• English
  • Login / Register

ಫೀಚರ್‌ಗಳಲ್ಲಿ ರೆಗ್ಯುಲರ್‌ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ anonymous ಮೂಲಕ ಜನವರಿ 14, 2025 06:32 pm ರಂದು ಪ್ರಕಟಿಸಲಾಗಿದೆ

  • 12 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೊರಿಯನ್ ಮೂಲದ ಬ್ರ್ಯಾಂಡ್ ಆಗಿರುವ ಹುಂಡೈಯು ತನ್ನ ಕ್ರೆಟಾ ಇವಿಯ ಆಯಾಮಗಳ ಕೆಲವು  ಅಂಕಿಅಂಶಗಳನ್ನು ಘೋಷಿಸಿದೆ, ಹಾಗೆಯೇ ಇದು 22-ಲೀಟರ್ ಫ್ರಂಕ್‌ನೊಂದಿಗೆ ಬರಲಿದೆ

Hyundai Creta Electric Features

ಜನವರಿ 17 ರಂದು ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಿಡುಗಡೆಯಾಗಲಿದ್ದು, ಅದರ ಕುರಿತು ಇನ್ನಷ್ಟು ಅಪ್‌ಡೇಟ್‌ಗಳನ್ನು ನಾವು ಪಡೆದುಕೊಂಡಿದ್ದೇವೆ. ಕ್ರೆಟಾ ಇವಿ ಏನನ್ನು ಒಳಗೊಂಡಿರಲಿದೆ ಎಂಬುದರ ಕುರಿತು ಹೆಚ್ಚಿನ ಫೀಚರ್‌ಗಳನ್ನು ಮತ್ತು ಅದರ ವೀಲ್‌ಬೇಸ್ ಮತ್ತು ಪ್ರಾಯೋಗಿಕತೆಯ ಒಂದು ಅಂಶಗಳ ಬಗ್ಗೆ ವಿವರಗಳನ್ನು ಕಾರು ತಯಾರಕರು ಘೋಷಿಸಿದ್ದಾರೆ.

ಕ್ರೆಟಾ ಎಲೆಕ್ಟ್ರಿಕ್ಅನ್ನು ಬುಕ್ ಮಾಡಲು ಆಸಕ್ತಿ ಹೊಂದಿರುವವರು, ಅದನ್ನು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ 25,000 ರೂ.ಗಳ ಟೋಕನ್ ಮೊತ್ತಕ್ಕೆ ಕಾಯ್ದಿರಿಸಬಹುದು. ಹುಂಡೈ ಕ್ರೆಟಾ ಇವಿ ಕಾರು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ. 

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ವೀಲ್‌ಬೇಸ್ ಮತ್ತು ಫ್ರಂಕ್ ವಿವರಗಳು 

Hyundai Creta Electric Side

ಹ್ಯುಂಡೈಯು ಕ್ರೆಟಾದ ವೀಲ್‌ಬೇಸ್ ಉದ್ದವು 2,610 ಮಿಮೀ ಇರುತ್ತದೆ ಎಂದು ಘೋಷಿಸಿದೆ, ಇದು ಇಂಧನ ಚಾಲಿತ ಎಂಜಿನ್ (ICE) ಮೊಡೆಲ್‌ನಂತೆಯೇ ಇದೆ. ಉಳಿದ ಆಯಾಮಗಳನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಇದು 4,330 ಮಿಮೀ ಉದ್ದ, 1,790 ಮಿಮೀ ಅಗಲ ಮತ್ತು 1,635 ಮಿಮೀ ಎತ್ತರವನ್ನು ಹೊಂದಿರುವ ಸ್ಟ್ಯಾಂಡರ್ಡ್ ಕ್ರೆಟಾವನ್ನು ಹೋಲಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಕ್ರೆಟಾ ಎಲೆಕ್ಟ್ರಿಕ್ ನ ಬೂಟ್ ಸ್ಪೇಸ್ 433 ಲೀಟರ್ ಆಗಿದ್ದು, ಇದು ಸಹ ICE-ಚಾಲಿತ ಕಾರಿನಂತೆಯೇ ಇದೆ. ಅದರೊಂದಿಗೆ, ಕ್ರೆಟಾ ಎಲೆಕ್ಟ್ರಿಕ್ 22-ಲೀಟರ್ ಫ್ರಂಕ್ ಅನ್ನು ಸಹ ನೀಡುತ್ತದೆ, ಇದು ನಿಮ್ಮ ಚಾರ್ಜಿಂಗ್ ಕೇಬಲ್‌ಗಳು ಅಥವಾ ಇತರ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಉಪಯುಕ್ತವಾಗಿರುತ್ತದೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಹೆಚ್ಚಿನ ಫೀಚರ್‌ಗಳ ವಿವರಗಳು

Creta Electric Interior

ಹ್ಯುಂಡೈಯು ಕ್ರೆಟಾ ಎಲೆಕ್ಟ್ರಿಕ್ ನ ಇನ್ನೂ ಕೆಲವು ಫೀಚರ್‌ಗಳನ್ನು ಬಹಿರಂಗಪಡಿಸಿದೆ, ಇವುಗಳಲ್ಲಿ ಅದು ರೆಗ್ಯುಲರ್‌ಗಿಂತ ಹೆಚ್ಚಿನದನ್ನು ಹೊಂದಿರುತ್ತದೆ. ಅದು ಬಾಸ್ ಮೋಡ್‌ನೊಂದಿಗೆ 8-ವೇ ಚಾಲಿತ ಸಹ-ಚಾಲಕ ಸೀಟು, ಚಾಲಕನ ಚಾಲಿತ ಸೀಟಿಗೆ ಮೆಮೊರಿ ಫಂಕ್ಷನ್‌ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಕಾರನ್ನು ಲಾಕ್ ಅಥವಾ ಅನ್‌ಲಾಕ್ ಮಾಡಬಹುದಾದ ಡಿಜಿಟಲ್ ಕೀಯನ್ನು ಒಳಗೊಂಡಿದೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್‌ನ ನಿಯಂತ್ರಣಗಳು ರೆಗ್ಯುಲರ್‌ ಕ್ರೆಟಾದಲ್ಲಿ ಕಂಡುಬರುವ ಭೌತಿಕ ಬಟನ್‌ಗಳ ಬದಲಿಗೆ ಟಚ್‌-ಆಧಾರಿತ ಘಟಕವಾಗಿರುತ್ತವೆ ಎಂದು ಹ್ಯುಂಡೈ ಹೇಳುತ್ತದೆ.

ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟುಗಳಲ್ಲಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಂಬಿಯೆಂಟ್ ಲೈಟಿಂಗ್‌ಗಳು ಇತರ ಫೀಚರ್‌ಗಳಾಗಿವೆ.

ಇದನ್ನೂ ಓದಿ: 2024ರ ಹೆಚ್ಚು ಮಾರಾಟವಾದ ಕಾರುಗಳಲ್ಲಿ Tata Punchಗೆ ಮೊದಲ ಸ್ಥಾನ..! ಮಾರುತಿಯ 40 ವರ್ಷಗಳ ಪ್ರಾಬಲ್ಯವನ್ನು ಮುರಿದ ಟಾಟಾ..

ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್-2 ADAS ಮೂಲಕ ನೋಡಿಕೊಳ್ಳಲಾಗುತ್ತದೆ. 

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಪವರ್‌ಟ್ರೇನ್ ಆಯ್ಕೆಗಳು ಬಹಿರಂಗ 

Hyundai Creta Electric Powertrain

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುವುದು, ಎರಡೂ ವಿಭಿನ್ನ ಟ್ಯೂನ್‌ಗಳಲ್ಲಿ ತಮ್ಮದೇ ಆದ ಇ-ಮೋಟಾರ್ ಅನ್ನು ಹೊಂದಿವೆ. ವಿಶೇಷಣಗಳ ನೋಟ ಇಲ್ಲಿದೆ:

ವಿಶೇಷಣಗಳು

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಲಾಂಗ್ ರೇಂಜ್

ಪವರ್‌ (ಪಿಎಸ್‌)

135 ಪಿಎಸ್‌

171 ಪಿಎಸ್‌

ಬ್ಯಾಟರಿ ಪ್ಯಾಕ್‌

42 ಕಿ.ವ್ಯಾಟ್‌

51.4 ಕಿ.ವ್ಯಾಟ್‌

ಕ್ಲೈಮ್‌ ಮಾಡಲಾದ ರೇಂಜ್‌

390 ಕಿ.ಮೀ.

473 ಕಿ.ಮೀ.

ಕ್ರೆಟಾ ಎಲೆಕ್ಟ್ರಿಕ್‌ನ ಹೆಚ್ಚು ಶಕ್ತಿಶಾಲಿ ಆವೃತ್ತಿಯು ಕೇವಲ 7.9 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಸಾಧಿಸುತ್ತದೆ. ಅಲ್ಲದೆ, ಬ್ಯಾಟರಿ ಪ್ಯಾಕ್ ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ ಮತ್ತು ಕೇವಲ 58 ನಿಮಿಷಗಳಲ್ಲಿ 20 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Hyundai Creta Electric

 ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಸುಮಾರು 17 ಲಕ್ಷ ರೂ. (ಎಕ್ಸ್ ಶೋ ರೂಂ) ಆಗುವ ನಿರೀಕ್ಷೆಯಿದೆ. ಇದು ಟಾಟಾ ಕರ್ವ್ ಇವಿ, ಮಹೀಂದ್ರಾ ಬಿಇ 6, ಎಂಜಿ ಝಡ್ಎಸ್ ಇವಿ ಹಾಗೂ ಮುಂಬರುವ ಮಾರುತಿ ಸುಜುಕಿ ಇ ವಿಟಾರಾ ಮತ್ತು ಟೊಯೋಟಾ ಅರ್ಬನ್ ಕ್ರೂಸರ್‌ಗಳೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. 

ಇದನ್ನೂ ಓದಿ: ಮಾರುತಿ ಇ ವಿಟಾರಾ: ಏನನ್ನು ನಿರೀಕ್ಷಿಸಬಹುದು ?

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 

was this article helpful ?

Write your Comment on Hyundai ಕ್ರೆಟಾ ಎಲೆಕ್ಟ್ರಿಕ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience