• English
  • Login / Register

1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಗಾಗಿ shreyash ಮೂಲಕ ಸೆಪ್ಟೆಂಬರ್ 15, 2023 05:20 pm ರಂದು ಪ್ರಕಟಿಸಲಾಗಿದೆ

  • 85 Views
  • ಕಾಮೆಂಟ್‌ ಅನ್ನು ಬರೆಯಿರಿ

ಇಕ್ಯೂಇ ಎಲೆಕ್ಟ್ರಿಕ್ SUV ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ಬರುತ್ತಿದೆ ಮತ್ತು ಸುಮಾರು 550 ಕಿ.ಮೀವರೆಗೆ ತಲುಪಬಲ್ಲ ಬ್ಯಾಟರಿ ಪ್ಯಾಕ್ ನ್ನು ಹೊಂದಿದೆ.

  • ಇಕ್ಯೂಇ SUV 90.56 ಕಿ.ವ್ಯಾಟ್ ನ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಇದನ್ನು ಆಲ್-ವೀಲ್ ಡ್ರೈವ್ (AWD) ಡ್ರೈವ್‌ಟ್ರೇನ್‌ಗೆ ಜೋಡಿಸಲಾಗಿದೆ.
  • ಇದು 408ಪಿಎಸ್ ಮತ್ತು 858 ಎನ್ಎಂ ನಷ್ಟು ಪವರ್ ನ್ನು ಉತ್ಪಾದಿಸುತ್ತದೆ ಮತ್ತು ಗಂಟೆಗೆ 210 ಕಿ.ಮೀ ನಷ್ಟು ದೂರವನ್ನು ತಲುಪುವ ವೇಗವನ್ನು ಹೊಂದಿದೆ. 
  • ಇಕ್ಯೂಇ ಎಲೆಕ್ಟ್ರಿಕ್ SUV 56-ಇಂಚಿನ MBUX ಹೈಪರ್‌ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ.
  • ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, ಪಾರದರ್ಶಕ ಬಾನೆಟ್ ವೈಶಿಷ್ಟ್ಯದೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿವೆ.
  • ಇದು 10 ವರ್ಷಗಳ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ, ಇದು ಯಾವುದೇ ಕಾರು ತಯಾರಕರು EV ಯಲ್ಲಿ  ಇಷ್ಟು ವರ್ಷಗಳ ವಾರಂಟಿ ನೀಡುತ್ತಿಲ್ಲ. 

 EQB 3-ಸಾಲಿನ ಎಲೆಕ್ಟ್ರಿಕ್ SUV ಮತ್ತು EQS ಎಲೆಕ್ಟ್ರಿಕ್ ಸೆಡಾನ್ ಅನ್ನು ಅನುಸರಿಸಿ Mercedes-Benz EQE ಎಲೆಕ್ಟ್ರಿಕ್ SUV ಬ್ರ್ಯಾಂಡ್‌ನ ಮೂರನೇ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿ ನಮ್ಮ ಮುಂದಕ್ಕೆ ಬಂದಿದೆ. ಇದು ಸಂಪೂರ್ಣ ಲೋಡ್ ಮಾಡಲಾದ EQE 500 4MATIC ಎಂಬ ಒಂದೇ ಆವೃತ್ತಿಗಳಲ್ಲಿ ಮತ್ತು ರೂ 1.39 ಕೋಟಿಗಳ (ಎಕ್ಸ್-ಶೋರೂಮ್ ಪ್ಯಾನ್ ಇಂಡಿಯಾ) ಪರಿಚಯಾತ್ಮಕ ಬೆಲೆಗೆ ಲಭ್ಯವಿದೆ. ಈ ಹೊಸ ಎಲೆಕ್ಟ್ರಿಕ್-ಮರ್ಸಿಡಿಸ್ SUV ಏನೆಲ್ಲಾ ಕೊಡೆಗಳನ್ನು ನೀಡುತ್ತದೆ ಎಂಬುದನ್ನು ಗಮನಿಸೋಣ.

ಗುರುತಿಸಬಹುದಾದ EQ ವಿನ್ಯಾಸ

 ಮರ್ಸಿಡೀಸ್ ಬೆಂಜ್ ಇಕ್ಯೂಇ ಎಲೆಕ್ಟ್ರಿಕ್ SUV ವಿನ್ಯಾಸವು ಜರ್ಮನ್ ಮೂಲದ ಈ ಕಾರು ತಯಾರಕರಿಂದ ಇತರ ಎಲೆಕ್ಟ್ರಿಕ್ ಕೊಡುಗೆಗಳಲ್ಲಿ ಕಂಡುಬರುವ ಇತ್ತೀಚಿನ EQ ಸ್ಟೈಲಿಂಗ್ ಸೂಚನೆಗಳನ್ನು ಅಳವಡಿಸಿಕೊಂಡಿದೆ. ಮುಂಭಾಗದಲ್ಲಿ, ಕನೆಕ್ಟೆಡ್ ಎಲ್ಇಡಿ ಸ್ಟ್ರಿಪ್ ಇದೆ ಮತ್ತು ಅದರ ಮಧ್ಯದಲ್ಲಿ ಮರ್ಸಿಡಿಸ್ ಲೋಗೋದೊಂದಿಗೆ ನಕ್ಷತ್ರದಂತಹ ಮಾದರಿಯೊಂದಿಗೆ ಪ್ರಮುಖ ಕಪ್ಪು ಗ್ರಿಲ್ ಇದೆ. ಈ ಮುಚ್ಚಿದ ಗ್ರಿಲ್ ನಯವಾದ ಕಾಣುವ ಎಲ್‌ಇಡಿ ಹೆಡ್‌ಲೈಟ್‌ಗಳೊಂದಿಗೆ ವಿಲೀನಗೊಳ್ಳುತ್ತದೆ ಮತ್ತು ಕೆಳಗೆ ಮುಚ್ಚಿದ ಏರ್ ಡ್ಯಾಮ್ ಕೂಡ ಇದೆ.

ಇಕ್ಯೂಇ ಎಲೆಕ್ಟ್ರಿಕ್ SUV ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಮತ್ತು ಏರೋಡೈನಾಮಿಕಲ್ ಆಗಿ ಆಪ್ಟಿಮೈಸ್ ಮಾಡಿದ 21-ಇಂಚಿನ ಅಲಾಯ್ ವೀಲ್ ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಕ್ಲಾಡಿಂಗ್ ಚಕ್ರ ಕಮಾನುಗಳ ಸುತ್ತಲೂ ಚಲಿಸುತ್ತದೆ, EQE ನ ಒಟ್ಟಾರೆ SUV ಆಕರ್ಷಣೆಯನ್ನು ಹೆಚ್ಚಿಸುತ್ತದೆ. EQE ಎಲೆಕ್ಟ್ರಿಕ್ SUV ಯ ಹಿಂಭಾಗದಲ್ಲಿ, ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ ಸೆಟಪ್‌ನ ಆಧುನಿಕ ಕಾರ್ಯಗತಗೊಳಿಸುವಿಕೆಯನ್ನು ನೀವು ತಕ್ಷಣ ಗಮನಿಸಬಹುದು, ಇದು ಇತರ EQ ಮಾದರಿಗಳೊಂದಿಗೆ ಹಂಚಿಕೊಳ್ಳಲಾದ ಮತ್ತೊಂದು ವಿನ್ಯಾಸ ಅಂಶ.

ಇದನ್ನೂ ಓದಿ: 2023 Mercedes-Benz GLC ಅನ್ನು ಬಿಡುಗಡೆ - ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು

ಇಕ್ಯೂಇ ಎಸ್ಯುವಿಯ ಒಳಭಾಗದಲ್ಲಿ 

ಹೊರಭಾಗದಂತೆಯೇ, ಮರ್ಸಿಡಿಸ್ ಇಕ್ಯೂಇ ಎಸ್ಯುವಿಯ ಒಳಭಾಗದಲ್ಲಿ ಮರ್ಸಿಡಿಸ್ ನ ಇತರ ಎಲೆಕ್ಟ್ರಿಕ್  ಮಾದರಿಗಳಲ್ಲಿ ಕಂಡುಬರುವ ಅದೇ ವಿನ್ಯಾಸದ ಮಾದರಿಯನ್ನು ಅನುಸರಿಸುತ್ತದೆ. ಕ್ಯಾಬಿನ್‌ನ ಮುಖ್ಯ ಹೈಲೈಟ್ 56-ಇಂಚಿನ MBUX ಹೈಪರ್‌ಸ್ಕ್ರೀನ್ ಸೆಟಪ್ ಆಗಿದೆ, ಇದರಲ್ಲಿ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು ಫ್ರಂಟ್ ಪ್ಯಾಸೆಂಜರ್ ಡಿಸ್ಪ್ಲೇ ಸೇರಿವೆ. ಕ್ಯಾಬಿನ್‌ನ ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ಡಾಲ್ಬಿ ಅಟ್ಮಾಸ್‌ನೊಂದಿಗೆ 15-ಸ್ಪೀಕರ್ 750W ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಆಕ್ಟಿವ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್  ಸನ್‌ರೂಫ್ ಮತ್ತು ನಾಲ್ಕು- ಜೋನ್ ಕ್ಲೈಮೇಟ್ ಕಂಟ್ರೋಲ್. 

ಒಂಬತ್ತು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಪಾರದರ್ಶಕ ಬಾನೆಟ್ ವೈಶಿಷ್ಟ್ಯದೊಂದಿಗೆ 360-ಡಿಗ್ರಿ ಕ್ಯಾಮೆರಾದಿಂದ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಎಲೆಕ್ಟ್ರಿಕ್ SUVಯು ಲೇನ್ ಕೀಪ್ ಅಸಿಸ್ಟ್, ಆಟೊನೊಮಸ್ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಪಾರ್ಕಿಂಗ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಹ ಒಳಗೊಂಡಿದೆ. ಇದು ಪ್ರೀ-ಸೇಫ್ ಫೀಚರ್‌ನೊಂದಿಗೆ ಬರುತ್ತದೆ, ಇದು ತುರ್ತು ಪರಿಸ್ಥಿತಿಯಲ್ಲಿ ಕ್ಯಾಬಿನ್‌ನ ಮಧ್ಯದಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸುತ್ತದೆ,ಇದರಿಂದ ಅಪಘಾತದ ಸಮಯದಲ್ಲಿ ದೊಡ್ಡ ಗಾಯಗಳನ್ನು ತಡೆಯಬಹುದು.

ಪವರ್ ಟ್ರೇನ್ ಆಯ್ಕೆಗಳು

ಇಕ್ಯೂಇ ಎಲೆಕ್ಟ್ರಿಕ್ ಎಸ್ಯುವಿಯು 90.56 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ. 

ವೇರಿಯಂಟ್ 

ಇಕ್ಯೂಇ 500 4ಮ್ಯಾಟಿಕ್

ಬ್ಯಾಟರಿ

90.56 ಕಿ.ವ್ಯಾಟ್

ಡ್ರೈವೇಟ್ರೈನ್ 

ಆಲ್ ವೀಲ್ ಡ್ರೈವ್

ಪವರ್/ಟಾರ್ಕ್

408 ಪಿ.ಎಸ್/ 858 ಏನ್ಎಂ

ಘೋಷಿಸಿರುವ ರೇಂಜ್ (WLTP)

550 ಕಿ.ಮೀವರೆಗೆ

ವೇಗವರ್ಧನೆ 0-100 (ಗಂಟೆಗೆ ಕಿ.ಮೀ)

4.9 ಸೆಕೆಂಡ್ಸ್

ಇಕ್ಯೂಇ ಎಲೆಕ್ಟ್ರಿಕ್ ಎಸ್ಯುವಿ ಎರಡು ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ: 11 ಕಿ.ವ್ಯಾಟ್ AC ಮತ್ತು 170 ಕಿ.ವ್ಯಾಟ್ DC ವೇಗದ ಚಾರ್ಜಿಂಗ್. ಎರಡನೆಯ ಇಕ್ಯೂಇಯ ಬ್ಯಾಟರಿಯನ್ನು 30 ನಿಮಿಷಗಳಲ್ಲಿ 10 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಬೆಲೆಗೆ ಮರ್ಸಿಡಿಸ್- ಬೆಂಜ್ ಗ್ರಾಹಕರ ಆಯ್ಕೆಯ ಸ್ಥಳದಲ್ಲಿ (ಮನೆ, ಕಚೇರಿ, ಇತ್ಯಾದಿ) ಚಾರ್ಜಿಂಗ್ ಅನುಕೂಲಕ್ಕಾಗಿ ವಾಲ್‌ಬಾಕ್ಸ್ ಚಾರ್ಜರ್ ಅನ್ನು ಇನ್‌ಸ್ಟಾಲ್ ಮಾಡುತ್ತದೆ. ಇದಲ್ಲದೆ, ಮರ್ಸಿಡಿಸ್ ದೇಶಾದ್ಯಂತ 140 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದ್ದು ಅದು 60kW DC ಫಾಸ್ಟ್ ಚಾರ್ಜಿಂಗ್ ಅಥವಾ 180kW DC ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ನೀಡುತ್ತದೆ.

ಹೆಚ್ಚು ಸುಸಜ್ಜಿತವಾದ ಐಷಾರಾಮಿ ಎಸ್‌ಯುವಿಯಾಗಿ, ಇಕ್ಯೂಇ ಸುಧಾರಿತ ರೈಡ್ ಗುಣಮಟ್ಟಕ್ಕಾಗಿ AIRMATIC ಆಕ್ಟಿವ್‌ ಆಗಿರುವ ಸಸ್ಪೆನ್ಶನ್‌ನೊಂದಿಗೆ ಬರುತ್ತದೆ ಮತ್ತು ಇದು 25 ಮಿ.ಮೀ.ವರೆಗೆ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸುತ್ತದೆ.

ಮರ್ಸಿಡೀಸ್‌-ಬೆಂಜ್ ಇಕ್ಯೂಇ ನೊಂದಿಗೆ 10 ವರ್ಷಗಳ ಬ್ಯಾಟರಿ ವಾರಂಟಿಯನ್ನು ನೀಡುತ್ತಿದೆ, ಇದು ಯಾವುದೇ ತಯಾರಕರು ಇವಿ ಮೇಲೆ ನೀಡಲಾಗುವ ಅತ್ಯಧಿಕ ವ್ಯಾರಂಟಿ ಅವಧಿಯಾಗಿದೆ. ಅಲ್ಲದೆ, ಇಕ್ಯೂಇ  ಎಲೆಕ್ಟ್ರಿಕ್ ಎಸ್‌ಯುವಿನ ಸರ್ವೀಸ್ ಸಮಯವು 2 ವರ್ಷಗಳು/30,000km ಆಗಿರುತ್ತದೆ, ಇದು ಯಾವುದೇ ಸಾಂಪ್ರದಾಯಿಕ ಇಂಧನದಿಂದ ಚಾಲಿತವಾಗುವ ಎಂಜಿನ್ ಮಾದರಿಯಂತೆ ಆಗಾಗ್ಗೆ ಇರುವುದಿಲ್ಲ, ಅವುಗಳಲ್ಲಿ ಹೆಚ್ಚಿನ ಪಾರ್ಟ್ಸ್ ಗಳು ಕಾರ್ಯನಿರ್ವಹಿಸುವುದರಿಂದ ಮತ್ತು ಆಯಿಲ್ ನ ಕಾರಣದಿಂದಾಗಿ ಪ್ರತಿ ವರ್ಷ ಸರ್ವೀಸ್ ಅಗತ್ಯವಿರುತ್ತದೆ. 

ಪ್ರತಿಸ್ಪರ್ಧಿಗಳು

ಮರ್ಸಿಡೀಸ್‌-ಬೆಂಜ್ ಇಕ್ಯೂಇ ಎಲೆಕ್ಟ್ರಿಕ್ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಆಡಿ ಕ್ಯೂ8 ಇ-ಟ್ರಾನ್, ಬಿಎಂಡಬ್ಲ್ಯೂ ಐX, ಮತ್ತು ಜಾಗ್ವಾರ್ I-ಪೇಸ್‌ಗಳಿಗೆ ಬೆಲೆಬಾಳುವ ಪರ್ಯಾಯವಾಗಿ ಆಗಮಿಸುತ್ತದೆ.

ಇನ್ನಷ್ಟು ಓದಿ : ಮರ್ಸಿಡೀಸ್‌-ಬೆಂಜ್ ಇಕ್ಯೂಇ ಎಲೆಕ್ಟ್ರಿಕ್ ಎಸ್‌ಯುವಿ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಇಕ್ಯೂಇ ಎಸ್‌ಯುವಿ

Read Full News

explore ಇನ್ನಷ್ಟು on ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience