• English
  • Login / Register

Mercedes-Benz GLE: ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ ಖ್ಯಾತ ನಿರ್ದೇಶಕ ಆರ್ ಬಾಲ್ಕಿ

ಮರ್ಸಿಡಿಸ್ ಗ್ಲೆ ಗಾಗಿ ansh ಮೂಲಕ ಏಪ್ರಿಲ್ 19, 2024 07:38 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಐಷಾರಾಮಿ ಎಸ್‌ಯುವಿಯು ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಇವೆಲ್ಲವೂ ಆಲ್-ವೀಲ್-ಡ್ರೈವ್ ಸಿಸ್ಟಮ್‌ನಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ

R Balki Buys A Mercedes-Benz GLE

ಪಾ, ಪ್ಯಾಡ್ ಮ್ಯಾನ್ ಮತ್ತು ಕಿ & ಕಾ ನಂತಹ ಚಲನಚಿತ್ರಗಳ ನಿರ್ದೇಶನದ ಮೂಲಕ ಜನಪ್ರೀಯತೆ ಗಳಿಸಿರುವ ಬಾಲಿವುಡ್‌ನ ಖ್ಯಾತ ನಿರ್ದೇಶಕ ಆರ್ ಬಾಲಕೃಷ್ಣನ್ (ಆರ್ ಬಾಲ್ಕಿ ಎಂದೇ ಫೇಮಸ್‌) ಅವರು ಇದೀಗ 5-ಆಸನಗಳ ಐಷಾರಾಮಿ ಎಸ್‌ಯುವಿ Mercedes-Benz GLE ಯನ್ನು ಖರೀದಿಸಿದ್ದಾರೆ. ನಿರ್ದೇಶಕರು ತಮ್ಮ 60 ನೇ ಹುಟ್ಟುಹಬ್ಬದಂದು ಎಸ್‌ಯುವಿಯ ಬೇಸ್‌ ವೇರಿಯೆಂಟ್‌ ಅನ್ನು ತಮಗೆ ತಾವೇ ಉಡುಗೊರೆಯಾಗಿ ನೀಡಿದ್ದಾರೆ.  ಈ ಐಷಾರಾಮಿ ಎಸ್‌ಯುವಿಯು ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುವುದನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ. 

A post shared by Mercedes-Benz Auto Hangar India Pvt Ltd (@autohangar)

ಪವರ್‌ಟ್ರೇನ್‌

Mercedes-Benz GLE 2-litre Diesel Engine

ಇಂಜಿನ್

2-ಲೀಟರ್ ಡೀಸೆಲ್

3-ಲೀಟರ್ ಡೀಸೆಲ್

3-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

269 ಪಿಎಸ್‌

367ಪಿಎಸ್‌

381 ಪಿಎಸ್‌

ಟಾರ್ಕ್‌

550 ಎನ್‌ಎಮ್‌

750 ಎನ್‌ಎಮ್‌

500 ಎನ್‌ಎಮ್‌

ಟ್ರಾನ್ಸ್‌ಮಿಷನ್‌

9-ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಡ್ರೈವ್‌ಟ್ರೇನ್‌

ಆಲ್-ವೀಲ್-ಡ್ರೈವ್ (AWD)

Mercedes-Benz ಜಿಎಲ್‌ಇ ಡೀಸೆಲ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಇವೆಲ್ಲವೂ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್‌ನೊಂದಿಗೆ ಜೋಡಿಯಾಗಿವೆ. ನಿರ್ದೇಶಕ ಆರ್‌ ಬಾಲ್ಕಿಯವರು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುವ ಈ ಎಸ್‌ಯುವಿಯ ಬೇಸ್‌ ಮೊಡೆಲ್‌ ಅನ್ನು ಖರೀದಿಸಿದ್ದಾರೆ. 

ಇದನ್ನೂ ಓದಿ: Mercedes-Maybach GLS 600; ಐಷಾರಾಮಿ ಕಾರು ಖರೀದಿಸಿದ ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ : ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

 Mercedes-AMG GLE 53 Coupe,  ಮರ್ಸೀಡೀಸ್‌-ಬೆಂಜ್‌ ತನ್ನ GLE ಅನ್ನು Mercedes-AMG GLE 53 ಕೂಪ್‌ ಎಂಬ ಪರ್ಫಾರ್ಮೆನ್ಸ್‌ ವರ್ಷನ್‌ನಲ್ಲಿ ನೀಡುತ್ತದೆ, ಇದು 3-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ (435 PS/560 Nm) ಜೊತೆಗೆ 48V ಮೈಲ್ಡ್‌-ಹೈಬ್ರಿಡ್ ಸಹಾಯವನ್ನು ಹೊಂದಿದೆ. ಇದು 20 PS ಮತ್ತು 200 Nm ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. 

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

Mercedes-Benz GLE Cabin

ಜಿಎಲ್‌ಇ ಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ನಾಲ್ಕು-ಝೋನ್‌ ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೋಲ್‌, ಪನೋರಮಿಕ್ ಸನ್‌ರೂಫ್, ಬಿಸಿಯಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು 590W 13-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ: 20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್‌) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್‌ನ ಸೇರ್ಪಡೆ

ಸುರಕ್ಷತೆಯ ಭಾಗವನ್ನು ಗಮನಿಸುವುದಾದರೆ, ಇದು 9 ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮತ್ತು ಆಟೋನೋಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರುವ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Mercedes-Benz GLE 300d

ಮರ್ಸಿಡೀಸ್‌-ಬೆಂಜ್‌ ಜಿಎಲ್‌ಇಯ ಬೆಲೆಯು (ಎಕ್ಸ್ ಶೋರೂಂ) 96.4 ಲಕ್ಷ ರೂ.ನಿಂದ 1.15 ಕೋಟಿ ರೂ. ವರೆಗೂ ಇದೆ. ಜಿಎಲ್‌ಇಯು ಮಾರುಕಟ್ಟೆಯಲ್ಲಿ  BMW X5, Audi Q7 ಮತ್ತು Volvo XC90 ಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: GLE ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಗ್ಲೆ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience