ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್’ ಆವೃತ್ತಿ; ಆರಂಭಿಕ ಬೆಲೆ ಎಷ್ಟು ಗೊತ್ತೇ ?
ಕಿಯಾ ಸೊನೆಟ್ 2020-2024 ಗಾಗಿ tarun ಮೂಲಕ ಮೇ 12, 2023 04:35 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ಹೊಸ ವರ್ಧಿತ ನೋಟದ ಆವೃತ್ತಿ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದೆ.
- ಸೂಕ್ಷ್ಮವಾಗಿ ಸರಿಹೊಂದಿಸಲಾದ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳು ಮತ್ತು ಟ್ಯಾಂಗರಿನ್ ಆಕ್ಸೆಂಟ್ ಹೊಂದಿರುವ ಸೈಡ್ ಡೋರ್ ಕ್ಲಾಡಿಂಗ್ ಪಡೆದಿದೆ
- ಇಂಟೀರಿಯರ್ ಮತ್ತು ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
- ಅದೇ 1-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಮತ್ತು 1.5-ಲೀಟರ್ ಡೀಸೆಲ್ ಇಂಜಿನ್ ಅನ್ನು ಹೊಂದಿದ್ದು iMT ಮತ್ತು ಆಟೋಮ್ಯಾಟಿಕ್ ಆಯ್ಕೆಯೂ ಇದೆ.
- HTX ವೇರಿಯೆಂಟ್ ಗಿಂತ ರೂ 40,000 ಹೆಚ್ಚಿದೆ.
ಕಿಯಾ ಸೋನೆಟ್ ಲೈನ್ಅಪ್‌ನಲ್ಲಿ ಸದ್ದಿಲ್ಲದೇ ಹೊಸ ‘ಆರಾಕ್ಸ್’ ಆವೃತ್ತಿಯನ್ನು ಪ್ರಾರಂಭಿಸಿದೆ. ಈ ಸೀಮಿತ ರನ್ ಆವೃತ್ತಿಯು ಪ್ರಸ್ತುತ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದ್ದು ಇದರ ಬೆಲೆ ರೂ 11.85 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ.
HTX AE ಆರಾಕ್ಸ್ ಆವೃತ್ತಿ |
ಬೆಲೆ |
ಟರ್ಬೋ-iMT |
ರೂ 11.85 ಲಕ್ಷ |
ಟರ್ಬೋ-DCT |
ರೂ 12.39 ಲಕ್ಷ |
ಡೀಸೆಲ್-iMT |
ರೂ 12.65 ಲಕ್ಷ |
ಡೀಸೆಲ್-AT |
ರೂ 13.45 ಲಕ್ಷ |
ಈ ಆರಾಕ್ಸ್ ಆವೃತ್ತಿಯು ವಾರ್ಷಿಕೋತ್ಸವ ಆವೃತ್ತಿಗೆ ನಿಖರವಾದ ಬದಲಿಯಾಗುವುದಿಲ್ಲ, ಆದರೆ ಎರಡನೆಯದಕ್ಕೆ ಮಾತ್ರ ನೀವು ಈ ಪ್ಯಾಕೇಜ್ ಪಡೆಯುತ್ತೀರಿ. ಹಾಗಾಗಿ ವಾರ್ಷಿಕೋತ್ಸವ ಆವೃತ್ತಿಗೆ ಹೋಲಿಸಿದರೆ ಇದಕ್ಕೆ ಯಾವುದೇ ಹೆಚ್ಚುವರಿ ಬೆಲೆ ಇರುವುದಿಲ್ಲ ಮತ್ತು ಇದರ ಬೆಲೆ ರೂ 11.85 ಲಕ್ಷದಿಂದ ರೂ 13.45 ಲಕ್ಷದ ತನಕ ಇದೆ. HTX ವೇರಿಯೆಂಟ್‌ಗೆ ಹೋಲಿಸಿದರೆ, ಇದು ರೂ 40,000ದಷ್ಟು ದುಬಾರಿಯಾಗಿದೆ.
ಇದರಲ್ಲಿ ಹೊಸತೆನಿದೆ?
ಆರಾಕ್ಸ್ ಆವೃತ್ತಿಯಲ್ಲಿ ಕೇವಲ ಕಾಸ್ಮೆಟಿಕ್ ಬದಲಾವಣೆಯನ್ನು ಮಾತ್ರ ಮಾಡಲಾಗಿದೆ. ಅಪ್ ಫ್ರಂಟ್‌ನಲ್ಲಿ ಸೂಕ್ಷ್ಮವಾಗಿ ಸರಿಹೊಂದಿಸಲಾದ ಸ್ಕಿಡ್ ಪ್ಲೇಟ್ ಡಿಸೈನ್ ಮತ್ತು ಟ್ಯಾಂಗರಿನ್ ಆಕ್ಸೆಂಟ್‌ಗಳನ್ನು ಪಡೆದಿದೆ. ಗ್ರಿಲ್ ಮೇಲೂ ಇದೇ ರೀತಿಯಾದ ಫಿನಿಷಿಂಗ್ ಮತ್ತು ವಿಶಿಷ್ಟವಾದ ‘ಆರಾಕ್ಸ್’ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಅದೇ 16-ಇಂಚಿನ ಅಲಾಯ್ ವ್ಬೀಲ್‌ಗಳಿದ್ದು ಟ್ಯಾಂಗರಿನ್ ವ್ಲೀಲ್ ಕ್ಯಾಪ್‌ನಿಂದ ಸುತ್ತುವರಿದಿದೆ. ಸೈಡ್ ಪ್ಲೇಟ್ ಟ್ಯಾಂಗರಿನ್ ಡೋರ್ ಗಾರ್ನಿಶ್ ಹೊಂದಿರುವ ಹೊಸ ಸ್ಕಿಡ್ ಪ್ಲೇಟ್‌ನಿಂದ ಇನ್ನಷ್ಟು ವರ್ಧಿಸಿದೆ. ರಿಯರ್ ಸ್ಕಿಡ್ ಪ್ಲೇಟ್ ಕೂಡಾ ಮರುವಿನ್ಯಾಸಗೊಳಿಸಲಾದ ಟ್ಯಾಂಗರಿನ್‌ನಿಂದ ಸೂಕ್ಷ್ಮವಾಗಿ ಸರಿಹೊಂದಿಸಲಾಗಿದೆ.
HTX ವೇರಿಯೆಂಟ್ ಅನ್ನು ಆರು ಶೇಡ್‌ಗಳಲ್ಲಿ ಪಡೆಯಬಹುದು, ಆದರೆ ಈ ಆವೃತ್ತಿಯನ್ನು ಗ್ರ್ಯಾವಿಟಿ ಗ್ರೇ, ಆರೋರಾ ಬ್ಲ್ಯಾಕ್ ಪರ್ಲ್, ಸ್ಪಾರ್ಕ್ಲಿಂಗ್ ಸಿಲ್ವರ್ ಮತ್ತು ಗ್ಲೇಷಿಯರ್ ವೈಟ್ ಪರ್ಲ್ ಎಂಬ ಕೇವಲ ನಾಲ್ಕು ಆಯ್ಕೆಗಳಲ್ಲಿ ಮಾತ್ರ ಪಡೆಯಬಹುದು.
ಇದನ್ನೂ ಓದಿ: ರಹಸ್ಯ ಪಾದಾರ್ಪಣೆ ಮಾಡಲಿದೆ ನವೀಕೃತ ಕಿಯಾ ಸೋನೆಟ್; 2024 ರಲ್ಲಿ ಭಾರತದಲ್ಲಿ ಬಿಡುಗಡೆ
ಇದರ ಇಂಟೀರಿಯರ್ ಥೀಮ್‌ಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಬ್ಲ್ಯಾಕ್ ಮತ್ತು ಬೇಶ್ ಇಂಟೀರಿಯರ್ ಮತ್ತು ಲೆದರೆಟ್ ಸೀಟುಗಳು ಹಾಗೆಯೇ ಇವೆ.
ಫೀಚರ್‌ಗಳು ನವೀಕರಣಗಳನ್ನು ಪಡೆದಿವೆಯೆ?
(ಸೋನೆಟ್ GTX + ಉಲ್ಲೇಖಕ್ಕಾಗಿ ಬಳಸಿದ ಚಿತ್ರ)
ಸೋನೆಟ್ ಆರಾಕ್ಸ್ ಆವೃತ್ತಿಯಲ್ಲಿ ಯಾವುದೇ ಹೆಚ್ಚುವರಿ ಫೀಚರ್‌ಗಳನ್ನು ಸೇರಿಸಲಾಗಿಲ್ಲ. ಇದು ಮೊದಲ್ಲಿದ್ದಂತೆಯೇ LED ಹೆಡ್‌ಲ್ಯಾಂಪ್‌ಗಳು, ಇಲೆಕ್ಟ್ರಿಕ್ ಸನ್‌ರೂಫ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 8-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್, ಆಟೋಮ್ಯಾಟಿಕ್ AC ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು (ಆಟೋಮ್ಯಾಟಿಕ್ ವೇರಿಯೆಂಟ್‌ಗಳಿಗೆ ಮಾತ್ರ) ಹೊಂದಿದೆ.
ಸುರಕ್ಷತೆಗಾಗಿ ನಾಲ್ಕು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮರಾ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಇವೆ.
ಪವರ್‌ಟ್ರೇನ್ ಆಯ್ಕೆಗಳು
ಇದನ್ನೂ ಓದಿ: 2022ರಲ್ಲಿ ಮಾರಾಟವಾದ 3 ಕಿಯಾ ಸೋನೆಟ್‌ಗಳಲ್ಲಿ 1 iMT ಆಗಿತ್ತು
ಈ ಸೋನೆಟ್ ಆರಾಕ್ಸ್ ಆವೃತ್ತಿಯು 120PS 1-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 115PS 1.5-ಲೀಟರ್ ಡೀಸೆಲ್ ಇಂಜಿನ್‌ಗಳೊಂದಿಗೆ ಲಭ್ಯವಿದೆ. ಈ ಟರ್ಬೋ ಪೆಟ್ರೋಲ್ ಯೂನಿಟ್ ಅನು 6-ಸ್ಪೀಡ್ iMT (ಮ್ಯಾನುವಲ್ ಇಲ್ಲದ ಕ್ಲಚ್) ಮತ್ತು 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ನೊಂದಿಗೆ ಪಡೆಯಬಹುದು, ಹಾಗೆಯೇ ಡೀಸೆಲ್ ಅನ್ನು 6-ಸ್ಪೀಡ್ iMT ಮತ್ತು 6-ಸ್ಪೀಡ್ AT ಜೊತೆಗೆ ಜೋಡಿಸಲಾಗಿದೆ.
ಇನ್ನಷ್ಟು ಓದಿ : ಕಿಯಾ ಸೋನೆಟ್ ಆನ್ ರೋಡ್ ಬೆಲೆ