ಹುಂಡೈ ವೆನ್ಯೂ Vs ಪ್ರತಿಸ್ಪರ್ದಿಗಳು : ಸ್ಪೆಕ್ ಹೋಲಿಕೆ

ಪ್ರಕಟಿಸಲಾಗಿದೆ ನಲ್ಲಿ ಮೇ 21, 2019 11:23 am ಇವರಿಂದ dinesh ಹುಂಡೈ ವೆನ್ಯೂ ಗೆ

 • 14 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ವೆನ್ಯೂ ನಲ್ಲಿ ದೊಡ್ಡ ಫೀಚರ್ ಗಳ ಪಟ್ಟಿ ಇದೆ, ಆದರೆ ಇದು ಯಾವ ರೀತಿಯಲ್ಲಿ ಸೈಜ್ ಮತ್ತು  ಪವರ್ ಟ್ರೈನ್ ಯಾವ ರೀತಿಯಲ್ಲಿ ಹೋಲಿಕೆ ಆಗುತ್ತದೆ? ನಾವು ತಿಳಿಯೋಣ

Hyundai Venue Vs Rivals: Spec Comparison

ಇತ್ತೀಚಿನ ವಿಷಯ: ಹುಂಡೈ ವೆನ್ಯೂ ಅಧಿಕೃತ ಬುಕಿಂಗ್ ಪ್ರಾರಂಭವಾಗಿದೆ . ವಿವರಗಳು ಇಲ್ಲಿವೆ.

ಹುಂಡೈ ಅದರ ಮೊದಲ ಸಬ್-4m SUV ವೆನ್ಯೂ ಬಿಡುಗಡೆ ಮಾಡಿದೆ. ಈ  SUV ಯಲ್ಲಿ ವಿಧವಾದ  ಮೊದಲ ಬಾರಿಗೆ ಪರಿಚಯಿಸಲಾದ ಫೀಚರ್ ಗಳನ್ನು ಕೊಡಲಾಗಿದೆ. ಮತ್ತು ಹೊಸ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಜೊತೆಗೆ ಇಲ್ಲೇ ಮಾಡಲಾದಂತ  7-ಸ್ಪೀಡ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ. ಆದರೆ ಇದು ಚೆನ್ನಾಗಿ ಪ್ರತಿಷ್ಠಿತವಾಗಿರುವ ವಿಟಾರಾ ಬ್ರೆಝ ಮತ್ತು ಟಾಟಾ ನೆಕ್ಸಾನ್ ಜೊತೆ ಹೇಗೆ ಸ್ಪರ್ದಿಸುತ್ತದೆ? ಇದನ್ನು ತಿಳಿಯಲು ನಾವು ಈ ಸಬ್-4 ಮೀಟರ್ SUV ಯ ಸ್ಪೆಕ್  ಗಳ ಹೋಲಿಕೆ ಮಾಡೋಣ.  

 

Dimensions

ವೆನ್ಯೂ

ಬ್ರೆಝ

ನೆಕ್ಸಾನ್

XUV300

ಏಕೋ ಸ್ಪೋರ್ಟ್

Length

3995mm

3995mm

3994mm

3995mm

3998mm

Width

1770mm

1790mm

1811mm

1821mm

1765mm

Height

1590mm

1640mm

1607mm

1627mm

1647mm

Wheelbase

2500mm

2500mm

2498mm

2600mm

2519mm

ಅತಿ ಉದ್ದವಾಗಿರುವುದು:ಫೋರ್ಡ್ ಎಕೋಸ್ಪೋರ್ಟ್

ಅಗಲವಾಗಿರುವುದು:ಮಹಿಂದ್ರಾ XUV300

ಎತ್ತರವಾಗಿರುವುದು:ಫೋರ್ಡ್ ಎಕೋಸ್ಪೋರ್ಟ್

ವೀಲ್ ಬೇಸ್: ಮಹಿಂದ್ರಾ XUV300

ವೆನ್ಯೂ ಅತಿ ಉದ್ದವಾಗಿರುವುದಲ್ಲ, ಅಗಲವಾದ ಅಥವಾ ಎತ್ತರವಾದ SUV ಅಲ್ಲ. ವಾಸ್ತವದಲ್ಲಿ ಇದು ಕಿರಿಯಾದ ಮತ್ತು ಎತ್ತರದಲ್ಲಿ ಕುಳ್ಳಗಿರುವ ಕಾರ್ ಆಗಿದೆ. ವೀಲ್ ಬೇಸ್ ವಿಚಾರಕ್ಕೆ ಬಂದರೆ 2500mm ಇದ್ದು, ಇದು ಬ್ರೆಝ ಗೆ ಸಮವಾಗಿದೆ ಆದರೆ ಎಕೋಸ್ಪೋರ್ಟ್  ಹಾಗು XUV300 ಗಿಂತ ಚಿಕ್ಕದಾಗಿದೆ. ಹಾಗಾಗಿ ಇದು ಹೊಸ ಘಟ್ಟವನ್ನು ಬಿಂಬಿಸುವುದಿಲ್ಲ ಅಳತೆಯ ವಿಚಾರದಲ್ಲಿ.

ಎಂಜಿನ್ ಗಳು: ಮಾರುತಿ ಸುಜುಕಿ ವಿಟಾರಾ ಬ್ರೆಝ ಹೊರತಾಗಿ ಇತರ ಸಬ್ -4m SUV ಗಳು ಪೆಟ್ರೋಲ್ ಹಾಗು ಡೀಸೆಲ್ ಆಯ್ಕೆಯಲ್ಲಿ ಸಿಗುತ್ತವೆ.

 

Petrol

ವೆನ್ಯೂ

XUV300

ನೆಕ್ಸಾನ್

ಏಕೋ ಸ್ಪೋರ್ಟ್

Engine

1.0-litre turbo / 1.2-litre NA

1.2-litre turbo

1.2 turbo

1.5-litre NA / 1.0-litre turbo

Power

120PS / 83PS

110PS

110PS

123PS /125PS

Torque

172Nm / 115Nm

200Nm

170Nm

150Nm / 170Nm

Transmission

7-speed DCT , 6-speed MT / 5-speed MT

6-speed MT

6-speed MT / AMT

5-speed MT, 6-speed AT / 6-speed MT

 

ಹೆಚ್ಚು ಶಕ್ತಿಯುತವಾದದ್ದು: ಫೋರ್ಡ್ ಏಕೋ ಸ್ಪೋರ್ಟ್

ಗರಿಷ್ಟ ಟಾರ್ಕ್ :ಮಹಿಂದ್ರಾ XUV300

Hyundai Venue Breaks Cover, Ready To Take On Sub-4m SUVs With Bold Styling

ವೆನ್ಯೂ ಎರೆಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ ಒಂದು  1.2-ಲೀಟರ್ ನೈಸರ್ಗಿಕ ಗಾಳಿಯ ಒಳ ಹರಿವು ಮತ್ತೊಂದು 1.0-ಲೀಟರ್ ಟ್ಯುರ್ಬೋಚಾರ್ಜ ಇರುವ ಎಂಜಿನ್.  ಇದರಲ್ಲಿ  1.2- ಲೀಟರ್ ಯೂನಿಟ್ 83PS ಪವರ್ ಕೊಡುತ್ತದೆ ಮತ್ತು ಹೋಲಿಕೆಯಲ್ಲಿ ಅತಿ ಕಡಿಮೆ ಪವರ್ ಕೊಡುವ ಪೆಟ್ರೋಲ್ ಎಂಜಿನ್ ಆಗಿದೆ. ಮತ್ತೊಂದು 1.0-ಲೀಟರ್ ಟ್ಯುರ್ಬೋಚಾರ್ಜ ಇರುವ ಎಂಜಿನ್ 120PS ಪವರ್ ಕೊಡುತ್ತದೆ ಹಾಗಾಗಿ ಇದು ಎರೆಡನೆ ಹೆಚ್ಚು ಪವರ್ ಉಳ್ಳ ಪೆಟ್ರೋಲ್  SUV ಆಗಿದೆ, ಎಕೋಸ್ಪೋರ್ಟ್ ನಂತರ.

Hyundai Venue Vs Rivals: Spec Comparison

ನೆಕ್ಸಾನ್ ಹಾಗು XUV300  1.2-ಟ್ಯುರ್ಬೋಚಾರ್ಜ ಎಂಜಿನ್ 110PS ಪವರ್ ಹೊಂದಿದೆ. ಟಾರ್ಕ್ ಗೆ ಸಂಬಂಧಿಸಿದಂತೆ XUV300  ಮುಂಚೂಣಿಯಲ್ಲಿದೆ 200Nm ನೊಂದಿಗೆ ಅದರ ಜೊತೆ ವೆನ್ಯೂ ದಲ್ಲಿ 172Nm ಟಾರ್ಕ್ ಕೊಡುತ್ತದೆ. ಎಕೋಸ್ಪೋರ್ಟ್ ಹಾಗು ನೆಕ್ಸಾನ್ ಎರೆಡರಲ್ಲೂ ಒಂದೇ ರೀತಿಯಾದ ಟಾರ್ಕ್ ಸಂಖ್ಯೆ ಇದೆ 170Nm. ವೆನ್ಯೂ ದ 1.2-ಲೀಟರ್ ಯೂನಿಟ್ ಅತಿ ಕಡಿಮೆಯಾದ ಟಾರ್ಕ್ ಕೊಡುತ್ತದೆಇವುಗಳಲ್ಲಿ.

Hyundai Venue Vs Rivals: Spec Comparison

ಟ್ರಾನ್ಸ್ಮಿಷನ್ ವಿಚಾರ ಪರಿಗಣಿಸಿದಾಗ, ಮಹಿಂದ್ರಾ ಹೊರತಾಗಿ, ಇದರಲ್ಲಿ ಮಾತ್ರ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಇದೆ, ಇದರ ಹೊರತಾಗಿ ಎಲ್ಲದರಲ್ಲಿ ಆಟೋಮ್ಯಾಟಿಕ್ ಆಯ್ಕೆ ಇದೆ. ವೆನ್ಯೂ ದಲ್ಲಿ 5-ಸ್ಪೀಡ್ ಮಾನ್ಯುಯಲ್ ಇದ್ದು ಜೊತೆಗೆ 1.2-ಲೀಟರ್ ಎಂಜಿನ್ ಇದೆ. ಆದರೂ 1.0-ಲೀಟರ್ ಟ್ಯುರ್ಬೋಚಾರ್ಜ ಯೂನಿಟ್ ಜೊತೆಗೆ 6-ಸ್ಪೀಡ್ ಮಾನ್ಯುಯಲ್ ಅಥವಾ 7-ಸ್ಪೀಡ್ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಅಳವಡಿಸಬಹುದಾಗಿದೆ. ವಾಸ್ತವದಲ್ಲಿ ಇದು ಒಂದೇ ಡ್ಯೂಯಲ್ ಕ್ಲಚ್ ಟ್ರಾನ್ಸ್ಮಿಷನ್ ಕೊಟ್ಟಿರುವ SUV ಆಗಿದೆ.

Hyundai Venue Vs Rivals: Spec Comparison

ನೆಕ್ಸಾನ್ ನಲ್ಲಿ 6-ಸ್ಪೀಡ್ ಮಾನ್ಯುಯಲ್ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ ಆದರೆ ಇದನ್ನು 6-ಸ್ಪೀಡ್ AMT ಜೊತೆಗೂ ಹೊಂದಬಹುದಾಗಿದೆ. ಎಕೋಸ್ಪೋರ್ಟ್ ಇನ್ನೊಂದು ವಿಧದಲ್ಲಿ ಮೂರು ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. 1.5-ಲೀಟರ್ ಎಂಜಿನ್ 5-ಸ್ಪೀ ಮಾನ್ಯುಯಲ್ ಮತ್ತು 6-ಆಟೋ ದೊಂದಿಗೆ ಬರುತ್ತದೆ. 1.0-ಲೀಟರ್ ಟ್ಯುರ್ಬೋಚಾರ್ಜ ಎಂಜಿನ್ ಕೇವಲ 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಬರುತ್ತದೆ.

 

Diesel

ವೆನ್ಯೂ

ಬ್ರೆಝ

ನೆಕ್ಸಾನ್

XUV300

ಏಕೋ ಸ್ಪೋರ್ಟ್

Engine

1.4-litre

1.3-litre

1.5-litre

1.5-litre

1.5-litre

Power

90PS

90PS

110PS

115PS

100PS

Torque

220Nm

200Nm

260Nm

300Nm

205Nm

Transmission

6-speed MT

5-speed MT/AMT

6-speed MT/ AMT

6-speed MT

5-speed MT

 

ಹೆಚ್ಚು ಶಕ್ತಿಯುತವಾದ್ದು : ಮಹಿಂದ್ರಾ XUV300

ಹೆಚ್ಚು ಟಾರ್ಕ್ ಹೊಂದಿರುವುದು:Mahindra XUV300

ಇರುವ 90PS ಒಂದಿಗೆ ೆ, ವೆನ್ಯೂ ಒಂದು ಕಡಿಮೆ ಪವರ್ ಹೊಂದಿರುವ ಡೀಸೆಲ್  SUV.  ಈ ವಿಭಾಗದಲ್ಲಿ XUV300 ಮುಂಚೂಣಿಯಲ್ಲಿದೆ, ಇದರ ನಂತರ ನೆಕ್ಸಾನ್ ಹಾಗು ಎಕೋಸ್ಪೋರ್ಟ್ ಇದೆ. ಮಹಿಂದ್ರಾ ಒಂದು ಹೆಚ್ಚು ಟಾರ್ಕ್ ಇರುವ SUV ಆಗಿದೆ, ಇದರ ನಂತರ ನೆಕ್ಸಾನ್ ಹಾಗು ವೆನ್ಯೂ ಇದೆ. ಫೋರ್ಡ್ ಎಕೋಸ್ಪೋರ್ಟ್ ಗಿಂತಲೂ 5Nm ಕಡಿಮೆ ಟಾರ್ಕ್ ಹೊಂದಿರುವುದರೊಂದಿಗೆ ಬ್ರೆಝ ಅತಿ ಕಡಿಮೆ ಟಾರ್ಕ್ ಹೊಂದಿರುವ SUV ಆಗಿದೆ.

Hyundai Venue Vs Rivals: Spec Comparison

ಟ್ರಾನ್ಸ್ಮಿಷನ್ ವಿಚಾರ ಪರಿಗಣಿಸಿದರೆ, ಫೋರ್ಡ್, ಮತ್ತು ಮಹಿಂದ್ರಾ ಕೇವಲ ಮಾನ್ಯುಯಲ್ ಗೇರ್ ಗೋಸ್ ಒಂದಿಗೆ ಬರುತ್ತವೆ. ನೆಕ್ಸಾನ್ ಮತ್ತು ವಿಟಾರಾ ಆಟೋ ಗೇರ್ ಆಯ್ಕೆಯೊಂದಿಗೆ ಬರುತ್ತದೆ. ವೆನ್ಯೂ ಮತ್ತು XUV300 ನಲ್ಲಿ  6-ಸ್ಪೀಡ್ ಯೂನಿಟ್ ಇದೆ, ಎಕೋಸ್ಪೋರ್ಟ್  5-ಯೂನಿಟ್ ಜೊತೆಗೆ ಬರುತ್ತದೆ.

ಬ್ರೆಝ ದಲ್ಲಿ 5- ಸ್ಪೀಡ್ ಮಾನ್ಯುಯಲ್ ಅಥವಾ 5-ಸ್ಪೀಡ್ AMT ಹೊಂದಬಹುದು. ನೆಕ್ಸಾನ್ ಇನ್ನೊಂದುಬದಿಯಲ್ಲಿ 6-ಸ್ಪೀಡ್ ಮಾನ್ಯುಯಲ್ ಅಥವಾ 6-ಸ್ಪೀಡ್ AMTಜೊತೆಗೆ ಬರುತ್ತದೆ.

ಫೀಚರ್ ಗಳು

ವೆನ್ಯೂ ಒಂದು  ಭಾರತದಲ್ಲಿ ಮಾರಾಟವಾಗುತ್ತಿರುವ ಕನೆಕ್ಟೆಡ್ SUV ಆಗಿದೆ. ಇದರಲ್ಲಿ e-SIM ಕೊಡಲಾಗಿದೆ ಮತ್ತು ಅದು ಗ್ರಾಹಕರಿಗೆ ವಾಹನದ ಸೆಟ್ಟಿಂಗ್ ಗಳನ್ನು  ಮೊಬೈಲ್ ಅಪ್ ಮೂಲಕ ನಿಯಂತ್ರಿಸಲು  ಸಹಾಯವಾಗುತ್ತದೆ. ಈ ಟೆಕ್ನಲಾಜಿ ಮೂಲಕ ಎಂಜಿನ್ ಅನ್ನು ರಿಮೋಟ್ ಮೂಲಕ ಸ್ಟಾರ್ಟ್ ಮಾಡಬಹುದಾಗಿದೆ, ರಿಮೋಟ್ AC ಕಂಟ್ರೋಲ್, ಮತ್ತು ರಿಮೋಟ್ ಡೋರ್ ಲಾಕ್/ಅನ್ಲಾಕ್ ಕೂಡ ಮಾಡಬಹುದು. ಇದರಿಂದಾಗಿ ಗ್ರಾಹಕರಿಗೆ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ತುರ್ತು ಸೇವೆ ಕೊಡಬಹುದಾದ ಪರಿಚಿತರಿಗೆ  ಅಲರ್ಟ್ ಗಳನ್ನು ಕಳುಹಿಸಲು ಸಹಾಯವಾಗುತ್ತದೆ.

 • ವೆನ್ಯೂ ಮತ್ತಷ್ಟು ಫೀಚರ್ ಗಳು ಬಹಿರಂಗಪಡಿಸಿರುವಂತಹುದು

 • ಸುರಕ್ಷತೆಗಳು: ವೆನ್ಯೂ ಆರು ಏರ್ಬ್ಯಾಗ್ ಗಳ  ಜೊತೆ ಬರುತ್ತದೆ ಆದರೆ ಮಹಿಂದ್ರಾ ಮತ್ತು  ಏಳು ಹಾಗು ಆರು ಏರ್ಬ್ಯಾಗ್ ಗಳನ್ನು ಕೊಡುತ್ತದೆ. ಮಾರುತಿ ವಿಟಾರಾ ಬ್ರೆಝ ಹಾಗು ನೆಕ್ಸಾನ್ ಎರೆಡು ಏರ್ಬ್ಯಾಗ್ ಮಾತ್ರ ಪಡೆಯುತ್ತದೆ. ಮತ್ತು ಇವನ್ನು ಸ್ಥಾನಾರ್ಡ್ ಆಗಿ ಕೊಡಲಾಗುತ್ತದೆ. ಮಾರುತಿ ಬ್ರೆಝ ಮತ್ತು ಎಕೋಸ್ಪೋರ್ಟ್ ನಲ್ಲಿ ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ISOFIX ಚೈಲ್ಡ್ ಸೀಟ್  ಆಂಕರ್ ಗಳು  ಸ್ಟ್ಯಾಂಡರ್ಡ್ ಆಗಿ ಕೇವಲ ಮಾರುತಿ ಬ್ರೆಝ, XUV300, ಹಾಗು ನೆಕ್ಸಾನ್ ಗಳಲ್ಲಿ ಮಾತ್ರ ಕೊಡಲಾಗಿದೆ. ಇತರ ಕಾರ್ ಗಳಲ್ಲಿ ಮೇಲಿನ ವೇರಿಯೆಂಟ್ ಗಳಲ್ಲಿ ಮಾತ್ರ ಕೊಡಲಾಗುತ್ತದೆ.

XUV300 ನಲ್ಲಿ ಕೆಲವು ವುಬಾಗದ ಮೊದಲ ಸುರಕ್ಷತೆ ಫೀಚರ್ ಗಳು ಕೊಡಲಾಗಿದೆ, ಪಾರ್ಕಿಂಗ್ ಸೆನ್ಸರ್ ಮತ್ತು ಎಲ್ಲ ವೀಲ್ ಗಳಿಗೆ ಡಿಸ್ಕ್ ಬ್ರೇಕ್  ಗಳನ್ನೂ ಸೇರಿಸಿ.

Hyundai Venue Breaks Cover, Ready To Take On Sub-4m SUVs With Bold Styling

ಇನ್ಫೋಟೈನ್ಮೆಂಟ್ : ಎಲ್ಲ SUV ಗಳು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕೊಡುತ್ತವೆ. ಆದರೆ ಅವುಗಳಲ್ಲಿ ವಿಭಿನ್ನ ಅಳತೆಯ ಯೂನಿಟ್ ಗಳು ಲಭ್ಯವಿರುತ್ತದೆ. ಮಾರುತಿ ಹಾಗು ಮಹಿಂದ್ರಾ 7-ಇಂಚು ಸ್ಕ್ರೀನ್ ಪಡೆಯುತ್ತದೆ, ವೆನ್ಯೂ ಮತ್ತು ಎಕೋಸ್ಪೋರ್ಟ್ 8-ಯೂನಿಟ್ ಪಡೆಯುತ್ತದೆ. ನೆಕ್ಸಾನ್ ನಲ್ಲಿ ಚಿಕ್ಕ ಅಳತೆಯ ಸ್ಕ್ರೀನ್ 6.5-ಇಂಚು ಹೊಂದಿದೆ. ಆದರೆ ನೆಕ್ಸಾನ್ ನಲ್ಲಿ ಮಾತ್ರ ಹರ್ಮನ್ ನಿಂದ ಪಡೆಯಲಾದ ಮ್ಯೂಸಿಕ್ ಸಿಸ್ಟಮ್ ಕೊಡಲಾಗಿದೆ.

 Hyundai Venue Breaks Cover, Ready To Take On Sub-4m SUVs With Bold Styling

ಸೌಕರ್ಯ ಮತ್ತು ಅನುಕೂಲತೆಗಳು: ಬ್ರೆಝ ಮತ್ತು ನೆಕ್ಸಾನ್ ಹೊರತಾಗಿ, ಎಲ್ಲ SUV ಗಳಲ್ಲಿ ಎಲೆಕ್ಟ್ರಿಕ್ ಸನ್ ರೂಫ್ ಇದೆ,  ಕೆಲವು ವೇರಿಯೆಂಟ್ ಗಳಲ್ಲಿ. ಮತ್ತಷ್ಟು ಸಾಮಾನ್ಯವಾಗಿರುವ ಫೀಚರ್ ಗಳಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ (XUV300 ನಲ್ಲಿ ಡುಯಲ್ ಜೋನ್ AC ಇದೆ), ಡೇ/ನೈಟ್ IRVM ( ಆಟೋ ಡಿಮ್ಮ್ಮಿಂಗ್ , ಮತ್ತು ಎಕೋಸ್ಪೋರ್ಟ್ ), ಅಳವಡಿಸಬಹುದಾದ ಸ್ಟಿಯರಿಂಗ್, ಪುಶ್ ಬಟನ್ ಸ್ಟಾರ್ಟ್, ವಿದ್ಯುತ್ ಅಳವಡಿಕೆಯ ಮತ್ತು ಮಡಚಬಹುದಾದ ORVM ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ರಿವರ್ಸ ಪಾರ್ಕಿಂಗ್ ಕ್ಯಾಮರಾ ಮತ್ತು ಎತ್ತರ ಅಳವಡಿಸಬಹುದಾದ ಡ್ರೈವರ್ ಸೀಟ್. XUV300 ನಲ್ಲಿ ವಿಭಿನ್ನವಾದ ಸ್ಟಿಯರಿಂಗ್ ಮೋಡ್ ಗಳು, ಆಟೋ ಡಿಮ್ಮಿಂಗ್ ORVM ಗಳು, ಮತ್ತು   ಇತರ  ಹಾಲೊಸಬಹುದಾದ ಕಾರ್ ಗಳಲ್ಲಿ ಸಿಗದಿರಬಹುದಾದ ಫೀಚರ್ ಗಳು ಕೊಡಲಾಗಿದೆ. ನೆಕ್ಸಾನ್ ನಲ್ಲಿ ವಿಭಾಗದ ಮೊದಲ ಫೀಚರ್ ಗಳಾದ ವಿವಿಧ ಡ್ರೈವಿಂಗ್ ಮೋಡ್ ಗಳನ್ನೂ ಕೊಡಲಾಗಿದೆ.

ಬೆಲೆ (ಎಕ್ಸ್ ಶೋ ರೂಮ್ ದೆಹಲಿ )

ಹುಂಡೈ ವೆನ್ಯೂ

 

, ಮಾರುತಿ ಸುಜುಕಿ ವಿಟಾರಾ ಬ್ರೆಝ

ಟಾಟಾ ನೆಕ್ಸಾನ್

ಮಹಿಂದ್ರಾ  XUV300

ಫೋರ್ಡ್ ಎಕೋಸ್ಪೋರ್ಟ್

Rs 8 lakh to 12 lakh (expected)

Rs 7.67 lakh to Rs 10.42 lakh

Rs 6.48 lakh to Rs 10.90 lakh

Rs 7.83 lakh to Rs 11.90 lakh

Rs 7.90 lakh to Rs 11.99 lakh

Also Read: Next-Gen Hyundai ix25 Previews 2020 Hy

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ವೆನ್ಯೂ

1 ಕಾಮೆಂಟ್
1
K
keshyap
Nov 21, 2020 9:52:26 PM

Tata Nexon is anyday a better choice

Read More...
  ಪ್ರತ್ಯುತ್ತರ
  Write a Reply
  Read Full News
  • ಮಹೀಂದ್ರ XUV300
  • ಟಾಟಾ ನೆಕ್ಸ್ಂನ್‌
  • ಮಾರುತಿ ವಿಟರಾ ಬ್ರೆಜ್ಜಾ
  • ಹುಂಡೈ ವೆನ್ಯೂ
  ದೊಡ್ಡ ಉಳಿತಾಯ !!
  % ! find best deals ನಲ್ಲಿ used ಹುಂಡೈ cars ವರೆಗೆ ಉಳಿಸು
  ವೀಕ್ಷಿಸಿ ಬಳಸಿದ <modelname> ರಲ್ಲಿ {0}

  Similar cars to compare & consider

  Ex-showroom Price New Delhi

  trendingಎಸ್ಯುವಿ

  * ಅಂದಾಜು ಬೆಲೆ ಹೊಸ ದೆಹಲಿ
  ×
  We need your ನಗರ to customize your experience