ಬಾಕಿ ಉಳಿದ ಮಾರುತಿ ಸುಝುಕಿಯ 4 ಲಕ್ಷಕ್ಕೂ ಹೆಚ್ಚಿನ ಆರ್ಡರ್‌ಗಳು
ಮೇ 16, 2023 02:00 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಹೇಳುವಂತೆ ಸಿಎನ್‌ಜಿ ಮಾಡೆಲ್‌ಗಳು ಒಟ್ಟು ಬಾಕಿಯಿರುವ ಆರ್ಡರ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿವೆ
ಕಳೆದ ಕೆಲವು ತಿಂಗಳುಗಳಲ್ಲಿ ಈ ಕಾರು ತಯಾರಕರು ಜಾಗತಿಕವಾಗಿ ತಮ್ಮ ಮಾರಾಟದಲ್ಲಿ ಧನಾತ್ಮಕ ದಾಖಲೆಯನ್ನು ನಿರ್ಮಿಸಿದ್ದಾರಾದರೂ, ಅವರಲ್ಲಿ ಕೆಲವರು ಇನ್ನೂ ಪೂರೈಕೆ ನಿರ್ಬಂಧಗಳು ಮತ್ತು ವಿವಿಧ ವಸ್ತುಗಳ ಕೊರತೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಭಾರತದ ಅತಿ ದೊಡ್ಡ ಕಾರು ತಯಾರಕರಾದ – ಮಾರುತಿ ಸುಝುಕಿ – ಸಹ ಭಿನ್ನವಾಗಿಲ್ಲ ಮತ್ತು ಇತ್ತೀಚಿನ ಹೂಡಿಕೆದಾರರ ಸಭೆಯಲ್ಲಿ (ಏಪ್ರಿಲ್ 26 ರಂದು), ಇದು ತನ್ನ ಬೃಹತ್ ಆರ್ಡರ್ ಬ್ಯಾಂಕ್‌ನ ಕೆಲವು ವಿವರಗಳನ್ನು ಹಂಚಿಕೊಂಡಿದೆ.
ಮಾರುತಿ ಪ್ರತಿಕ್ರಿಯೆ
ಶ್ರೀ. ರಾಹುಲ್ ಭಾರ್ತಿ, ಕಾರ್ಯನಿರ್ವಾಹಕ ನಿರ್ದೇಶಕ (ಕೊರ್ಪೋರೇಟ್ ಯೋಜನೆ ಮತ್ತು ಸರ್ಕಾರಿ ವ್ಯವಹಾರಗಳು), ಬಾಕಿ ಉಳಿದಿರುವ ಆದೇಶಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಇಂದು ಬೆಳಗ್ಗಿನ ಪ್ರಕಾರ ಬಾಕಿಯಿರುವ ಒಟ್ಟು ಆರ್ಡರ್‌ಗಳು 412,000 ಯೂನಿಟ್‌ಗಳಾಗಿವೆ. ಸಿಎನ್‌ಜಿ ಸುಮಾರು ಅದರ ಮೂರನೇ ಒಂದು ಭಾಗವಾಗಿದೆ ಮತ್ತು ನಾವು ಬಿಡುಗಡೆಗೊಳಿಸಿದ ಹೊಸ ಎಸ್‌ಯುವಿಗಳು ಸಹ ಉತ್ತಮ ಸಂಖ್ಯೆಯಲ್ಲಿವೆ” ಎಂದು ಹೇಳಿದರು.
ಇದನ್ನೂ ಓದಿ: ಶೀಘ್ರದಲ್ಲಿಯೇ ಪುನರಾಗಮನ ಮಾಡಬೇಕೆಂದು ನಾವು ಬಯಸುವ 7 ಜನಪ್ರಿಯ ಕಾರುಗಳು
ಸಿಎನ್‌ಜಿಗಾಗಿ ಬಲವಾದ ಬೇಡಿಕೆ
ರಾಹುಲ್ ಭಾರ್ತಿಯವರ ಹೇಳಿಕೆಯ ಪ್ರಕಾರ, ಮಾರುತಿ ಸುಮಾರು 1.4 ಲಕ್ಷ ಯೂನಿಟ್‌ಗಳ ಸಿಎನ್‌ಜಿ ಮಾಡೆಲ್‌ಗಳ ಹಿಂದುಳಿಕೆಯನ್ನು ಹೊಂದಿವೆ ಎಂದು ನಾವು ಅಂದಾಜಿಸಿದ್ದೇವೆ. ಅದೇ ಸಭೆಯಲ್ಲಿ, ಮಾರುತಿ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 3.3 ಲಕ್ಷ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದೆ ಎಂದು ಬಹಿರಂಗಪಡಿಸಿದರು, ಕಾರು ತಯಾರಕರ ಪ್ರಕಾರ ಅದರ ಮಾರಾಟವು ಸಂಪೂರ್ಣ ಅವಧಿಗೆ 20 ಪ್ರತಿಶತದಷ್ಟು ಇತ್ತು. ಟಾಟಾ ಇತ್ತೀಚೆಗೆ ಈ ಸ್ಪರ್ಧೆಯಲ್ಲಿ ಪ್ರವೇಶಿಸಿದ್ದರೂ, ಹಸಿರು ಇಂಧನ ಪರ್ಯಾಯವನ್ನು ನೀಡುವ 13 ಮಾಡೆಲ್‌ಗಳೊಂದಿಗೆ ಸಿಎನ್‌ಜಿ ಜಾಗದಲ್ಲಿ ಮಾರುತಿ ಪ್ರಬಲವಾಗಿದೆ.
ಉತ್ಪಾದನೆ ಮತ್ತು ಬುಕಿಂಗ್ ಅಪ್‌ಡೇಟ್
ಮಾರುತಿಯು ತನ್ನ ಗುಜರಾತ್ ಸ್ಥಾವರದಲ್ಲಿ ಏಪ್ರಿಲ್ 2023ರಲ್ಲಿ 1.44 ಯೂನಿಟ್‌ಗಳನ್ನು ಉತ್ಪಾದಿಸಿತು ಆದರೆ ಎಲೆಕ್ಟ್ರಿಕ್ ಘಟಕಗಳ ಕೊರತೆಯು ಉತ್ಪಾದನಾ ಚಟುವಟಿಕೆಗಳ ಮೇಲೆ ಪ್ರಭಾವವನ್ನು ಬೀರಿದೆ ಎಂದು ಹೇಳಿದೆ.
ಈ ಕಾರುತಯಾರಕರು 2023 ರ ಆಟೋ ಎಕ್ಸ್‌ಪೋದಲ್ಲಿ ತನ್ನ ಎರಡು ಹೊಸ ಮಾಡೆಲ್‌ಗಳನ್ನು ಪ್ರದರ್ಶಿಸಿದ್ದಾರೆ ಅವುಗಳು–5-ಡೋರ್ ಜಿಮ್ನಿ ಮತ್ತು ಫ್ರಾಂಕ್ಸ್ ಕ್ರಾಸ್ಓವರ್ ಎಸ್‌ಯುವಿ. ಮುಂಬರುವ ಆಫ್-ರೋಡರ್ ಸುಮಾರು 25,000 ಬುಕಿಂಗ್‌ಗಳನ್ನು ಗಳಿಸಿದೆ ಎಂದು ನಾವು ಇತ್ತೀಚೆಗೆ ವರಿದಿ ಮಾಡಿದ್ದರೆ, ಫ್ರಾಂಕ್ಸ್ ಮಾರ್ಚ್ ಅಂತ್ಯದ ವೇಳೆಗೆ 15,500 ಕ್ಕೂ ಹೆಚ್ಚು ಬಿಡುಗಡೆ-ಪೂರ್ವ ಆರ್ಡರ್‌ಗಳನ್ನು ಗಳಿಸಿದೆ.
ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಯ ಪ್ರಬಲ ಹೈಬ್ರಿಡ್ ವೇರಿಯೆಂಟ್‌ಗಳು (ಮಾರುತಿಗೆ ಮೊದಲನೆಯದು) ಅದರ ಒಟ್ಟು ಬುಕ್ಕಿಂಗ್‌ನಲ್ಲಿ ಸುಮಾರು 28 ಪ್ರತಿಶತದಷ್ಟು ಪಾಲನ್ನು ಹೊಂದಿದೆ ಎಂದು ಕಾರುತಯಾರಕರು ಬಹಿರಂಗಡಪಡಿಸಿದ್ದರಿಂದ ಗ್ರ್ಯಾಂಡ್ ವಿಟಾರಾ ಸಹ ಬಲವಾದ ಬೇಡಿಕೆಯನ್ನು ಹೊಂದಿದೆ.
ಮಾರುತಿಗೆ ಮುಂದೇನು?
ಮಾರುತಿಯಿಂದ ಮುಂದಿನ ದೊಡ್ಡ ಬಿಡುಗಡೆಯೆಂದರೆ 5-ಡೋರ್ ಜಿಮ್ನಿ ಆಗಿದ್ದು ಇದು ಸುಮಾರು ಜೂನ್ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ, ಇದು ಬ್ರ್ಯಾಂಡ್‌ನ ಆರ್ಡರ್ ಬ್ಯಾಂಕ್‌ಗಳಿಗೆ ಸೇರಿಸುವುದು ಖಚಿತವಾಗಿದೆ. ಅದರ ಬಿಡುಗಡೆ-ಪೂರ್ವ ಬುಕಿಂಗ್ ಟ್ಯಾಲಿಯನ್ನು ನೀಡಿದರೆ, ಮಾರುತಿಯ ಈ ಆಫ್-ರೋಡರ್ ಮಾರಾಟವನ್ನು ಪ್ರಾರಂಭಿಸಿದ ನಂತರ ಬಲವಾದ ಬೇಡಿಕೆಯನ್ನು ಹೊಂದಬಹುದು ಎಂದು ನಾವು ನಿರೀಕ್ಷಿಸುತ್ತೇವೆ, ಮತ್ತು ಇದು ಹೆಚ್ಚಿನ ಡೆಲಿವರಿ ಟೈಮ್‌ಲೈನ್‌ಗಳಿಗೆ ಕಾರಣವಾಗುತ್ತದೆ.