ಟಾಟಾ ಪಂಚ್ ಸಿಎನ್‌ಜಿ vs ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ - ಮೈಲೇಜ್ ಹೋಲಿಕೆ
ಟಾಟಾ ಪಂಚ್ ಗಾಗಿ tarun ಮೂಲಕ ಆಗಸ್ಟ್ 14, 2023 02:40 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ ಮತ್ತು ಎಕ್ಸ್‌ಟರ್‌ನ ಸಿಎನ್‌ಜಿ ವೇರಿಯೆಂಟ್‌ಗಳು ಫೀಚರ್-ಭರಿತವಾಗಿದ್ದು ಒಂದೇ ರೀತಿಯ ಬೆಲೆಯನ್ನು ಹೊಂದಿವೆ
ಈ ಟಾಟಾ ಪಂಚ್ ಸಿಎನ್‌ಜಿ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆ ರೂ.7.10 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರು ತಯಾರಕರು ಪಂಚ್ ಸಿಎನ್‌ಜಿಯ ಇಂಧನ ದಕ್ಷತೆಯನ್ನು ಬಹಿರಂಗಪಡಿಸಿದ್ದಾರೆ ಮತ್ತು ಇದರ ಪ್ರಮುಖ ಪ್ರತಿಸ್ಪರ್ಧಿಯಾದ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ನೋಡೋಣ.
ಸ್ಪೆಕ್ಸ್ |
ಪಂಚ್ ಸಿಎನ್‌ಜಿ |
ಎಕ್ಸ್‌ಟರ್ ಸಿಎನ್‌ಜಿ |
ಎಂಜಿನ್ |
1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್-ಸಿಎನ್‌ಜಿ |
1.2-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್-ಸಿಎನ್‌ಜಿ |
ಪವರ್ |
73.5PS |
69PS |
ಟಾರ್ಕ್ |
103Nm |
95.2Nm |
ಟ ಟ್ರಾನ್ಸ್‌ಮಿಷನ್ |
5-ಸ್ವೀಡ್ MT |
5-ಸ್ಪೀಡ್ MT |
ಕ್ಲೈಮ್ ಮಾಡಲಾದ ಇಂಧನ ದಕ್ಷತೆ |
26.99km/kg |
27.1km/kg |
ಪಂಚ್ ಮತ್ತು ಎಕ್ಸ್‌ಟರ್ ಸಿಎನ್‌ಜಿಯ ಇಂಧನ ಆರ್ಥಿಕತೆಯ ಅಂಕಿಅಂಶಗಳು ಬಹುತೇಕ ಒಂದೇ ಆಗಿದ್ದು, ಎಕ್ಸ್‌ಟರ್ ಸ್ವಲ್ಪ ಮಟ್ಟಿಗೆ ಮುಂದಿದೆ ಎಂದು ಹೇಳಬಹುದು. ದಾಖಲೆಯ ಪ್ರಕಾರ ಟಾಟಾ ಎಸ್‌ಯುವಿ ಸ್ವಲ್ಪ ಶಕ್ತಿಶಾಲಿಯಾಗಿದೆ ಮತ್ತು ಎರಡನ್ನೂ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಪಂಚ್ ಸಿಎನ್‌ಜಿಯ ಪ್ರಮುಖ ಯುಎಸ್‌ಪಿಗಳಲ್ಲಿ ಒಂದು ಅದರ ವಿಶಾಲವಾದ 210-ಲೀಟರ್‌ಗಳ ಬೂಟ್ ಸ್ಪೇಸ್ ಮತ್ತು ಇದು ಸಾಧ್ಯಾವಾದದ್ದು ಡ್ಯುಯಲ್-ಸಿಲಿಂಡರ್ ಸೆಟಪ್‌ನಿಂದಾಗಿದೆ.
ಪೀಚರ್‌ಗಳ ಕುರಿತು
ಎರಡೂ ಮೈಕ್ರೋ-ಎಸ್‌ಯುವಿಗಳು ಸಾಕಷ್ಟು ಸುಸಜ್ಜಿತವಾಗಿವೆ ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಆ್ಯಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್‌ಪ್ಲೇಯಂತಹ ಸಾಮಾನ್ಯ ಫೀಚರ್‌ಗಳನ್ನು ಪಡೆಯುತ್ತವೆ. ಪಂಚ್ ಸಿಎನ್‌ಜಿಯು 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಮಳೆಯ ಸೆನ್ಸಿಂಗ್ ವೈಪರ್, ಮತ್ತು ಪುಶ್ ಬಟನ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿದೆ. ಇನ್ನೊಂದೆಡೆ, ಎಕ್ಸ್‌ಟರ್ ಸಹ 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಆಟೋ ಎಸಿಯನ್ನು ಹೊಂದಿದೆ.
ಎಕ್ಸ್‌ಟರ್‌ನ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ಇದೆರಡರಲ್ಲೂ ಇರುವ ಸಾಮಾನ್ಯ ಅಂಶಗಳೆಂದರೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮಾರಾ, ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು.
ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ಗಿಂತ ಟಾಟಾ ಪಂಚ್‌ನ 5 ಫೀಚರ್‌ಗಳು
ಬೆಲೆ ಪರಿಶೀಲನೆ
|
ಪಂಚ್ ಸಿಎನ್‌ಜಿ |
ಎಕ್ಸ್‌ಟರ್ ಸಿಎನ್‌ಜಿ |
ಬೆಲೆಗಳು |
ರೂ 7.10 ಲಕ್ಷದಿಂದ ರೂ 9.68 ಲಕ್ಷ |
ರೂ 8.24 ಲಕ್ಷದಿಂದ ರೂ 8.97 ಲಕ್ಷ |
ಟಾಟಾ ಪಂಚ್ ಸಿಎನ್‌ಜಿಯು ನಾಲ್ಕು ವೇರಿಯೆಂಟ್‌ಗಳನ್ನು ನೀಡಿದರೆ, ಎಕ್ಸ್‌ಟರ್‌ನಲ್ಲಿ ನಾವು ಕೇವಲ ಎರಡು ವೇರಿಯೆಂಟ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
ಇನ್ನಷ್ಟು ಇಲ್ಲಿ ಓದಿ : ಪಂಚ್ ಆಟೋಮ್ಯಾಟಿಕ್