Jaguar I-Pace ಎಲೆಕ್ಟ್ರಿಕ್ SUV: ಬುಕಿಂಗ್ ಸ್ಥಗಿತ, ಅಧಿಕೃತ ಭಾರತೀಯ ಸೈಟ್‌ನಿಂದ ಮಿಸ್ಸಿಂಗ್
I-Pace ಭಾರತದಲ್ಲಿ ಲಭ್ಯವಿರುವ ಮೊದಲ ಕೆಲವು ಐಷಾರಾಮಿ ಎಲೆಕ್ಟ್ರಿಕ್ SUV ಗಳಲ್ಲಿ ಒಂದಾಗಿದೆ, ಮತ್ತು ಇದು 470 km ವರೆಗಿನ WLTP ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ
-
ಜಾಗ್ವಾರ್ ಆರಂಭದಲ್ಲಿ I-ಪೇಸ್ ಅನ್ನು ಮೂರು ವೇರಿಯಂಟ್ ಗಳಲ್ಲಿ ಮಾರಾಟ ಮಾಡಿದೆ: S, SE ಮತ್ತು HSE.
-
ಸ್ಥಗಿತಗೊಳ್ಳುತ್ತಿರುವ ಹಂತದಲ್ಲಿ, ಇದು ಸಂಪೂರ್ಣವಾಗಿ ಲೋಡ್ ಆಗಿರುವ HSE ವೇರಿಯಂಟ್ ನಲ್ಲಿ ಮಾತ್ರ ಲಭ್ಯವಿತ್ತು.
-
ಇದು ಡ್ಯುಯಲ್-ಮೋಟರ್ AWD ಸೆಟಪ್‌ನೊಂದಿಗೆ 90 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು.
-
ನೀಡಲಾಗಿರುವ ಫೀಚರ್ ಗಳಲ್ಲಿ 10-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
-
ಕೊನೆಯ ಬಾರಿಗೆ ಲಿಸ್ಟ್ ಮಾಡಿದಾಗ ಇದರ ಬೆಲೆಯು ರೂ 1.26 ಕೋಟಿ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಆಗಿತ್ತು.
ಭಾರತದಲ್ಲಿ ಮಾರಾಟವಾಗುತ್ತಿರುವ ಮೊದಲ ಕೆಲವು ಐಷಾರಾಮಿ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿರುವ ಜಾಗ್ವಾರ್ I-ಪೇಸ್ ಅನ್ನು ಈಗ ಕಾರ್ ತಯಾರಕರ ಭಾರತೀಯ ವೆಬ್‌ಸೈಟ್‌ನಿಂದ ಸದ್ದಿಲ್ಲದೇ ತೆಗೆದುಹಾಕಲಾಗಿದೆ. ಜಾಗ್ವಾರ್ ತನ್ನ ಎಲೆಕ್ಟ್ರಿಕ್ SUV ಗಾಗಿ ಬುಕಿಂಗ್ ತೆಗೆದುಕೊಳ್ಳುವುದನ್ನು ಕೂಡ ನಿಲ್ಲಿಸಿದೆ, ಇದು ಭಾರತದಲ್ಲಿ ಅದರ ಸ್ಥಗಿತಗೊಳ್ಳುವ ಸಾಧ್ಯತೆಯನ್ನು ಮತ್ತಷ್ಟು ಖಚಿತಪಡಿಸುತ್ತದೆ.
ಜಾಗ್ವಾರ್ I-ಪೇಸ್: ಓವರ್ ವ್ಯೂ
2021 ರಲ್ಲಿ, ಜಾಗ್ವಾರ್ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರುವ I-ಪೇಸ್ ಅನ್ನು ಮರ್ಸಿಡಿಸ್-ಬೆಂಜ್ EQC ಮತ್ತು ಆಡಿ e-tron SUV ಗಳಿಗೆ ನೇರ ಪ್ರತಿಸ್ಪರ್ಧಿಯಾಗಿ ಮಾರಾಟ ಮಾಡಲು ಪ್ರಾರಂಭಿಸಿತು. ಇದು ಮೂರು ವೇರಿಯಂಟ್ ಗಳಲ್ಲಿ ಲಭ್ಯವಿತ್ತು: S, SE, ಮತ್ತು HSE. ಆದರೆ ಸ್ಥಗಿತಗೊಳ್ಳುತ್ತಿರುವ ಹಂತದಲ್ಲಿ, I-ಪೇಸ್ HSE ವೇರಿಯಂಟ್ ನಲ್ಲಿ ಮಾತ್ರ ಲಭ್ಯವಿತ್ತು.
ಆಲ್-ಎಲೆಕ್ಟ್ರಿಕ್ ಜಾಗ್ವಾರ್ SUV ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆ ಮತ್ತು ಎರಡು ಮೋಟಾರ್‌ಗಳೊಂದಿಗೆ ಲಭ್ಯವಿತ್ತು, ಮತ್ತು ಅದರ ವಿವರಗಳು ಈ ಕೆಳಗಿನಂತಿವೆ:
ಸ್ಪೆಸಿಫಿಕೇಷನ್ |
ಜಾಗ್ವಾರ್ I-ಪೇಸ್ |
ಬ್ಯಾಟರಿ ಪ್ಯಾಕ್ |
90 kWh |
ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ |
ಡುಯಲ್-ಮೋಟಾರ್, ಆಲ್-ವೀಲ್-ಡ್ರೈವ್ |
ಪವರ್ |
400 PS |
ಟಾರ್ಕ್ |
696 Nm |
WLTP-ಕ್ಲೇಮ್ ಮಾಡಿರುವ ರೇಂಜ್ |
470 ಕಿ.ಮೀ |
ಇದು ಕೇವಲ 4.8 ಸೆಕೆಂಡ್‌ಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ತಲುಪಬಹುದು.
I-Pace 60 kW ವರೆಗಿನ DC ಫಾಸ್ಟ್ ಚಾರ್ಜರ್ ಅನ್ನು ಸಪೋರ್ಟ್ ಮಾಡುತ್ತದೆ, ಇದು ಕೇವಲ 15 ನಿಮಿಷಗಳಲ್ಲಿ SUV ಗೆ 127 ಕಿಮೀ ರೇಂಜ್ ಅನ್ನು ನೀಡುತ್ತದೆ. ಅದೇ ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು, I-ಪೇಸ್ ಅನ್ನು ಕೇವಲ 55 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. 50 kW ಚಾರ್ಜರ್ ಅನ್ನು ಬಳಸಿಕೊಂಡು, I-Pace ನ ಬ್ಯಾಟರಿಯನ್ನು ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು, ಮತ್ತು ಇದು 270 ಕಿಮೀ ರೇಂಜ್ ಅನ್ನು ನೀಡುತ್ತದೆ. ಇಲ್ಲಿ 7.4 kW AC ಚಾರ್ಜರ್ ಮತ್ತು ಆಪ್ಷನಲ್ ಆಗಿರುವ 11 kW ವಾಲ್‌ಬಾಕ್ಸ್ ಚಾರ್ಜರ್ ಅನ್ನು ಕೂಡ ನೀಡಲಾಗಿದೆ, ಇದು 12.9 ಗಂಟೆಗಳಲ್ಲಿ ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.
ಇದನ್ನು ಕೂಡ ಓದಿ: ವೋಲ್ವೋ EX30 ಭಾರತದಲ್ಲಿ 2025 ರಲ್ಲಿ ಬಿಡುಗಡೆ
ಫೀಚರ್ ಗಳು ಮತ್ತು ಸುರಕ್ಷತೆ ಟೆಕ್
ಜಾಗ್ವಾರ್ I-ಪೇಸ್ ಗೆ 10-ಇಂಚಿನ ಟಚ್‌ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲ್ ಗಳಿಗಾಗಿ 5.5-ಇಂಚಿನ ಡಿಸ್ಪ್ಲೇ, 16-ವೇ ಹೀಟೆಡ್, ಕೂಲ್ಡ್ ಮತ್ತು ಪವರ್ಡ್ ಮೆಮೊರಿ ಫ್ರಂಟ್ ಸೀಟ್‌ಗಳು ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಫೀಚರ್ ಗಳನ್ನು ನೀಡಿದೆ.
ಸುರಕ್ಷತಾ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಪಾರ್ಕಿಂಗ್ ಅಸಿಸ್ಟ್ ಅನ್ನು ನೀಡಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧೆ
ಕೊನೆಯ ಬಾರಿಗೆ ಲಿಸ್ಟ್ ಮಾಡಿದಾಗ ಜಾಗ್ವಾರ್ I-ಪೇಸ್ ಬೆಲೆಯು ರೂ. 1.26 ಕೋಟಿ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಆಗಿತ್ತು. ಇದು ಮರ್ಸಿಡಿಸ್-ಬೆಂಜ್ EQC, ಆಡಿ e-tron ಮತ್ತು BMW iX ಗಳಿಗೆ ಪ್ರತಿಸ್ಪರ್ಧಿಯಾಗಿತ್ತು.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: I-ಪೇಸ್ ಆಟೋಮ್ಯಾಟಿಕ್