Mercedes-Benz GLA ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ

modified on ಜನವರಿ 31, 2024 07:21 pm by shreyash for ಮರ್ಸಿಡಿಸ್ ಗ್ಲಾಸ್

 • 40 Views
 • ಕಾಮೆಂಟ್‌ ಅನ್ನು ಬರೆಯಿರಿ

2024ರ Mercedes-Benz GLA ಈ ಮೈಲ್ಡ್‌ ಆದ ಫೇಸ್‌ಲಿಫ್ಟ್‌ನೊಂದಿಗೆ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಮತ್ತು ಕೆಲವು ಪ್ರಮುಖ ವೈಶಿಷ್ಟ್ಯದ ಆಪ್‌ಗ್ರೇಡ್‌ಗಳನ್ನು ಪಡೆಯುತ್ತದೆ

Mercedes-Benz GLA 2024

 • 2024ರ GLA ಅನ್ನು 200, 220ಡಿ 4ಮ್ಯಾಟಿಕ್, ಮತ್ತು 220ಡಿ 4ಮ್ಯಾಟಿಕ್ ಎಎಮ್‌ಜಿ ಲೈನ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. 
 • ಹೊಸ GLA ನವೀಕರಿಸಿದ ಹೆಡ್‌ಲೈಟ್ ಸೆಟಪ್, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಮತ್ತು ಆಪ್‌ಗ್ರೇಡ್‌ ಮಾಡಿರುವ ಬಂಪರ್ ಅನ್ನು ಪಡೆಯುತ್ತದೆ.
 • ಇದು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಇನ್ಫೋಟೈನ್ಮೆಂಟ್ ಮತ್ತು ಡ್ರೈವರ್ ಡಿಸ್ಪ್ಲೇ) ಮತ್ತು ಟಚ್ ಕಂಟ್ರೋಲ್‌ಗಳೊಂದಿಗೆ ಇತ್ತೀಚಿನ ಸ್ಟೀರಿಂಗ್ ವೀಲ್‌ಗಳನ್ನು ಹೊಂದಿದೆ.
 • ಇದು ಈಗ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ.
 • ಹೊರಹೋಗುವ GLA ಯಿಂದ ಅದೇ 1.3-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮರ್ಸಿಡಿಸ್ ಉಳಿಸಿಕೊಂಡಿದೆ.

 Mercedes-Benz GLA ಫೇಸ್‌ಲಿಫ್ಟ್ 2023 ರ ಮಧ್ಯದಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು, ಮತ್ತು ಈಗ 2024 ರಲ್ಲಿ, ಇದು ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ಬಂದಿಳಿದೆ. ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆಗಳು 50.50 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. 2024 ಜಿಎಲ್‌ಎ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ಒಟ್ಟಾರೆ ಅನುಕೂಲಕರ ಅಂಶವನ್ನು ಸುಧಾರಿಸಲು ಪ್ರಮುಖ ವೈಶಿಷ್ಟ್ಯಗಳನ್ನು ಸೇರಿಸುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡು ಆಯ್ಕೆಗಳೊಂದಿಗೆ ಇದರಲ್ಲಿಯೂ ನೀಡುವುದನ್ನು ಮುಂದುವರೆಸಿದೆ.

ಫೇಸ್‌ಲಿಫ್ಟೆಡ್ GLA ಯ ಬೆಲೆಗಳ ಬಗ್ಗೆ ಚಿತ್ತ ಹರಿಸೋಣ.

ಬೆಲೆಗಳು

ಜಿಎಲ್‌ಎ 200

50.50 ಲಕ್ಷ ರೂ

ಜಿಎಲ್‌ಎ 220 4ಮ್ಯಾಟಿಕ್‌

54.75 ಲಕ್ಷ ರೂ

ಜಿಎಲ್‌ಎ 220ಡಿ 4ಮ್ಯಾಟಿಕ್‌ ಎಎಮ್‌ಜಿ ಲೈನ್

56.90 ಲಕ್ಷ ರೂ

ಇವುಗಳು ಎಲ್ಲಾ ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಸೂಕ್ಷ್ಮ ವಿನ್ಯಾಸ ಬದಲಾವಣೆಗಳು

2024 Mercedes-Benz GLA

Mercedes-Benz GLA ಫೇಸ್‌ಲಿಫ್ಟ್‌ನಲ್ಲಿನ ವಿನ್ಯಾಸ ಬದಲಾವಣೆಗಳು ಚಿಕ್ಕದಾಗಿದ್ದು, ಅದರ ಹಿಂದಿನ ಮಾದರಿಯ ಪ್ರೊಫೈಲ್ ಅನ್ನು ಇದರಲ್ಲಿಯೂ ಮುಂದುವರೆಸಿದೆ. ಎಲ್ಇಡಿ  ಡಿಆರ್‌ಎಲ್‌ಗಳೊಂದಿಗೆ ಸುಧಾರಿಸಿದ ಎಲ್ಇಡಿ ಹೆಡ್‌ಲೈಟ್‌ಗಳು, ವರ್ಟಿಕಲ್ ಲೈನ್‌ಗಳೊಂದಿಗೆ ರಿಫ್ರೆಶ್ ಮಾಡಿದ ಗ್ರಿಲ್ ಮತ್ತು ಪರಿಷ್ಕೃತ ಬಂಪರ್ ವಿನ್ಯಾಸವನ್ನು ಒಳಗೊಂಡಿರುವ ಅತ್ಯಂತ ಗಮನಾರ್ಹವಾದ ಬದಲಾವಣೆಗಳು ಮುಂಭಾಗದಲ್ಲಿವೆ. ಎಸ್‌ಯುವಿಯ ಎಎಮ್‌ಜಿ ಲೈನ್ ವೇರಿಯೆಂಟ್‌ನಲ್ಲಿ ಪಿನ್ ಕ್ರೋಮ್ ಇನ್ಸರ್ಟ್‌ ಮಾಡುವುದರೊಂದಿಗೆ ವಿಶಿಷ್ಟವಾದ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ.

ಇದನ್ನು ಸಹ ಓದಿ:  Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ

2024 Mercedes-Benz GLA Rear

ಪ್ರೊಫೈಲ್‌ನಲ್ಲಿ, ಜಿಎಲ್‌ಎ ಫೇಸ್‌ಲಿಫ್ಟ್‌ನ ಎಎಮ್‌ಜಿ ಲೈನ್ ವೇರಿಯೆಂಟ್‌ 19-ಇಂಚಿನ ಅಲಾಯ್‌ ವೀಲ್‌ಗಳ ಹೊಸ ಗುಂಪನ್ನು ಹೊಂದಿದೆ, ಮತ್ತು ಚಕ್ರ ಕಮಾನುಗಳ ಸುತ್ತಲಿನ ಹೊದಿಕೆಯು ಈಗ ಬಾಡಿಯ ಬಣ್ಣಕ್ಕೆ ಹೊಂದಿಕೆಯಾಗುತ್ತದೆ. ನವೀಕರಿಸಿದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊರತುಪಡಿಸಿ ಹಿಂಭಾಗದ ವಿನ್ಯಾಸವು ಬದಲಾಗದೆ ಉಳಿದಿದೆ. ಮರ್ಸಿಡಿಸ್ ಹೊಸ ಸ್ಪೆಕ್ಟ್ರಲ್ ಬ್ಲೂ ಎಕ್ಸ್‌ಟೀರಿಯರ್ ಶೇಡ್ ಅನ್ನು ಫೇಸ್‌ಲಿಫ್ಟೆಡ್ ಜಿಎಲ್‌ಎ ಜೊತೆಗೆ ಪರಿಚಯಿಸಿದೆ.

ಕ್ಯಾಬಿನ್ ನವೀಕರಣಗಳು

2024 Mercedes-Benz GLA Dashboard

2024ರ ಮರ್ಸಿಡಿಸ್ ಜಿಎಲ್‌ಎ ಎಸ್‌ಯುವಿ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಮತ್ತು ಆಲ್-ಕಪ್ಪು ಇಂಟಿರೀಯರ್‌ಗಳ ಆಯ್ಕೆಯೊಂದಿಗೆ ಬರುತ್ತದೆ.  ಡ್ಯಾಶ್‌ಬೋರ್ಡ್ ವಿನ್ಯಾಸವು ಮೊದಲಿನಂತೆಯೇ ಇದೆ, ಆದರೆ ಇದು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಪಡೆಯುತ್ತದೆ ಅದು ಹೆಚ್ಚುವರಿ ಸ್ಟೋರೇಜ್‌ ಸ್ಥಳವನ್ನು ಹೊಂದಿದೆ. ಜಿಎಲ್‌ಎ ಫೇಸ್‌ಲಿಫ್ಟ್‌ನ ರೆಗುಲರ್‌ ವೇರಿಯೆಂಟ್‌ ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನಲ್ಲಿ ಇಲ್ಯುಮಿನೇಟೆಡ್ ಸ್ಟಾರ್ ಪ್ಯಾಟರ್ನ್ ಟ್ರಿಮ್ ಅನ್ನು ಪಡೆಯುತ್ತದೆ, ಆದರೆ ಎಎಮ್‌ಜಿ ಲೈನ್ ವೇರಿಯೆಂಟ್‌ ವಿಶಿಷ್ಟವಾದ ಕಾರ್ಬನ್ ರಚನೆಯ ಟ್ರಿಮ್ ಅನ್ನು ಹೊಂದಿದೆ, ಇದನ್ನು ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್‌ನಿಂದ ವರ್ಧಿಸಲಾಗಿದೆ.

ಹೆಚ್ಚುವರಿಯಾಗಿ, ಎಎಮ್‌ಜಿ ಲೈನ್ ವೇರಿಯೆಂಟ್‌ ಇತ್ತೀಚಿನ ಎಎಮ್‌ಜಿ ಸ್ಟೀರಿಂಗ್ ವೀಲ್ ಜೊತೆಗೆ ಟಚ್‌ ಕಂಟ್ರೋಲ್‌ಗಳೊಂದಿಗೆ ಬರುತ್ತದೆ, ಇದನ್ನು ನಪ್ಪಾ ಲೆದರ್‌ನಲ್ಲಿ ಸುತ್ತಲಾಗಿದೆ. 2024ರ ಜಿಎಲ್‌ಎಯು ಮ್ಯಾಕಿಯಾಟೊ ಬೀಜ್ ಮತ್ತು ಆರ್ಟಿಕೊ ಬ್ಲ್ಯಾಕ್ ಎಂಬ ಎರಡು ಆಪ್ಹೊಲ್ಸ್‌ಟೆರಿ ಆಯ್ಕೆಗಳನ್ನು ನೀಡುತ್ತದೆ.

ಇದನ್ನೂ ನೋಡಿ: 2024ರ Mercedes-AMG GLE 53 Coupe ಬಿಡುಗಡೆ, ಬೆಲೆಗಳು 1.85 ಕೋಟಿ ರೂ.ನಿಂದ ಪ್ರಾರಂಭ   

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

2024 Mercedes-Benz GLA Infotainment

ಮರ್ಸಿಡಿಸ್ ಜಿಎಲ್‌ಎ ಫೇಸ್‌ಲಿಫ್ಟ್ ಅನ್ನು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ (ಒಂದು ಇನ್ಫೋಟೈನ್‌ಮೆಂಟ್‌ಗೆ ಮತ್ತು ಇನ್ನೊಂದು ಡ್ರೈವರ್‌ಗೆ) ಸಜ್ಜುಗೊಳಿಸಿದೆ. ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಈಗ ಇತ್ತೀಚಿನ MBUX - NTG7 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ ಇದರಲ್ಲಿ ಸಪೋರ್ಟ್‌ ಆಗುತ್ತದೆ .2024 GLA ನಲ್ಲಿರುವ ಇತರ ವೈಶಿಷ್ಟ್ಯಗಳೆಂದರೆ ಮೆಮೊರಿ ಫಂಕ್ಷನ್‌ನೊಂದಿಗೆ ವಿದ್ಯುನ್ಮಾನವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಪ್ರಯಾಣಿಕರ ಆಸನಗಳು, 64-ಬಣ್ಣದ ಎಂಬಿಯೆಂಟ್‌ ಲೈಟಿಂಗ್‌, ಗೆಸ್ಚರ್ ನಿಯಂತ್ರಿತ ಪವರ್‌ಡ್‌ ಟೈಲ್‌ಗೇಟ್ ಮತ್ತು ಎರಡು-ಭಾಗದ ಪನೋರಮಿಕ್ ಸನ್‌ರೂಫ್.

ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಆಕ್ಟಿವ್‌ ಬ್ರೇಕ್ ಮತ್ತು ಬ್ಲೈಂಡ್ ಸ್ಪಾಟ್ ಅಸಿಸ್ಟ್, ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

ಪವರ್‌ಟ್ರೇನ್‌ ವಿವರಗಳು

ಜಿಎಲ್‌ಎ ಫೇಸ್‌ಲಿಫ್ಟ್ ಅದರ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ಅವುಗಳ ವಿಶೇಷಣಗಳನ್ನು ಕೋಷ್ಟಕದಲ್ಲಿ ಕೆಳಗೆ ವಿವರಿಸಲಾಗಿದೆ:

ವಿಶೇಷಣಗಳು

ಜಿಎಲ್‌ಎ 200

ಜಿಎಲ್‌ಎ 220ಡಿ 4ಮ್ಯಾಟಿಕ್‌

ಎಂಜಿನ್ 

1.3-ಲೀಟರ್ ಟರ್ಬೊ-ಪೆಟ್ರೋಲ್

2-ಲೀಟರ್ ಡೀಸೆಲ್

ಡ್ರೈವ್‌ಟ್ರೈನ್‌

2 ವೀಲ್‌ ಡ್ರೈವ್‌

ಆಲ್‌ ವೀಲ್‌ಡ್ರೈವ್‌

ಪವರ್ 

163 ಪಿಎಸ್

190 ಪಿಎಸ್

ಟಾರ್ಕ್‌

270 ಎನ್ಎಂ

400 ಎನ್ಎಂ

ಟ್ರಾನ್ಸ್‌ಮಿಷನ್

7-ವೇಗದ ಡಿಸಿಟಿ

8-ವೇಗದ ಡಿಸಿಟಿ

ವೇಗವರ್ಧನೆ (0-100 kmph)

8.9 ಸೆಕೆಂಡುಗಳು

7.5 ಸೆಕೆಂಡುಗಳು

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆ

17.4 ಕೆಎಂಪಿಎಲ್

18.9 ಕೆಎಂಪಿಎಲ್

ಆಫ್ ರೋಡ್ ಎಂಜಿನಿಯರಿಂಗ್ ಪ್ಯಾಕೇಜ್

2024 Mercedes-Benz GLA

ಮರ್ಸಿಡಿಸ್ ಜಿಎಲ್‌ಎ ಫೇಸ್‌ಲಿಫ್ಟ್‌ನ 220ಡಿ ಎಎಮ್‌ಜಿ ಲೈನ್ ಡೀಸೆಲ್ ಆವೃತ್ತಿಯು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್ ಅನ್ನು ಒಳಗೊಂಡಿದೆ.  ಮರ್ಸಿಡಿಸ್ ಇದನ್ನು ಆಫ್-ರೋಡ್ ಎಂಜಿನಿಯರಿಂಗ್ ಪ್ಯಾಕೇಜ್‌ನೊಂದಿಗೆ ನೀಡುತ್ತದೆ, ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಗ್ರೇಡಿಯಂಟ್ ಮತ್ತು ಇಳಿಜಾರಿನ ಕೋನದಂತಹ ಪ್ಯಾರಮೀಟರ್‌ಗಳಿಗಾಗಿ ರಿಯಲ್‌-ಟೈಮ್‌ನ ಡಿಸ್‌ಪ್ಲೇಯನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಆಫ್-ರೋಡ್ ಪ್ಯಾಕೇಜ್ ಡೌನ್‌ಹಿಲ್ ಸ್ಪೀಡ್ ರೆಗ್ಯುಲೇಶನ್ (ಡಿಎಸ್‌ಆರ್) ಅನ್ನು ಸಂಯೋಜಿಸುತ್ತದೆ, ಇದು ಹಿಲ್ ಡಿಸೆಂಟ್ ಕಂಟ್ರೋಲ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಆದಾಗಿಯೂ, ಈ ಸಿಸ್ಟಮ್‌ 2 kmph ಮತ್ತು 18 kmph ನಡುವಿನ ವೇಗದ ರೇಂಜ್‌ಅನ್ನು ಮ್ಯಾನುಯಲ್‌ ಆಗಿ ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಅಸಿಸ್ಟ್ ಸಿಸ್ಟಮ್ ನಂತರ ವೇಗ ಕಡಿಮೆ ಮಾಡುವಾಗ ಮೊದಲೇ ಆಯ್ಕೆಮಾಡಿದ ವೇಗವನ್ನು ಆಧರಿಸಿ ಬ್ರೇಕ್‌ಗಳನ್ನು ಬಳಸುತ್ತದೆ.

ಪ್ರತಿಸ್ಪರ್ಧಿಗಳು

 2024ರ ಮರ್ಸಿಡೀಸ್‌-ಬೆಂಜ್‌ ಜಿಎಲ್‌ಎಯು ಮಾರುಕಟ್ಟೆಯಲ್ಲಿ ಆಡಿ ಕ್ಯೂ3 ಮತ್ತು ಬಿಎಮ್‌ಡಬ್ಲ್ಯೂ ಎಕ್ಸ್‌1 ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ. ಇದನ್ನು ಮಿನಿ ಕೂಪರ್ ಕಂಟ್ರಿಮ್ಯಾನ್‌ಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮರ್ಸಿಡಿಸ್ ಗ್ಲಾಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience