ಲಾಂಚ್ ಆಗುವ ಮೊದಲೇ ಡೀಲರ್‌ಶಿಪ್‌ಗಳಿಗೆ ಬಂದಿಳಿದ ಹೊಸMaruti e Vitara
ಮಾರುತಿ ಇ vitara ಗಾಗಿ dipan ಮೂಲಕ ಫೆಬ್ರವಾರಿ 11, 2025 08:19 pm ರ ಂದು ಪ್ರಕಟಿಸಲಾಗಿದೆ
- 9 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಇ ವಿಟಾರಾ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್‌ಲೈನ್ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ
-
ಮಾರುತಿ ಇ ವಿಟಾರಾ ಈ ಕಾರು ತಯಾರಕರ ಮೊದಲ ಇವಿ ಆಗಿದೆ.
-
ಮಾರ್ಚ್ 2025 ರಲ್ಲಿ ನಿರೀಕ್ಷಿಸಲಾಗಿರುವ ಬಿಡುಗಡೆಯಾಗುವ ಮೊದಲೇ ಇದು ಡೀಲರ್‌ಶಿಪ್‌ಗಳಿಗೆ ಬರಲು ಪ್ರಾರಂಭಿಸಿದೆ.
-
ಇದು ಆಲ್ LED ಲೈಟಿಂಗ್ ಮತ್ತು 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ.
-
ಒಳಭಾಗದಲ್ಲಿ ಇದು 10.25-ಇಂಚಿನ ಡ್ರೈವರ್ ಡಿಸ್ಪ್ಲೇ, 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.
-
ಇತರ ವೈಶಿಷ್ಟ್ಯಗಳಲ್ಲಿ ಪನೋರಮಿಕ್ ಗ್ಲಾಸ್ ರೂಫ್, 10-ವೇ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಸೇರಿವೆ.
-
ಸುರಕ್ಷತೆಯ ವಿಷಯದಲ್ಲಿ 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.
-
ಬೆಲೆಯು ರೂ. 17 ಲಕ್ಷಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಪರಿಚಯಾತ್ಮಕ ಎಕ್ಸ್-ಶೋರೂಂ, ಭಾರತಾದ್ಯಂತ).
ನವೆಂಬರ್ 2024 ರಲ್ಲಿ ಜಾಗತಿಕವಾಗಿ ಅದರ ಪ್ರೊಡಕ್ಷನ್ ಸ್ಪೆಕ್‌ನಲ್ಲಿ ಅನಾವರಣಗೊಂಡ ನಂತರ, ಮಾರುತಿ ಇ ವಿಟಾರಾವನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾಯಿತು. ಈ ಇವಿ ಈಗ ಕೆಲವು ಡೀಲರ್‌ಶಿಪ್‌ಗಳಿಗೆ ಬಂದಿದ್ದು, ಮಾರುತಿಯ ಈ ಮೊದಲ ಇವಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ಸೂಚಿಸುತ್ತದೆ. ಇದಲ್ಲದೆ, ಕೆಲವು ಡೀಲರ್‌ಶಿಪ್‌ಗಳು ಇ ವಿಟಾರಾದ ಆಫ್‌ಲೈನ್ ಬುಕಿಂಗ್‌ಗಳನ್ನು ಸಹ ಸ್ವೀಕರಿಸುತ್ತಿವೆ. ನಾವು ಡೀಲರ್‌ಶಿಪ್‌ನಿಂದ ಕೆಲವು ಚಿತ್ರಗಳನ್ನು ಪಡೆದುಕೊಂಡಿದ್ದೇವೆ ಮತ್ತು ಪ್ರದರ್ಶಿಸಲಾದ ಇ-ವಿಟಾರಾ ಬಗ್ಗೆ ನಾವು ತಿಳಿದುಕೊಂಡಿರುವ ಎಲ್ಲಾ ವಿವರಗಳು ಇಲ್ಲಿದೆ.
ಏನನ್ನು ಗಮನಿಸಲಾಗಿದೆ ?
ಪ್ರದರ್ಶಿಸಲಾದ ಮಾರುತಿ ಇ ವಿಟಾರಾ, 2025 ರ ಆಟೋ ಎಕ್ಸ್‌ಪೋದಲ್ಲಿ ತೋರಿಸಿದ ಮಾಡೆಲ್‌ನಂತೆಯೇ ನೆಕ್ಸಾ ಬ್ಲೂ ಬಣ್ಣದಲ್ಲಿ ಬರುತ್ತದೆ. ಇ ವಿಟಾರಾ ಇತರ ಐದು ಮೊನೊಟೊನ್ ಬಣ್ಣಗಳು ಮತ್ತು ನಾಲ್ಕು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಪ್ರದರ್ಶಿಸಲಾದ ಇ ವಿಟಾರಾವನ್ನು LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, Y-ಆಕಾರದ LED DRLಗಳು ಮತ್ತು ಮುಂಭಾಗದ ಫಾಗ್ ಲ್ಯಾಂಪ್‌ಗಳೊಂದಿಗೆ ನೋಡಬಹುದು.
![Maruti e Vitara side](https://stimg.cardekho.com/pwa/img/spacer3x2.png)
![Maruti e Vitara rear](https://stimg.cardekho.com/pwa/img/spacer3x2.png)
ಸೈಡ್ ವ್ಯೂನಲ್ಲಿ ಉತ್ತಮ ಏರೋಡೈನಾಮಿಕ್ಸ್‌ಗಾಗಿ ವಿನ್ಯಾಸಗೊಳಿಸಲಾದ 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಡೋರ್‌ಗಳ ಮೇಲೆ ಕಪ್ಪು ಕ್ಲಾಡಿಂಗ್ ಅನ್ನು ನೀಡಲಾಗಿದೆ. ಇದು ಬ್ಲಾಕ್ ರಿಯರ್ ಬಂಪರ್ ಮತ್ತು ಗ್ಲೋಸ್ ಬ್ಲಾಕ್ ಸ್ಟ್ರಿಪ್‌ನೊಂದಿಗೆ ಕನೆಕ್ಟ್ ಆಗಿರುವ 3-ಪೀಸ್ LED ಟೈಲ್ ಲೈಟ್ ಸೆಟಪ್ ಅನ್ನು ಕೂಡ ಹೊಂದಿದೆ.
ಒಳಗೆ, ನೀವು ಡ್ಯಾಶ್‌ಬೋರ್ಡ್‌ನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡ್ಯುಯಲ್-ಸ್ಕ್ರೀನ್ ಸೆಟಪ್ ಜೊತೆಗೆ ರೆಕ್ಟ್ಯಾಂಗಲ್ ಆಕಾರದ AC ವೆಂಟ್‌ಗಳನ್ನು ಕೂಡ ನೋಡಬಹುದು. ಇಲ್ಲಿ ಆಟೋ-ಡಿಮ್ಮಿಂಗ್ ರಿಯರ್‌ವ್ಯೂ ಮಿರರ್ ಕೂಡ ನೀಡಲಾಗಿದೆ.
ನೀವು ಹತ್ತಿರದಿಂದ ನೋಡಿದರೆ, ಸೆಮಿ-ಲೆಥೆರೆಟ್ ಸೀಟ್ ಕವರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕೂಡ ನೋಡಬಹುದು.
ಇ ವಿಟಾರಾದ ಪ್ರತಿಯೊಂದು ವೇರಿಯಂಟ್‌ನ ಎಲ್ಲಾ ಫೀಚರ್‌ಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಲೀಕ್ ಆಗಿರುವ ಮಾಹಿತಿ ಪ್ರಕಾರ, ಪ್ರದರ್ಶಿಸಲಾದ ಮಾಡೆಲ್ ಟಾಪ್ ಆಲ್ಫಾ ವೇರಿಯಂಟ್ ಎಂದು ತೋರುತ್ತದೆ. ಇದು ಯಾವ ವೇರಿಯಂಟ್ ಎಂದು ತಿಳಿಯಲು ನಾವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಇದನ್ನು ಕೂಡ ಓದಿ: ಮಾರುತಿ ಇ ವಿಟಾರಾದ ಬೇಸ್ ವೇರಿಯಂಟ್‌ನಲ್ಲಿ ನೀವು ಈ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳು
ಪ್ರತಿ ವೇರಿಯಂಟ್‌ನ ಫೀಚರ್‌ಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ. ಅದರ ವಿವರಗಳು ಇಲ್ಲಿವೆ:
ಬ್ಯಾಟರಿ ಪ್ಯಾಕ್ |
49 ಕಿ.ವ್ಯಾಟ್ |
61 ಕಿ.ವ್ಯಾಟ್ |
ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ |
1 |
1 |
ಪವರ್ |
144 ಪಿಎಸ್ |
174 ಪಿಎಸ್ |
ಟಾರ್ಕ್ |
192.5 ಎನ್‌ಎಮ್ |
192.5 ಎನ್‌ಎಮ್ |
ಕ್ಲೇಮ್ ಮಾಡಿರುವ ರೇಂಜ್ |
ಇನ್ನೂ ಘೋಷಿಸಬೇಕಷ್ಟೇ |
500 ಕಿ.ಮೀ.ಗಿಂತ ಹೆಚ್ಚು |
ಡ್ರೈವ್‌ಟ್ರೇನ್ |
FWD* |
FWD |
*FWD = ಫ್ರಂಟ್-ವೀಲ್-ಡ್ರೈವ್
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಇ-ವಿಟಾರಾ ಬೆಲೆಯು ರೂ. 17 ಲಕ್ಷಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್-ಶೋರೂಂ, ಭಾರತಾದ್ಯಂತ). ಇದು ಟಾಟಾ ಕರ್ವ್ ಇವಿ, ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ ಬಿಇ 6 ಮತ್ತು ಎಂಜಿ ಝಡ್ಎಸ್ ಇವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ