• English
  • Login / Register

ಮಾರುತಿ ಸುಜುಕಿ XL6 vs ಮಹಿಂದ್ರಾ ಮರಝೋ : ಚಿತ್ರಗಳಲ್ಲಿ

ಮಾರುತಿ ಎಕ್ಸ್‌ಎಲ್ 6 2019-2022 ಗಾಗಿ dhruv ಮೂಲಕ ಆಗಸ್ಟ್‌ 28, 2019 10:06 am ರಂದು ಪ್ರಕಟಿಸಲಾಗಿದೆ

  • 84 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಯ  ಹೊಸ ನೆಕ್ಸಾ MPV  ನೋಡಲು ಮಹಿಂದ್ರಾ ಮರಝೋ ಪಕ್ಕದಲ್ಲಿ ಇರಿಸಿದಾಗ ಹೇಗಿರುತ್ತದೆ? ನೀವೇ ನೋಡಿರಿ

Maruti Suzuki XL6 vs Mahindra Marazzo: In Pics

ಮಾರುತಿ ಯವರು ಇತ್ತೀಚಿಗೆ XL6 ಬಿಡುಗಡೆ ಮಾಡಿದರು, ಅದು ಎರ್ಟಿಗಾ ವೇದಿಕೆಯ ಮೇಲೆ ಮಾಡಲಾಗಿರುವ  ಹೆಚ್ಚು ಪ್ರೀಮಿಯಂ ಆಗಿರುವ ಉತ್ಪನ್ನವಾಗಿದ್ದು ನೆಕ್ಸಾ ರಿಟೇಲ್ ಗಳಲ್ಲಿ ಲಭ್ಯವಿದೆ. ಅವು ಒಂದೇ ತರಹದ ಪವರ್ ಟ್ರೈನ್ ಹೊಂದಿಲ್ಲದಿದ್ದರು  XL6 ಹಾಗು ಮರಝೋ ಬೆಲೆ ವಿಷ್ಯದಲ್ಲಿ ತೀವ್ರ ಪೈಪೋಟಿ ಹೊಂದಿದೆ. XL6 ಬೆಲೆ ವ್ಯಾಪ್ತಿ ರೂ  9.79 ಲಕ್ಷ ದಿಂದ ರೂ 11.46 ಲಕ್ಷ ವರೆಗೂ ಇದೆ. ಮರಝೋ ಬೆಲೆ ರೂ  10.35 ಲಕ್ಷ ದಿಂದ ರೂ  14.76 ಲಕ್ಷ ವರೆಗೂ ಇದೆ. ಹಾಗಾಗಿ, XL6 ದೊಡ್ಡದರ ಜೊತೆಗೆ ಇರಿಸಿದಾಗ ಹೇಗೆ ಕಾಣಿಸುತ್ತದೆ,  ಬಾಡಿ ಆನ್ ಫ್ರೇಮ್ ಹೊಂದಿರುವ ಮಹಿಂದ್ರಾ MPV ಒಂದಿಗೆ?  ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ.

ಮುಂಬದಿಯ ಚಿತ್ರ 

 

XL6 ಗೆ ಸದುದ್ದವಾದ ಮುಂಬಾಗಿ ಇದ್ದು ಅದನ್ನು ಎರೆಡು ಕ್ರೋಮ್ ಸ್ಲಾಟ್ ಗ್ರಿಲ್ ನಿಂದ ಹೈಲೈಟ್ ಮಾಡಲಾಗಿದೆ. ಮರಝೋ ಮುಂಬದಿಯ ಕೊನೆ ಸ್ವಲ್ಪ ವಕ್ರತೆಗಳನ್ನು ಹೊಂದಿದೆ ಮತ್ತು ಅದು XL6 ತರಹ ಕೊನೆಗಳನ್ನು ಹೊಂದಿಲ್ಲ. XL6 ಹೋಲಿಕೆಯಲ್ಲಿ ಕಡಿಮೆ ಅಗಲತೆ ಹೊಂದಿದೆ ಮರಝೋ ಗೆ ಹೋಲಿಸಿದರೆ ಈ ಮಾರುತಿ MPV  ಅಳತೆಗಳು 1775mm ಅಗಲ ಇದೆ ಮರಝೋ 1866mm ಅಗಲ ಇದೆ. ಮರಝೋ ಎತ್ತರವಾಗಿದೆ ಸಹ, ಅಳತೆಗಳು 1774mm ಎತ್ತರ ಇದೆ ಹೋಲಿಕೆಯಲ್ಲಿ  XL6 1700mm ಎತ್ತರ ಹೊಂದಿದೆ.

ಹೆಡ್ ಲೈಟ್ 

 

ಎರೆಡೂ ಕಾರ್ ಗಳು ಪ್ರೊಜೆಕ್ಟರ್ ಸೆಟ್ ಅಪ್ ಹೊಂದಿರುವ ಹೆಡ್ ಲ್ಯಾಂಪ್ ಗಳೊಂದಿಗೆ ಬರುತ್ತದೆ. ಆದರೆ, XL6 ನಲ್ಲಿ  LED ಲೈಟಿಂಗ್ ಕೊಡಲಾಗಿದೆ , ಮರಝೋ ನಲ್ಲಿ ಸಾಮಾನ್ಯ ಹ್ಯಾಲೊಜೆನ್ ಲ್ಯಾಂಪ್ ಕೊಡಲಾಗಿದೆ.  ಎರೆಡೂ  MPV ಗಳು LED DRL ಹೊಂದಿವೆ ಕೂಡ.

ಡ್ಯಾಶ್  ಬಾರ್ಡ್ ಲೇ ಔಟ್ 

 

ಅದರ ಕ್ಯಾಬಿನ್ ಇರುವಂತೆ, XL6 ನ ಡ್ಯಾಶ್ ಬೋರ್ಡ್ ಸಹ ಪೂರ್ಣ ಕಪ್ಪು ಹೊಂದಿದೆ.  ಅಂದರೆ, ಮರಝೋ ನಲ್ಲಿರುವ ಡುಯಲ್ ಟೋನ್ ಸಶ್ ಬೋರ್ಡ್  ಗೆ ತದ್ವಿರುದ್ಧವಾಗಿದೆ. ಹಾಗು XL6 ನಲ್ಲಿ ಟಚ್ ಸ್ಕ್ರೀನ್ ಯೂನಿಟ್ ಡ್ಯಾಶ್ ಬೋರ್ಡ್ ನ ಟಾಪ್ ನಲ್ಲಿ ಫ್ಲೋಟಿಂಗ್ ಆಗಿ ಇರುವಂತೆ ಕಾಣುತ್ತದೆ,  ಆದರೆ ಮರಝೋ ದಲ್ಲಿ ಅದು ಇನ್ ಬಿಲ್ಟ್ ಆಗಿದೆ. 

ಪವರ್ ಟ್ರೈನ್ ಅವಕಾಶಗಳು 

 

XL6 ಅನ್ನು ಕೇವಲ 1.5-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಪಡೆಯಬಹುದು ಎರ್ಟಿಗಾ ದಲ್ಲಿರುವಂತೆ. ಮರಝೋ ಇನ್ನೊಂದುಬದಿಯಲ್ಲಿ ಕೇವಲ 1.5-ಲೀಟರ್ ಡೀಸೆಲ್ ಒಂದಿಗೆ ಮಾತ್ರ ಬರುತ್ತದೆ ಆ ಎಂಜಿನ್ XUV300 ನಲ್ಲೂ ಸಹ ಇದೆ. XL6 ಅನ್ನು ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಮಾತ್ರ ಪಡೆಯಬಹುದು. ಮರಝೋ ಕೇವಲ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

 

ಎರೆಡೂ ಕಾರ್ ಗಳು  ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ  ಮದ್ಯದಲ್ಲಿ MID ಹೊಂದಿದೆ.

ಪ್ರೊಫೈಲ್

ಎರೆಡೂ  ಸಹ ಬದಿಗಳಿಂದ ಸಾಂಪ್ರದಾಯಿಕ MPV ಗಳಂತೆ ಕಂಡರೂ, ಮರಝೋ ದಲ್ಲಿ ಹೆಚ್ಚು ಸೂಕ್ಷ್ಮವಾದ ಶೈಲಿಯಿದ್ದು ಹೆಚ್ಚು ಕಾಲದವರೆಗೆ ಆಕರ್ಷಕವಾಗಿರುತ್ತದೆ. XL6 ವಿನ್ಯಾಸ ವಿಭಿನ್ನವಾದ ಅಭಿಪ್ರಾಯಗಳನ್ನು ಪಡೆಯುತ್ತದೆ. ಮರಝೋ ಮತ್ತೊಮ್ಮೆ XL6 ಗಿಂತಲೂ ಉದ್ದವಾಗಿದೆ 4585mm  ನಿಂದ  XL6 ನ  4445mm ವರೆಗೆ.  ಮರಝೋ ವೀಲ್ ಬೇಸ್ XL6 ಗಿಂತಲೂ ಸ್ವಲ್ಪ ಮಾತ್ರ ದೊಡ್ಡದಾಗಿದ್ದು 2760mm ಇದೆ, XL6 ನಲ್ಲಿ  2740mm ಇದೆ.

ಎರೆಡನೆ ರೊ 

 

ಎರೆಡೂ ಕಾರ್ ಗಳನ್ನು  ಎರೆಡನೆ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಗಳೊಂದಿಗೆ ಪಡೆಯಬಹುದು. ಮರಝೋ ವನ್ನು ಬೆಂಚ್ ತರಹದ ಸೀಟ್ ಒಂದಿಗೆ ಪಡೆಯಬಹುಹದು XL6 ಗೆ ವಿರುದ್ಧವಾಗಿ. ಮಹಿಂದ್ರಾ ದವರು ಮರಝೋ ನಲ್ಲಿ ಎರೆಡನೆ ಸಾಲಿನಲ್ಲಿ ಭಿನ್ನವಾದ  AC ಕೊಟ್ಟಿದ್ದರೆ, ಅದು ಹೆಚ್ಚು ಪರಿಣಾಮಕಾರಿಯಾಗಿದೆ.

ಬೂಟ್ ಸ್ಪೇಸ್ 

 

ಚಿಕ್ಕದಾಗಿರುವ ಕಾರ್ ಆಗಿದ್ದರು ಸಹ  XL6 ಹೆಚ್ಚು ಬೂಟ್ ಸ್ಪೇಸ್ ಹೊಂದಿದೆ ಮರಝೋ ಜೊತೆ ಹೋಲಿಸಿದಾಗ, ಎಲ್ಲ ರೋ ಗಳಲ್ಲಿ ಸೀಟ್ ಓಪನ್ ಇರುವಾಗ. XL6 ನಲ್ಲಿ, ನಿಮಗೆ 209 ಲೀಟರ್ ಬೂಟ್ ಸ್ಪೇಸ್ ದೊರೆಯುತ್ತದೆ ಎಲ್ಲ ಸೀಟ್ ಓಪನ್ ಆಗಿರುವಾಗ, ಮರಝೋ ದಲ್ಲಿ ಅದು 190 ಲೀಟರ್ ಇರುತ್ತದೆ.

ಹಿಂಬದಿ  ಚಿತ್ರಣ 

 

ಹಿಂಬದಿಯಲ್ಲಿ, ಮರಝೋ ನಲ್ಲಿ ಸ್ವಚ್ಛವಾದ ವಿನ್ಯಾಸ ಇದೆ, ಆದರೆ XL6 ವಿನ್ಯಾಸದಲ್ಲಿ ಎರ್ಟಿಗಾ ಕುರುಹುಗಳು ಕಂಡುಬರುತ್ತದೆ. ಮರಝೋ ಹಾಗು XL6 ಗಳಲ್ಲಿ ಒಂದೇ ತರಹ ಇರುವ ವಿಷಯಗಳೆಂದರೆ ಅದು ಟೈಲ್ ಲೈಟ್ ಗಳನ್ನು  ಕ್ರೋಮ್ ಸ್ಟ್ರಿಪ್ ಒಂದಿಗೆ ಕನೆಕ್ಟ್ ಮಾಡಲಾಗಿದೆ.

 

was this article helpful ?

Write your Comment on Maruti ಎಕ್ಸ್‌ಎಲ್ 6 2019-2022

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience