20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್‌ನ ಸೇರ್ಪಡೆ
ಟೊಯೋಟಾ ಇನ್ನೋವಾ ಹೈಕ್ರಾಸ್ ಗಾಗಿ shreyash ಮೂಲಕ ಏಪ್ರಿಲ್ 15, 2024 09:11 pm ರಂದು ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ GX (ಒಪ್ಶನಲ್) ಪೆಟ್ರೋಲ್ ಆವೃತ್ತಿಯು 7- ಮತ್ತು 8-ಆಸನಗಳ ಲೇಔಟ್‌ಗಳಲ್ಲಿ ಲಭ್ಯವಿದೆ
- ಇನ್ನೋವಾ ಹೈಕ್ರಾಸ್‌ನ ಹೊಸ ಜಿಎಕ್ಸ್(ಒಪ್ಶನಲ್) ಆವೃತ್ತಿಯು ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಮತ್ತು ಹಿಂಭಾಗದ ಡಿಫಾಗರ್ ಅನ್ನು ಪಡೆಯುತ್ತದೆ.
- ಒಳಭಾಗದಲ್ಲಿ, ಇದು ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್‌ಟೆರಿಯೊಂದಿಗೆ ಚೆಸ್ಟ್‌ನಟ್ ಥೀಮ್‌ನ ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿದೆ.
- ಇನ್ನೋವಾ ಹೈಕ್ರಾಸ್‌ನ ಜಿಎಕ್ಸ್(ಒಪ್ಶನಲ್) ಆವೃತ್ತಿಯು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಜೊತೆಗೆ ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ.
- ಇದರ ಸುರಕ್ಷತಾ ಕಿಟ್ ಹೆಚ್ಚುವರಿಯಾಗಿ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
- ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾದ 174 ಪಿಎಸ್ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುತ್ತದೆ.
Toyota Innova Hycross ನ ಹೊಸ ಪೆಟ್ರೋಲ್ ಜಿಎಕ್ಸ್(ಒಪ್ಶನಲ್) ಆವೃತ್ತಿಯನ್ನು ಪಡೆಯುತ್ತಿದ್ದು, ಇದರ ಎಕ್ಸ್ ಶೋರೂಂ ಬೆಲೆಯು 20.99 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಈ ಹಿಂದೆ ಎಮ್‌ಪಿವಿಯ ಹೈಬ್ರಿಡ್ ಆವೃತ್ತಿಗಳಿಗೆ ಮಾತ್ರ ಸೀಮಿತವಾಗಿದ್ದ ಹಲವು ವೈಶಿಷ್ಟ್ಯಗಳು ಇದೀಗ ಇನ್ನೋವಾ ಹೈಕ್ರಾಸ್‌ನ ಹೊಸ ಜಿಎಕ್ಸ್ ಟ್ರಿಮ್‌ಗಳಲ್ಲಿಯು ಲಭ್ಯವಾಗಲಿದ್ದು, 7- ಮತ್ತು 8-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಪಡೆಯಬಹುದು. ಹೊಸ Iಟೊಯೊಟಾ ಇನ್ನೋವಾ ಹೈಕ್ರಾಸ್‌ನ ಜಿಎಕ್ಸ್(ಒಪ್ಶನಲ್) ಆವೃತ್ತಿಯ ಡೆಲಿವೆರಿಗಳು ಇಂದಿನಿಂದಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
ಬೆಲೆಗಳು
ಹೊಸ ಆವೃತ್ತಿಗಳು |
ರೆಗುಲರ್ ಜಿಎಕ್ಸ್ ಆವೃತ್ತಿಗಳು |
ವ್ಯತ್ಯಾಸ |
ಜಿಎಕ್ಸ್ (ಒಪ್ಶನಲ್) 8-ಸೀಟರ್ - 20.99 ಲಕ್ಷ ರೂ. |
ಜಿಎಕ್ಸ್ 8-ಸೀಟರ್ - 19.82 ಲಕ್ಷ ರೂ |
+ 1.17 ಲಕ್ಷ ರೂ. |
ಜಿಎಕ್ಸ್ (ಒಪ್ಶನಲ್) 7-ಸೀಟರ್ - 21.13 ಲಕ್ಷ ರೂ. |
ಜಿಎಕ್ಸ್ 7-ಸೀಟರ್ - 19.77 ಲಕ್ಷ ರೂ. |
+ 1.36 ಲಕ್ಷ ರೂ |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳು
ಇನ್ನೋವಾ ಹೈಕ್ರಾಸ್‌ನ 7- ಮತ್ತು 8-ಆಸನಗಳ ಜಿಎಕ್ಸ್(ಒಪ್ಶನಲ್) ಎರಡೂ ವೇರಿಯೆಂಟ್‌ಗಳು ಬೆಲೆಗಳಲ್ಲಿ ಅವುಗಳ ಜಿಎಕ್ಸ್ ಟ್ರಿಮ್‌ಗಳಿಗಿಂತ 1 ಲಕ್ಷ ರೂ.ಗಿಂತಲೂ ಹೆಚ್ಚು ದುಬಾರಿಯಾಗಿದೆ.
ರೆಗುಲರ್ ಜಿಎಕ್ಸ್ ವೇರಿಯೆಂಟ್‌ಗಿಂತ ಹೆಚ್ಚೇನು ನೀಡುತ್ತದೆ ?
ಇನ್ನೋವಾ ಹೈಕ್ರಾಸ್‌ನ ಹೊಸದಾಗಿ ಪರಿಚಯಿಸಲಾದ ಜಿಎಕ್ಸ್ (O) ಆವೃತ್ತಿಯು ರೆಗುಲರ್ ಜಿಎಕ್ಸ್ ಟ್ರಿಮ್‌ಗೆ ಹೋಲಿಸಿದರೆ ಹೆಚ್ಚಿನ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಎಸಿ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರಿ ವ್ಯೂ ಕ್ಯಾಮೆರಾ, ಹಿಂಭಾಗದ ಸನ್‌ಶೇಡ್‌ಗಳು, ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಡಿಫಾಗರ್‌ನೊಂದಿಗೆ ಬರುತ್ತದೆ. ಆದರೂ, ದೊಡ್ಡ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ಹಿಂಭಾಗದ ಸನ್‌ಶೇಡ್‌ಗಳು 7-ಆಸನಗಳ ಎಮ್‌ಪಿವಿಗೆ ಮಾತ್ರ ಸೀಮಿತವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆ, ಟೊಯೊಟಾ ಎಮ್‌ಪಿವಿನಲ್ಲಿನ ಈ ಆರಾಮದಾಯಕ ಸೌಕರ್ಯಗಳಿಗಾಗಿ ಹೈಕ್ರಾಸ್ ಹೈಬ್ರಿಡ್‌ಗಾಗಿ ಖರೀದಿದಾರರು ಸುಮಾರು 5 ಲಕ್ಷ ರೂ.ಗಳಷ್ಟು ಹೆಚ್ಚು ಹಣ ವಿನಿಯೋಗಿಸಬೇಕಿತ್ತು.
ಟೊಯೋಟಾ ಇನ್ನೋವಾ ಹೈಕ್ರಾಸ್‌ನ ಜಿಎಕ್ಸ್(ಒಪ್ಶನಲ್) ಆವೃತ್ತಿಯು ಜಿಎಕ್ಸ್ ಆವೃತ್ತಿಗಿಂತ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನುಭವಕ್ಕಾಗಿ ಫ್ಯಾಬ್ರಿಕ್ ಸೀಟ್ ಅಪ್ಹೋಲ್‌ಸ್ಟರಿಯೊಂದಿಗೆ ಚೆಸ್ಟ್‌ನಟ್-ಥೀಮ್ ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್ ಅನ್ನು ಸಹ ಹೊಂದಿದೆ. ಈ ಹೊಸ ಇನ್ನೋವಾ ಹೈಕ್ರಾಸ್ ಟ್ರಿಮ್ ಹೊರಭಾಗದಲ್ಲಿ ಯಾವುದೇ ಹೆಚ್ಚುವರಿ ವಿನ್ಯಾಸ ಅಂಶಗಳನ್ನು ಒಳಗೊಂಡಿಲ್ಲ, ಅದೇ 16-ಇಂಚಿನ ಅಲಾಯ್ ವೀಲ್‌ಗಳು ಮತ್ತು ಮುಂಭಾಗದಲ್ಲಿ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ನೀಡಲಾಗುತ್ತದೆ. ಜಿಎಕ್ಸ್(ಒ) ಈಗ ನೀವು ಕೇವಲ ಪೆಟ್ರೋಲ್ ಎಂಜಿನ್‌ನ ಟೊಯೋಟಾ ಇನ್ನೋವಾಕ್ಕಾಗಿ ಖರೀದಿಸಬಹುದಾದ ಅತ್ಯುತ್ತಮ-ಸುಸಜ್ಜಿತ ಆವೃತ್ತಿಯಾಗಿದೆ.
ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಇಬಿಡಿ ಜೊತೆಗೆ ಎಬಿಎಸ್ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್ ಸೇರಿವೆ.
ಪವರ್‌ಟ್ರೇನ್
ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಕೇವಲ ಪೆಟ್ರೋಲ್‌ನ ಈ ಆವೃತ್ತಿಯು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 174 PS ಮತ್ತು 205 Nm ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ನೀವು ಇನ್ನೋವಾ ಹೈಕ್ರಾಸ್‌ನ ಹೈಬ್ರಿಡ್ ಆವೃತ್ತಿಗಳನ್ನು ಆರಿಸಿದರೆ, ಇದು 2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ 186 PS ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬಳಸುತ್ತದೆ.
ಪೂರ್ಣ ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ದೆಹಲಿಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಎಕ್ಸ್ ಶೋರೂಂ ಬೆಲೆ 19.77 ಲಕ್ಷ ರೂ.ನಿಂದ 30.98 ಲಕ್ಷ ರೂ.ವರೆಗೆ ಇರಲಿದೆ. ಇದು ಮಾರುಕಟ್ಟೆಯಲ್ಲಿ ಮಾರುತಿ ಇನ್ವಿಕ್ಟೊ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾದ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ, ಹಾಗೆಯೇ ಇದು ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ.
ಇಲ್ಲಿ ಇನ್ನಷ್ಟು ಓದಿ : ಟೊಯೋಟಾ ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್