• English
  • Login / Register

97.85 ಲಕ್ಷ ರೂ. ಬೆಲೆಗೆ ಹೊಸ Mercedes-Benz GLE 300d AMG ಲೈನ್ ಡೀಸೆಲ್ ಆವೃತ್ತಿ ಬಿಡುಗಡೆ

ಮರ್ಸಿಡಿಸ್ ಗ್ಲೆ ಗಾಗಿ dipan ಮೂಲಕ ಆಗಸ್ಟ್‌ 13, 2024 07:59 pm ರಂದು ಪ್ರಕಟಿಸಲಾಗಿದೆ

  • 81 Views
  • ಕಾಮೆಂಟ್‌ ಅನ್ನು ಬರೆಯಿರಿ

ಮರ್ಸಿಡೀಸ್‌ ಬೆಂಜ್‌ ಈಗ ಜಿಎಲ್‌ಇ ಎಸ್‌ಯುವಿಯ 300d, 450d ಮತ್ತು 450 ಎಂಬ ಎಲ್ಲಾ ಮೂರು ಆವೃತ್ತಿಗಳಿಗೆ 'AMG ಲೈನ್' ಅನ್ನು ನೀಡುತ್ತದೆ 

New Mercedes-Benz GLE 300d AMG-Line launched in India

  • ಹೊರಹೋಗುವ 300ಡಿ ಆವೃತ್ತಿಗಿಂತ ಹೊಸ ಆವೃತ್ತಿಯು 1.2 ಲಕ್ಷ ರೂಪಾಯಿಗಳಷ್ಟು ಹೆಚ್ಚು ವೆಚ್ಚವಾಗುತ್ತದೆ.

  • ಹೊಸ ಜಿಎಲ್‌ಇ 300ಡಿ ನವೀಕರಿಸಿದ ವಿನ್ಯಾಸ ಅಂಶಗಳೊಂದಿಗೆ AMG-ನಿರ್ದಿಷ್ಟ ಬಾಡಿ ಸ್ಟೈಲ್‌ ಅನ್ನು ಪಡೆಯುತ್ತದೆ.

  • ಇಂಟಿರೀಯರ್‌ನಲ್ಲಿ ಡ್ಯುಯಲ್ 12.3-ಇಂಚಿನ ಡಿಸ್‌ಪ್ಲೇಗಳನ್ನು ಉಳಿಸಿಕೊಂಡಿದೆ ಆದರೆ ಇತ್ತೀಚಿನ ಮರ್ಸಿಡೀಸ್‌- ಬೆಂಜ್‌ ನಿರ್ದಿಷ್ಟ ಬಳಕೆದಾರ ಇಂಟರ್ಫೇಸ್ (UI) ನೊಂದಿಗೆ ಆಪ್‌ಡೇಟ್‌ ಮಾಡಲಾಗಿದೆ. 

  • ಇದು 269ಪಿಎಸ್‌ ಮತ್ತು 550ಎನ್‌ಎಮ್‌ ಉತ್ಪಾದಿಸುವ 48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅದೇ 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.

  • ಲೈನ್‌ಅಪ್‌ 3-ಲೀಟರ್ 6-ಸಿಲಿಂಡರ್ ಡೀಸೆಲ್ (367 ಪಿಎಸ್‌/750 ಎನ್‌ಎಮ್‌) ಮತ್ತು 3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ (381 ಪಿಎಸ್‌/500 ಎನ್‌ಎಮ್‌) ಅನ್ನು ಸಹ ಪಡೆಯುತ್ತದೆ.

  • ಭಾರತದಾದ್ಯಂತ ಇದರ ಬೆಲೆಗಳು ಈಗ 97.85 ಲಕ್ಷ ರೂ.ನಿಂದ 1.15 ಕೋಟಿ ರೂ.ವರೆಗೆ (ಎಕ್ಸ್ ಶೋರೂಂ) ಇದೆ.

ಮರ್ಸಿಡೀಸ್‌ ಬೆಂಝ್‌ ಜಿಎಲ್‌ಇಯು ಜರ್ಮನ್ ಕಾರು ತಯಾರಕರ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಲಕ್ಷುರಿ ಕಾರುಗಳಲ್ಲಿ ಒಂದಾಗಿದೆ. ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನದಲ್ಲಿ, ಹೊಸ 300d ಎಎಮ್‌ಜಿ ಲೈನ್ ಆವೃತ್ತಿಯನ್ನು ಅದರ ಕಾರುಗಳ ಪಟ್ಟಿಯಲ್ಲಿ ಪರಿಚಯಿಸಲಾಗಿದೆ. ಹಾಗೆಯೇ, ಇದರ ಹಿಂದಿನ 300d ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಪರಿಷ್ಕೃತ ಆವೃತ್ತಿಯ ಬೆಲೆಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

ಎಕ್ಸ್‌ಶೋರೂಮ್‌ ಬೆಲೆಗಳು

ಹೊಸ ಜಿಎಲ್‌ಇ 300ಡಿ 4ಮ್ಯಾಟಿಕ್‌

97.85 ಲಕ್ಷ ರೂ. 

ಜಿಎಲ್‌ಇ 400 4ಮ್ಯಾಟಿಕ್‌

1.10 ಕೋಟಿ ರೂ.

ಜಿಎಲ್‌ಇ 450ಡಿ 4ಮ್ಯಾಟಿಕ್‌

1.15  ಕೋಟಿ ರೂ.

ಸ್ಥಗಿತಗೊಂಡ ಜಿಎಲ್‌ಇ 300ಡಿ 4 ಮ್ಯಾಟಿಕ್‌ನ ಕೊನೆಯ ದಾಖಲಾದ ಬೆಲೆ 96.65 ಲಕ್ಷ ರೂ.(ಎಕ್ಸ್-ಶೋರೂಂ) ಆಗಿತ್ತು, ಇದು ಹೊಸ 300d ಹೊರಹೋಗುವ ಆವೃತ್ತಿಗಿಂತ 1.2 ಲಕ್ಷ ರೂ.ನಷ್ಟು ಹೆಚ್ಚು ದುಬಾರಿಯಾಗಿದೆ.

ಈ ಹಿಂದೆ, ಎಎಮ್‌ಜಿ ಲೈನ್ ಪುನರಾವರ್ತನೆಯು ಹೆಚ್ಚು ಶಕ್ತಿಯುತವಾದ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಮಾತ್ರ ಮೀಸಲಾಗಿತ್ತು. ಮರ್ಸಿಡೀಸ್‌ ಬೆಂಜ್‌ ತನ್ನ ಎಎಮ್‌ಜಿ ಲೈನ್‌ನಲ್ಲಿ ಎಲ್ಲಾ ಆವೃತ್ತಿಗಳನ್ನು ನೀಡುವ ಕ್ರಮವು ಸಂಪೂರ್ಣ ಜಿಎಲ್‌ಇ ಶ್ರೇಣಿಯನ್ನು ಏಕರೂಪದ ಸ್ಟೈಲಿಂಗ್ ಮತ್ತು ಟೆಕ್ ಫೀಚರ್‌ಗಳನ್ನು ಹೊಂದಲು ಸಕ್ರಿಯಗೊಳಿಸಿದೆ. ಜಿಎಲ್‌ಇ 300ಡಿ ಎಎಮ್‌ಜಿ ಲೈನ್ ಅವೃತ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಹೊರಭಾಗ

New Mercedes-Benz GLE 300d gets an AMG-Line grille

ಹೊಸ ಮರ್ಸಿಡೀಸ್‌ ಬೆಂಝ್‌ ಜಿಎಲ್‌ಇ 300d ಆವೃತ್ತಿಯು ಈಗ ಎಎಮ್‌ಜಿ-ನಿರ್ದಿಷ್ಟ ಬಾಡಿ ಸ್ಟೈಲ್‌ ಅನ್ನು ಪಡೆಯುತ್ತದೆ, ಇದು ಕ್ರೋಮ್‌ನಲ್ಲಿ ಫಿನಿಶ್‌ ಮಾಡಲಾದ ಸಣ್ಣ 3-ಸ್ಟಾರ್ ಅಂಶಗಳನ್ನು ಹೊಂದಿರುವ ಡೈಮಂಡ್-ಆಕಾರದ ಸಿಂಗಲ್-ಸ್ಲ್ಯಾಟ್ ಗ್ರಿಲ್ ಅನ್ನು ಒಳಗೊಂಡಿದೆ. ಹೆಡ್‌ಲೈಟ್‌ಗಳು ಹೊಸದು ಮತ್ತು ಇತರ ಜಿಎಲ್‌ಇ ಆವೃತ್ತಿಗಳಿಗೆ ಸಾಮ್ಯತೆಯನ್ನು ಹೊಂದಿದೆ. ಮುಂಭಾಗದ ಬಂಪರ್ ಅನ್ನು ಹೆಚ್ಚು ಆಕ್ರಮಣಕಾರಿ ರೇಖೆಗಳು ಮತ್ತು ಕ್ರೀಸ್‌ಗಳೊಂದಿಗೆ ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ, ಇದು ಲೈನ್‌ಅಪ್‌ನಲ್ಲಿನ ಇತರ ಎಎಮ್‌ಜಿ ಲೈನ್ ಆವೃತ್ತಿಗಳಿಗೆ ಹೋಲುತ್ತದೆ.

300ಡಿ ಈಗ ಬೂದ್‌ ಬಣ್ಣದಲ್ಲಿ ಫಿನಿಶ್‌ ಮಾಡಲಾದ 20-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ. ವೀಲ್‌ ಆರ್ಚ್‌ಗಳ ಮೇಲಿನ ಕಪ್ಪು ಬಾಡಿ ಕ್ಲಾಡಿಂಗ್‌ ಅನ್ನು ಈಗ ನೀಡಲಾಗುತ್ತಿಲ್ಲ, ಆದರೆ ಎಸ್‌ಯುವಿ ಬಾಗಿಲಿನ ಕೆಳಗೆ ಕ್ಲಾಡಿಂಗ್ ಅನ್ನು ಹೊಂದಿದೆ. ಹೊರಗಿನ ರಿಯರ್ ವ್ಯೂ ಮಿರರ್‌ಗಳು (ORVM ಗಳು) ಕೂಡ ಸಂಪೂರ್ಣ ಕಪ್ಪುಬಣ್ಣವನ್ನು ಹೊಂದಿದೆ.

New Mercedes-Benz GLE 300d gets a revised rear bumper design

ಟೈಲ್ ಲೈಟ್‌ಗಳು ಹಿಂದಿನ ಜಿಎಲ್‌ಇ 300d ಯಂತೆಯೇ ಇವೆ, ಆದರೆ ಹಿಂಭಾಗದ ಬಂಪರ್ ಏರ್ ವೆಂಟ್‌ಗಳನ್ನು ಪಡೆಯುತ್ತದೆ ಅದು ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತದೆ. ಆದರೆ, ಈ ಹಿಂದೆ ಇದ್ದ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಈಗ ಕೈಬಿಡಲಾಗಿದೆ. ಇದನ್ನು ಹೊರತುಪಡಿಸಿ, ಎಸ್‌ಯುವಿಯು ಅದೇ ಡ್ಯುಯಲ್ ಎಕ್ಸಾಸ್ಟ್ ಸೆಟಪ್ ಅನ್ನು ಮುಂದುವರೆಸಿದೆ.

ತಾಂತ್ರಿಕವಾಗಿ, ಹೊಸ ಜಿಎಲ್‌ಇ 300ಡಿ ಮುಂಭಾಗದಲ್ಲಿ ದೊಡ್ಡ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ, ಹೀಗಾಗಿ ಒಟ್ಟಾರೆ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: 2024 Mercedes-AMG GLC 43 ಕೂಪ್‌ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ

ಇಂಟಿರೀಯರ್‌ಗಳು, ಫೀಚರ್‌ಗಳು ಮತ್ತು ಸುರಕ್ಷತೆ

Mercedes-Benz GLE DashBoard

ಜಿಎಲ್‌ಇ ಎಸ್‌ಯುವಿಯ ಒಳಭಾಗವು ಮೊದಲಿನಂತೆಯೇ ಇರುತ್ತದೆ. ಆದರೆ, ಮರ್ಸಿಡೀಸ್‌ ಬೆಂಜ್‌ ಬಳಕೆದಾರ ಇಂಟರ್‌ಫೇಸ್‌ (UI) 12.3-ಇಂಚಿನ ಟಚ್‌ಸ್ಕ್ರೀನ್‌ಗಾಗಿ ಆಪ್‌ಡೇಟ್‌ ಮಾಡಲಾಗಿದೆ. ಫೀಚರ್‌ಗಳನ್ನು ಗಮನಿಸುವಾಗ, ಇದು 12.3-ಇಂಚಿನ ಡ್ರೈವರ್ಸ್ ಡಿಸ್‌ಪ್ಲೇ, 4-ಜೋನ್ ಕ್ಲೈಮೇಟ್ ಕಂಟ್ರೋಲ್, ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಸೀಟುಗಳೊಂದಿಗೆ ಮೆಮೊರಿ ಫಂಕ್ಷನ್ (ಮುಂಭಾಗದ ಆಸನಗಳು), ಹೆಡ್-ಅಪ್ ಡಿಸ್‌ಪ್ಲೇ ಮತ್ತು 590-ವ್ಯಾಟ್ 13-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಗಳನ್ನು ಹೊಂದಿದೆ. 

Mercedes-Benz GLE  AC Controls

ಸುರಕ್ಷತಾ ಪ್ಯಾಕೇಜ್‌ ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳನ್ನು (ADAS) ಒಳಗೊಂಡಿದೆ.

ಪವರ್‌ಟ್ರೈನ್‌

ಮರ್ಸಿಡೀಸ್‌ ಬೆಂಜ್‌ ಜಿಎಲ್‌ಇ ಲೈನ್‌ಅಪ್ ಮೂರು ಎಂಜಿನ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ವಿಶೇಷಣಗಳು ಈ ಕೆಳಗಿನಂತಿವೆ:

 

ಹೊಸ ಜಿಎಲ್‌ಇ 300ಡಿ 4ಮ್ಯಾಟಿಕ್‌

ಜಿಎಲ್‌ಇ 400 4ಮ್ಯಾಟಿಕ್‌

ಜಿಎಲ್‌ಇ 450ಡಿ 4ಮ್ಯಾಟಿಕ್‌

ಎಂಜಿನ್‌

48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್

48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 3-ಲೀಟರ್ 6-ಸಿಲಿಂಡರ್ ಡೀಸೆಲ್ ಎಂಜಿನ್

48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್

ಪವರ್‌

269 ಪಿಎಸ್‌

367 ಪಿಎಸ್‌

381 ಪಿಎಸ್‌

ಟಾರ್ಕ್‌

550 ಎನ್‌ಎಮ್‌

750 ಎನ್‌ಎಮ್‌

500 ಎನ್‌ಎಮ್‌

ಹೊಸ ಆವೃತ್ತಿಯ ಔಟ್‌ಪುಟ್ ಅಂಕಿಅಂಶಗಳು ಹೊರಹೋಗುವ ಆವೃತ್ತಿಯಂತೆ ಇರುತ್ತದೆ.  ಬದಲಾಗಿಲ್ಲ. ಎಲ್ಲಾ ಆವೃತ್ತಿಗಳು 9-ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಅನ್ನು ಪಡೆಯುತ್ತವೆ, ಇದು ಎಲ್ಲಾ ಚಕ್ರಗಳಿಗೆ ಪವರ್‌ಅನ್ನು ಕಳುಹಿಸುತ್ತದೆ.

was this article helpful ?

Write your Comment on Mercedes-Benz ಗ್ಲೆ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience