Login or Register ಅತ್ಯುತ್ತಮ CarDekho experience ಗೆ
Login

ಹೈಬ್ರಿಡ್ ಪರ್ಫಾರ್ಮೆನ್ಸ್‌ನೊಂದಿಗೆ ಹೊಸ Porsche 911 ಅನಾವರಣ

ಪೋರ್ಷೆ 911 ಗಾಗಿ dipan ಮೂಲಕ ಮೇ 30, 2024 07:23 pm ರಂದು ಪ್ರಕಟಿಸಲಾಗಿದೆ

ಪೋರ್ಷೆಯ ನವೀಕರಿಸಿದ 911 ಆವೃತ್ತಿಯು ವಿನ್ಯಾಸದಲ್ಲಿ ಬದಲಾವಣೆಗಳು, ಸ್ಟ್ಯಾಂಡರ್ಡ್ ಆಗಿ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೊಸ ಪವರ್‌ಟ್ರೇನ್‌ಗಳನ್ನು ಪಡೆಯುತ್ತದೆ, ಹೊಸ ಕ್ಯಾರೆರಾ GTS ನಲ್ಲಿ ಮೊದಲ ಹೈಬ್ರಿಡ್ ಆಯ್ಕೆಯನ್ನು ಒಳಗೊಂಡಿದೆ

  • 911 ಕ್ಯಾರೆರಾ ಜಿಟಿಎಸ್ 3.6-ಲೀಟರ್ ಆರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಹೈಬ್ರಿಡ್ ಸಿಸ್ಟಮ್ ಜೊತೆಗೆ 541 ಪಿಎಸ್ ಮತ್ತು 610 ಎನ್‌ಎಂ ಅನ್ನು ಸಂಯೋಜಿಸುತ್ತದೆ.
  • ವಿನ್ಯಾಸದ ಆಪ್‌ಡೇಟ್‌ಗಳಲ್ಲಿ ಹೊಸ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳು, ನವೀಕರಿಸಿದ ಬಂಪರ್‌ಗಳು ಮತ್ತು ಪೋರ್ಷೆ ಬ್ಯಾಡ್ಜಿಂಗ್‌ನೊಂದಿಗೆ ಹೊಸ ಹಿಂಬದಿಯ ಲೈಟ್ ಬಾರ್ ಸೇರಿವೆ.
  • ಉತ್ತಮ ಡ್ರೈವಿಂಗ್‌ ಡೈನಾಮಿಕ್ಸ್‌ಗಾಗಿ ಸ್ಟ್ಯಾಂಡರ್ಡ್ ಹಿಂಬದಿ-ಚಕ್ರ ಸ್ಟೀರಿಂಗ್ ಮತ್ತು PASM ಸ್ಪೋರ್ಟ್ಸ್ ಸಸ್ಪೆನ್ಸನ್‌ಗಳಿವೆ.
  • ಹೊಸ 12.6-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ನವೀಕರಿಸಿದ 10.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಿದೆ.
  • 911 ಕ್ಯಾರೆರಾ 394 PS ಮತ್ತು 450 Nm ನೊಂದಿಗೆ ನವೀಕರಿಸಿದ 3-ಲೀಟರ್ ಟ್ವಿನ್-ಟರ್ಬೊ ಬಾಕ್ಸರ್ ಎಂಜಿನ್ ಅನ್ನು ಒಳಗೊಂಡಿದೆ.
  • 2024ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಪೋರ್ಷೆ 911ರ ಹೊಸ ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ, ಇದು 992-ಪೀಳಿಗೆಯ ಫೇಸ್‌ಲಿಫ್ಟ್ ಆವೃತ್ತಿಯಾಗಿದೆ. ಇದು ಕೇವಲ ಕ್ಯಾರೆರಾ ಮತ್ತು ಕ್ಯಾರೆರಾ ಜಿಟಿಎಸ್ ಆವೃತ್ತಿಗಳಲ್ಲಿ ನವೀಕರಿಸಿದ ಕ್ಯಾಬಿನ್ ಮತ್ತು ಹೆಚ್ಚಿನ ಪರ್ಪಾರ್ಮೆನ್ಸ್‌ನೊಂದಿಗೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದೆ. ಈ ಹೊಸ 911 ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಇದು ಅದರ ICE ಶುದ್ಧತೆಯ ಹಿರಿಮೆಯನ್ನು ಸೂಚಿಸುತ್ತದೆ ಮತ್ತು ಈ ಕಾರು ತಯಾರಕರ 61-ವರ್ಷಗಳ ಇತಿಹಾಸದಲ್ಲಿ ಮೊದಲ ರೋಡ್-ಗೋಯಿಂಗ್ ಹೈಬ್ರಿಡ್ ಆವೃತ್ತಿಯನ್ನು ಪರಿಚಯಿಸುತ್ತದೆ. ಎಲ್ಲಾ-ಹೊಸ (ಆದರೆ ಇನ್ನೂ ಅದೇ ರೀತಿಯ) ಪೋರ್ಷೆ 911 ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಹೈಬ್ರಿಡ್, ಆದರೆ ಪರ್ಫಾರ್ಮೆನ್ಸ್‌ಗಾಗಿ ಮಾತ್ರ

ಪೋರ್ಷೆ 911 ಮೋಟಾರಿಂಗ್ ಶುದ್ಧತೆಗೆ ಬ್ರ್ಯಾಂಡ್‌ನ ಕೊನೆಯ ಭದ್ರಕೋಟೆಯಾಗಿದ್ದರೂ, ಹೆಚ್ಚು ಕಟ್ಟುನಿಟ್ಟಾದ ವಾಯುಮಾಲಿನ್ಯದ ಮಾನದಂಡಗಳಿಂದಾಗಿ ಕಾರು ತಯಾರಕರು ವಿದ್ಯುದ್ದೀಕರಿಸಲು ಒತ್ತಾಯಿಸಲ್ಪಡುತ್ತಿದ್ದಾರೆ, ಇದು ಸಂಪೂರ್ಣ ಕಾರ್ಯಕ್ಷಮತೆಯ ದೃಷ್ಟಿಕೋನದಿಂದ ಬೇಸರದ ಸಂಗತಿಯಾಗಿದೆ. ಕೆಲವು ಇತರ ಉನ್ನತ-ಫರ್ಪಾರ್ಮೆನ್ಸ್‌ನ ಹೈಬ್ರಿಡ್‌ಗಳಂತೆ, ಇದು ಶುದ್ಧ EV ಮೋಡ್‌ನೊಂದಿಗೆ ಪ್ಲಗ್-ಇನ್ ಸಿಸ್ಟಮ್ ಅಲ್ಲ. ಹೊಸ 911 GTS ಪೋರ್ಷೆ T-ಹೈಬ್ರಿಡ್ ಟೆಕ್ ಅನ್ನು ಪರಿಚಯಿಸಲಿದೆ, ಇದು ಹಗುರವಾದ ಹೈಬ್ರಿಡ್ ಪವರ್‌ಟ್ರೇನ್ ಆಗಿದೆ. ಇದು ಹೊಸದಾಗಿ ಅಭಿವೃದ್ಧಿಪಡಿಸಿದ 3.6-ಲೀಟರ್ ಆರು-ಸಿಲಿಂಡರ್ ಟರ್ಬೋಚಾರ್ಜ್ಡ್ ಬಾಕ್ಸರ್ ಎಂಜಿನ್, ಟರ್ಬೋಚಾರ್ಜರ್‌ಗೆ ತಕ್ಷಣವೇ ಬೂಸ್ಟ್ ಅನ್ನು ನಿರ್ಮಿಸಲು ಎಲೆಕ್ಟ್ರಿಕ್ ಮೋಟರ್ ಮತ್ತು ಹೆಚ್ಚುವರಿ ಫರ್ಪಾರ್ಮೆನ್ಸ್‌ಗಾಗಿ 8-ಸ್ಪೀಡ್ ಡ್ಯುಯಲ್-ಕ್ಲಚ್ PDK ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ. ಸಂಯೋಜಿತವಾಗಿ, 911 GTS, 541ಪಿಎಸ್‌ ಮತ್ತು 610ಎನ್‌ಎಮ್‌ನ ಫರ್ಪಾರ್ಮೆನ್ಸ್‌ನ ಔಟ್‌ಪುಟ್‌ ಅನ್ನು ಹೊಂದಿದೆ.

ಇದು 0-100 kmph ವೇಗವನ್ನು 3.0 ಸೆಕೆಂಡುಗಳಲ್ಲಿ ಪಡೆಯುತ್ತದೆ ಮತ್ತು 312 kmph ನ ಟಾಪ್‌ ಸ್ಪೀಡ್‌ ಅನ್ನು ಹೊಂದಿದೆ. ಪೋರ್ಷೆ ಹೇಳುವಂತೆ ಈ ಹೊಸ 911 GTS, , 20.8 ಕಿ.ಮೀ ದೂರದ Nurburgring Nordschleife ಅನ್ನು ಅದರ ಹಿಂದಿನ ಆವೃತ್ತಿಗಿಂತ 8.7 ಸೆಕೆಂಡುಗಳಷ್ಟು ವೇಗವಾಗಿ ತಲುಪಿತು. ಯುರೋಪ್‌ನಲ್ಲಿ ಬುಕಿಂಗ್‌ಗೆ ಈಗಾಗಲೇ ಲಭ್ಯವಿದೆ, ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್‌ಗಳ ಆಯ್ಕೆಯೊಂದಿಗೆ ನೀವು 911 GTS ಅನ್ನು ಖರೀದಿಸಬಹುದು.

911 ಕ್ಯಾರೆರಾ ಇದರಲ್ಲೂ 3-ಲೀಟರ್ ಟ್ವಿನ್-ಟರ್ಬೊ ಬಾಕ್ಸರ್ ಎಂಜಿನ್ ಅನ್ನು ಬಳಸುತ್ತದೆ, ಆದರೆ ಇದನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಗಿದೆ. ಇದು ಈಗ ಟರ್ಬೊ ಮೊಡೆಲ್‌ಗಳಿಂದ ಇಂಟರ್‌ಕೂಲರ್ ಅನ್ನು ಬಳಸುತ್ತದೆ, ಇದನ್ನು ಹಿಂದೆ GTS ಮೊಡೆಲ್‌ಗಳಿಗೆ ಕಾಯ್ದಿರಿಸಲಾಗಿತ್ತು. ಈ ಬದಲಾವಣೆಗಳೊಂದಿಗೆ, ಇದು 394 ಪಿಎಸ್‌ ಮತ್ತು 450 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ.

ಪರಿಚಿತ ಹೊರಭಾಗ

ಹೊಸ ಪೋರ್ಷೆ 911 ಮೊದಲಿನಂತೆಯೇ ಕಾಣುತ್ತದೆ, ಆದರೆ ಯಾವಾಗಿನಂತೆ, ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಸೂಕ್ಷ್ಮವಾದ, ಆದರೆ ಪ್ರಭಾವಶಾಲಿ ವಿನ್ಯಾಸದ ಬದಲಾವಣೆಗಳನ್ನು ಹೊಂದಿದೆ. ಇದು ಈಗ ಹೊಸ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ, ಎಲ್ಲಾ ಬೆಳಕಿನ ವೈಶಿಷ್ಟ್ಯಗಳನ್ನು ಒಂದು ಕ್ಲಸ್ಟರ್‌ಗೆ ಸಂಯೋಜಿಸುತ್ತದೆ. ಕಾರು GTS ನಲ್ಲಿ ಆಕ್ಟಿವ್‌ ಏರ್‌ ಫ್ಲಾಪ್‌ಗಳೊಂದಿಗೆ ದೊಡ್ಡ ಕಡಿಮೆ ಗಾಳಿಯ ಸೇವನೆಯನ್ನು ಹೊಂದಿದೆ ಮತ್ತು ನಂಬರ್‌ ಪ್ಲೇಟ್‌ನ ಅಡಿಯಲ್ಲಿ ಮುಂಭಾಗದ ADAS ಸೆನ್ಸಾರ್‌ಗಳನ್ನು ಸ್ಥಳಾಂತರಿಸಲಾಗಿದೆ.

ಹಿಂಭಾಗದಲ್ಲಿ, ಪೋರ್ಷೆ ಬ್ಯಾಡ್ಜಿಂಗ್, ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ವೇರಿಯಬಲ್ ರಿಯರ್ ಸ್ಪಾಯ್ಲರ್‌ನೊಂದಿಗೆ ಕನೆಕ್ಟೆಡ್‌ ಟೈಲ್ ಲ್ಯಾಂಪ್ ವಿನ್ಯಾಸಕ್ಕಾಗಿ ಹೊಸ ಲೈಟ್ ಬಾರ್ ಇದೆ. 911 ಕ್ಯಾರೆರಾ ಜಿಟಿಎಸ್ ಸ್ಟ್ಯಾಂಡರ್ಡ್ ಸ್ಪೋರ್ಟ್ ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು ಇತರ ಮೊಡೆಲ್‌ಗಳಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.

ಪರಿಷ್ಕರಿಸಿದ ಚಾಸಿಸ್

ಹೊಸ ಪೋರ್ಷೆ 911 ಕ್ಯಾರೆರಾ ಜಿಟಿಎಸ್ ಎಲ್ಲಾ ರೀತಿಯಲ್ಲೂ ಓಡಿಸಲು ಉತ್ತಮವಾಗಿದೆ ಮತ್ತು ಈಗ ಸ್ಟ್ಯಾಂಡರ್ಡ್ ರಿಯರ್-ವೀಲ್ ಸ್ಟೀರಿಂಗ್ ಮತ್ತು ಅಡಾಪ್ಟಿವ್ ಡ್ಯಾಂಪರ್‌ಗಳೊಂದಿಗೆ PASM ಸ್ಪೋರ್ಟ್ ಸಸ್ಪೆನ್ಶನ್ ಅನ್ನು ಒಳಗೊಂಡಿದೆ, ಸ್ಟ್ಯಾಂಡರ್ಡ್ ಕ್ಯಾರೆರಾಕ್ಕಿಂತ 10 ಎಂಎಂ ಕಡಿಮೆ ಸವಾರಿ ಮಾಡುತ್ತದೆ. ಪೋರ್ಷೆ ಡೈನಾಮಿಕ್ ಚಾಸಿಸ್ ಕಂಟ್ರೋಲ್ (PDCC) ಐಚ್ಛಿಕವಾಗಿದ್ದು, ಸುಧಾರಿತ ಪರ್ಫಾರ್ಮೆನ್ಸ್‌ಗಾಗಿ ಹೈ-ವೋಲ್ಟೇಜ್ ಬ್ಯಾಟರಿಯಿಂದ ಚಾಲಿತ ಎಲೆಕ್ಟ್ರೋ-ಹೈಡ್ರಾಲಿಕ್ಸ್ ಅನ್ನು ಬಳಸುತ್ತದೆ. GTS ಸಹ ಅಗಲವಾದ ಹಿಂಭಾಗದ ಟೈರ್‌ಗಳನ್ನು ಹೊಂದಿದೆ ಮತ್ತು ಸ್ಟ್ಯಾಂಡರ್ಡ್ 19/20-ಇಂಚಿನ ಮತ್ತು 20/21-ಇಂಚಿನ ಆಯ್ಕೆಗಳಲ್ಲಿ ಡ್ರ್ಯಾಗ್-ಕಡಿಮೆಗೊಳಿಸುವ ಚಕ್ರಗಳನ್ನು ನೀಡುತ್ತದೆ.

ಪರಿಷ್ಕರಿಸಿದ ಒಳಾಂಗಣಗಳು

ಒಳಭಾಗದಲ್ಲಿ, ಹೊಸ ಪೋರ್ಷೆ 911 ಎರಡು ಸೀಟರ್‌ ಅಥವಾ 2+2 ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈಗ 12.6-ಇಂಚಿನ ಬಾಗಿದ ಡಿಸ್ಪ್ಲೇಯೊಂದಿಗೆ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ 10.9-ಇಂಚಿನ ಸೆಂಟರ್ ಟಚ್‌ಸ್ಕ್ರೀನ್‌ನನ್ನು ಹೊಂದಿದ್ದು, ಇದು ಡ್ರೈವ್ ಮೋಡ್‌ಗಳು ಮತ್ತು ಸೆಟ್ಟಿಂಗ್‌ಗಳು, ನಿಲುಗಡೆ ಮಾಡುವಾಗ ವೀಡಿಯೊ ಸ್ಟ್ರೀಮಿಂಗ್ ಮತ್ತು ಆಪಲ್‌ ಮ್ಯೂಸಿಕ್ ಮತ್ತು ಸ್ಪೋಟಿಫೈಗಾಗಿ ಸ್ಥಳೀಯ ಅಪ್ಲಿಕೇಶನ್‌ಗಳ ಸುಲಭ ಬಳಕೆಗಾಗಿ ನವೀಕರಿಸಿದ PCM ಸಿಸ್ಟಮ್ ಅನ್ನು ಹೊಂದಿದೆ.

ತಂಪಾಗಿರುವ ಕಂಪಾರ್ಟ್‌ಮೆಂಟ್‌ನಲ್ಲಿ 15W ವರೆಗೆ ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೈ-ಪವರ್ ಯುಎಸ್‌ಬಿ-ಸಿ ಪಿಡಿ ಪೋರ್ಟ್‌ಗಳು, ಸ್ಟ್ಯಾಂಡರ್ಡ್ ಆಂಬಿಯೆಂಟ್ ಲೈಟಿಂಗ್ ಮತ್ತು ಸ್ಟ್ಯಾಂಡರ್ಡ್ ಕ್ಯಾರೆರಾಗಾಗಿ ಸ್ಟೀರಿಂಗ್ ವೀಲ್‌ನಲ್ಲಿ ಡ್ರೈವ್ ಮೋಡ್ ಸ್ವಿಚ್ ಅನ್ನು ಕಾರ್ ಒಳಗೊಂಡಿದೆ.

ನಿರೀಕ್ಷಿತ ಬಿಡುಗಡೆ

ಹೊಸ 911 ಕ್ಯಾರೆರಾ (ಕೂಪ್ ಮತ್ತು ಕ್ಯಾಬ್ರಿಯೊಲೆಟ್) ಮತ್ತು ಕ್ಯಾರೆರಾ ಜಿಟಿಎಸ್ ಎರಡೂ ಜಾಗತಿಕವಾಗಿ ಆರ್ಡರ್ ಮಾಡಲು ಲಭ್ಯವಿದೆ ಮತ್ತು 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಭಾರತಕ್ಕೆ ಆಗಮಿಸಬಹುದು. 911 ರ ಹೈಬ್ರಿಡ್‌ ಆದನಂತರ, ಚಿಕ್ಕದಾದ 718 ಸಹ ವಿದ್ಯುದ್ದೀಕರಣಕ್ಕೆ ಒಳಗಾಗುತ್ತದೆ, ಇದು ಪೋರ್ಷೆ ಲೈನ್ಅಪ್ ಅನ್ನು ಹೆಚ್ಚು ವಿದ್ಯುತ್ ಮಾಡುತ್ತದೆ. ಪ್ರಸ್ತುತ, T-ಹೈಬ್ರಿಡ್ ಪವರ್‌ಟ್ರೇನ್ GTS ಗೆ ಮಾತ್ರ ಇರಲಿದೆ, ಹೆಚ್ಚಿನ ಹೈಬ್ರಿಡ್ ಆವೃತ್ತಿಗಳನ್ನು ನಿರೀಕ್ಷಿಸಲಾಗಿದೆ. ಹೈಬ್ರಿಡ್ 911, ಅದರ ಭಾರತದಲ್ಲಿ ಬಿಡುಗಡೆಯಾದ ನಂತರ, ಪ್ರಸ್ತುತ 911 ಕ್ಯಾರೆರಾಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು, ಇದು ರೂ 1.86 ಕೋಟಿಯಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತದೆ ಮತ್ತು ಫೆರಾರಿ 296 ಜಿಟಿಬಿ ಮತ್ತು ಮೆಕ್ಲಾರೆನ್ ಆರ್ಟುರಾದೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಓದಿ: ಪೋರ್ಷೆ 911 ಆಟೋಮ್ಯಾಟಿಕ್‌

Share via

Write your Comment on Porsche 911

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಕೌಪ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.3.22 ಸಿಆರ್*
ಎಲೆಕ್ಟ್ರಿಕ್
Rs.2.34 ಸಿಆರ್*
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.1.99 - 4.26 ಸಿಆರ್*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ