• English
  • Login / Register

ಮಾರುತಿ ಸುಜುಕಿ S -ಕ್ರಾಸ್ ಫೇಸ್ ಲಿಫ್ಟ್ ನಂತರ ಮಾರಾಟದ ತೀವ್ರ ಹೆಚ್ಚಳ

ಮಾರುತಿ ಎಸ್.ಕ್ರಾಸ್ 2017-2020 ಗಾಗಿ khan mohd. ಮೂಲಕ ಏಪ್ರಿಲ್ 22, 2019 12:03 pm ರಂದು ಪ್ರಕಟಿಸಲಾಗಿದೆ

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

Maruti Suzuki S-Cross Facelift

ಮಾರುತಿ ಸುಜುಕಿ S -ಕ್ರಾಸ್ ಅನ್ನು 2015 ನಲ್ಲಿ ಬಿಡುಗಡೆ ಮಾಡಿದಾಗ, ಇದು ಸ್ವಲ್ಪ ಸಾದಾರ್ಣವಾದ ವಿನ್ಯಾಸ ಎಂದು ನಮಗೆ ಅನ್ನಿಸಿತು, ಇದನ್ನು ಈ  ಸೆಗ್ಮೆಂಟ್ ನ ಗಳಿಗೆ ಇತರ ಕಾಂಪ್ಯಾಕ್ಟ್ ಮತ್ತು ಸಬ್ ಕಾಂಪ್ಯಾಕ್ಟ್ SUV ಹೋಲಿಸಿದಾಗ. ಮತ್ತು ಇದನ್ನು ಸ್ಪರ್ಧಾತ್ಮಕ ಬೆಲೆಯೊಂದಿಗೆ ಬಿಡುಗಡೆ ಮಾಡಿದರೂಉ ಸಹ , ಬಹಳಷ್ಟು ಗ್ರಾಹಕರನ್ನು ಆಕರ್ಷಿಸದಿರುವುದು ಕಂಡುಬಂದಿತು, ಇತರ ಮಾರುತಿ ಸುಜುಕಿ ಯ ಕಾರುಗಳಿಗೆ ಹೋಲಿಸಿದಾಗ.

Maruti Suzuki S-Cross Facelift

ಇದರ ನೋಟವನ್ನು ಚೆನ್ನಾಗಿರುವಂತೆ ಮಾಡಲು ಸ್ಥಳೀಯ ಕಾರ್ ಮೇಕರ್ S -ಕ್ರಾಸ್ ನ ಪೂರ್ತಿ ಬದಲಿಸಿ ಇನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಮತ್ತಷ್ಟು ಫೀಚರ್ ಗಳನ್ನೂ ಹಾಗು ಟೆಕ್ನಾಲಾಜಿಯನ್ನು ಕೂಡಿಸಿತು ಕೂಡ. ಇದರ ಪರಿಣಾಮವಾಗಿ ಇದು 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಹಿಂತೆಗೆದುಕೊಂಡಿತು ಕೂಡ. ಬಹಳಷ್ಟು ಗ್ರಾಹಕರು ಇದನ್ನು ಸರಿಯಾದ ನಿರ್ದಾರ ಅಲ್ಲ ಎಂದರೂ ಸಹ, ಈ ನಡೆಯು S -ಕ್ರಾಸ್ ನ ಮಾರಾಟ ಮಾಡಲು ಹೆಚ್ಚಾಗಲು ಸಹಕಾರಿಯಾಯಿತು.

Maruti Suzuki S-Cross Facelift

ನಿಜ ಹೇಳಬೇಕೆಂದರೆ ಹೆಚ್ಚು ಶಕ್ತಿಯುತ ಎಂಜಿನ್ ಹಿಂಪಡೆದಿದ್ದು  ಇದರ ಸಾದಾರಣ ವಿನ್ಯಾಸಕ್ಕೆ ಹೋಲಿಸಿದರೆ ಅಷ್ಟೇನು ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನವೀಕರಣ ಗೊಂಡ S -ಕ್ರಾಸ್ ಮೈಲೇಜ್ ಅನ್ನು ಹೆಚ್ಚಿಸಿತು ( ಇದಕ್ಕೆ ಸುಜುಕಿ ಯ SHVS mild-hybrid tech ಯನ್ನು ಹೊಗಳಬೇಕು ) ಮತ್ತು ಹೊಸ ಫೀಚರ್ ಗಳು ಪ್ರೀಮಿಯಂ ಕ್ರಾಸ್ ಓವರ್ ಗಳನ್ನೂ ಮೊದಲಬಾರಿಗೆ ಕೊಳ್ಳಬೇಕು ಎಂದಿದ್ದವರಿಗೆ ಹರ್ಷವನ್ನುಂಟುಮಾಡಿತು. ಮಾರಾಟದ ಅಂಕೆಗಳು ನಮಗೆ ಇದನ್ನು ಸೂಚಿಸುತ್ತದೆ.

ಮಾರುತಿ S -ಕ್ರಾಸ್ ನ ಮಾರಾಟದ ಪಟ್ಟಿ – 6  ತಿಂಗಳು

Month

S-Cross

Renault Duster

Hyundai Creta

October 2017

5,510

919

9,248

November 2017

3,363

798

8,528

December 2017

2,847

1,369

6,755

January 2018

3,280

863

9,284

February 2018

3,523

763

9,278

March 2018

3,919

1,326

10,011

ಮಾರುತಿ S -ಕ್ರಾಸ್ ನ   ಫೇಸ್ ಲಿಫ್ಟ್ ಮುಂಚೆಯ ಮಾರಾಟದ ಪಟ್ಟಿ – 6  ತಿಂಗಳು

Month

S-Cross

Renault Duster

Hyundai Creta

April 2017

2,676

1,303

9,213

May 2017

2,249

1,437

8,377

June 2017

228

1,233

6,436

July 2017

2,895

1,210

10,556

August 2017

48

1,402

10,158

September 2017

385

1,489

9,292

 

ಸರಾಸರಿ ತಿಂಗಳ ಮಾರಾಟದ (Apr-Sep 2017) ಫೇಸ್ ಲಿಫ್ಟ್ ಮುಂಚೆಯ  ಮಾಡೆಲ್ ನ ಸಂಖ್ಯೆ 1414 ಯೂನಿಟ್ ಗಳು, ಆದರೆ ಫೇಸ್ ಲಿಫ್ಟ್ ನದ್ದು (Oct 2017 to Mar 2018) 3740  ಯೂನಿಟ್ ಗಳು . ನಿಖರವಾಗಿ S -ಕ್ರಾಸ್ ಫೇಸ್ ಲಿಫ್ಟ್ ಹಿಂದಿನದ್ದಕ್ಕಿಂತ ಆಶ್ಚರ್ಯಕರರೀತಿಯಲ್ಲಿ  ಬಹಳಷ್ಟು ಅಂತರದಲ್ಲಿ ಮುಂದುವರೆದಿದೆ. ಆದರೆ ಇದರ ಇತರ ಸ್ಪರ್ಧಾತ್ಮಕಗಳಿಗೆ ಹೋಲಿಸಿದರೆ ರೆನಾಲ್ಟ್ ಡಸ್ಟರ್ ಮತ್ತು ಹುಂಡೈ ಕ್ರೇಟಾ -  S -ಕ್ರಾಸ್ ಕೇವಲ ಫ್ರೆಂಚ್ SUV ಯಾ ಹಿತ್ತಿರ ಹೋಗುತ್ತದೆ, ಅದರ ಮಾರಾಟದ ಸಂಖ್ಯೆ ತಿಂಗಳಿಗೆ  1006 ಆಗಿತ್ತ್ತು ಅದೇ ಸಮಯದಲ್ಲಿ. ಆದರೂ ಕ್ರೇಟಾ ಹೆಚ್ಚು ಮಾರಾಟವಾಗುವ  ಮುಂದಾಳತ್ವವನ್ನು ಮುಂದುವರೆಸಿ 8851  ಯೂನಿಟ್ ಗಳೊಂದಿಗೆ S -ಕ್ರಾಸ್ ಎರೆಡರಷ್ಟು ಮಾರಾಟವಾಗುತ್ತಿದೆ.

S -ಕ್ರಾಸ್ ಫೇಸ್ ಲಿಫ್ಟ್ 1.3- ಲೀಟರ್ ಡೀಸೆಲ್ ಎಂಜಿನ್ ನಿಂದ ಪವರ್ ಪಡೆಯುತ್ತಿದ್ದು ಸುಜುಕಿಯ mild-hybrid SHVS tech ನೊಂದಿಗೆ ಬರುತ್ತದೆ. ಈ ಮೋಟಾರ್  90PS ಪವರ್ ಹಾಗು 200Nm ಗರಿಷ್ಟ ಟಾರ್ಕ್ ಅನ್ನು ಪಡೆದಿದೆ. ಇದು ಅಧಿಕೃತವಾಗಿ ಪ್ರಕಟಿಸಿದಂತೆ  25.1kmpl ಮೈಲೇಜ್ ಕೊಡುತ್ತದೆ., ಇದು 1.45kmpl ಹೆಚ್ಚಿಗೆ ಇದೆ, ಹಿಂದಿನದಕ್ಕೆ ಹೋಲಿಸಿದರೆ. ಉಲ್ಲೇಖಕ್ಕಾಗಿ  ಫೇಸ್ ಲಿಫ್ಟ್ ಮುಂಚಿನ S -ಕ್ರಾಸ್  ನಲ್ಲಿದ್ದ 1.6-litre ಡಿಸೇಲ್ ಎಂಜಿನ್ 120PS  ಪವರ್ ಹಾಗು 320Nm ಗರಿಷ್ಟ ಟಾರ್ಕ್ ಕೊಡುತ್ತಿತ್ತು.

 

was this article helpful ?

Write your Comment on Maruti ಎಸ್.ಕ್ರಾಸ್ 2017-2020

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience