Login or Register ಅತ್ಯುತ್ತಮ CarDekho experience ಗೆ
Login

ವಿಶೇಷಚೇತನರಿಗೆ ಶೋರೂಂ ಬಳಕೆಯನ್ನು ಸುಲಭಗೊಳಿಸಲಿರುವ ಹ್ಯುಂಡೈ, ವಿಶೇಷ ಆಕ್ಸೆಸರಿಗಳ ಬಿಡುಗಡೆಗೆ ಸಿದ್ಧತೆ

ನವೆಂಬರ್ 22, 2023 05:38 pm ರಂದು sonny ಮೂಲಕ ಪ್ರಕಟಿಸಲಾಗಿದೆ

ಎನ್‌.ಜಿ.ಒ ಗಳ ಜೊತೆಗಿನ ಸಹಭಾಗಿತ್ವ ಸೇರಿದಂತೆ ಹ್ಯುಂಡೈ ಸಂಸ್ಥೆಯ ಹೊಸ ʻಸಮರ್ಥ್‌ʼ ಅಭಿಯಾನದ ಅಂಗವಾಗಿ ಈ ಕ್ರಮವನ್ನು ಘೋಷಿಸಲಾಗಿದೆ

  • ಈ ಕಾರು ತಯಾರಕ ಸಂಸ್ಥೆಯು ವಿಶೇಷ ಚೇತನ ವ್ಯಕ್ತಿಗಳ ಕುರಿತು ಜಾಗೃತಿ ರೂಪಿಸುವುದು ಮಾತ್ರವಲ್ಲದೆ ಅವರ ಚಲನೆಗ ಅಗತ್ಯವನ್ನು ಬೆಂಬಲಿಸುತ್ತಿದೆ.
  • ಹ್ಯುಂಡೈ ಸಂಸ್ಥೆಯು 2024ರ ಫೆಬ್ರುವರಿ ತಿಂಗಳೊಳಗೆ 100 ಶೇಕಡಾದಷ್ಟು ಡೀಲರ್‌ ಶಿಪ್‌ ಗಳು ಮತ್ತು ವರ್ಕ್‌ ಶಾಪ್‌ ಗಳು ಗಾಲಿಕುರ್ಚಿಯ ಮೂಲಕ ತಲುಪಲು ಸಾಧ್ಯವಾಗುವಂತೆ ರೂಪಿಸಲು ಪಣ ತೊಟ್ಟಿದೆ.
  • ಭಾರತೀಯ ಪ್ಯಾರಾ ಅಥ್ಲೀಟ್‌ ಗಳಿಗೆ ನೆರವು ಒದಗಿಸುವುದಕ್ಕಾಗಿ ಗೊಸ್ಪೋರ್ಟ್ಸ್‌ ಫೌಂಡೇಶನ್‌ ಜೊತೆಗೆ ಸಹಭಾಗಿತ್ವವನ್ನು ಸಾಧಿಸಿದೆ.
  • ಅಲ್ಲದೆ ಅಂಧರ ಕ್ರಿಕೆಟ್‌ ವೇದಿಕೆಯನ್ನು ಬಳಸಿ ದೃಷ್ಟಿಮಾಂದ್ಯರಿಗೆ ನೆರವು ಒದಗಿಸುವುದಕ್ಕಾಗಿ ʻಸಮರ್ಥನ್‌ ಟ್ರಸ್ಟ್‌ ಫಾರ್‌ ದ ಡಿಸೇಬಲ್ಡ್‌ʼ ಜೊತೆಗೆ ಕೈ ಜೋಡಿಸಿದೆ.

ತಾನೇ ವಿವರಿಸಿರುವಂತೆ ಸ್ಮಾರ್ಟ್‌ ಮೊಬಿಲಿಟಿ ಸೊಲೂಷನ್ಸ್‌ ಒದಗಿಸುವ ಒಂದು ಸಂಸ್ಥೆಯಾಗಿ ಹ್ಯುಂಡೈಯು ಇನ್ನೊಂದು ಹೆಜ್ಜೆಯನ್ನು ಇಟ್ಟಿದ್ದು ಭಿನ್ನಚೇತನರ ಚಲನೆಯ ಅಗತ್ಯತೆಗೆ ಗಮನ ನೀಡಲು ನಿರ್ಧರಿಸಿದೆ. ಕೆಲವೊಂದು ಇಂದ್ರಿಯಗಳು ಅಥವಾ ಅಂಗದ ನ್ಯೂನತೆ ಹೊಂದಿರುವ ವ್ಯಕ್ತಿಗಳ ಸಮಸ್ಯೆಗಳು ಮತ್ತು ಸಾಮರ್ಥ್ಯಗಳ ಕುರಿತ ಅರಿವಿನಲ್ಲಿ ಹೆಚ್ಚಳ ಉಂಟಾಗುತ್ತಿದ್ದರೂ, ಭಾರತದ ಸಮಾಜದಲ್ಲಿರುವ ಸುಮಾರು 2.68 ಕೋಟಿ ಜನರನ್ನು ಇನ್ನೂ ನಿರ್ಲಕ್ಷ್ಯ ಭಾವನೆ ಕಾಡುತ್ತಿದೆ. ಹ್ಯುಂಡೈ ಸಂಸ್ಥೆಯು ಭಿನ್ನಚೇತನ ವ್ಯಕ್ತಿಗಳ ಕುರಿತ ಜಾಗೃತಿ ಮತ್ತು ಸಬಲೀಕರಣಕ್ಕಾಗಿ ʻಸಮರ್ಥ್‌ʼ ಎನ್ನುವ ಉಪಕ್ರಮಕ್ಕೆ ಇಂದು ಚಾಲನೆ ನೀಡಿದೆ. ಈ ಕಾರು ತಯಾರಕ ಸಂಸ್ಥೆಯು ಈ ಸಮಗ್ರ ಚಲನಶೀಲತೆ ಯೋಜನೆಗಾಗಿ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದು, ಆಂತರಿಕವಾಗಿ ಬದಲಾವಣೆಗಳನ್ನು ಮಾಡಿಕೊಳ್ಳಲಿದೆ ಮಾತ್ರವಲ್ಲದೆ ಮಾನವೀಯ ಸಂಘಟನೆಗಳ ಜೊತೆಗೆ ಸಹಭಾಗಿತ್ವವನ್ನು ಸಾಧಿಸಲಿದೆ. ಚರ್ಚಿಸಲಾದ ಕೆಲವು ಯೋಜನೆಗಳ ಮೇಲೆ ಗಮನ ಹರಿಸೋಣ:

ಹ್ಯುಂಡೈ ಸಂಸ್ಥೆಗಳ ವಿನ್ಯಾಸದಲ್ಲಿ ಬದಲಾವಣೆ

ಒಳಗೊಳ್ಳುವಿಕೆಗಾಗಿ ಮಾಡುವ ಸಮಗ್ರ ಯತ್ನವು, ಭಿನ್ನಚೇತನರಿಗಾಗಿ ಹ್ಯುಂಡೈ ವೆಬ್‌ ಸೈಟ್‌ ಅನ್ನು ಬಳಕೆದಾರ ಸ್ನೇಹಿಯಾಗಿ ಪರಿವರ್ತಿಸುವುದನ್ನು ಒಳಗೊಂಡಿದೆ. ಅಲ್ಲದೆ, 2024ರ ಫೆಬ್ರುವರಿಯ ಒಳಗೆ ಎಲ್ಲಾ ಡೀಲರ್‌ ಶಿಪ್‌ ಗಳು ಮತ್ತು ವರ್ಕ್‌ ಶಾಪ್‌ ಗಳಲ್ಲಿ ಗಾಲಿಕುರ್ಚಿ ಬಳಸುವಂತಾಗಲು ಮಾರ್ಪಾಡುಗಳನ್ನು ಮಾಡಲಿದೆ.

ವಿಶೇಷ ಅಗತ್ಯತೆಗಳಿಗಾಗಿ ವಿಶೇಷಜ್ಞ ಆಕ್ಸೆಸರಿಗಳು

ವಿಶೇಷ ಸಾಧನಗಳಿಲ್ಲದೆಯೇ ವಾಹನ ಚಾಲನೆ ಮಾಡುವುದು ಅಥವಾ ಒಬ್ಬ ಪ್ರಯಾಣಿಕನಾಗಿ ಕಾರನ್ನು ಬಳಸುವುದು ಭಿನ್ನಚೇತನರ ಪಾಲಿಗೆ ಸವಾಲಿನ ಕೆಲಸವಾಗಿದೆ. ಇಂತಹ ವ್ಯಕ್ತಿಗಳು ತನ್ನ ಕಾರುಗಳನ್ನು ಸುಲಭವಾಗಿ ಮತ್ತು ಆರಾಮದಾಯಕವಾಗಿ ಬಳಸುವಂತಾಗಲು ತಾನು MOBIS ಜೊತೆಗೆ ಸ್ವಿವೆಲ್‌ ಸೀಟುಗಳಂತಹ ಅಧಿಕೃತ ಆಕ್ಸೆಸರಿಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಹ್ಯುಂಡೈ ಸಂಸ್ಥೆಯು ಹೇಳಿಕೊಂಡಿದೆ.

ಮಾನವೀಯ ಸಹಭಾಗಿತ್ವಗಳು

ʻಸಮರ್ಥ್‌ʼ ಅಭಿಯಾನದ ಅಂಗವಾಗಿ, ಭಾರತದಲ್ಲಿ ಪ್ಯಾರಾ ಅಥ್ಲೀಟ್‌ ಗಳಿಗೆ ಸಮಗ್ರ ನೆರವನ್ನು ಒದಗಿಸುವ ಕಾರ್ಯಕ್ರಮವನ್ನು ಪ್ರಾರಂಭಿಸುವುದಕ್ಕಾಗಿ ಹ್ಯುಂಡೈ ಸಂಸ್ಥೆಯು ಗೊಸ್ಪೋರ್ಟ್ಸ್‌ ಫೌಂಡೇಶನ್‌ ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದು ತಂಡದ ರಚಿಸಿಕೊಂಡು ಮತ್ತು ವೈಯಕ್ತಿಕವಾಗಿ ಆಡುವ ಕ್ರೀಡೆಗಳೆರಡರಲ್ಲೂ ಪಾಲ್ಗೊಳ್ಳುವ ಆಟಗಾರರನ್ನು ಬೆಂಬಲಿಸಿದೆ.

ಜತೆಗೆ, ಸಹಾಯಕ ಸಾಧನಗಳ ಮೂಲಕ ಭಿನ್ನಚೇತನರಿಗೆ ನೆರವು ಒದಗಿಸುವುದಕ್ಕಾಗಿ ʻಸಮರ್ಥನ್‌ ಟ್ರಸ್ಟ್‌ ಫಾರ್‌ ದ ಡಿಸೇಬಲ್ಡ್‌ʼ ಜೊತೆಗೆ ಕೈ ಜೋಡಿಸಿದೆ. ಈ ಎರಡು ಸಂಸ್ಥೆಗಳು ಒಗ್ಗೂಡಿ, ಅಂಧರ ಕ್ರಿಕೆಟ್‌ ಅನ್ನು ಒಂದು ವೇದಿಕೆಯಾಗಿ ಬಳಸಿಕೊಂಡು, ಭಾರತದಲ್ಲಿ ದೃಷ್ಟಿಮಾಂದ್ಯತೆ ಹೊಂದಿರುವ ಅಭಿವೃದ್ಧಿಗೆ ಒತ್ತು ನೀಡುವುದಕ್ಕಾಗಿ ಕಾರ್ಯಕ್ರಮವನ್ನು ರೂಪಿಸಲಿವೆ.

ʻಸಮರ್ಥ್‌ʼ ಉಪಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀ ಉನ್‌ ಸೂ ಕಿಮ್‌, ಎಂ.ಡಿ ಮತ್ತು ಸಿ.ಇ.ಒ, ಎಚ್‌.ಎಂ.ಐ.ಎಲ್‌, “ʻಸಮರ್ಥ್‌ʼ ಉಪಕ್ರಮದ ಚಾಲನೆಯನ್ನು ಘೋಷಿಸಲು ನಾವು ಹರ್ಷಪಡುತ್ತೇವೆ ಹಾಗೂ ಇದು ಭಾರತದ ಭಿನ್ನಚೇತನರ ಕುರಿತು ಹೆಚ್ಚಿನ ಜಾಗೃತಿಯನ್ನು ರೂಪಿಸಲು ಮತ್ತು ಅಂಗರ್ತತ ಸಮಾಜವನ್ನು ರೂಪಿಸಲು ತೆಗೆದುಕೊಂಡಿರುವ ಒಂದು ಹೆಜ್ಜೆಯಾಗಿದೆ. ನಾವು ಭಿನ್ನಚೇತನರಿಗಾಗಿ ಹೆಚ್ಚು ಸಮಾನತೆಯಿಂದ ಕೂಡಿದ ಮತ್ತು ಸಂವೇದನಾಶೀಲ ಸಮಾಜವನ್ನು ರೂಪಿಸಲು ಮತ್ತು ಅವರು ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಲು ಇಚ್ಛಿಸುತ್ತೇವೆ” ಎಂದು ಹೇಳಿದ್ದಾರೆ.

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ