ಹುಂಡೈ ಕ್ರೆಟಾ: ಹಳೆಯದು vs ಹೊಸತು

ಪ್ರಕಟಿಸಲಾಗಿದೆ ನಲ್ಲಿ ಜೂನ್ 26, 2019 11:33 am ಇವರಿಂದ dinesh ಹುಂಡೈ ಕ್ರೆಟಾ 2015-2020 ಗೆ

  • 28 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಇತ್ತೀಚಿಗೆ ಚೀನಾದಲ್ಲಿ   ಅನಾವರಣಗೊಂಡ ಮುಂದಿನ ಪೀಳಿಗೆಯ  ix25 ನಲ್ಲಿ ಮುಂಬರುವ ಎರೆಡನೆ ಪೀಳಿಗೆಯ  ಮುಂದಿನ ವರ್ಷ್  ಬರುವ ಕ್ರೆಟಾ ದಿ ಮುನ್ನೋಟ ಕೊಟ್ಟಿದೆ.

  • ix25 ಯು ಒಂದು ಚೀನಾಸ್ಪೆಕ್ ಹುಂಡೈ ಕ್ರೆಟಾ ಆಗಿದೆ 
  • ಎರೆಡನೆ ಪೀಳಿಗೆಯ ಕ್ರೆಟಾ ಬಿಡುಗಡೆಯು 2020 ರ ಆಟೋ ಎಕ್ಸ್ಪೋ ದಲ್ಲಿ ಆಗುವ ಸಾಧ್ಯತೆ ಇದೆ. 
  • ಇದನ್ನು  2019 ಕಿಯಾ  SP2i ವೇದಿಕೆಯಾ ಮೇಲೆ ಮಾಡಲಾಗಿರುತ್ತದೆ. 
  • ಇದರಲ್ಲಿ ಹೊಸ 1.5-ಲೀಟರ್  BS 6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಇರುವ ಸಾಧ್ಯತೆ ಇದೆ. 
  • ಬೆಲೆ ವ್ಯಾಪ್ತಿ Rs 10 ಲಕ್ಷ ದಿಂದ Rs 16 ಲಕ್ಷ ದ ವರೆಗೂ ಇರುತ್ತದೆ(ಎಕ್ಸ್ ಶೋ ರೂಮ್ ದೆಹಲಿ )

Hyundai Creta: Old vs New

ಹುಂಡೈ ಷೋಕಾಸ್ ಮಾಡಿರುವಂತೆ ಮುಂದಿನ ಪೀಳಿಗೆಯ ix25  ಯನ್ನು  2019 ಆಟೋ ಶಾಂಗೈ ನಲ್ಲಿ, ನಮಗೆ ಮುಂಬರುವ ಎರೆಡನೆ ಪೀಳಿಗೆಯ ಕಾರ್ ಗೆ ಮುನ್ನುಡಿಯಂತಿದೆ. ನಾವು ಹೀಗೆ ಏಕೆ ಹೇಳುತ್ತೇವೆ ಎಂದರೆ  ix25  ಮೂಲದಲ್ಲಿ ಒಂದು ಚೀನಾ ಸ್ಪೆಕ್ ಕ್ರೆಟಾ ಆಗಿದೆ, ಮತ್ತು ಮೊದಲ ಪೀಳಿಗೆಯ ಎರೆಡೂ SUV ಗಳಲ್ಲಿ ಬಹಳಷ್ಟು ಹೋಲಿಕೆಗಳು ಇವೆ. ಹಾಗಾಗಿ ಹುಂಡೈ ಇಂಡಿಯಾ ಎರೆಡನೆ ಪೀಳಿಗೆಯ ಕ್ರೆಟಾ ವನ್ನು ಇನ್ನು ಅನಾವರಣಮಾಡಿಲ್ಲ., ನಾವು ಇದು ಹೇಗೆ ಭಿನ್ನತೆ ಹೊಂದಿದೆ ಎಂದು ತಿಳಿಯೋಣ ಅಚ್ಚ ಹೊಸ  ix25 ಯನ್ನು ಮೊದಲ ಪೀಳಿಗೆಯ ಭಾರತ ಸ್ಪೆಕ್ ಕ್ರೆಟಾ ದ  ಪಕ್ಕದಲ್ಲಿ ಇರಿಸಿ ನೋಡೋಣ.

 

Next-Gen Hyundai ix25 Previews 2020 Hyundai Creta

ಕ್ರೆಟಾ ದ ಡಿಸೈನ್ ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸುತ್ತದೆ ಮತ್ತು ಮುಂದಿನ ಗ್ರಿಲ್ ನಲ್ಲಿ ಮೇಲಕ್ಕೆ ಎಳೆಯಲ್ಪಟ್ಟ ಹೆಡ್ ಲ್ಯಾಂಪ್ ಗಳು ಇವೆ. ಇದರ ಬಂಪರ್ ನಲ್ಲಿ ಫಾಗ್ ಲ್ಯಾಂಪ್ ಗಳು ಇದ್ದು ಸುತ್ತಲೂ LED DRL  ಗಳು ಮತ್ತು ಸೆಂಟ್ರಲ್  ಸರ್ ಡ್ಯಾಮ್ ಸಹ ಇದೆ. ಇನ್ನೊಂದು ಬದಿಯಲ್ಲಿ  ix25 ನಲ್ಲಿ ಹುಂಡೈ ನಲ್ಲಿ  ಹೊಸ SUV  ಡಿಸೈನ್ ಶೈಲಿ ಅಳವಡಿಸಲಾಗಿದೆ. ಇದರಲ್ಲಿ ಬಂಪರ್ ಮೇಲಿರುವ ಹೆಡ್ ಲ್ಯಾಂಪ್ ಮತ್ತು  C-ಶೈಲಿಯ LED DRL ಗಳು ಇದ್ದು ಅವನ್ನು ಎರಡು ಭಾಗವಾಗಿ ಮಾಡಲಾಗಿದೆ ಮತ್ತು ಎದ್ದು ಕಾಣುವಂತಿದೆ. ಫಾಗ್ ಲ್ಯಾಂಪ್ ಅನ್ನು ಬಂಪರ್ ನಲ್ಲಿ ಅಳವಡಿಸಲಾಗಿದೆ ಮತ್ತು ಸೆಂಟ್ರಲ್ ಏರ್ ಡ್ಯಾಮ್ ಜೊತೆ ಸಂಯೋಜಿತವಾಗಿದೆ. ಹೊಸ ix25 ನಲ್ಲಿ ಹುಂಡೈ  ಕುಟುಂಬದ ಹೊಸ ಶೈಲಿಯ ಕ್ಯಾಸ್ಕೇಡಿಂಗ್ ಗ್ರಿಲ್ ಅಳವಡಿಸಲಾಗಿದೆ.

Next-Gen Hyundai ix25 Previews 2020 Hyundai Creta

ಬದಿಗಳಿಂದ ನೋಡಿದಾಗ ಎರೆಡೂ SUV  ಗಳಲ್ಲಿ ಒಂದೇ ತರಹದ ಹೊರಪದರಗಳನ್ನು ಕೊಡಲಾಗಿದೆ. ಆದರೆ, ix25ನೋಡಲು ಹೆಚ್ಚು ದೃಢವಾಗಿ ಕಾಣುತ್ತದೆ ಮತ್ತು ಉಬ್ಬಿದ ವೀಲ್ ಆರ್ಚ್ ಗಳನ್ನೂ ಹೊಂದಿದೆ. ಕ್ರೆಟಾ ನೋಡಲು ನಯವಾಗಿದ್ದು ಚೂಪಾದ ಶೋಲ್ಡರ್ ಲೈನ್ ಗಳು ಅದರ ಉದ್ದಕ್ಕೂ ಇದೆ. ಎರೆಡೂ SUV ಗಳಲ್ಲಿ ಡುಯಲ್ ಟೋನ್ ಅಲಾಯ್ ವೀಲ್ ಕೊಡಲಾಗಿದೆ.

 

ಮುಂಬಾಗದಂತೆ ಹಿಂಬದಿಯಲ್ಲೂ ಸಹ  ix25 ಅಸಂಪ್ರದಾಯಿಕವಾಗಿ ಕಾಣುತ್ತದೆ. ಇದು ಮುಂಬದಿಯ ಸೆಟ್ ಅಪ್ ಅನ್ನು ಅಣುಕಿಸುವಂತಿದೆ ಒಂದೇ ತರಹದ C-ಶೈಲಿಯ ಸ್ಪ್ಲಿಟ್  LED  ತುಣುಕುಗಳೊಂದಿಗೆ. ಇದರ ಬಂಪರ್ ನಲ್ಲಿ ಡುಯಲ್ ಟೋನ್ ಅಳವಡಿಕೆ ಮಾಡಲಾಗಿದೆ ಮತ್ತು ರೆವೆರ್ಸೆ ಲೈಟ್ ಅನ್ನು ಬಂಪರ್ ಮೇಲೆ ಇರಿಸಲಾಗಿದೆ. ಕ್ರೆಟಾ ಇನ್ನೊಂದುಬದಿಯಲ್ಲಿ ರಾಪ್ ಅರೌಂಡ್ ಶೈಲಿಯ  LED ಟೈಲ್ ಲ್ಯಾಂಪ್ ಹೊಂದಿದೆ. ಮುಂಬದಿ ಮತ್ತು ಸೈಡ್ ಗಳಲ್ಲಿ ಇರುವಂತೆ, ಹಿಂಬದಿಯಲ್ಲಿ ಕ್ರೆಟಾ ನೋಡಲು ನಯವಾಗಿದ್ದು ix25 ಹೋಲಿಕೆಯಲ್ಲಿ ಸಾಮ್ಯತೆ ತೋರುತ್ತದೆ. 

 

ಹೊಸ ಪೀಳಿಗೆಯ  ix25 ನಲ್ಲಿ ರೆಡಿಸೈನ್ ಆಗಿರುವ ಕ್ಯಾಬಿನ್ ಲೇಔಟ್ ಕೊಡಲಾಗಿದೆ. ಇದರ ಫೋಕಲ್ ಪಾಯಿಂಟ್ ಬೃಹತ್ ಆಗಿದ್ದು ಟೆಸ್ಲಾ  ತರಹದ ಇನ್ಫೋಟೈನ್ಮೆಂಟ್ ಕೊಡಲಾಗಿದೆ, ಅದನ್ನು ಇಂಡಿಯಾ ಸ್ಪೆಕ್ ಮಾಡೆಲ್ ನಲ್ಲಿ ಕೊಡುವ ಸಾಧ್ಯತೆ ಕಡಿಮೆ ಇದೆ. ಬದಲಿಗೆ ಅದರಲ್ಲಿ 8-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡುವ ಸಾಧ್ಯತೆ ಇದೆ (ವೆನ್ಯೂ ನಂತೆ). ix25 ನ ಕ್ಯಾಬಿನ್ ನೋಡಲು ಬಹಳಷ್ಟು ಪ್ರೀಮಿಯಂ ಆಗಿದೆ ಫಿಟ್  ಮತ್ತು ಫಿನಿಷ್ ವಿಚಾರದಲ್ಲಿ, ಕ್ರೆಟಾ ಗೆ ಹೋಲಿಸಿದಾಗ, ಮತ್ತು ಅದು ಹಳತಾಗಿ ಕಾಣತೊಡಗಿದೆ. 

ಮತ್ತಷ್ಟು ಗಮನಿಸಬಹುದಾದ ix25 ಕ್ಯಾಬಿನ್ ನಲ್ಲಿ ಕೊಟ್ಟಂತಹ ವಿಷಯಗಳೆಂದರೆ ಹೊಸ ಸ್ಟಿಯರಿಂಗ್ ವೀಲ್ (ವೆನ್ಯೂ ತರಹ ), ವಿದ್ಯುತ್ ಪಾರ್ಕಿಂಗ್ ಬ್ರೇಕ್ ಮತ್ತು ಪೆಡಲ್ ಶಿಫ್ಟರ್ ಗಳು, ಇವೆಲ್ಲವೂ ಈಗಿರುವ ಮಾಡೆಲ್ ನಲ್ಲಿ ಮಿಸ್ ಆಗಿದೆ. ix25 ನೋಡಲು ಈಗಿರುವ ಕ್ರೆಟಾ ಗಿಂತಲೂ ದೊಡ್ಡದಾಗಿ ಕಾಣುತ್ತದೆ, ಹಾಗಾಗಿ ಎರಡನೇ ಪೀಳಿಗೆಯ ಕ್ರೆಟಾ ವು ವಿಶಾಲವಾಗಿ ಇರುತ್ತದೆ ಎಂದುಕೊಳ್ಳಬಹುದು.  ಭಾರತದಲ್ಲಿ ಕ್ರೆಟಾ ದಲ್ಲಿ ಸದ್ಯದಲ್ಲಿ ದೊಡ್ಡ ಸಲಕರಣೆಗಳ ಪಟ್ಟಿ ಕೊಡಲಾಗಿದೆ ಮತ್ತು ಫೀಚರ್ ಗಳಾದ ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಪವರ್ ಅಳವಡಿಕೆಯ ಡ್ರೈವರ್ ಸೀಟ್, ಸ್ಮಾರ್ಟ್ ಬ್ಯಾಂಡ್ ಕಿ ಇವುಗಳಲ್ಲಿ ಕೆಲವು, ಮತ್ತು ಇವನ್ನು ಮುಂದುವರೆಸಬಹುದು ಎಂದು ನಿರೀಕ್ಷಿಸಲಾಗಿದೆ.

ಎರೆಡನೆ ಪೀಳಿಗೆಯ ಆವೃತ್ತಿಯಾದ ix25 ಮತ್ತು ಇನ್ನೂ ಅನಾವರಗೊಂಡಿರದ ಕ್ರೆಟಾ ಎರೆಡರಲ್ಲೂ ಬಹಳಷ್ಟು ಸಾಮ್ಯತೆ ಇರಬಹುದಾಗಿರುವುದು  ತೋರಿಬರುತ್ತಿದೆ, ಹುಂಡೈ ನವರು ಕ್ರೆಟಾ ಡಾ ಸ್ಟೈಲಿಂಗ್ ಅನ್ನು ಸ್ವಲ್ಪ ಬದಲಿಸಬಹುದು ಏಕೆಂದರೆ   ix25  ನ ಡಿಸೈನ್ ಎಲ್ಲರ ರುಚಿಗೆ ತಕ್ಕಂತೆ ಇರುವ ಸಾಧ್ಯತೆ ಕಡಿಮೆ. 

ಹೊಸ ಪೀಳಿಗೆಯ  ix25 ವಿವರವಾದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ, ಹೊಸ ಪೀಳಿಗೆಯ ಕ್ರೆಟಾ ವು ಹೊಸ 1.5-ಲೀಟರ್  BS 6-ಕಂಪ್ಲೇಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಗಳು ಕಿಯಾ SP2i ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಸೆಪ್ಟೆಂಬರ್ 2019 ನಲ್ಲಿ.

Also Read: Kia SP2i Trial Production Commences

Read More on : Creta diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಕ್ರೆಟಾ 2015-2020

Read Full News

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience