2025ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ Hyundai Staria ಎಮ್‌ಪಿವಿಯ ಪ್ರದರ್ಶನ
ಹುಂಡೈ ಸ್ಟಾರಿಯಾ ಗಾಗಿ shreyash ಮೂಲಕ ಜನವರಿ 19, 2025 06:40 am ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಸ್ಟಾರಿಯಾವು 7, 9 ಮತ್ತು 11 ಆಸನಗಳ ವಿನ್ಯಾಸಗಳಲ್ಲಿ ಬರುತ್ತದೆ, 10.25-ಇಂಚಿನ ಟಚ್‌ಸ್ಕ್ರೀನ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ADAS ನಂತಹ ಸೌಲಭ್ಯಗಳನ್ನು ನೀಡುತ್ತದೆ
-
ಎಕ್ಸ್‌ಟೀರಿಯರ್ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್, ಪಿಕ್ಸಲೇಟೆಡ್ ಹೆಡ್‌ಲೈಟ್‌ಗಳು ಮತ್ತು ಸ್ಲೈಡಿಂಗ್ ಬಾಗಿಲುಗಳು ಸೇರಿವೆ.
-
ಒಳಭಾಗದಲ್ಲಿ, ಇದು ಸಿಂಪಲ್ ಆಗಿ ಕಾಣುವ ಡ್ಯಾಶ್‌ಬೋರ್ಡ್ ಅನ್ನು ಹೊಂದಿದ್ದು, 11 ಜನರಿಗೆ ಅವಕಾಶ ಕಲ್ಪಿಸುತ್ತದೆ.
-
ಫೀಚರ್‌ಗಳ ಹೈಲೈಟ್‌ಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್, 64 ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಬೋಸ್ ಸೌಂಡ್ ಸಿಸ್ಟಮ್ ಸೇರಿವೆ.
-
ಇದರ ಸುರಕ್ಷತಾ ಫೀಚರ್‌ಗಳಲ್ಲಿ ಬಹು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ADAS ಸೇರಿವೆ.
-
3.5-ಲೀಟರ್ ಪೆಟ್ರೋಲ್ ಅಥವಾ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.
-
ಭಾರತದಲ್ಲಿ ಬಿಡುಗಡೆ ಇನ್ನೂ ದೃಢೀಕರಿಸಲಾಗಿಲ್ಲ.
ಕಿಯಾ ಕಾರ್ನಿವಲ್ ಗಾತ್ರದ ಪ್ರೀಮಿಯಂ ಎಮ್‌ಪಿವಿ ಆಗಿರುವ ಹ್ಯುಂಡೈ ಸ್ಟಾರಿಯಾ, ಭಾರತದಲ್ಲಿ ಮೊದಲ ಬಾರಿಗೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಕಾಣಿಸಿಕೊಂಡಿದೆ. ಇದರ ಪ್ರಮುಖ ಹೈಲೈಟ್ ಎಂದರೆ, ನಾಲ್ಕು ಸಾಲುಗಳ ಆಸನ ವ್ಯವಸ್ಥೆಯಿಂದಾಗಿ ಇದು 11 ಜನರಿಗೆ ಅವಕಾಶ ಕಲ್ಪಿಸುತ್ತದೆ. ಸ್ಟಾರಿಯಾ ಎಮ್‌ಪಿವಿಯು ಹೇಗೆ ಕಾಣುತ್ತದೆ ಮತ್ತು ಇದು ಏನನ್ನು ನೀಡುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.
ದೂರದೃಷ್ಟಿಯುಳ ವಿನ್ಯಾಸ
ಹ್ಯುಂಡೈ ಸ್ಟಾರಿಯಾ ದೂರದೃಷ್ಟಿಯುಳ್ಳ ವಿನ್ಯಾಸವನ್ನು ಹೊಂದಿದ್ದು, ಅದರ ಫ್ಯಾಸಿಯಾದ ಅಗಲವನ್ನು ವ್ಯಾಪಿಸುವ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್, ಬಂಪರ್‌ನಲ್ಲಿ ದೊಡ್ಡ ಗ್ರಿಲ್ ಮತ್ತು ಪಿಕ್ಸೆಲೇಟೆಡ್ ಪ್ಯಾಟರ್ನ್ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ವಿಂಡೋ ಪ್ಯಾನಲ್‌ಗಳು ಬೃಹತ್ ಪ್ರಮಾಣದಲ್ಲಿರುತ್ತವೆ ಮತ್ತು ಕಾರ್ನಿವಲ್‌ನಂತೆ ಇದು ಸ್ಲೈಡಿಂಗ್ ಆಗುವ ಹಿಂಭಾಗದ ಬಾಗಿಲುಗಳೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, ಸ್ಟಾರಿಯಾ ಲಂಬವಾಗಿ ಜೋಡಿಸಲಾದ ಟೈಲ್‌ಲೈಟ್‌ಗಳನ್ನು ಹೊಂದಿದೆ.
ಸಿಂಪಲ್ ಆಗಿರುವ ಇಂಟೀರಿಯರ್
ಡ್ಯಾಶ್‌ಬೋರ್ಡ್ ಕನಿಷ್ಠ ವಿನ್ಯಾಸವನ್ನು ಹೊಂದಿದ್ದು, ಹ್ಯುಂಡೈ ಕ್ರೆಟಾದಲ್ಲಿರುವಂತೆಯೇ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಸ್ಟಾರಿಯಾ ತನ್ನ ನಾಲ್ಕು ಸಾಲುಗಳಲ್ಲಿ 11 ಪ್ರಯಾಣಿಕರಿಗೆ ಆಸನ ವ್ಯವಸ್ಥೆಯನ್ನು ನೀಡುತ್ತದೆ. ಹ್ಯುಂಡೈಯು ಸ್ಟಾರಿಯಾವನ್ನು 7 ಮತ್ತು 9 ಆಸನಗಳ ಸಂರಚನೆಗಳಲ್ಲಿ ಸಹ ನೀಡುತ್ತದೆ. ಮೊದಲನೆಯದು ಎರಡು 'ವಿಶ್ರಾಂತಿ' ಆಸನಗಳನ್ನು ಹೊಂದಿದ್ದು, ಇವುಗಳನ್ನು ಎಲೆಕ್ಟ್ರಾನಿಕ್ ಆಗಿ ಒರಗಿಸಬಹುದು ಮತ್ತು ಹೆಚ್ಚಿನ ಸರಕು ಜಾಗವನ್ನು ಮುಕ್ತಗೊಳಿಸಲು ಮುಂದಕ್ಕೆ ಸರಿಸಬಹುದು, ಎರಡನೆಯದು ಅದರ ಎರಡನೇ ಸಾಲಿನ ಆಸನಗಳಿಗೆ ತಿರುಗಿಸುವ ಕಾರ್ಯವನ್ನು ಪಡೆಯುತ್ತದೆ.
ಸ್ಟಾರಿಯಾ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಬೋಸ್ ಸೌಂಡ್ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಜಾಲವು 7 ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಅನ್ನು ಒಳಗೊಂಡಿದೆ.
ಇಂಜಿನ್ ಮತ್ತು ಟ್ರಾನ್ಸ್‌ಮಿಷನ್
ಜಾಗತಿಕವಾಗಿ, ಹ್ಯುಂಡೈಯು ತನ್ನ ಸ್ಟಾರಿಯಾವನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ. ಅವುಗಳ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
3.5-ಲೀಟರ್ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
272 ಪಿಎಸ್ |
177 ಪಿಎಸ್ |
ಟಾರ್ಕ್ |
331 ಎನ್‌ಎಮ್ |
431 ಎನ್‌ಎಮ್ |
ಗೇರ್‌ಬಾಕ್ಸ್ |
8-ಸ್ಪೀಡ್ ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನ್ಯುವಲ್, 8-ಸ್ಪೀಡ್ ಸ್ಪೀಡ್ ಆಟೋಮ್ಯಾಟಿಕ್ |
ನಿರೀಕ್ಷಿತ ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ ಸ್ಟಾರಿಯಾ ಎಮ್‌ಪಿವಿಯ ಬಿಡುಗಡೆಯ ಬಗ್ಗೆ ಹ್ಯುಂಡೈಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಅದು ಬಿಡುಗಡೆಯಾಗುವ ಇದರ ಬೆಲೆ 65 ಲಕ್ಷ ರೂ.ಗಿಂತ(ಎಕ್ಸ್-ಶೋರೂಂ) ಹೆಚ್ಚಿರಬಹುದು. ಭಾರತದಲ್ಲಿ, ಇದು ಕಿಯಾ ಕಾರ್ನಿವಲ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ