ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05
ಸೆಪ್ಟೆಂಬರ್ 12, 2023 10:54 am ರಂದು ansh ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಮೂರು EV ಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, 2025ರ ಕೊನೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ
- ಇವುಗಳ ಕಾನ್ಸೆಪ್ಟ್ ವರ್ಶನ್ ಗಳಿಗೆ ಹೋಲಿಸಿದರೆ, ಈ ಎಲೆಕ್ಟ್ರಿಕ್ SUV ಗಳ ವಿನ್ಯಾಸವು ಹೆಚ್ಚೇನೂ ಬದಲಾಗಿಲ್ಲ.
- ಇವುಗಳಲ್ಲಿ ಒಂದು EV ಯು 200kmph ತನಕ ಸಾಗಬಲ್ಲದು.
- ಈ ಎಲ್ಲಾ ಮೂರು ಮಾದರಿಗಳು ಈ ಕಾರು ತಯಾರಕ ಸಂಸ್ಥೆಯ INGLO ಆರ್ಕಿಟೆಕ್ಚರ್ ಆನ್ನು ಆಧರಿಸಿವೆ.
- XUV.e8 ವಾಹನವು 2024 ರ ಡಿಸೆಂಬರ್ ನಲ್ಲಿ ರಸ್ತೆಗಿಳಿದರೆ, XUV.e9 ಕಾರು 2025ರ ಏಪ್ರಿಲ್ ತಿಂಗಳಿನಲ್ಲಿ ಮತ್ತು BE.05 ಯು 2025 ರ ಕೊನೆಗೆ ಮಾರುಕಟ್ಟೆಗೆ ಬರಲಿದೆ.
ವಿಶ್ವ EV ದಿನದ (ಸೆಪ್ಟೆಂಬರ್ 9) ಅಂಗವಾಗಿ, ಮಹೀಂದ್ರಾ ಸಂಸ್ಥೆಯು, ಹೊಸ ಪ್ಲಾಟ್ ಫಾರ್ಮ್ ಆಧರಿಸಿ ಹೊರಬರಲಿರುವ ತನ್ನ ಎಲೆಕ್ಟ್ರಾನಿಕ್ SUV ಗಳ ಪುಟ್ಟ ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಇದು ಟೆಸ್ಟ್ ಟ್ರ್ಯಾಕ್ ನಲ್ಲಿ ಮಹೀಂದ್ರಾ XUV.e8 (ಎಲೆಕ್ಟ್ರಿಕ್ XUV700), ಮಹೀಂದ್ರಾ XUV.09 ಮತ್ತು ಮಹೀಂದ್ರಾ BE.05 ಕಾರುಗಳು ಏನು ಮಾಡಬಲ್ಲವು ಎಂಬುದನ್ನು ತೋರಿಸಿದೆ. ನಾವು ಪರೀಕ್ಷಾರ್ಥ ಹಂತದಲ್ಲಿರುವ XUV.e8 ಮತ್ತು BE.05 ನ ಸ್ಪೈ ಶಾಟ್ ಗಳನ್ನು ನೋಡಿದ್ದರೂ, ಇದೇ ಮೊದಲ ಬಾರಿಗೆ XUV.e9 ವಾಹನವು ಕಣ್ಣಿಗೆ ಬಿದ್ದಿದೆ. ಈ ವೀಡಿಯೋದಲ್ಲಿ ಕಾರುಗಳು ಪರಸ್ಪರ ಸ್ಪರ್ಧಿಸುತ್ತಿರುವುದನ್ನು ನಾವು ಕಾಣಬಹುದು. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.
ವಿನ್ಯಾಸ
ಎಲ್ಲಾ ಮೂರು SUV ಗಳನ್ನು ಸಾಕಷ್ಟು ಮಟ್ಟಿಗೆ ಮರೆಮಾಚಲಾಗಿದ್ದರೂ, ಕ್ಯಾಮರಾದ ಬದಲಿಗೆ ಸಾಮಾನ್ಯ ORVM ಗಳೊಂದಿಗೆ, ಒಟ್ಟಾರೆ ವಿನ್ಯಾಸವು ಅವುಗಳ ಕಾನ್ಸೆಪ್ಟ್ ವರ್ಶನ್ ಗಳನ್ನೇ ಹೋಲುತ್ತದೆ. XUV.e8 ಕಾರು ತನ್ನ ICE ಆವೃತ್ತಿಯನ್ನೇ ಹೊಂದಿದ್ದರೆ, XUV700 ವಾಹನವು, EV ಗೆ ಸಂಬಂಧಿತ ಫೇಶಿಯಾ ಹೊರತುಪಡಿಸಿ ಎಲ್ಲಾ ರೀತಿಯಲ್ಲೂ ICE SUVಯನ್ನು ಹೋಲುತ್ತದೆ. ಆದರೆ ಈ ಪರೀಕ್ಷಾ ವಾಹನವು ಪ್ಯಾನೊರಾಮಿಕ್ ಸನ್ ರೂಫ್ ಜೊತೆಗೆಯೇ ಬರಲಿದೆ.
ಇದನ್ನು ಸಹ ಓದಿರಿ: ಪರೀಕ್ಷೆ ವೇಳೆ ಮತ್ತೆ ಕಣ್ಣಿಗೆ ಬಿದ್ದ XUV300 ಫೇಸ್ ಲಿಫ್ಟ್, ಈ ಬಾರಿ ದೊಡ್ಡದಾದ ಟಚ್ ಸ್ಕ್ರೀನ್ ಜೊತೆಗೆ...
XUV.e9 ಕಾರು ಸಹ XUV.e8 ನಂತೆಯೇ ಮುಂಭಾಗದ ಪ್ರೊಫೈಲ್ ಅನ್ನು ಹೊಂದಿದ್ದರೂ ಕಪ್ಪು ಬಣ್ಣದ ಗಾಜಿನ ಮೇಲ್ಛಾವಣಿ, ಕೂಪ್ ಸ್ಟೈಲಿಂಗ್ ಮತ್ತು ಸಂಪರ್ಕಿತ ಟೇಲ್ ಲ್ಯಾಂಪ್ ಗಳನ್ನು ಹೊಂದಿರಲಿದೆ. ಅಲೋಯ್ ವೀಲುಗಳ ವಿನ್ಯಾಸವು ಸಹ ಹಿಂದಿನ ವಾಹನಕ್ಕಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದೆ.
ಇನ್ನೊಂದೆಡೆ, ವರದಿಗಳ ಪ್ರಕಾರ, ಪ್ರೊಡಕ್ಷನ್ ಸ್ಪೆಕ್ ಆವೃತ್ತಿ ಏನಿಸಿರುವ BE.05 ಮಾದರಿಯು ತನ್ನ ಕಾನ್ಸೆಪ್ಟ್ ವರ್ಶನ್ ನಂತೆಯೇ ಇದೆ. ಇದು ಈ ಕಾರು ತಯಾರಕ ಸಂಸ್ಥೆಯ “ಬೋರ್ನ್ ಎಲೆಕ್ಟ್ರಿಕ್” ಲೈನ್ ಅಪ್ ನ ಭಾಗವೆನಿಸಿದ್ದು, ಬಿಡುಗಡೆಯಾಗಲಿರುವ ಮೊದಲ “BE” ಎನಿಸಲಿದೆ. ಇದು ಕಾನ್ಸೆಪ್ಟ್ ಅನ್ನೇ ಹೋಲುವ ಶೈಲಿಯನ್ನು ಹೊಂದಿದ್ದು, ಅದೇ DRL ಸೆಟಪ್, ಅದೇ ಫ್ರಂಟ್ ಮತ್ತು ರಿಯರ್ ಪ್ರೊಫೈಲ್ ಗಳನ್ನು ಹೊಂದಿದೆ. ಒಂದು ಕ್ಲಿಪ್ ನಲ್ಲಿ ನೀವು ಫ್ಲಶ್ ಡೋರ್ ಹ್ಯಾಂಡಲ್ ಗಳನ್ನು ನೋಡಬಹುದಾಗಿದ್ದು, ಇವುಗಳನ್ನು ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಕಾರ್ಯಕ್ಷಮತೆ
ಒಂದು ಶಾಟ್ ನಲ್ಲಿ, ಇವುಗಳಲ್ಲಿ ಒಂದು SUV ಯ (ಬಹುಶಃ BE.05) ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, 200kmph ವೇಗವನ್ನು ತೋರಿಸುವುದುನ್ನು ಕಾಣಬಹುದು. ಇದು ಗಮನಿಸಬೇಕಾದ ವಿಷಯವಾಗಿದೆ. ಏಕೆಂದರೆ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ಸೀಮಿತ ವೇಗವನ್ನು ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಈ ಕಾರುಗಳು 150kmph ತನಕವಷ್ಟೇ ತಲುಪುತ್ತವೆ. ಇದರಿಂದಾಗಿ, ಮಹೀಂದ್ರಾ ಎಲೆಕ್ಟ್ರಿಕ್ SUV ಯು ಭಾರತದ ಮಾರುಕಟ್ಟೆಯಲ್ಲಿರುವ ಅತ್ಯಂತ ವೇಗದ ಭಾರತೀಯ EV ಯಾಗಿ ಗುರುತಿಸಿಕೊಳ್ಳಲಿದೆ.
ಈ ಎಲ್ಲಾ ಮೂರು SUV ಗಳು, ರಿಯರ್ ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಸೆಟಪ್ ಗಳನ್ನು ಹೊಂದಬಹುದಾದ ಮತ್ತು 395PS ತನಕ ಪವರ್ ಔಟ್ಪುಟ್ ನೀಡಬಹುದಾದ INGLO ಪ್ಲಾಟ್ ಫಾರ್ಮ್ ಅನ್ನು ಆಧರಿಸಿವೆ. ಈ ರೀತಿಯ ವೇಗವನ್ನು ಸಾಧಿಸಬೇಕಾದರೆ EV ವಾಹನಕ್ಕೆ ಇಂತಹ ಕಾರ್ಯಕ್ಷಮತೆಯ ಅಗತ್ಯವಿದೆ.
ಬಿಡುಗಡೆ ಮತ್ತು ಬೆಲೆ
ಇವುಗಳ ಪೈಕಿ ಮಹೀಂದ್ರಾ XUV.08 ವಾಹನವು ಮೊದಲಿಗೆ ಮಾರುಕಟ್ಟೆಗೆ ಕಾಲಿಡಲಿದ್ದು, 2024ರ ಡಿಸೆಂಬರ್ ವೇಳೆಗೆ ರೂ. 35 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ರಸ್ತೆಗಿಳಿಯುವ ನಿರೀಕ್ಷೆ ಇದೆ. XUV.09 ಮಾದರಿಯು XUV700 ಅನ್ನು ಅನುಸರಿಸಲಿದ್ದು, ಇದನ್ನು 2025ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಸುಮಾರು ರೂ. 38 ಲಕ್ಷಕ್ಕಿಂತ (ಎಕ್ಸ್ - ಶೋರೂಂ) ಹೆಚ್ಚಿನ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ. ಅಂತಿಮವಾಗಿ, BE.05 ಕಾರು 2025 ರ ಕೊನೆಗೆ ಬಿಡುಗಡೆಯಾಗಲಿದ್ದು, ರೂ. 25 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ.
0 out of 0 found this helpful