂಡರ್ಡ್ ಆಕ್ಟೇವಿಯಾ ಭಾರತಕ್ಕೆ ಹಿಂತಿರುಗುವುದಿಲ್ಲವಾದರೂ, ಇದು ತನ್ನ ವಿಆರ್‌ಎಸ್ ಆವೃತ್ತಿಯಲ್ಲಿ ಪುನರಾಗಮನವನ್ನು ಮಾಡುವ ಸಾಧ್ಯತೆಯಿದೆ, ಇದು ಇಲ್ಲಿನ ಉತ್ಸಾಹಿಗಳ ಫೆವರಿಟ್‌ಗಳಲ್ಲಿ ಒಂದಾಗಿದೆ. ಫೇಸ್‌ಲಿಫ್ಟೆಡ್ ಸ್ಕೋಡಾ ಆಕ್ಟೇವಿಯಾ ವಿಆರ್‌ಎಸ್ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆ 40 ಲಕ್ಷ ರೂ.ನಿಂದ ಇರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಏಕೆಂದರೆ ಇದು ಸಂಪೂರ್ಣ ಆಮದು ಆಗಿರುತ್ತದೆ. ಇದು ಬಿಎಮ್‌ಡಬ್ಲ್ಯೂ ಎಮ್340ಐಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. 2024 ರ ದ್ವಿತೀಯಾರ್ಧದಲ್ಲಿ ಸ್ಕೋಡಾ ಅದನ್ನು ಭಾರತೀಯ ಮಾರುಕಟ್ಟೆಗೆ ನೀಡಬಹುದು.