ಹೊರಬಿದ್ದಿದೆ ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯ ಮೊದಲ ಟೀಸರ್
ಹುಂಡೈ ಕ್ರೆಟಾ 2020-2024 ಗಾಗಿ rohit ಮೂಲಕ ಆಗಸ್ಟ್ 07, 2023 09:44 am ರಂದು ಪ್ರಕಟಿಸ ಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಟೀಸರ್‌ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್‌ನೊಂದಿಗೆ ಹ್ಯುಂಡೈ ಎಕ್ಸ್‌ಟರ್‌ನ ಹೊಸ ರೇಂಜರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು.
-
ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯು ಸದ್ಯದಲ್ಲಿಯೇ ಬಿಡುಗಡೆಯಾಗುತ್ತಿವೆ.
-
ಇದು ಕ್ರೆಟಾದ ಎರಡನೇ ವಿಶೇಷ ಆವೃತ್ತಿಯಾಗಿದ್ದು ಅಲ್ಕಾಝರ್‌ಗೆ ಮೊದಲನೆಯದಾಗಿದೆ.
-
ಎಕ್ಸ್‌ಟೀರಿಯರ್‌ನಲ್ಲಿನ ಬದಲಾವಣೆಗಳೆಂದರೆ ಕಪ್ಪು ಬಣ್ಣದ ಅಂಶಗಳು ಮತ್ತು “ಅಡ್ವೆಂಚರ್ ಎಡಿಷನ್” ಎಂಬ ಬ್ಯಾಡ್ಜ್.
-
ಸಾಮಾನ್ಯ ಫೀಚರ್‌ಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್, ವಿಹಂಗಮ ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳು.
-
ಇದು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿಲ್ಲ; ಎರಡೂ ಪ್ರಸ್ತುತವಾಗಿ ಪೆಟ್ರೋಲ್, ಟರ್ಬೋ-ಪೆಟ್ರೋಲ್ (ಅಲ್ಕಾಝರ್ ಮಾತ್ರ) ಮತ್ತು ಡಿಸೇಲ್ ಎಂಜಿನ್‌ಗಳನ್ನು ಪಡೆಯುತ್ತದೆ
-
ಎರಡೂ ಎಸ್‌ಯುವಿಗಳ ಬೆಲೆಗಳನ್ನು ರೂ.10.87 ಲಕ್ಷದಿಂದ ರೂ.21.13 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ
ನಮ್ಮ ದೇಶದಲ್ಲಿ ಹ್ಯುಂಡೈ “ಹ್ಯುಂಡೈ ಕ್ರೆಟಾ ಅಡ್ವೆಂಚರ್” ಮತ್ತು “ಹ್ಯುಂಡೈ ಅಲ್ಕಾಝರ್ ಅಡ್ವೆಂಚರ್” ಎರಡು ಹೆಸರುಗಳನ್ನು ಟ್ರೇಡ್ ಮಾರ್ಕ್ ಇತ್ತೀಚೆಗೆ ಸಂಭವಿಸಿದೆ. ಕಾರು ತಯಾರಕರು ಮೊದಲ ಬಾರಿಗೆ ಎರಡು ಎಸ್‌ಯುವಿಗಳ ವಿಶೇಷ ಆವೃತ್ತಿಗಳ ಟೀಸರ್ ಬಿಡುಗಡೆ ಮಾಡಿರುವುದರಿಂದ ಅವುಗಳ ಬಿಡುಗಡೆ ಶೀಘ್ರದಲ್ಲಿಯೇ ಸಂಭವಿಸಬಹುದೆಂದು ಅರಿತುಕೊಳ್ಳಬಹುದು. ಕ್ರೆಟಾಗೆ ಇದು ಎರಡನೇ ವಿಶೇಷ ಆವೃತ್ತಿಯಾಗಿದ್ದರೂ, ಅಲ್ಕಾಝರ್‌ಗೆ ಇದು ಮೊದಲನೆಯದಾಗಿದೆ.
ಟೀಸರ್‌ನಿಂದ ಬಹಿರಂಗ


ಟೀಸರ್‌ನ ಚಿತ್ರಗಳು ಮತ್ತು ವೀಡಿಯೊಗಳು ಎರಡೂ ಎಸ್‌ಯುವಿಗಳಿಗೆ ಹ್ಯುಂಡೈ ಎಕ್ಸ್‌ಟರ್‌ನ ಸಿಗ್ನೇಚರ್ “ರೇಂಜರ್ ಖಾಕಿ” ಬಣ್ಣದ ಆಯ್ಕೆಯನ್ನು ನೀಡಿದ್ದು ಕಪ್ಪು ಬಣ್ಣದ ರೂಫ್ ಅನ್ನು ಹೊಂದಿದೆ ಎಂಬುದನ್ನು ಬಹಿರಂಗಪಡಿಸುತ್ತವೆ. ಹ್ಯುಂಡೈ ಈ ಎಸ್‌ಯುವಿ ಜೋಡಿಯ ಎಲ್ಲಾ ಕ್ರೋಮ್ ಅಂಶಗಳನ್ನು ಬ್ಲ್ಯಾಕ್ ಔಟ್ ಮಾಡಿದ್ದು ಹೊರಭಾಗದಲ್ಲಿ “ಅಡ್ವೆಂಚರ್ ಎಡಿಷನ್'' ಎಂಬ ಬ್ಯಾಡ್ಜ್ ಅನ್ನು ಹಾಗೆಯೇ ಇರಿಸಿಕೊಂಡಿದೆ.
ಕ್ಯಾಬಿನ್ ಮತ್ತು ಸಲಕರಣೆ ಪರಿಷ್ಕರಣೆ
ಟೀಸರ್‌ಗಳು ಕ್ರೆಟಾ ಮತ್ತು ಅಲ್ಕಾಝರ್‌ನ ವಿಶೇಷ ಆವೃತ್ತಿಗಳ ಕ್ಯಾಬಿನ್‌ಗಳನ್ನು ತೋರಿಸದಿದ್ದರೂ, ಕಾರು ತಯಾರಕರು ಎಕ್ಸ್‌ಟರ್‌ನಂತಹ ಗ್ರೀನ್ ಆ್ಯಕ್ಸೆಂಟ್‌ನೊಂದಿಗೆ ಇಂಟೀರಿಯರ್ ಅನ್ನು ಸಂಪೂರ್ಣವಾದ ಕಪ್ಪು ಬಣ್ಣಗಳಲ್ಲಿ ನೀಡಬಹುದು ಎಂದು ನಿರೀಕ್ಷಿಸಿದ್ದೇವೆ.
ಪೀಚರ್‌ಗಳ ವಿಷಯಗಳಲ್ಲಿ, ಎರಡೂ ಎಸ್‌ಯುವಿಗಳು 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ವಿಹಂಗಮ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸಾಮಾನ್ಯ ಅಂಶಗಳನ್ನು ಹೊಂದಿವೆ. ಸುರಕ್ಷತೆಯ ವಿಷಯದಲ್ಲಿ ಇವುಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳನ್ನು ಹೊಂದಿವೆ.
ಇದನ್ನೂ ಓದಿ: ಜುಲೈ 2023 ರಲ್ಲಿ ಹೆಚ್ಚು ಮಾರಾಟವಾದ 10 ಕಾರು ತಯಾರಿಕಾ ಕಂಪನಿ
ಪವರ್‌ಟ್ರೇನ್‌ಗಳ ಕುರಿತು
ಕ್ರೆಟಾ ಅಲ್ಕಾಝರ್ ಜೋಡಿಯು ಅಸ್ತಿತ್ವದಲ್ಲಿರುವ ಪವರ್‌ಟ್ರೇನ್ ಸೆಟಪ್‌ನೊಂದಿಗೆ ಹ್ಯುಂಡೈ ಬಹುಶಃ ಯಾವುದೇ ಬದಲಾವಣೆ ಮಾಡುವುದಿಲ್ಲ. ಕ್ರೆಟಾ 1.5-ಲೀಟರ್ ನ್ಯಾಚುರಲಿ ಆ್ಯಸ್ಪಿರೇಟೆಡ್ ಪೆಟ್ರೋಲ್ (6-ಸ್ಪೀಡ್ ಎಂಟಿ ಮತ್ತು ಸಿವಿಟಿಗಳೊಂದಿಗೆ) ಮತ್ತು ಡಿಸೇಲ್ ಎಂಜಿನ್‌ನೊಂದಿಗೆ (6-ಸ್ಪೀಡ್ ಎಂಟಿ ಮತ್ತು ಎಟಿಯೊಂದಿಗೆ) ಬರುತ್ತದೆ.
ನಿರೀಕ್ಷಿತ ಬೆಲೆಗಳು
ಅವುಗಳ ವಿಶೇಷ ಆವೃತ್ತಿಗಳು ತಮಗೆ ಅನುಗುಣವಾದ ಪೆಟ್ರೋಲ್ ಮತ್ತು ಡಿಸೇಲ್ ವೇರಿಯೆಂಟ್‌ಗಳ ಮೇಲೆ ಸ್ವಲ್ಪ ಪ್ರೀಮಿಯಂ ಅನ್ನು ಹೊಂದುತ್ತವೆ. ಈಗ ಕಾಂಪ್ಯಾಕ್ಟ್ ಎಸ್‌ಯುವಿ ರೂ.10.87 ಲಕ್ಷದಿಂದ ರೂ.19.20 ಲಕ್ಷಗಳವರೆಗೆ ಇದ್ದು, 3-ಸಾಲಿನ ಎಸ್‌ಯುವಿ 16.77 ಲಕ್ಷದಿಂದ 21.13 ಲಕ್ಷದವರೆಗೆ (ಎಕ್ಸ್-ಶೋರೂಮ್) ಮಾರಾಟವಾಗುತ್ತಿದೆ.
ಕ್ರೆಟಾ ಅಡ್ವೆಂಚರ್ ಆವೃತ್ತಿಗೆ ನೇರ ಪ್ರತಿಸ್ಪರ್ಧಿಗಳು ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಮ್ಯಾಟ್ ಆವೃತ್ತಿಗಳಾಗಿದ್ದರೆ, ಅಲ್ಕಾಝರ್‌ನ ವಿಶೇಷ ಆವೃತ್ತಿಯು ಟಾಟಾ ಸಫಾರಿಯ ರೆಡ್ ಡಾರ್ಕ್ ಮತ್ತು ಅಡ್ವೆಂಚರ್ ಆವೃತ್ತಿಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ.
ಇನ್ನಷ್ಟು ಇಲ್ಲಿ ಓದಿ : ಕ್ರೆಟಾ ಆನ್‌ರೋಡ್ ಬೆಲೆ