• English
  • Login / Register

2.25 ಕೋಟಿ ರೂ. ಬೆಲೆಯ Mercedes-Maybach EQS 680 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಮೇಬ್ಯಾಚ್ ಇಕ್ಯೂಎಸ್‌ ಗಾಗಿ shreyash ಮೂಲಕ ಸೆಪ್ಟೆಂಬರ್ 05, 2024 07:38 pm ರಂದು ಪ್ರಕಟಿಸಲಾಗಿದೆ

  • 42 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎಲೆಕ್ಟ್ರಿಕ್ ಎಸ್‌ಯುವಿಯು ಇಕ್ಯೂ ಮತ್ತು ಮೇಬ್ಯಾಕ್ ಕಾರುಗಳ ಸ್ಟೈಲಿಂಗ್ ಅಂಶಗಳನ್ನು ಸಂಯೋಜಿಸುತ್ತದೆ ಮತ್ತು ಭಾರತದಲ್ಲಿ ಮರ್ಸಿಡೀಸ್‌ ಬೆಂಝ್‌ನಿಂದ ಹೊಸ ಪ್ರಮುಖ ಇವಿ ಕೊಡುಗೆಯಾಗಿದೆ

Mercedes-Maybach  EQS680 SUV

  • ಹೊರಭಾಗದ ಹೈಲೈಟ್ಸ್‌ಗಳು ಮೇಬ್ಯಾಕ್ ಸಿಗ್ನೇಚರ್ ಗ್ರಿಲ್ ಮತ್ತು ಇಕ್ಯೂ-ಸ್ಪೆಸಿಫಿಕ್‌ ಹೆಡ್‌ಲೈಟ್‌ಗಳನ್ನು ಒಳಗೊಂಡಿವೆ. 

  • ಒಳಗೆ, ಇದು ಮೇಬ್ಯಾಕ್ ಸ್ಪೆಸಿಫಿಕ್‌ ಡಿಸೈನ್‌ ಅಂಶಗಳೊಂದಿಗೆ MBUX ಹೈಪರ್‌ಸ್ಕ್ರೀನ್ ಸೆಟಪ್ ಅನ್ನು ಪಡೆಯುತ್ತದೆ. 

  • ಬೋರ್ಡ್‌ನಲ್ಲಿರುವ ಫೀಚರ್‌ಗಳು ಟ್ರಿಪಲ್ ಸ್ಕ್ರೀನ್ ಸೆಟಪ್, ಗೆಸ್ಚರ್ ಕಂಟ್ರೋಲ್ ಫೀಚರ್‌ಗಳು ಮತ್ತು ಎಲ್ಲಾ ನಾಲ್ಕು ಸೀಟ್‌ಗಳಿಗೆ ಹೀಟಿಂಗ್‌ ಮತ್ತು ವೆಂಟಿಲೇಟರ್‌ ಅನ್ನು ಒಳಗೊಂಡಿವೆ.

  • ಪ್ರಯಾಣಿಕರ ಸುರಕ್ಷತೆಯನ್ನು 11 ಏರ್‌ಬ್ಯಾಗ್‌ಗಳು, 360-ಡಿಗ್ರಿ ಮತ್ತು ಲೆವೆಲ್ 2 ಎಡಿಎಎಸ್ ಮೂಲಕ ನೋಡಿಕೊಳ್ಳಲಾಗುತ್ತದೆ.

  • 122 kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು WLTP ಕ್ಲೈಮ್ ಮಾಡಲಾದ 611 ಕಿಮೀ ರೇಂಜ್‌ ಅನ್ನು ನೀಡುತ್ತದೆ.

ಜಾಗತಿಕವಾಗಿ ಅನಾವರಣಗೊಂಡ ಒಂದು ವರ್ಷದ ನಂತರ, ಮರ್ಸಿಡೀಸ್‌ ಮೇಬ್ಯಾಕ್‌ ಇಕ್ಯೂಎಸ್‌ 680 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆ 2.25 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ. ಮೇಬ್ಯಾಚ್ ಇಕ್ಯೂಎಸ್‌ 680  ಈ ಕಾರು ತಯಾರಕರ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಮೇಬ್ಯಾಚ್ ಆಗಿದೆ, ಇದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ. ಈ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಏನು ನೀಡುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ. 

ದೂರದರ್ಶಿ ಆಗಿದ್ದರೂ ಸೊಗಸಾದ ಲುಕ್‌

Mercedes-Benz Maybach EQS 680

ಮೇಬ್ಯಾಕ್ ಇಕ್ಯೂಎಸ್‌ 680 ವಿನ್ಯಾಸವು EQ (ಎಲೆಕ್ಟ್ರಿಕ್‌ ಕಾರುಗಳಿಗಾಗಿ ಕಂಪೆನಿ ನೀಡುವ ಹೆಸರು) ಮತ್ತು ಮೇಬ್ಯಾಕ್ (ಕಾರ್ ತಯಾರಕರ ಐಷಾರಾಮಿ ಕೇಂದ್ರೀಕೃತ ಸೆಗ್ಮೆಂಟ್‌) ಕುಟುಂಬಗಳ ಸ್ಟೈಲಿಂಗ್ ಅಂಶಗಳನ್ನು ಸಂಯೋಜಿಸುತ್ತದೆ. ಮುಂಭಾಗದಲ್ಲಿ, ಇದು ಸಿಗ್ನೇಚರ್ ಮೇಬ್ಯಾಕ್ ಗ್ರಿಲ್ ಅನ್ನು ಪಡೆಯುತ್ತದೆ, ಇದು ಲಂಬವಾದ ಕ್ರೋಮ್ ಸ್ಲ್ಯಾಟ್‌ಗಳೊಂದಿಗೆ ದೊಡ್ಡ ಹೊಳಪಿನ ಕಪ್ಪು ಮುಚ್ಚಿದ ಪ್ಯಾನಲ್‌ ಆಗಿದೆ. ಮತ್ತೊಂದೆಡೆ, ಹೆಡ್‌ಲೈಟ್‌ಗಳು ಇಕ್ಯೂ ಸಿರೀಸ್‌ನಿಂದ ಬಂದಿವೆ.

Mercedes-Benz Maybach EQS 680 a

ಸೈಡ್‌ನಿಂದ ಗಮನಿಸುವಾಗ, ಈ ಮೇಬ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಸ್ಟ್ಯಾಂಡರ್ಡ್ ಇಕ್ಯೂಎಸ್‌ ಎಸ್‌ಯುವಿಯಂತೆಯೇ ಕಾಣುತ್ತದೆ, ಹಾಗೆಯೇ ಇದು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳಂತಹ ಹೆಚ್ಚಿನ ಪ್ರೀಮಿಯಂ ಅಂಶಗಳನ್ನು ಪಡೆಯುತ್ತದೆ. ವಿಭಿನ್ನ ವಿನ್ಯಾಸ ಆಯ್ಕೆಗಳೊಂದಿಗೆ 21-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಸುಲಭವಾಗಿ ಗುರುತಿಸಲು ಸಹಾಯವಾಗುವಂತೆ ಸಿ-ಪಿಲ್ಲರ್‌ಗಳಲ್ಲಿ 'ಮೇಬ್ಯಾಚ್' ಬ್ಯಾಡ್ಜ್ ಅನ್ನು ಸಹ  ನೀಡಲಾಗಿದೆ. ಹಿಂಭಾಗವು ರೆಗುಲರ್‌ ಇಕ್ಯೂಎಸ್‌ ಎಸ್‌ಯುವಿ ವಿನ್ಯಾಸವನ್ನು ಪ್ರತಿಧ್ವನಿಸುತ್ತದೆ, ಆದಾಗ್ಯೂ, ಇಲ್ಲಿ ಬಂಪರ್ ತನ್ನ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸುವ ಪ್ರಮುಖ ಕ್ರೋಮ್ ವಿನ್ಯಾಸವನ್ನು ಪಡೆಯುತ್ತದೆ.

ಮೇಬ್ಯಾಕ್ ಇಕ್ಯೂಎಸ್‌ 680 ವಿಶಿಷ್ಟವಾದ ಮೇಬ್ಯಾಕ್ ತರಹದ ಡ್ಯುಯಲ್-ಟೋನ್ ಬಾಡಿ ಕಲರ್‌ ಅನ್ನು ಪಡೆಯುತ್ತದೆ. ಇದನ್ನು ಐದು ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳಲ್ಲಿ ನೀಡಲಾಗುತ್ತಿದೆ: ಹೈಟೆಕ್ ಸಿಲ್ವರ್/ನಾಟಿಕ್ ಬ್ಲೂ, ಸ್ಯಾಟಿನ್ ಬ್ರೌನ್/ಓನಿಕ್ಸ್ ಬ್ಲ್ಯಾಕ್, ಅಬ್ಸಿಡಿಯನ್ ಬ್ಲ್ಯಾಕ್/ಸೆಲೆನೈಟ್ ಗ್ರೇ, ಹೈಟೆಕ್ ಸಿಲ್ವರ್/ಓನಿಕ್ಸ್ ಬ್ಲಾಕ್, ಮತ್ತು ಅಬ್ಸಿಡಿಯನ್ ಬ್ಲಾಕ್/ಮ್ಯಾನ್ಯುಫ್ಯಾಕ್ಚರ್ ಕಲಹರಿ ಗೋಲ್ಡ್ ಮೆಟಾಲಿಕ್.

ಇದನ್ನು ಸಹ ಓದಿ: ಹೊಸ MG Astor (ZS) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಿರಂಗ, ಭಾರತದಲ್ಲಿ ಯಾವಾಗ ?

ಐಷಾರಾಮಿ ಮತ್ತು ಫೀಚರ್ ಭರಿತ ಕ್ಯಾಬಿನ್

Mercedes-Benz Maybach EQS 680 Interiors

ನೀವು ಈ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಒಳಗೆ ಕಾಲಿಟ್ಟಾಗ, ಮರ್ಸಿಡಿಸ್‌ನ ಇತರ ಎಲೆಕ್ಟ್ರಿಕ್ ಕಾರುಗಳಲ್ಲಿ ಕಂಡುಬರುವಂತೆ, ಸಂಪೂರ್ಣ ಡ್ಯಾಶ್‌ಬೋರ್ಡ್ ಅನ್ನು ವ್ಯಾಪಿಸಿರುವ MBUX ಹೈಪರ್‌ಸ್ಕ್ರೀನ್ ಸೆಟಪ್ ನಿಮ್ಮನ್ನು ಸ್ವಾಗತಿಸುತ್ತದೆ. ಹಾಗೆಯೇ, ಇದು ಸ್ಟೀರಿಂಗ್ ವೀಲ್ ಮತ್ತು ಪೆಡಲ್‌ಗಳಿಗೆ ಮೇಬ್ಯಾಕ್-ಬ್ರಾಂಡ್ ಮೆಟಲ್ ಫಿನಿಶ್‌ನಂತಹ ಕೆಲವು ವಿಶಿಷ್ಟವಾದ ಮೇಬ್ಯಾಕ್ ಅಂಶಗಳನ್ನು ಸಂಯೋಜಿಸುತ್ತದೆ. ಹಿಂಭಾಗದಲ್ಲಿ, ಮೇಬ್ಯಾಕ್ ಇಕ್ಯೂಎಸ್‌ 680 ಪ್ರತ್ಯೇಕ ಲಾಂಜ್ ಸೀಟ್‌ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಎರಡು 11.6-ಇಂಚಿನ ಪ್ರತ್ಯೇಕ ಡಿಸ್‌ಪ್ಲೇಗಳನ್ನು ಹೊಂದಿದೆ.

Mercedes-Benz Maybach EQS 680 Interiors

ಈ ಎಲೆಕ್ಟ್ರಿಕ್ ಮೇಬ್ಯಾಚ್ ಎಸ್‌ಯುವಿಯಲ್ಲಿನ ಇತರ ಫೀಚರ್‌ಗಳು ಟ್ರಿಪಲ್ ಸ್ಕ್ರೀನ್ ಸೆಟಪ್ (ಟಚ್‌ಸ್ಕ್ರೀನ್, ಪ್ಯಾಸೆಂಜರ್ ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ), ಎರಡು ಪ್ರತ್ಯೇಕ ಪನರೋಮಿಕ್‌ ಸನ್‌ರೂಫ್‌ಗಳು, ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ವೈರ್‌ಲೆಸ್ ಫೋನ್ ಚಾರ್ಜರ್‌ಗಳು ಮತ್ತು ಮೆಮೊರಿ ಫಂಕ್ಷನ್‌ನೊಂದಿಗೆ ವಿದ್ಯುತ್‌ನಿಂದ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಆಸನಗಳನ್ನು ಒಳಗೊಂಡಿದೆ. ಸೌಕರ್ಯಗಳ ಪಟ್ಟಿಯು ಎಲ್ಲಾ ನಾಲ್ಕು ಆಸನಗಳಿಗೆ ಹೀಟಿಂಗ್‌ ಮತ್ತು ವೆಂಟಿಲೇಶನ್‌ ಫಂಕ್ಷನ್‌ ಮತ್ತು ಗೆಸ್ಚರ್ ಕಂಟ್ರೋಲ್‌ಗಳನ್ನು ಅನ್ನು ಒಳಗೊಂಡಿದೆ, ಇದರಲ್ಲಿ ನೀವು ಟಚ್‌ಸ್ಕ್ರೀನ್ ಅನ್ನು ನಿಯಂತ್ರಿಸಬಹುದು, ಸನ್‌ರೂಫ್ ತೆರೆಯಬಹುದು ಮತ್ತು ಡೋರ್‌ಗಳನ್ನು ಮುಚ್ಚಬಹುದು.

ಮೇಬ್ಯಾಕ್ ಇಕ್ಯೂಎಸ್‌ 680ನಲ್ಲಿರುವ ಸುರಕ್ಷತಾ ಸೂಟ್ 11 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್‌,  ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ಸ್ ಮತ್ತು ರೇಂಜ್

ಬ್ಯಾಟರಿ ಪ್ತಾಕ್‌

122 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

2

ಪವರ್‌

658 ಪಿಎಸ್

ಟಾರ್ಕ್

950 ಎನ್ಎಂ

ಡ್ರೈವ್ ಪ್ರಕಾರ

AWD (ಆಲ್-ವೀಲ್-ಡ್ರೈವ್)

ಕ್ಲೈಮ್‌ ಮಾಡಲಾದ ರೇಂಜ್ (WLTP)

611 ಕಿ.ಮೀ

ವೇಗವರ್ಧನೆ 0-100 kmph

4.4 ಸೆಕೆಂಡುಗಳು

WLTP: ವರ್ಲ್ಡ್‌ವೈಡ್ ಹಾರ್ಮೊನೈಸ್ಡ್ ಲೈಟ್ ವೆಹಿಕಲ್ ಟೆಸ್ಟ್ ಸೈಕಲ್

ಈ ಮೇಬ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿಯು 200 ಕಿ.ವ್ಯಾಟ್‌ ಡಿಸಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ಕೇವಲ 20 ನಿಮಿಷಗಳಲ್ಲಿ 300 ಕಿಮೀ ರೇಂಜ್‌ ಅನ್ನು ಪಡೆಯಲು ಸಹಾಯ ಮಾಡುತ್ತದೆ.

ಪ್ರತಿಸ್ಪರ್ಧಿಗಳು

ಮರ್ಸಿಡೀಸ್‌ ಮೈಬ್ಯಾಕ್‌ ಇಕ್ಯೂಎಸ್‌ 680 ಅನ್ನು ರೋಲ್ಸ್-ರಾಯ್ಸ್ ಸ್ಪೆಕ್ಟರ್‌ಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು ಮತ್ತು ಬೆಂಟ್ಲಿ ಬೆಂಟೈಗಾಗೆ ಇವಿ ಆಯ್ಕೆಯಾಗಿದೆ.

 ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಮೇಬ್ಯಾಕ್ ಇಕ್ಯೂಎಸ್ ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಮೇಬ್ಯಾಚ್ ಇಕ್ಯೂಎಸ್‌

Read Full News

explore ಇನ್ನಷ್ಟು on ಮರ್ಸಿಡಿಸ್ ಮೇಬ್ಯಾಚ್ ಇಕ್ಯೂಎಸ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience