Mercedes-AMG G 63 ಎಸ್‌ಯುವಿಯೊಂದಿಗೆ ಮತ್ತೊಂದು ಎಕ್ಸ್‌ಕ್ಲೂಸಿವ್‌ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಕ್ಲಾಸಿಕ್ ನಿಂದ ಆಧುನಿಕ ವಾಹನಗಳ ತನಕ, ವಿವಿಧ ಕಾರುಗಳನ್ನು ಸಂಗ್ರಹಿಸುವ ವಿಷಯದಲ್ಲಿ ಈ ಮಾಜಿ ಕ್ರಿಕೆಟಿಗ ಹೆಸರುವಾಸಿಯಾಗಿದ್ದಾರೆ
ಧೋನಿಯ ಬಳಿ ಇರುವ ಇತರ ಕಾರುಗಳು
ಈ ಮಾಜಿ ಕ್ರಿಕೆಟಿಗನ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಕೆಂಪು ಬಣ್ಣದ ಜೀಪ್ ಚೆರೊಕೀ ಟ್ರ್ಯಾಕ್ ಹಾಕ್ SUV ಸಹ ಸೇರಿದ್ದು, ಇದನ್ನು ಅವರ ಪತ್ನಿ ಸಾಕ್ಷಿ ಧೋನಿ ಅವರು ಉಡುಗೊರೆಯಾಗಿ ನೀಡಿದ್ದರು. ‘ಕ್ಯಾಪ್ಟನ್ ಕೂಲ್’ ಎಂದು ಸಹ ಹೆಸರುವಾಸಿಯಾಗಿರುವ ಧೋನಿಯು ಇತರ ವಿಂಟೇಜ್ ಕಾರುಗಳ ಜೊತೆಗೆ ಕೆಂಪು ಮತ್ತು ಕಪ್ಪು ಬಣ್ಣದ ಮಹೀಂದ್ರಾ ಸ್ಕೋರ್ಪಿಯೋ, ಹಿಂದಿನ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್, ಮತ್ತು ಹಸಿರು ಬಣ್ಣದ ನಿಸಾನ್ ಜೋಂಗಾ (2019ರಲ್ಲಿ ಖರೀದಿಸಿ ಪೂರ್ವಸ್ಥಿತಿಗೆ ತರಲಾಯಿತು) ಇತ್ಯಾದಿಗಳನ್ನು ಹೊಂದಿದ್ದಾರೆ.
ಇದನ್ನು ಸಹ ನೋಡಿರಿ: ರೂ. 1 ಕೋಟಿ ಗೆದ್ದ ನಂತರ ಹ್ಯುಂಡೈ i20 ಪಡೆದ ಕೆ.ಬಿ.ಸಿ 2023 ಸ್ಪರ್ಧಿ ಮಯಾಂಕ್
ಮರ್ಸಿಡಿಸ್ AMG G 63 ಕುರಿತು ಹೆಚ್ಚಿನ ಮಾಹಿತಿ
ಮರ್ಸಿಡಿಸ್ SUV ವಾಹನವು ರಸ್ತೆ ಮೇಲಿನ ತನ್ನ ಗಡಸುತನ, ಸಾಮರ್ಥ್ಯ ಮತ್ತು ಆಫ್ ರೋಡ್ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಇದು 9 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 4-ಲೀಟರ್ V8 ಬೈ ಟರ್ಬೊ ಪೆಟ್ರೋಲ್ ಎಂಜಿನ್ (585 PS/850 Nm) ನೊಂದಿಗೆ ಬರುತ್ತದೆ. AMG G 63 ಕಾರು 4.5 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗವನ್ನು ಗಳಿಸಲಿದ್ದು 220 kmph ನಷ್ಟು ಗರಿಷ್ಠ ವೇಗವನ್ನು ಪಡೆಯಬಲ್ಲದು. AMG G 63 ಕಾರು ಪ್ರಮಾಣಿತ 4-ವೀಲ್ ಡ್ರೈವ್ (4WD) ಅನ್ನು ಹೊಂದಿದೆ.
ಇದು ಡ್ಯುವಲ್ 12.3-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ ಮೆಂಟ್ ಗಾಗಿ ಹಾಗೂ ಇನ್ನೊಂದು ಇನ್ಸ್ ಟ್ರುಮೆಂಟೇಶನ್ ಗಾಗಿ), 590W 15-ಸ್ಪೀಕರ್ ಬರ್ಮಿಸ್ಟರ್ ಸೌಂಡ್ ಸಿಸ್ಟಂ ಮತ್ತು ಸಿಂಗಲ್ ಪೇನ್ ಸನ್ ರೂಫ್ ಅನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಇದು 9 ಏರ್ ಬ್ಯಾಗ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅನ್ನು ಹೊಂದಿದೆ.
ಇದನ್ನು ಸಹ ನೋಡಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಧೋನಿಯ ಹೊಸ ಕಾರಿನ ಬಗ್ಗೆ ನಿಮಗೆ ಏನನ್ನಿಸುತ್ತದೆ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮರ್ಸಿಡಿಸ್-ಬೆಂಜ್ G-ಕ್ಲಾಸ್ ಅಟೋಮ್ಯಾಟಿಕ್