• English
  • Login / Register

2024 ರ ಅಂತ್ಯದ ವೇಳೆಗೆ Mercedes-Benz Indiaದಿಂದ ನಾಲ್ಕು ಹೊಸ ಮಾಡೆಲ್ ಗಳ ಲಾಂಚ್!

ಮರ್ಸಿಡಿಸ್ ಇ-ವರ್ಗ ಗಾಗಿ dipan ಮೂಲಕ ಜುಲೈ 11, 2024 08:35 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

2024 ರ ಎರಡನೇ ಭಾಗದಲ್ಲಿ EQA ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಪ್ರಾರಂಭಿಸುವ ಮೂಲಕ ಆರು ಕಾರುಗಳನ್ನು ಬಿಡುಗಡೆ ಮಾಡಲು ಮರ್ಸಿಡಿಸ್-ಬೆಂಜ್ ಪ್ಲಾನ್ ಮಾಡಿದೆ

Mercedes-Benz India To Launch 4 More Models By End Of 2024

  • ಇತ್ತೀಚಿನ EQA ಮತ್ತು EQB ಫೇಸ್‌ಲಿಫ್ಟ್ ಬಿಡುಗಡೆಯ ನಂತರ 2024 ರ ಎರಡನೇ ಭಾಗದಲ್ಲಿ ಇನ್ನೂ ನಾಲ್ಕು ಮರ್ಸಿಡಿಸ್-ಬೆಂಜ್ ಕಾರುಗಳು ಮಾರುಕಟ್ಟೆಗೆ ಬರಲಿವೆ.
  •  ಮುಂಬರುವ ಪ್ರಮುಖ ವರ್ಷನ್ ನಲ್ಲಿ AMG ಪರ್ಫಾರ್ಮೆನ್ಸ್ ಎಡಿಷನ್ ನೊಂದಿಗೆ ಬರಲಿರುವ ಹೊಸ E-ಕ್ಲಾಸ್ ಲಾಂಗ್-ವೀಲ್‌ಬೇಸ್ ಸೇರಿದೆ.
  •  ಬ್ರ್ಯಾಂಡ್‌ನ ಪ್ರಮುಖ ಎಲೆಕ್ಟ್ರಿಕ್ SUV ಯಾಗಿರುವ ಮರ್ಸಿಡಿಸ್-ಬೆಂಜ್ ಮೇಬ್ಯಾಕ್ EQS SUV ಅನ್ನು ಕೂಡ ಕನ್ಫರ್ಮ್ ಮಾಡಲಾಗಿದೆ.
  •  ಓಪನ್-ಟಾಪ್ ಮರ್ಸಿಡಿಸ್-ಬೆಂಜ್ AMG CLE ಕ್ಯಾಬ್ರಿಯೊಲೆಟ್ ಅನ್ನು ಕೂಡ ಕಾರು ತಯಾರಕರು ಬಿಡುಗಡೆ ಮಾಡಬಹುದು.
  •  ಎಲೆಕ್ಟ್ರಿಕ್ G-ಕ್ಲಾಸ್ SUVಗಾಗಿ ಬುಕ್ಕಿಂಗ್‌ಗಳು ಈಗ ತೆರೆದಿವೆ, ಅ ಮೂಲಕ ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎಂಬ ಸೂಚನೆ ನೀಡಲಾಗಿದೆ.

 2024 ರ ಎರಡನೇ ಭಾಗದಲ್ಲಿ ಮೂರು EV ಗಳನ್ನು ಒಳಗೊಂಡಂತೆ ಒಟ್ಟು ಆರು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಪ್ಲಾನ್ ಅನ್ನು ಮರ್ಸಿಡಿಸ್-ಬೆಂಜ್ ಇಂಡಿಯಾ ಬಹಿರಂಗಪಡಿಸಿದೆ. ಎರಡು ಹೊಸ ಎಲೆಕ್ಟ್ರಿಕ್ SUV ಗಳನ್ನು ಪರಿಚಯಿಸುವ ಮೂಲಕ ಅದನ್ನು ಪ್ರಾರಂಭಿಸಲಾಗಿದೆ, ಅವುಗಳೆಂದರೆ EQA ಮತ್ತು EQB ಫೇಸ್‌ಲಿಫ್ಟ್. ಇತರ ನಾಲ್ಕು ಮಾಡೆಲ್ ಗಳ ಬಗ್ಗೆ ಕೂಡ ಸುಳಿವು ನೀಡಲಾಗಿದೆ, ಆದರೆ ಅವುಗಳ ನಿಖರವಾದ ಬಿಡುಗಡೆ ದಿನಾಂಕಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಉಳಿದ ಮರ್ಸಿಡಿಸ್-ಬೆಂಜ್ ಮಾಡೆಲ್ ಗಳ ವಿವರ ಇಲ್ಲಿವೆ:

 ಮರ್ಸಿಡಿಸ್-ಬೆಂಜ್ E-ಕ್ಲಾಸ್ LWB

Mercedes-Benz E-Class LWB

 ಆರನೇ ಜನರೇಷನ್ E-ಕ್ಲಾಸ್ LWB ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ ಎಂದು ಮರ್ಸಿಡಿಸ್-ಬೆಂಜ್ ದೃಢಪಡಿಸಿದೆ. ಇದರ ಬೆಲೆಯು ರೂ. 80 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಈ ಮಾಡೆಲ್ ನ ಪವರ್‌ಟ್ರೇನ್ ಆಯ್ಕೆಗಳ ಬಗ್ಗೆ ವಿವರಗಳು ಇನ್ನೂ ಹೊರಬಿದ್ದಿಲ್ಲ, ಆದರೆ, ರೆಗ್ಯುಲರ್ ವೀಲ್‌ಬೇಸ್ ಮಾಡೆಲ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: 255 PS ಮತ್ತು 295 Nm ಅನ್ನು ಉತ್ಪಾದಿಸುವ 2-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 375 PS ಮತ್ತು 369 Nm ಉತ್ಪಾದಿಸುವ 3-ಲೀಟರ್ ಫ್ಲಾಟ್-ಸಿಕ್ಸ್ ಪೆಟ್ರೋಲ್ ಎಂಜಿನ್, ಎರಡೂ ವರ್ಷನ್ ಗಳನ್ನು 48V ಮೈಲ್ಡ್ ಹೈಬ್ರಿಡ್ ಮೋಟರ್‌ನೊಂದಿಗೆ ನೀಡಲಾಗುತ್ತದೆ.

 ಹೊಸ E-ಕ್ಲಾಸ್ 14.4-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎರಡು 12.3-ಇಂಚಿನ ಡಿಸ್ಪ್ಲೇಗಳನ್ನು (ಒಂದು ಡ್ರೈವರ್ ಡಿಸ್ಪ್ಲೇ ಮತ್ತು ಇನ್ನೊಂದು ಪ್ಯಾಸೆಂಜರ್ ಡಿಸ್ಪ್ಲೇ), ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, 21-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಪಡೆಯುತ್ತದೆ. ಆದರೆ, ಇವುಗಳಲ್ಲಿ ಯಾವ ಫೀಚರ್ ಗಳನ್ನು ಭಾರತೀಯ-ಸ್ಪೆಕ್ E-ಕ್ಲಾಸ್‌ಗೆ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

 ಮರ್ಸಿಡಿಸ್-ಬೆಂಜ್ AMG C 63 S E ಪರ್ಫಾರ್ಮೆನ್ಸ್

Mercedes-Benz India To Launch 4 More Models By End Of 2024

 ಮತ್ತೊಂದು ಪ್ಲಗ್-ಇನ್ ಹೈಬ್ರಿಡ್ AMG ಮಾಡೆಲ್ ಆಗಿರುವ ಮರ್ಸಿಡಿಸ್-AMG C 63 S E ಪರ್ಫಾರ್ಮೆನ್ಸ್ ಅನ್ನು 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಇದು ಮುಂಭಾಗದ ಆಕ್ಸಲ್‌ನಲ್ಲಿ ಮೌಂಟ್ ಮಾಡಲಾಗಿರುವ 2-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಮತ್ತು ಹಿಂಭಾಗದ ಆಕ್ಸಲ್‌ನಲ್ಲಿ ಮೌಂಟ್ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ. ಇದು ಒಟ್ಟು 690 PS ಮತ್ತು 1,020 Nm ಅನ್ನು ಉತ್ಪಾದಿಸುತ್ತದೆ. ಇದು 13 ಕಿಲೋಮೀಟರ್‌ಗಳವರೆಗೆ ಎಲೆಕ್ಟ್ರಿಕ್ ಮಾತ್ರ ರೇಂಜ್ ಅನ್ನು ಪಡೆಯುತ್ತದೆ. ಇದನ್ನು 3.7 kW AC ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಬಹುದು.

 ಇದು ಅಂತರಾಷ್ಟ್ರೀಯ ಮಾಡೆಲ್ ನಲ್ಲಿ ಇರುವ 12.3-ಇಂಚಿನ ಡ್ರೈವರ್ ಡಿಸ್ಪ್ಲೇ, 14.4-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪ್ಷನಲ್ 12.3-ಇಂಚಿನ ಫ್ರಂಟ್ ಪ್ಯಾಸೆಂಜರ್ ಡಿಸ್ಪ್ಲೇ ಮತ್ತು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸ್ಪೋರ್ಟ್ ಸೀಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.

 ಮರ್ಸಿಡಿಸ್-ಬೆಂಜ್ AMG CLE 53 ಕ್ಯಾಬ್ರಿಯೊಲೆಟ್

Mercedes-Benz India To Launch 4 More Models By End Of 2024

 ಮರ್ಸಿಡಿಸ್ ಹೊಸ ಮರ್ಸಿಡಿಸ್-ಬೆಂಜ್ CLE53 AMG ಕ್ಯಾಬ್ರಿಯೊಲೆಟ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ, ಅ ಮೂಲಕ ಇದು ಭಾರತದಲ್ಲಿ ತನ್ನ ಕನ್ವರ್ಟಿಬಲ್‌ಗಳ ಶ್ರೇಣಿಯನ್ನು ವಿಸ್ತರಿಸುವ ಪ್ಲಾನ್ ಅನ್ನು ಹೊಂದಿದೆ.

 ಇದರ ಅಂತರಾಷ್ಟ್ರೀಯ ವರ್ಷನ್ 449 PS ಮತ್ತು 560 Nm ಅನ್ನು ಉತ್ಪಾದಿಸುವ 3-ಲೀಟರ್ ಆರು-ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಅದು ಈ ಕಾರನ್ನು 0-100 ಕಿ.ಮೀ ಪ್ರತಿ ಗಂಟೆ ವೇಗವನ್ನು ಕೇವಲ 4.2 ಸೆಕೆಂಡುಗಳಲ್ಲಿ ತಲುಪಲು ಸಹಾಯ ಮಾಡುತ್ತದೆ. ಇದನ್ನು 9-ಸ್ಪೀಡ್ DCT ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು ಎಲ್ಲಾ ವೀಲ್ ಗಳಿಗೆ ಪವರ್ ಅನ್ನು ನೀಡುತ್ತದೆ. ನಾಲ್ಕು-ಸೀಟಿನ CLE53 AMG ಅನ್ನು ಶಕ್ತಿಯುತ 4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಹೊಂದಿರುವ ಮತ್ತು ಎರಡು ಸೀಟ್ ಗಳ ರೋಡ್‌ಸ್ಟರ್‌ನಂತೆ ವಿನ್ಯಾಸಗೊಳಿಸಲಾದ SL63 AMG ಗಿಂತ ಕೆಳಗೆ ಇರಿಸಲಾಗುವುದು.

 ಅಂತರಾಷ್ಟ್ರೀಯ ಮಾಡೆಲ್ ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ವರ್ಟಿಕಲ್ ಆಗಿ ನೀಡಿರುವ 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ 12.3-ಇಂಚಿನ ಡ್ರೈವರ್‌ ಡಿಸ್ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಫೀಚರ್ ಅನ್ನು ನೀಡಲಾಗಿದೆ.

 ಮರ್ಸಿಡಿಸ್-ಬೆಂಜ್ ಮೇಬ್ಯಾಕ್ EQS SUV

Mercedes-Benz India To Launch 4 More Models By End Of 2024

 ಮೊದಲ ಎಲೆಕ್ಟ್ರಿಕ್ ಮೇಬ್ಯಾಕ್ ಮಾಡೆಲ್ ಆಗಿರುವ ಮರ್ಸಿಡಿಸ್-ಬೆಂಜ್ ಮೇಬ್ಯಾಕ್ EQS 680 SUV ಸುಮಾರು 3.80 ಕೋಟಿ ರೂಪಾಯಿಗಳ (ಎಕ್ಸ್ ಶೋರೂಂ) ನಿರೀಕ್ಷಿತ ಬೆಲೆಯೊಂದಿಗೆ ಈ ವರ್ಷ ಭಾರತೀಯ ಮಾರುಕಟ್ಟೆಗೆ ಬರಲಿದೆ. ಮರ್ಸಿಡಿಸ್‌ನ EV ಶ್ರೇಣಿಯಲ್ಲಿನ ಅತ್ಯಂತ ದುಬಾರಿ ಮಾಡೆಲ್ ಆಗಿರುವ EQS SUVಯು 107.8 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಪವರ್ ಮಾಡುತ್ತದೆ. ಈ ಮೋಟಾರ್‌ಗಳನ್ನು ಎರಡೂ ಆಕ್ಸಲ್‌ಗಳಲ್ಲಿ ಇರಿಸಲಾಗಿದ್ದು, 658 PS ಮತ್ತು 950 Nm ಅನ್ನು ಉತ್ಪಾದಿಸುತ್ತದೆ. ಇದು 600 ಕಿಮೀ ರೇಂಜ್ (WLTP ಕ್ಲೇಮ್ ಮಾಡಿರುವ) ಅನ್ನು ನೀಡಬಹುದು.

 ಡ್ಯಾಶ್‌ಬೋರ್ಡ್‌ನಲ್ಲಿ ಟ್ರಿಪಲ್ ಇಂಟಿಗ್ರೇಟೆಡ್ ಡಿಸ್‌ಪ್ಲೇಗಳನ್ನು ನೀಡಲಾಗಿದೆ: ಎರಡು 12.3-ಇಂಚಿನ ಡಿಸ್ಪ್ಲೇಗಳು (ಒಂದು ಡ್ರೈವರ್ ಡಿಸ್ಪ್ಲೇ ಮತ್ತು ಇನ್ನೊಂದು ಪ್ಯಾಸೆಂಜರ್ ಡಿಸ್ಪ್ಲೇ) ಮತ್ತು 17.7-ಇಂಚಿನ OLED ಇನ್ಫೋಟೈನ್ಮೆಂಟ್ ಸಿಸ್ಟಮ್, 12-ವೇ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಹೀಟೆಡ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಮೆಮೊರಿ ಫಂಕ್ಷನ್ ನೊಂದಿಗೆ ಪವರ್ಡ್ ಹಿಂಭಾಗದ ಸೀಟುಗಳು, ನಾಲ್ಕು-ಝೋನ್ AC, ಪನರೋಮಿಕ್ ಸನ್‌ರೂಫ್ ಮತ್ತು ಸಾಫ್ಟ್ ಕ್ಲೋಸ್ ಡೋರ್ ಗಳು.

ಮರ್ಸಿಡಿಸ್-ಬೆಂಜ್ G-ಕ್ಲಾಸ್ EQ ಟೆಕ್ನಾಲಜಿಯೊಂದಿಗೆ

Mercedes-Benz India To Launch 4 More Models By End Of 2024

ಎಲೆಕ್ಟ್ರಿಕ್ G-ವಾಗನ್ ಆಗಿರುವ ಮರ್ಸಿಡಿಸ್-ಬೆಂಜ್ G 580 EQ ಈಗ ಬುಕಿಂಗ್‌ಗೆ ಲಭ್ಯವಿದೆ. ಇದು 2024 ರ ಅಂತ್ಯದ ವೇಳೆಗೆ ಲಾಂಚ್ ಆಗುವ ನಿರೀಕ್ಷೆಯಿದೆ, ಮತ್ತು ಡೆಲಿವೆರಿಗಳು 2025 ರಲ್ಲಿ ಪ್ರಾರಂಭವಾಗಬಹುದು. ಇದರ ಬೆಲೆಯು ಸುಮಾರು 3 ಕೋಟಿ (ಎಕ್ಸ್ ಶೋರೂಂ) ಹತ್ತಿರ ಇರುವ ಸಾಧ್ಯತೆ ಇದೆ. ಇದನ್ನು ವಿಶಿಷ್ಟವಾದ ಆಫ್-ರೋಡರ್ ಶೈಲಿಯಲ್ಲಿ ನಿರ್ಮಿಸಲಾಗಿದೆ, ಮತ್ತು ಸ್ವತಂತ್ರ ಮುಂಭಾಗದ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ರಿಜಿಡ್ ಆಕ್ಸಲ್ ನೊಂದಿಗೆ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ನೀಡಲಾಗಿದೆ. ಇದು 587 PS ಮತ್ತು 1,164 Nm ಉತ್ಪಾದಿಸುವ ನಾಲ್ಕು ಮೋಟಾರ್‌ಗಳೊಂದಿಗೆ 116 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಬಹುದು. ಇದು 473 ಕಿಮೀ ವರೆಗಿನ WLTP-ರೇಟ್ ಮಾಡಿರುವ ರೇಂಜ್ ಅನ್ನು ಹೊಂದಿದೆ. ಅತ್ಯುತ್ತಮ ಆಫ್-ರೋಡ್ ಪರ್ಫಾರ್ಮೆನ್ಸ್ ಗಾಗಿ ಇದು ಲೊ-ರೇಂಜ್ ಟ್ರಾನ್ಸ್ಫರ್ ಕೇಸ್ ಅನ್ನು ಕೂಡ ಹೊಂದಿದೆ.

 ಫೀಚರ್ ಗಳ ವಿಷಯದಲ್ಲಿ, ಎಲೆಕ್ಟ್ರಿಕ್ G-ವ್ಯಾಗನ್ ಎರಡು 12.3-ಇಂಚಿನ ಡಿಸ್ಪ್ಲೇಗಳನ್ನು (ಒಂದು ಡ್ರೈವರ್ ಡಿಸ್ಪ್ಲೇಗಾಗಿ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್ ಸ್ಕ್ರೀನ್), ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಟ್ರಾನ್ಸ್ಪರೆಂಟ್ ಬಾನೆಟ್ ಫಂಕ್ಷನ್ (ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮೇಲೆ ಇಮೇಜ್ ಅನ್ನು ತೋರಿಸಲು ಮುಂಭಾಗದ ಕ್ಯಾಮೆರಾಗಳನ್ನು ಬಳಸಿಕೊಂಡು ಆಫ್-ರೋಡ್ ಟ್ರೇಲ್‌ಗಳಲ್ಲಿ SUV ಅನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಲು ಇದು ಸಹಾಯ ಮಾಡುತ್ತದೆ) ಅನ್ನು ಪಡೆಯಬಹುದು.

 ಮುಂದಿನ ದಿನಗಳಲ್ಲಿ ಬರಲಿರುವ ಈ ಮರ್ಸಿಡಿಸ್-ಬೆಂಜ್ ಮಾಡೆಲ್‌ಗಳಲ್ಲಿ ಯಾವುದರ ಬಗ್ಗೆ ನೀವು ಹೆಚ್ಚು ಆಸಕ್ತರಾಗಿದ್ದೀರಿ? ಕೆಳಗೆ ಕಾಮೆಂಟ್‌ ಮಾಡುವ ಮೂಲಕ ನಮಗೆ ತಿಳಿಸಿ.

 ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಬಯಸುತ್ತೀರಾ? ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಇ-ವರ್ಗ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience