ಭಾರತದಲ್ಲಿನ ಹೊಸ ಇವಿಗಳ ಮೈಲೇಜ್‌ನ ನಿಯಮಗಳ ವಿವರ, ಪ್ರಮುಖವಾಗಿ Tata ಇವಿಗಳ
ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಸೆಪ್ಟೆಂಬರ್ 06, 2024 09:35 pm ರಂದು ಪ್ರಕಟಿಸಲಾಗಿದೆ
- 46 Views
- ಕಾಮೆಂಟ್ ಅನ್ನು ಬರೆಯಿರಿ
ಕಾರು ತಯಾರಕರು ಈಗ ಪರಿಷ್ಕೃತ ರೇಂಜ್-ಟೆಸ್ಟ್ ಮಾನದಂಡಗಳ ಪ್ರಕಾರ ಸಿಟಿ ಮತ್ತು ಹೈವೇ ಟೆಸ್ಟ್ ಗಳಿಗೆ ಡ್ರೈವಿಂಗ್ ರೇಂಜ್ ಅನ್ನು ವರದಿ ಮಾಡಬೇಕಾಗುತ್ತದೆ
ನೀವು ಯಾವುದೇ ರೆಗ್ಯುಲರ್ ಅಥವಾ ಐಷಾರಾಮಿ EV ಮಾಡೆಲ್ ಅನ್ನು ಚಲಾಯಿಸುತ್ತಿದ್ದರೆ, ಕ್ಲೇಮ್ ಮಾಡಲಾದ ಡ್ರೈವಿಂಗ್ ರೇಂಜ್ ಮತ್ತು ನೀವು ಪೂರ್ಣ ಚಾರ್ಜ್ ಮಾಡಿದಾಗ ಪಡೆಯುವ ರೇಂಜ್ ಏಕೆ ಬೇರೆ ಬೇರೆಯಾಗಿದೆ ಎಂದು ನೀವು ಆಶ್ಚರ್ಯ ಪಡಬಹುದು. ಕ್ಲೈಮ್ ಮಾಡಲಾದ ರೇಂಜ್ ಎಂದು ಕರೆಯಲ್ಪಡುವ ಗರಿಷ್ಠ ರೇಂಜ್ ಅನ್ನು ಕಂಡುಹಿಡಿಯಲು ಟೆಸ್ಟಿಂಗ್ ಏಜೆನ್ಸಿಗಳು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ EV ಯ ಡ್ರೈವಿಂಗ್ ರೇಂಜ್ ಅನ್ನು ನಿರ್ಣಯಿಸುತ್ತವೆ ಎಂದು ಕಾರು ತಯಾರಕರು ವಿವರಿಸಿದ್ದಾರೆ. ಆದರೆ ನಿಜವಾದ ರಸ್ತೆಗಳಲ್ಲಿ ಡ್ರೈವ್ ಮಾಡುವಾಗ ಅಂತಹ ಪರಿಸ್ಥಿತಿಗಳು ಸಿಗುವುದು ಅಸಾಧ್ಯವಾಗಿದೆ, ಹಾಗಾಗಿ ನಿಮ್ಮ EV ಯ ನಿಜವಾದ ಡ್ರೈವಿಂಗ್ ರೇಂಜ್ ಕಡಿಮೆಯಾಗುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಈಗ EV ಗಳ ಕ್ಲೈಮ್ ಮಾಡಿರುವ ಮತ್ತು ನಿಜವಾದ ಡ್ರೈವಿಂಗ್ ರೇಂಜ್ ಗಳ ನಡುವಿನ ನಿಖರತೆಯನ್ನು ಹೆಚ್ಚಿಸಲು ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಈ ಹೊಸ ಮಾನದಂಡಗಳು ಕಾರ್ ತಯಾರಕರಿಗೆ ಎಲ್ಲಾ ರೀತಿಯ ಟೆಸ್ಟಿಂಗ್ ಪರಿಸ್ಥಿತಿಗಳ ಮಿಶ್ರಣವನ್ನು ಬಳಸಿಕೊಂಡು ಹೆಚ್ಚು ನಿಖರವಾದ ಡ್ರೈವಿಂಗ್ ರೇಂಜ್ ಅನ್ನು ನೀಡಲು ಸಹಾಯ ಮಾಡುತ್ತದೆ.
ಏನೇನು ಬದಲಾವಣೆಗಳನ್ನು ಮಾಡಲಾಗಿದೆ?
ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ EVಗಳನ್ನು MIDC (ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್) ಟೆಸ್ಟ್ ಮೂಲಕ ಪರೀಕ್ಷಿಸಲಾಗುತ್ತದೆ. ಈ ಟೆಸ್ಟ್ ಎರಡು ಭಾಗಗಳನ್ನು ಒಳಗೊಂಡಿದೆ: ಅರ್ಬನ್ (P1) ಮತ್ತು ಎಕ್ಸ್ಟ್ರಾ ಅರ್ಬನ್ (P2). ಅರ್ಬನ್ ವರ್ಗವು ನಗರದ ಡ್ರೈವಿಂಗ್ ಪರಿಸ್ಥಿತಿಗಳನ್ನು ತೋರಿಸುತ್ತದೆ, ಹಾಗೆಯೇ ಎಕ್ಸ್ಟ್ರಾ ಅರ್ಬನ್ EV ಗಳು ಹೆದ್ದಾರಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುತ್ತದೆ. ಇಲ್ಲಿಯವರೆಗೆ, EV ಗಳನ್ನು ಅರ್ಬನ್ ಡ್ರೈವಿಂಗ್ ನಲ್ಲಿ ಮಾತ್ರ ಟೆಸ್ಟ್ ಮಾಡಲಾಗುತ್ತಿತ್ತು ಮತ್ತು ಈ ಟೆಸ್ಟ್ ಫಲಿತಾಂಶಗಳನ್ನು ಅವುಗಳ ಕ್ಲೇಮ್ ರೇಂಜ್ ಅನ್ನು ತೋರಿಸಲು ಬಳಸಲಾಗುತ್ತಿತ್ತು. ಆದರೆ MoRTH ನ ಇತ್ತೀಚಿನ ಮಾರ್ಗಸೂಚಿಗಳು ಎಲ್ಲಾ ವಾಹನ ತಯಾರಕರಿಗೆ P1+P2 (ಸಿಟಿ + ಹೈವೇ) ಎರಡೂ ಟೆಸ್ಟ್ ಗಳನ್ನು ಮಾಡಿ ಡ್ರೈವಿಂಗ್ ರೇಂಜ್ ಅನ್ನು ಪರೀಕ್ಷಿಸಲು ಮತ್ತು ಘೋಷಿಸಲು ಕಡ್ಡಾಯಗೊಳಿಸಿದೆ.
ಈ ಹೊಸ ಅಪ್ಡೇಟ್ ಗೆ ಟಾಟಾ ಪ್ರತಿಕ್ರಿಯೆ ಹೀಗಿದೆ
ಭಾರತದ ಮಾಸ್-ಮಾರುಕಟ್ಟೆ ಸೆಗ್ಮೆಂಟ್ ನಲ್ಲಿ ಬಂದಿರುವ EV ಕ್ರಾಂತಿಗೆ ಟಾಟಾ ಅತ್ಯಂತ ಹೆಚ್ಚು ಕೊಡುಗೆಯನ್ನು ನೀಡಿದೆ. ಟಾಟಾ ಈ ಬದಲಾವಣೆಗಳಿಗೆ ಪ್ರತಿಕ್ರಿಯಿಸಿರುವ ಮೊದಲ ಪ್ರಮುಖ ಕಾರು ತಯಾರಕರಾಗಿದ್ದಾರೆ ಮತ್ತು ತನ್ನ ಜನಪ್ರಿಯ EV ಗಳ ಡ್ರೈವಿಂಗ್ ರೇಂಜ್ ಅನ್ನು ಹೊಸ ನಿಯಮಗಳಿಗೆ ಅನುಗುಣವಾಗಿ ಅಪ್ಡೇಟ್ ಮಾಡಿದ್ದಾರೆ. ಟಾಟಾ ತನ್ನ ಎಲೆಕ್ಟ್ರಿಕ್ ಕಾರುಗಳಿಗಾಗಿ 75% ಗ್ರಾಹಕರು ತಮ್ಮ ಬಳಕೆಯ ಆಧಾರದ ಮೇಲೆ ನಿರೀಕ್ಷಿಸಬಹುದಾದ ಆನ್ ರೋಡ್ ರೇಂಜ್ ಅನ್ನು ತೋರಿಸುವ C75 ರೇಂಜ್ ಅನ್ನು ನೀಡುವುದನ್ನು ಮುಂದುವರಿಸುವುದಾಗಿ ಹೇಳಿದೆ.
ಬನ್ನಿ, EV ರೇಂಜ್ ಗಳನ್ನು ಹೇಗೆ ಅಳೆಯಲಾಗುತ್ತದೆ ಮತ್ತು ಅವು ಏಕೆ ಬೇರೆ ಬೇರೆಯಾಗಿದೆ ಎಂಬುದನ್ನು ನೋಡೋಣ.
ಟೆಸ್ಟ್ ಸೈಕಲ್ |
ಅರ್ಬನ್ (P1) |
ಅರ್ಬನ್+ಎಕ್ಸ್ಟ್ರಾ ಅರ್ಬನ್ (P1+P2) |
C75 ರೇಂಜ್ (ಆನ್ ರೋಡ್ ನ 75% ನಷ್ಟು ಗ್ರಾಹಕರು ನಿರೀಕ್ಷಿಸಬಹುದು) |
ವೇಗ |
ಸರಾಸರಿ ವೇಗ - 19 kmph ಗರಿಷ್ಠ ವೇಗ - 50 kmph |
ಸರಾಸರಿ ವೇಗ - 31 kmph ಗರಿಷ್ಠ ವೇಗ - 90 kmph |
ಸರಾಸರಿ ವೇಗ - 40 kmph ಗರಿಷ್ಠ ವೇಗ - 120 kmph |
AC |
ಆಫ್ |
ಆಫ್ |
ಆನ್ |
ಲೋಡ್ |
150 ಕೆ.ಜಿ |
150 ಕೆ.ಜಿ |
250 ಕೆ.ಜಿ |
ತಾಪಮಾನ |
20-30 ಡಿಗ್ರಿ ಸೆಲ್ಸಿಯಸ್ |
20-30 ಡಿಗ್ರಿ ಸೆಲ್ಸಿಯಸ್ |
10-40 ಡಿಗ್ರಿ ಸೆಲ್ಸಿಯಸ್ |
ಮೇಲೆ ನೀಡಿರುವ ಟೇಬಲ್ ಪ್ರತಿ ಟೆಸ್ಟ್ ಅನ್ನು ವಿಭಿನ್ನ ಪರಿಸ್ಥಿತಿಗಳು ಮತ್ತು ನಿಯಮಗಳ ಅಡಿಯಲ್ಲಿ ಮಾಡಲಾಗುತ್ತದೆ ಎಂದು ತೋರಿಸುತ್ತದೆ. ಸಿಟಿ ಡ್ರೈವಿಂಗ್ ಅನ್ನು ತೋರಿಸುವ P1 ಟೆಸ್ಟ್ ನಲ್ಲಿ, ವೇಗವು ಗಂಟೆಗೆ 50 ಕಿ.ಮೀಗೆ ಸೀಮಿತವಾಗಿದೆ. ನಗರ ಮತ್ತು ಹೆದ್ದಾರಿ ಚಾಲನೆ ಎರಡರ ಮಿಶ್ರಣವನ್ನು ಮಾಡುವ P1+P2 ಟೆಸ್ಟ್ ನಲ್ಲೂ, ವೇಗವನ್ನು ಗಂಟೆಗೆ 90 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಎರಡೂ ಟೆಸ್ಟ್ ಗಳಲ್ಲಿ AC ಆಫ್ ಆಗಿದೆ ಮತ್ತು ಲೋಡ್ (150 ಕೆಜಿ) ಕೂಡ ಒಂದೇ ರೀತಿ ಇದೆ, ಆದರೆ P1+P2 ರೇಂಜ್ P1 ರೇಂಜ್ ಗಿಂತ ಸಾಮಾನ್ಯವಾಗಿ ಕಡಿಮೆಯಿರುತ್ತದೆ ಏಕೆಂದರೆ P1+P2 ಟೆಸ್ಟ್ ನಲ್ಲಿ ಗರಿಷ್ಠ ವೇಗವು ಹೆಚ್ಚಾಗಿರುತ್ತದೆ.
C75 ರೇಂಜ್ 75% ನಷ್ಟು ಬಳಕೆದಾರರಿಗೆ ಆನ್ ರೋಡ್ ನಲ್ಲಿ ಸಿಗಬಹುದಾದ ಅಂದಾಜು ರೇಂಜ್ ಅನ್ನು ತೋರಿಸುತ್ತದೆ. ಇದು ಗರಿಷ್ಠ 120 ಕಿಮೀ / ಗಂಟೆ ವೇಗವನ್ನು ಮತ್ತು 250 ಕೆಜಿಯಷ್ಟು ಲೋಡ್ ಅನ್ನು ಬಳಸುತ್ತದೆ. ಆನ್ ರೋಡ್ ಪರಿಸ್ಥಿತಿಗಳನ್ನು ಉತ್ತಮವಾಗಿ ಪ್ರತಿಬಿಂಬಿಸಲು, ಈ ರೇಂಜ್ ಅನ್ನು ವಿವಿಧ ತಾಪಮಾನಗಳಲ್ಲಿ ಪರೀಕ್ಷಿಸಲಾಗುತ್ತದೆ. ಆದ್ದರಿಂದ, C75 ರೇಂಜ್ ಸಾಮಾನ್ಯವಾಗಿ ಕೆಳಗಿನ ಸ್ಥಾನವನ್ನು ತೆಗೆದುಕೊಳ್ಳುತ್ತದೆ, ಆದರೆ ಇದು ಮೂರು ಟೆಸ್ಟ್ ಸೈಕಲ್ ಗಳಲ್ಲಿ ಅತ್ಯಂತ ನಿಖರವಾಗಿದೆ.
ಇದನ್ನು ಸ್ಪಷ್ಟವಾಗಿ ತಿಳಿಯಲು, ಟಾಟಾ EV ಗಳ ಅಪ್ಡೇಟ್ ಆಗಿರುವ ರೇಂಜ್ ಗಳನ್ನು ನೋಡೋಣ:
ಮಾಡೆಲ್ |
ಅರ್ಬನ್ (P1) |
ಅರ್ಬನ್+ಎಕ್ಸ್ಟ್ರಾ ಅರ್ಬನ್ (P1+P2) |
C75 ರೇಂಜ್ |
ಕರ್ವ್ EV 55 kWh |
585 ಕಿ.ಮೀ |
502 ಕಿ.ಮೀ |
400-425 ಕಿಮೀ (ಅಂದಾಜು) |
ಕರ್ವ್.ev 45 kWh |
502 ಕಿ.ಮೀ |
430 ಕಿ.ಮೀ |
330-350 ಕಿಮೀ (ಅಂದಾಜು) |
ನೆಕ್ಸಾನ್.ev 40.5 kWh |
465 ಕಿ.ಮೀ |
390 ಕಿ.ಮೀ |
290-310 ಕಿಮೀ |
ನೆಕ್ಸಾನ್.ev 30 kWh |
325 ಕಿ.ಮೀ |
275 ಕಿ.ಮೀ |
210-230 ಕಿಮೀ |
ಪಂಚ್.ev 35 kWh |
421 ಕಿ.ಮೀ |
365 ಕಿ.ಮೀ |
270-290 ಕಿಮೀ |
ಪಂಚ್.ev 25 kWh |
315 ಕಿ.ಮೀ |
265 ಕಿ.ಮೀ |
190-210 ಕಿಮೀ |
ಟಿಯಾಗೋ.ev 24 kWh |
315 ಕಿ.ಮೀ |
275 ಕಿ.ಮೀ |
190-210 ಕಿಮೀ |
ಟಿಯಾಗೋ.ev 19.2 kWh |
250 ಕಿ.ಮೀ |
221 ಕಿ.ಮೀ |
150-160 ಕಿಮೀ |
MIDC ಟೆಸ್ಟ್ ಗಳ ಪ್ರಕಾರ 421 ಕಿಮೀ ರೇಂಜ್ ಹೊಂದಿರುವ 35 kWh ಬ್ಯಾಟರಿಯೊಂದಿಗೆ ಬರುವ ಟಾಟಾ ಪಂಚ್ EV ಯ ವಿವರಗಳನ್ನು ನೋಡೋಣ. ನಗರ ಮತ್ತು ಹೆದ್ದಾರಿಗಳ ಮಿಶ್ರಣಗೊಂಡ ಪರಿಸ್ಥಿಯಲ್ಲಿ (P1+P2), ಈ MIDC ರೇಂಜ್ 365 ಕಿ.ಮೀ.ಗೆ ಕಡಿಮೆಯಾಗುತ್ತದೆ. ಆದರೆ, C75 ರೇಂಜ್ 290 ಕಿಮೀ ಮತ್ತು 310 ಕಿಮೀ ನಡುವೆ ಇದೆ, ಮತ್ತು ಇದು ನಮ್ಮ ಆನ್ ರೋಡ್ ಟೆಸ್ಟ್ ಫಲಿತಾಂಶಗಳ ಹತ್ತಿರದಲ್ಲಿದೆ. P1 ರೇಂಜ್ ಮತ್ತು C75 ರೇಂಜ್ ನಡುವೆ ಸುಮಾರು 130 ಕಿಮೀ ವ್ಯತ್ಯಾಸವಿದೆ ಮತ್ತು ಇದು ಮುಖ್ಯವಾಗಿ ವೇಗ, ಲೋಡ್, ಡ್ರೈವಿಂಗ್ ಮಾಡುವ ಶೈಲಿ ಮತ್ತು ತಾಪಮಾನದಂತಹ ವಿಭಿನ್ನ ಡ್ರೈವಿಂಗ್ ಪರಿಸ್ಥಿತಿಗಳಿಂದಾಗಿರುತ್ತದೆ.
ಟಾಟಾದಂತೆ ಇತರ ಕಾರು ತಯಾರಕರು ಕೂಡ C75 ರೇಂಜ್ ಅನ್ನು ತೋರಿಸಬೇಕೇ? ನಿಮ್ಮ ಅನಿಸಿಕೆಗಳನ್ನು ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ EV ಆಟೋಮ್ಯಾಟಿಕ್