• English
  • Login / Register

ಹೊಸ ಬಣ್ಣ ಆಯ್ಕೆಗಳು ಮತ್ತು ವೇರಿಯೆಂಟ್‌ನೊಂದಿಗೆ 2025ರ ಆಪ್‌ಡೇಟ್‌ಅನ್ನು ಪಡೆದ Tata Nexon

ಟಾಟಾ ನೆಕ್ಸಾನ್‌ ಗಾಗಿ dipan ಮೂಲಕ ಜನವರಿ 15, 2025 06:29 am ರಂದು ಮಾರ್ಪಡಿಸಲಾಗಿದೆ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಿಡುಗಡೆಯ ಸಮಯದಲ್ಲಿ ನೆಕ್ಸಾನ್ ಅನ್ನು ಪ್ರದರ್ಶಿಸಲಾಗಿದ್ದ ಫಿಯರ್‌ಲೆಸ್ ಪರ್ಪಲ್ ಬಣ್ಣವನ್ನು ಸ್ಥಗಿತಗೊಳ್ಳಿಸಲಾಗಿದೆ

Tata Nexon Updated For 2025 With New Colour Options And Variants

  • ಆಪ್‌ಡೇಟ್‌ ಮಾಡಿದ ಟಾಟಾ ನೆಕ್ಸಾನ್‌ನ ಬೆಲೆಗಳು 8 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.

  • ಇದು ಗ್ರಾಸ್‌ಲ್ಯಾಂಡ್ ಬೀಜ್ ಮತ್ತು ರಾಯಲ್ ಬ್ಲೂ ಎಂಬ ಎರಡು ಹೊಸ ಬಣ್ಣದ ಥೀಮ್‌ಗಳೊಂದಿಗೆ ಬರುತ್ತದೆ.

  • ಪ್ಯೂರ್ ಪ್ಲಸ್, ಕ್ರಿಯೇಟಿವ್ ಮತ್ತು ಕ್ರಿಯೇಟಿವ್ ಪ್ಲಸ್ ಪಿಎಸ್ ಎಂಬ ಮೂರು ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

  • ಬಾಹ್ಯ ಮತ್ತು ಒಳಾಂಗಣ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

  • ಇದು ಟರ್ಬೊ-ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುವುದನ್ನು ಮುಂದುವರೆಸಲಿದೆ.

ಟಾಟಾ ಟಿಯಾಗೊ, ಟಿಯಾಗೊ ಇವಿ ಮತ್ತು ಟಿಗೋರ್‌ಗಾಗಿ MY2025 ಆಪ್‌ಡೇಟ್‌ಗಳನ್ನು ಇತ್ತೀಚೆಗೆ ಪರಿಚಯಿಸಿದ ನಂತರ, ಟಾಟಾ ನೆಕ್ಸಾನ್ ತನ್ನ ಮೊಡೆಲ್‌ ಇಯರ್‌ನ ಆಪ್‌ಡೇಟ್‌ಅನ್ನು ಪಡೆದುಕೊಂಡಿದೆ. ಈ ಆಪ್‌ಡೇಟ್‌ ರಾಯಲ್ ಬ್ಲೂ ಮತ್ತು ಗ್ರಾಸ್‌ಲ್ಯಾಂಡ್ ಬೀಜ್ ಎಂಬ ಎರಡು ಹೊಸ ಬಣ್ಣ ಆಯ್ಕೆಗಳನ್ನು ಮತ್ತು ಮೂರು ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಫಿಯರ್‌ಲೆಸ್ ಪರ್ಪಲ್ ಬಣ್ಣದ ಥೀಮ್ ಅನ್ನು ಈಗ ಸ್ಥಗಿತಗೊಳಿಸಲಾಗಿದೆ. ನೆಕ್ಸಾನ್‌ನಲ್ಲಿ ಈಗ ಬಿಡುಗಡೆಯಾಗುತ್ತಿರುವ ಮೂರು ಹೊಸ ವೇರಿಯೆಂಟ್‌ಗಳನ್ನು ನೋಡೋಣ:

ಹೊಸ ವೇರಿಯೆಂಟ್‌

ಪ್ಯೂರ್‌ ಪ್ಲಸ್‌

ಬೆಲೆ: 9.69 ಲಕ್ಷ ರೂ.ಗಳಿಂದ

ಹೊಸ ಪ್ಯೂರ್ ಪ್ಲಸ್ ವೇರಿಯೆಂಟ್‌ ಸ್ಮಾರ್ಟ್ ಪ್ಲಸ್ ಎಸ್ ಮತ್ತು ಪ್ಯೂರ್ ಪ್ಲಸ್ ಎಸ್ ವೇರಿಯೆಂಟ್‌ಗಳ ನಡುವೆ ಸ್ಥಾನವನ್ನು ಪಡೆಯುತ್ತದೆ. ಆದ್ದರಿಂದ, ಇದು ಹಿಂದಿನ ಸ್ಮಾರ್ಟ್ ಪ್ಲಸ್ ಎಸ್‌ ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ಈ ಫೀಚರ್‌ಗಳನ್ನು ಪಡೆಯುತ್ತದೆ:

  • 10.25-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • 4 ಸ್ಪೀಕರ್‌ಗಳು

  • ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್

  • ಹೆಚ್‌ಡಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

  • ಆಟೋ-ಫೋಲ್ಡಿಂಗ್ ಔಟ್‌ಸೈಡ್ ರಿಯರ್‌ವ್ಯೂ ಮಿರರ್‌ಗಳು (ORVM ಗಳು)

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್

  • ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್

  • ಹಿಂಭಾಗದ AC ವೆಂಟ್‌ಗಳು

  • ಬಾಡಿ-ಕಲರ್‌ನ ಡೋರ್ ಹ್ಯಾಂಡಲ್‌ಗಳು

  • ಶಾರ್ಕ್ ಫಿನ್ ಆಂಟೆನಾ

ಈ ವೇರಿಯೆಂಟ್‌ ಮ್ಯಾನ್ಯುವಲ್‌ ಮತ್ತು ಆಟೋಮ್ಯಾಟಿಕ್‌ ಸೇರಿದಂತೆ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳನ್ನು ನೀಡುತ್ತದೆ. ಇದರ ವಿವರಗಳು ಇಲ್ಲಿವೆ:

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್+ಸಿಎನ್‌ಜಿ

1.5-ಲೀಟರ್ ಡೀಸೆಲ್

6ಮ್ಯಾನ್ಯುವಲ್‌, 6ಎಎಂಟಿ

6ಮ್ಯಾನ್ಯುವಲ್‌

6ಮ್ಯಾನ್ಯುವಲ್‌, 6ಎಎಂಟಿ

ಕ್ರಿಯೇಟಿವ್‌

ಬೆಲೆ: 10.99 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ)

ಹೊಸ ಮಿಡ್-ಸ್ಪೆಕ್ ಕ್ರಿಯೇಟಿವ್ ವೇರಿಯೆಂಟ್‌ ಪ್ಯೂರ್ ಪ್ಲಸ್ ಎಸ್ ಮತ್ತು ಕ್ರಿಯೇಟಿವ್ ಪ್ಲಸ್ ಎಸ್ ವೇರಿಯೆಂಟ್‌ಗಳ ನಡುವಿನ ಸ್ಥಾನದಲ್ಲಿದೆ. ಹಿಂದಿನ ಪ್ಯೂರ್ ಪ್ಲಸ್ ಎಸ್ ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ಇದು ಈ ಕೆಳಗಿನ ಫೀಚರ್‌ಗಳನ್ನು ಪಡೆಯುತ್ತದೆ. 

  • 360-ಡಿಗ್ರಿ ಕ್ಯಾಮೆರಾ

  • 16-ಇಂಚಿನ ಅಲಾಯ್ ವೀಲ್‌ಗಳು

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಟಚ್-ಸಕ್ರಿಯಗೊಳಿಸಿದ ಆಟೋ ಎಸಿ ಪ್ಯಾನಲ್

  • ಕ್ರೂಸ್ ಕಂಟ್ರೋಲ್‌

  • ಹಿಂಭಾಗದ ವೈಪರ್ ಮತ್ತು ವಾಷರ್

  • ಯುಎಸ್‌ಬಿ ಟೈಪ್‌-ಎ ಮತ್ತು ಟೈಪ್‌-ಸಿ ಚಾರ್ಜರ್‌ಗಳು

  • ಕೂಲ್ಡ್ ಗ್ಲೋವ್‌ಬಾಕ್ಸ್

  • ಟಚ್-ಸಕ್ರಿಯಗೊಳಿಸಿದ ಸ್ಟೀರಿಂಗ್ ವೀಲ್ ಕಂಟ್ರೋಲ್‌ಗಳು

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್ + ಸಿಎನ್‌ಜಿ

1.5-ಲೀಟರ್ ಡೀಸೆಲ್

6ಮ್ಯಾನ್ಯುವಲ್‌, 6ಎಎಂಟಿ, 7ಡಿಸಿಟಿ

6ಮ್ಯಾನ್ಯುವಲ್‌

6ಮ್ಯಾನ್ಯುವಲ್‌, 6ಎಎಂಟಿ

ಕ್ರಿಯೇಟಿವ್ ಪ್ಲಸ್ ಪಿಎಸ್

ಬೆಲೆ: 12.29 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ)

ಹೊಸ ಕ್ರಿಯೇಟಿವ್ ಪ್ಲಸ್ ಪಿಎಸ್ ಟಾಪ್‌ ವೇರಿಯೆಂಟ್‌ಗಿಂತ ಒಂದು ಕೆಳಗಿನ ವೇರಿಯೆಂಟ್‌ ಆಗಿದ್ದು, ಇದು ಕ್ರಿಯೇಟಿವ್ ಪ್ಲಸ್ ಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ನಡುವಿನ ಸ್ಥಾನವನ್ನು ಪಡೆಯುತ್ತದೆ. 

  • ಪನೋರಮಿಕ್ ಸನ್‌ರೂಫ್

  • ದ್ವಿ-ಎಲ್‌ಇಡಿ ಹೆಡ್‌ಲ್ಯಾಂಪ್

  • ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

  • ಕಾರ್ನರಿಂಗ್ ಫಂಕ್ಷನ್‌ನೊಂದಿಗೆ ಮುಂಭಾಗದ ಫಾಗ್ ಲ್ಯಾಂಪ್‌ಗಳು

  • ವೈರ್‌ಲೆಸ್ ಫೋನ್ ಚಾರ್ಜರ್

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಹಿಂಭಾಗದ ಡಿಫಾಗರ್

  • ಕಪ್‌ಹೋಲ್ಡರ್‌ನೊಂದಿಗೆ ಹಿಂಭಾಗದ ಸೀಟ್ ಆರ್ಮ್‌ರೆಸ್ಟ್

  • ಕೀಲೆಸ್ ಎಂಟ್ರಿ

  • ಹಿಂಭಾಗದ ಪಾರ್ಸೆಲ್ ಟ್ರೇ

  • 6 ಸ್ಪೀಕರ್‌ಗಳು (2 ಟ್ವೀಟರ್‌ಗಳು ಸೇರಿದಂತೆ)

  • ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

ಈ ವೇರಿಯೆಂಟ್‌ ಅನ್ನು ಎಲ್ಲಾ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮ್ಯಾನ್ಯುವಲ್‌ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದರ ವಿವರಗಳು ಇಲ್ಲಿವೆ:

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್+ಸಿಎನ್‌ಜಿ

1.5-ಲೀಟರ್ ಡೀಸೆಲ್

6ಮ್ಯಾನ್ಯುವಲ್‌, 7ಡಿಸಿಟಿ

6ಮ್ಯಾನ್ಯುವಲ್‌

6ಮ್ಯಾನ್ಯುವಲ್‌, 6ಎಎಂಟಿ

ಇತರ ಆಪ್‌ಡೇಟ್‌ಗಳು

Tata Nexon 2023 Cabin

ಟಾಟಾ ನೆಕ್ಸಾನ್‌ನಲ್ಲಿರುವ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ವಿನ್ಯಾಸ ಮತ್ತು ಫೀಚರ್‌ಗಳು ಸೇರಿದಂತೆ ಇತರ ವಿಷಯಗಳು ಒಂದೇ ಆಗಿವೆ.

ಫೀಚರ್‌ಗಳ ವಿಷಯದಲ್ಲಿ, ಟಾಟಾ ನೆಕ್ಸಾನ್ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು(ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗೆ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ಗೆ), ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ ಎಸಿ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತಾ ವಿಷಯದಲ್ಲಿ, ಇದು ಗ್ಲೋಬಲ್ NCAP ಮತ್ತು ಭಾರತ್ NCAP ಎರಡರಿಂದಲೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಇದರ ಸುರಕ್ಷತಾ ಪ್ಯಾಕೇಜ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಫೀಚರ್‌ಗಳನ್ನು ಒಳಗೊಂಡಿದೆ. 

ಪವರ್‌ಟ್ರೈನ್ ಆಯ್ಕೆಗಳು

ಪವರ್‌ಟ್ರೇನ್ ಆಯ್ಕೆಗಳು ಸಹ ಒಂದೇ ಆಗಿರುತ್ತವೆ, ಅದರ ವಿವರಗಳು ಈ ಕೆಳಗಿನಂತಿವೆ:

Tata Nexon 2023

ಎಂಜಿನ್‌

1.2-ಲೀಟರ್ ಟರ್ಬೋ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್ (ಸಿಎನ್‌ಜಿ ಮೋಡ್)

1.5 ಲೀಟರ್ ಡೀಸೆಲ್

ಪವರ್‌

120 ಪಿಎಸ್‌

100 ಪಿಎಸ್‌

118 ಪಿಎಸ್‌

ಟಾರ್ಕ್‌

170ಎನ್‌ಎಮ್‌

170 ಎನ್‌ಎಮ್‌

260 ಎನ್‌ಎಮ್‌

ಗೇರ್‌ಬಾಕ್ಸ್‌*

5-ಸ್ಪೀಡ್ MT, 6-ಸ್ಪೀಡ್ MT, 6-ಸ್ಪೀಡ್ AMT, 7-ಸ್ಪೀಡ್ DCT

6-ಸ್ಪೀಡ್ MT

6-ಸ್ಪೀಡ್ MT, 6-ಸ್ಪೀಡ್ AMT

*MT = ಮ್ಯಾನುವಲ್ ಟ್ರಾನ್ಸ್‌ಮಿಷನ್;

AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್;

AMT = ಆಟೋಮೇಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್;

DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್‌ನ ಬೆಲೆ 8 ಲಕ್ಷ ರೂ.ಗಳಿಂದ (ಪರಿಚಯಾತ್ಮಕ ಎಕ್ಸ್-ಶೋರೂಂ, ಭಾರತಾದ್ಯಂತ) ಆರಂಭವಾಗಲಿದ್ದು, ಸಂಪೂರ್ಣ ಬೆಲೆ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ನೆಕ್ಸಾನ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ನಂತಹ ಸಬ್‌-4ಎಮ್‌ ಎಸ್‌ಯುವಿಗಳೊಂದಿಗೆ ಪ್ರತಿಸ್ಪರ್ಧಿಯಾಗಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Tata ನೆಕ್ಸಾನ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience