ಫೋರ್ಡ್ ನವರು ಕಿಯಾ ಸೇಲ್ಟೋಸ್ , MG ಹೆಕ್ಟರ್ ಪ್ರತಿಸ್ಪರ್ದಿಯನ್ನು ಮತ್ತು ಒಂದು MPV ಯನ್ನು ಮಹಿಂದ್ರಾ ಜಂಟಿ ಉದ್ಯಮದಲ್ಲಿ ಬಿಡುಗಡೆ ಮಾಡಲಿದ್ದಾರೆ

published on ಅಕ್ಟೋಬರ್ 09, 2019 12:09 pm by raunak

  • 12 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

 ಫೋರ್ಡ್ ಮತ್ತು ಮಹಿಂದ್ರಾ ನಡುವಿನ ಜಂಟಿ ಉದ್ಯಮ ಭಾರತದಲ್ಲಿ ಹೊಸ  ಮಾಡೆಲ್ ಗಳನ್ನು  ಮುಂಬರುವ ಮಾರುಕಟ್ಟೆಯಲ್ಲಿ ಹೊರತರುವ ಸಾಧ್ಯತೆ ಇದೆ.

  • ಮಹಿಂದ್ರಾ - ಫೋರ್ಡ್ ಜಂಟಿ ಉದ್ಯಮ ಮದ್ಯ -2020 ಇಂದ ಕಾರ್ಯರೂಪಕ್ಕೆ ಬರಲಿದೆ 
  •  ಫೋರ್ಡ್ ನಲ್ಲಿ ಮೂರು ಹೊಸ ಬಹುಪಯೋಗಿ ಮಾಡೆಲ್ ಗಳು ಮಹಿಂದ್ರಾ = ಫೋರ್ಡ್ ಜಂಟಿ ಉದ್ಯಮದಲ್ಲಿ ತರಲಿದೆ 
  • ಈ ಮಾಡೆಲ್ ಗಳಲ್ಲಿ ಮಹಿಂದ್ರಾ ವೇದಿಕೆಯ ಪವರ್ ಟ್ರೈನ್ ಕೊಡಲಾಗುತ್ತದೆ, ಆದರೆ ಉತ್ತಮ ನವೀಕರಣಗಳೊಂದಿಗೆ. 
  • ಮುಂದಿನ ಪೀಳಿಗೆಯ ಮಹಿಂದ್ರಾ XUV500 ಯು  ಫೋರ್ಡ್ ನೊಂದಿಗೆ ಹಂಚಿಕೊಳ್ಳಲಾಗುವ ಮೊದಲ ಉತ್ಪನ್ನವಾಗಲಿದೆ 
  •  ಹೊಸ MPV,  ಕಾಂಪ್ಯಾಕ್ಟ್  SUV  ಮತ್ತು ಅಸ್ಪೈರ್ ವೇದಿಕೆಯ EV ಸಹ ದೊರೆಯಲಿದೆ 
  • ಒಟ್ಟಾರೆ, ಅದರಲ್ಲಿ ಏಳು ಹೊಸ ಜಂಟಿಯಾಗಿ ಮಾಡಲ್ಪಡುವ ಮಾಡೆಲ್ ಗಳು ಹೊರಬರಲಿದೆ

 ಫೋರ್ಡ್ ಅಧಿಕೃತವಾಗಿ ಮಹಿಂದ್ರಾ ದೊಂದಿಗಿನ ಜಂಟಿ ಉದ್ಯಮವನ್ನು ಘೋಷಿಸಿದೆ ಅದರ ಅನ್ವಯ ಹಲವು ಹೊಸ ಮಾಡೆಲ್ ಗಳು ಬರಲಿದೆ.  ಈ ಹೊಸ ಜಂಟಿ ಉದ್ಯಮ 2020 ಮದ್ಯದಿಂದ ಕಾರ್ಯರೂಪಕ್ಕೆ ಬರಲಿದೆ ಮತ್ತು ಮಹಿಂದ್ರಾ ದವರು ಫೋರ್ಡ್ ನ ಭಾರತದ ಕಾರ್ಯಾಚರಣೆಯನ್ನು  ಶೇಕಡಾ 51 ರಷ್ಟು ನಿಭಾಯಿಸಲಿದ್ದಾರೆ.

MG Hector and Kia Seltos

ಈ ಜಂಟಿ  ಉದ್ಯಮದಲ್ಲಿ ಆರಂಭದಲ್ಲಿ ಮೂರೂ ಜಂಟಿಯಾಗಿ ಅಭಿವೃದ್ಧಿಪಡಿಸಲಾದಂತಹ ಬಹುಪಯೋಗಿ ವಾಹನಗಳು ಫೋರ್ಡ್ ಗಾಗಿ ಮತ್ತು ಅದರಲ್ಲಿ ಒಂದು ವಿದ್ಯುತ್ ವಾಹನ ಸಹ ಸೇರಲಿದೆ. ಬಹುಪಯೋಗಿ ವಾಹನಗಳು MPV ಆಗಿರಬಹುದು,  ಕಿಯಾ ಸೆಲ್ಟೋಸ್  ಮತ್ತು ಹುಂಡೈ ಕ್ರೆಟಾ ಪ್ರತಿಸ್ಪರ್ದಿ ಕಾಂಪ್ಯಾಕ್ಟ್ SUV ಆಗಿದ್ದು ಜೊತೆಗೆ ಮದ್ಯ ಅಳತೆಯ SUV ಆಗಲಿದೆ , ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಗಳೊಂದಿಗೆ ಪ್ರತಿಸ್ಪರ್ದಿಸಲು 

ಮಿಡ್ ಸೈಜ್ SUV ಯು ಈ ಜಂಟಿ ಉದ್ಯಮದ ಮೊದಲ ಉತ್ಪನ್ನವಾಗಲಿದೆ ಮಾರ್ಕೆಟ್ ಅನ್ನು  2020  ಕೊನೆಯಲ್ಲಿ ಅಥವಾ  2021 ಪ್ರಾರಂಭದಲ್ಲಿ ಮಾರ್ಕೆಟ್ ಪ್ರವೇಶಿಸುವುದರೊಂದಿಗೆ. ಅದು ಎರೆಡನೆ ಪೀಳಿಗೆಯ XUV500 ( ಕೋಡ್ ನೇಮ್ W601) ನಲ್ಲಿ ಮಾಡಲ್ಪಡುತ್ತದೆ. ಎರೆಡೂ SUV ಗಳು ವಿಭಿನ್ನವಾದ ಟಾಪ್ ಹ್ಯಾಟ್ ಪಡೆಯಲಿದೆ, ಹಾಗಾಗಿ ತಾಂತ್ರಿಕವಾಗಿ ಎರೆಡು ವಿಭಿನ್ನವಾಗಿ ಕಾಣುತ್ತದೆ, ಒಂದೇ ವೇದಿಕೆ ಹಾಗು ಪವರ್ ಟ್ರೈನ್ ಆಯ್ಕೆ ಪಡೆದಿದ್ದಾಗಲೂ ಸಹ. ಈ SUV ಗಳಲ್ಲಿ ಮಹಿಂದ್ರಾ ಅವರ ಮುಂಬರುವ  2.0-ಲೀಟರ್ ಎಂಜಿನ್ ಕೊಡಲಾಗುವುದು ಎಂದು ನಿರೀಕ್ಷಿಸಬಹುದು.

 ಕಾಂಪ್ಯಾಕ್ಟ್  SUV  ಪ್ರಶ್ನೆಯಲ್ಲಿರುವಂತಹುದು  XUV300 ವೇದಿಕೆಯಲ್ಲಿ ನಿರ್ಮಾಣವಾಗಬಹುದು, ಸ್ಸನ್ಗ್ ಯೊಂಗ್ ತಿವೋಲಿ ನಂತೆ. ಅದರ ಪ್ರತಿಸ್ಪರ್ಧೆ ಖ್ಯಾತ ಕಿಯಾ ಸೆಲ್ಟೋಸ್ ಮತ್ತು ಎರೆಡನೆ ಪೀಳಿಗೆಯ ಹುಂಡೈ ಕ್ರೆಟಾ ಮತ್ತು ಇತರ ಪ್ರತಿಸ್ಪರ್ದಿಗಳೊಂದಿಗೆ ಇರಬಹುದು. ಮಹಿಂದ್ರಾ ಈಗಾಗಲೇ 5+2 ಸೆಟರ್  SUV ಯನ್ನು ತರಲು ಯೋಜಿಸುತ್ತಿದೆ ಅದು ಸಬ್ 4m XUV300 ಯುರೋಪ್ ಗಾಗಿ ಮತ್ತು ಫೋರ್ಡ್ ಕಾಂಪ್ಯಾಕ್ಟ್ SUV  ಅದರ ಮುಂದುವರೆದ ವೇದಿಕೆಯನ್ನು ಸಹ ಬಳಸಬಹುದು. ನಿರೀಕ್ಷಿತ ಬರಬಹುದಾದ ಎಂಜಿನ್  ಮಹಿಂದ್ರಾ ಅವರ ಮುಂಬರುವ 130PS 1.2- ಲೀಟರ್  GDI (   ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ) ಪೆಟ್ರೋಲ್ ಯುನಿಟ್ ಆಗಿರಬಹುದು ಅಥವಾ  1.5-ಲೀಟರ್ ಡೀಸೆಲ್ ಎಂಜಿನ್ ಆಗಿರಬಹುದು. ಅದು  W601 ( ಮುಂದಿನ ಪೀಳಿಗೆಯ  XUV500) ನಂತರದ ಎರೆಡನೆ ಉತ್ಪನ್ನವಾಗಬಹುದು.

Mahindra Marazzo

ಈನಡುವೆ , ಫೋರ್ಡ್ MPV ಯೂ ಸಹ ಮಹಿಂದ್ರಾ ಮರಝೋ ವೇದಿಕೆಯಲ್ಲಿ ನಿರ್ಮಾಣವಾಗಬಹುದು, ಅದು ಬಾಡಿ ಆನ್ ಫ್ರೇಮ್ ಆಗಿರಲಿದೆ ಆದರೆ ಅದರಲ್ಲಿ ಫ್ರಂಟ್ ವೀಲ್ ಡ್ರೈವ್ ಸೆಟ್ ಅಪ್ ಇರಲಿದೆ. ಮರಝೋ ವನ್ನು ಮಹಿಂದ್ರಾ ಭಾರತದ ಮತ್ತು ನಾರ್ಥ್ ಅಮೇರಿಕ ಘಟಕಗಳ  ಸಹಕಾರ್ಯದಲ್ಲಿ ಮಾಡಲಾಗಿದೆ ಮತ್ತು ಅದು ಮಾರುತಿ ಎರ್ಟಿಗಾ ಹಾಗು ಟೊಯೋಟಾ ಇನ್ನೋವಾ ನಡುವೆ ಸ್ಥಾನ ಪಡೆಯಲಿದೆ. ಟೊಯೋಟಾ ಮತ್ತು ಮಾರುತಿ ಗಳೂ ಸಹ MPV ಯನ್ನು ಅಭಿವೃದ್ಧಿಪಡಿಸಲಿದೆ ಅದರ ಪ್ರತಿಸ್ಪರ್ಧೆ ಮರೋಝೋ ವಿರುದ್ಧ ಭಾರತದಲ್ಲಿ ಶೀಘ್ರದಲ್ಲಿ. 

 ಮಹಿಂದ್ರ ಅಮತ್ತು ಫೋರ್ಡ್ ಒಂದು  EV ಅಭಿವೃದ್ಧಿಪಡಿಸಲು ಸಹ ನೋಡುತ್ತಿದ್ದರೆ, ಅದರ ಮೊದಲ ಉತ್ಪನ್ನವನ್ನು ಫೋರ್ಡ್ ನ ಅಸ್ಪೈರ್ ವೇದಿಕೆಯಲ್ಲಿ ಮಾಡಲಾಗುತ್ತದೆ.  ನೀವು ಫೋರ್ಡ್ ಮತ್ತು ಮಹಿಂದ್ರಾ ನಡುವಿನ ಹೊಸ ಜಂಟಿ ಉದ್ಯಮದಿಂದ ಉತ್ಸುಕರಿಗಿದ್ದೀರಾ , ನಮ್ಮೊಂದಿಗೆ ಕಾಮೆಂಟ್ ಗಳೊಂದಿಗೆ  ಹಂಚಿಕೊಳ್ಳಿ.

  • New Car Insurance - Save Upto 75%* - Simple. Instant. Hassle Free - (InsuranceDekho.com)
  • Sell Car - Free Home Inspection @ CarDekho Gaadi Store
ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

trendingಕಾರುಗಳು

* ಅಂದಾಜು ಬೆಲೆ ಹೊಸ ದೆಹಲಿ
×
We need your ನಗರ to customize your experience