ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರುತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ
ಡಿಸೆಂಬರ್ 08, 2023 05:24 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 78 Views
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚಿನ ಕಾರು ತಯಾರಕ ಸಂಸ್ಥೆಗಳು ಉಚಿತ ಸರ್ವಿಸ್ ತಪಾಸಣೆಯನ್ನು ಒದಗಿಸುತ್ತಿದ್ದು, ಹ್ಯುಂಡೈ ಮತ್ತು ಮಹೀಂದ್ರಾಗಳು ಕ್ರಮವಾಗಿ ವಿಮೆ ಮತ್ತು ದುರಸ್ತಿ ಇನ್ವಾಯ್ಸ್ ಮೇಲೆ ಒಂದಷ್ಟು ರಿಯಾಯಿತಿಯನ್ನು ನೀಡುತ್ತಿವೆ
ಮಿಚಾಂಗ್ ಚಂಡಮಾರುತವು ತಮಿಳುನಾಡಿನ ಚೆನ್ನೈ ನಗರದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರವಾಹವನ್ನುಂಟು ಮಾಡಿದೆ. ಅಲ್ಲದೆ ದಕ್ಷಿಣ ಭಾರತೀಯ ನಗರದಲ್ಲಿ ನೀರು ನಿಂತಿರುವ ಕಾರಣ ಅನೇಕ ವಾಹನಗಳಿಗೂ ಹಾನಿಯಂಟಾಗಿದೆ. ಅಂತಹ ಮಾಲೀಕರಿಗೆ ಒಂದಷ್ಟು ನಿರಾಳತೆಯನ್ನು ಒದಗಿಸುವುದಕ್ಕಾಗಿ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಸಂಸ್ಥೆಗಳು ಅನೇಕ ಉಪಕ್ರಮಗಳನ್ನು ಜಾರಿಗೆ ತರುವ ಮೂಲಕ ನೆರವನ್ನು ಒದಗಿಸುತ್ತಿವೆ.
ಹ್ಯುಂಡೈ
ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಯು ಬಾಧಿತರ ಪರಿಹಾರ ನಿಧಿಗಾಗಿ ರೂ. 3 ಕೋಟಿಯಷ್ಟು ದೇಣಿಗೆಯನ್ನು ಘೋಷಿಸಿದೆ ಮಾತ್ರವಲ್ಲದೆ ಸಮಸ್ಯೆಗೀಡಾದ ಜನರ ಆಹಾರ, ವಸತಿ ಮತ್ತು ವೈದ್ಯಕೀಯ ನೆರವಿಗಾಗಿ ಪರಿಹಾರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ. ಹ್ಯುಂಡೈ ಸಂಸ್ಥೆಯ ಬಾಧಿತ ಗ್ರಾಹಕರಿಗಾಗಿ ರಸ್ತೆಬದಿ ತುರ್ತು ನೆರವು ತಂಡವನ್ನು ರಚಿಸಲಾಗಿದ್ದು ಬಾಧಿತ ಚಂಡಮಾರುತ ಬಾಧಿತ ವಾಹನಗಳ ವಿಮಾ ಕ್ಲೇಮುಗಳ ಮೇಲಿನ ಸವಕಳಿಯ ಮೇಲೆ 50 ಶೇಕಡಾದಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಬಾಧಿತ ವಾಹನಗಳ ಮಾಲೀಕರು 1800-102-4645 ಮೂಲಕ ಹ್ಯುಂಡೈಯ ಗ್ರಾಹಕ ಸೇವಾ ತಂಡದವನ್ನು ಸಂಪರ್ಕಿಸಬಹುದಾಗಿದೆ.
ಫೋಕ್ಸ್ ವ್ಯಾಗನ್
ಚೆನ್ನೈ ನಗರದ ಸುತ್ತಮುತ್ತ ಚಂಡಮಾರುತ ಬಾಧಿತ ಫೋಕ್ಸ್ ವ್ಯಾಗನ್ ಮಾಲೀಕರು ಉಚಿತ ರಸ್ತೆಬದಿ ನೆರವನ್ನು ಪಡೆಯಬಹುದು. ನೆರೆಗೆ ಸಂಬಂಧಿಸಿದ ಹಾನಿಗಳ ಸಕಾಲಿಕ ದುರಸ್ತಿಗಾಗಿ, ಈ ಪ್ರದೇಶದ ಗ್ರಾಹಕರಿಗಾಗಿ ಫೋಕ್ಸ್ ವ್ಯಾಗನ್ ಸಂಸ್ಥೆಯು ಅದ್ಯತೆಯ ʻಸಮಗ್ರ ಸರ್ವಿಸ್ ತಪಾಸಣೆʼಯನ್ನು ಒದಗಿಸುತ್ತಿದೆ. ಬಾಧಿತ ಕಾರುಗಳ ಮಾಲೀಕರು 1800-102-1155 ಅಥವಾ 1800-419-1155 ಮೂಲಕ ನೇರವಾಗಿ ಫೋಕ್ಸ್ ವ್ಯಾಗನ್ ರಸ್ತೆಬದಿ ನೆರವು ಸಿಬ್ಬಂದಿಯನ್ನು ಸಂಪರ್ಕಿಸಬಹುದು.
ಇದನ್ನು ಸಹ ಓದಿರಿ: ಮತ್ತೆ ಕಾಣಿಸಿಕೊಂಡ ಟಾಟಾ ಪಂಚ್ EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?
ಮಹೀಂದ್ರಾ
ಬಾಧಿತ ಜನರಿಗೆ ನೆರವು ಒದಗಿಸುವುದಕ್ಕಾಗಿ ಮಹೀಂದ್ರಾ ಸಂಸ್ಥೆಯು ಸಹ ಒಂದಷ್ಟು ಉಪಕ್ರಮಗಳನ್ನು ಘೋಷಿಸಿದ್ದು ಇದು 2023ರ ಕೊನೆಯ ತನಕ ಲಭಿಸಲಿದೆ. ಇದು ಬಾಧಿತ ವಾಹನಗಳನ್ನು ಪಕ್ಕದ ಮಹೀಂದ್ರಾ ಸರ್ವಿಸ್ ಸೆಂಟರ್ ಗೆ ಕೊಂಡೊಯ್ಯುವುದಕ್ಕಾಗಿ 50 km ಒಳಗೆ ರಸ್ತೆಬದಿ ನೆರವನ್ನು (RSA) ಒದಗಿಸುತ್ತಿದೆ. ಹಾನಿಗೊಳಗಾದ ಎಲ್ಲಾ ವಾಹನಗಳ ಉಚಿತ ತಪಾಸಣೆ ಮತ್ತು ಹಾನಿಯ ಮೌಲ್ಯಮಾಪನ ನಡೆಸಲಾಗುತ್ತದೆ ಮಾತ್ರವಲ್ಲದೆ ವಾಹನಗಳ ಮಾಲೀಕರು ದುರಸ್ತಿಯ ಬಿಲ್ ಮೇಲೆ ಅನೇಕ ರಿಯಾಯಿತಿಗಳನ್ನು ಪಡೆಯಲಿದ್ದಾರೆ. ಗ್ರಾಹಕರು ಮಹೀಂದ್ರಾ ಸಂಸ್ಥೆಯ ಸರ್ವಿಸ್ ತಂಡವನ್ನು 1800-209-6006 ಮೂಲಕ ಸಂಪರ್ಕಿಸಬಹುದು ಅಥವಾ 7208071495 ಕ್ಕೆ ವಾಟ್ಸಪ್ ಮಾಡಬಹುದು.
ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೂ, ನಮ್ಮ ಓದುಗರು ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಗೆ ಒತ್ತು ನೀಡಬೇಕೆಂದು ನಾವು ವಿನಂತಿಸುತ್ತೇವೆ. ಒಂದು ವೇಳೆ ನಿಮ್ಮ ಕಾರು ನೀರಿನಲ್ಲಿ ಮುಳುಗಿದ್ದರೆ ಅದನ್ನು ನೇರವಾಗಿ ಸ್ಟಾರ್ಟ್ ಮಾಡಬೇಡಿ. ಏಕೆಂದರೆ ಇದರಿಂದ ಹಾನಿಯುಂಟಾಗಬಹುದು (ಮಹೀಂದ್ರಾ ಸಂಸ್ಥೆಯು ಸಹ ಇದೇ ಸಲಹೆಯನ್ನು ನೀಡಿದೆ). ಇಲ್ಲಿ ಉಲ್ಲೇಖಿಸದ ಬ್ರಾಂಡುಗಳಿಗಾಗಿ, ಯಾವುದೇ ಸಹಾಯಕ್ಕಾಗಿ ತಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಲು ವಾಹನ ಮಾಲೀಕರನ್ನು ನಾವು ವಿನಂತಿಸುತ್ತೇವೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು