ಮಾರುತಿ ಸುಜುಕಿ ಎರ್ಟಿಗಾ 2018 - 5 ನಮಗೆ ಇಷ್ಟವಾಗುವ ವಿಷಯಗಳು

published on ಜುಲೈ 17, 2019 11:11 am by khan mohd. for ಮಾರುತಿ ಎರ್ಟಿಗಾ 2015-2022

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ನಾವು ಇಂಡಿಯಾ ಸ್ಪೆಕ್ ಸೆಕೆಂಡ್ ಪೀಳಿಗೆಯ ಎರ್ಟಿಗಾ ದಲ್ಲಿ ಇಂಡೋನೇಷ್ಯಾ ದ ಮಾಡೆಲ್ ಗಿಂತಲೂ ಹೆಚ್ಚು ಫೀಚರ್ ಗಳನ್ನೂ ಹೊಂದಿರಲು ಬಯಸುತ್ತೇವೆ, ಇದನ್ನು ಇನ್ನು ಉತ್ತಮ ಬಳಕೆದಾರ ಸ್ನೇಹಿಯಾಗಿ ಇರಲು ಬೇಕಾದಂತಹ ವಿಷಯಗಳನ್ನು ಕೊಡಲಾಗಿದೆ. 

2018 Maruti Suzuki Ertiga

ಎರೆಡನೆ - ಪೀಳಿಗೆಯ ಮಾರುತಿ ಸುಜುಕಿ ಎರ್ಟಿಗಾ ಮಾರ್ಕೆಟ್ ನಲ್ಲಿ  2018 ನ ಹಬ್ಬಗಳ ದಿನಗಳಲ್ಲಿ ಭಾರತದ ಮಾರ್ಕೆಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನು  IIMS ( ಇಂಡೋನೇಷ್ಯಾ ಇಂಟರ್ನ್ಯಾಷನಲ್ ಮೋಟಾರ್ ಶೋ) 2018 ನಲ್ಲಿ ಅನಾವರಣಗೊಳಿಸಲಾದ ಎರ್ಟಿಗಾ ಭಾರತ ದಲ್ಲಿನ ಆವೃತ್ತಿಯ ಬಗೆಗಿನ ಮುನ್ನೋಟವನ್ನು ಕೊಟ್ಟಿತು. ಫೀಚರ್ ಗಳ ಪಟ್ಟಿಯಲ್ಲಿನ ಸ್ವಲ್ಪ ಬದಲಾವಣೆಗಳನ್ನು ಹೊರತುಪಡಿಸಿದರೆ , ಅವು ಭಾರತದ ಮಾರುಕಟ್ಟೆಗೆ ಅನುಗುಣವಾಗಿರಬಹುದು, ನಮಗೆ ಅನಿಸುವಂತೆ ಬಹಳಷ್ಟನ್ನು ಭಾರತದಲ್ಲಿ ಮುಂದುವರೆಸಬಹುದು. ಹೊಸ ಮಾಡೆಲ್ ಬಿಡುಗಡೆಯುಂಡಿಗೆ ನಮಗೆ ಆರಂಭಿಕ ಹಂತದಲ್ಲಿ ಅಷ್ಟೇನೂ ಬೆಲೆ ಏರಿಕೆ ಆಗುವುದಿಲ್ಲ ಎಂದುಕೊಂಡಿದ್ದೇವೆ. ಆದರೆ ಟಾಪ್ ವೇರಿಯೆಂಟ್ ನಲ್ಲಿ ಹೆಚ್ಚು ಸಲಕರಣೆಗಳು ಹಾಗು ಅದರ ಜೊತೆಗೆ ಹೆಚ್ಚಿನ ಬೆಲೆ ಪಟ್ಟಿಯು ಸಹ ಇರಬಹುದು ಎಂದುಕೊಂಡಿದ್ದೇವೆ. ಪ್ರಚಲಿತದಲ್ಲಿ ಎರ್ಟಿಗಾ ಬೆಲೆ  Rs 6.58 ಲಕ್ಷ ದಿಂದ ಪ್ರಾರಂಭವಾಗುತ್ತದೆ ಮತ್ತು ಅದು  Rs 10.75 ಲಕ್ಷದ ವರೆಗೂ ತಲುಪಬಹುದು (ಎರೆಡೂ ಎಕ್ಷ -ಶೋ ರೂಮ್ ದೆಹಲಿ ) ಭಾರತದಲ್ಲಿ. 

ನಮಗೆ ಈ ಹೊಸ ಮಾಡೆಲ್ ನಲ್ಲಿ ಇಷ್ಟವಾದಂತಹ ಹಲವು ವಿಷಯಗಳನ್ನು ಪಟ್ಟಿ ಮಾಡಿದ್ದೇವೆ:

2018 Maruti Suzuki Ertiga

1. ಅನನ್ಯವಾಗಿ ಗುರುತಿಸಿಕೊಳ್ಳುವಿಕೆ :  ಎರ್ಟಿಗಾ ತನ್ನ ಬಾಹ್ಯ ಡಿಸೈನ್ ಅನ್ನು ಎಂದೂ ಹಂಚಿಕೊಳ್ಳಿಲ್ಲ, ವಿಶೇಷವಾಗಿ ಮುಂಭಾಗದಲ್ಲಿ, ಕೊನೆ ಪೀಳಿಗೆಯ ಡಿಸೈರ್ ಅಥವಾ ಸ್ವಿಫ್ಟ್ ನೊಂದಿಗೆ. ಆದರೆ ಅದರ ಆಂತರಿಕಗಳಲ್ಲಿನ, ಡ್ಯಾಶ್ ಬೋರ್ಡ್ ಲೇ ಔಟ್, ಡಿಸೈರ್ ನಂತೆಯೇ ಇದೆ, ಆದರೆ ಭಿನ್ನವಾದ ಬಣ್ಣದ ಯೋಜನೆಯಲ್ಲಿ. ಮೊದಲನೆಯ ಪೀಳಿಗೆಯ ಮಾಡೆಲ್ ನಂತೆ ಎರ್ಟಿಗಾ ದಲ್ಲಿ ಪೂರ್ಣವಾಗಿ ವಿಭಿನ್ನವಾದ ಮುಂಭಾಗ ಇದೆ , ಆದರೆ ಈ ಬಾರಿ ಡ್ಯಾಶ್ ಬೋರ್ಡ್ ನ ಡಿಸೈನ್ ಒಳಭಾಗದಲ್ಲಿ ನಕಲು ಮಾಡಿದ ಕೆಲಸವಾಗಿಲ್ಲ. 

2018 Maruti Suzuki Ertiga

2. ಹೆಚ್ಚಿದ ಕ್ಯಾಬಿನ್ ವಿಶಾಲತೆ 

ಇಕ್ಕಟ್ಟಾದ ಮೂರನೇ ಸಾಲು ಮತ್ತು ಕಡಿಮೆ ಬೂಟ್ ಸ್ಪೇಸ್ , ಈ ಎರೆಡು ವಿಷಯಗಳು ಎರ್ಟಿಗಾ ದಲ್ಲಿನ ಮುಖ್ಯವಾದ ಹಿನ್ನಡೆಯಾಗಿತ್ತು.  ಎರೆಡನೆ ಪೀಳಿಗೆಯ ಎರ್ಟಿಗಾ ದಲ್ಲಿನ ಬೂಟ್ ಸ್ಪೇಸ್ 153 ಲೀಟರ್ ಇದೆ, ಎಲ್ಲ ಸೀಟ್ ಗಳನ್ನು  ಉಪಯೋಗಿಸುವಾಗ. ಸದ್ಯದಲ್ಲಿ ಮೊದಲನೇ ಪೀಳಿಗೆಯ ಎರ್ಟಿಗಾ ದಲ್ಲಿ 135 ಲೀಟರ್ ಇದೆ, ಎಲ್ಲ ಸೀಟ್ ಗಳನ್ನೂ ಉಪಯೋಗಿಸುತ್ತಿರುವಾಗ(ಅನಧಿಕೃತವಾಗಿ ). ಎರೆಡನೆ ಪೀಳಿಗೆಯ ಎರ್ಟಿಗಾ ಅಗಲವಾಗಿದೆ (40mm ನಷ್ಟು ) ಮತ್ತು ಉದ್ದವಾಗಿದೆ (99mm ನಷ್ಟು) ಭಾರತದಲ್ಲಿರುವ ಮೊದಲನೆ ಪೀಳಿಗೆಯ  ಮಾಡೆಲ್ ಗೆ ಹೋಲಿಸಿದಾಗ. ಸುಜುಕಿ ಯವರು  ಈ ವಿಷಯಗಳ ಬಗ್ಗೆ ಕೆಲಸ ಮಾಡಿದಂತಿದೆ. 

New Suzuki Ertiga 2018 - 5 Things We Like

3.   ಹೆಚ್ಚು ಶಕ್ತಿಯುತವಾದ ಪೆಟ್ರೋಲ್ ಎಂಜಿನ್: 

ಎರೆಡನೆ ಪೀಳಿಗೆಯ ಎರ್ಟಿಗಾ ಇಂಡೋನೇಷ್ಯಾ ದಲ್ಲಿ  1.5-litre, K15B ಪೆಟ್ರೋಲ್ ಎಂಜಿನ್ ಪಡೆಯುತ್ತದೆ, ಅದರಲ್ಲಿ 104PS   ಗರಿಷ್ಟ ಪವರ್ ಹಾಗು 138Nm  ಗರಿಷ್ಟ ಟಾರ್ಕ್ 4400rpm ದೊರೆಯುತ್ತದೆ. ಇದು  12PS and 8Nm ಹೆಚ್ಚು ಆಗಿದೆ ಎರ್ಟಿಗಾ ದ  ಭಾರತದಲ್ಲಿ ದೊರೆಯುವ 1.4-ಲೀಟರ್ ಪೆಟ್ರೋಲ್ ಎಂಜಿನ್ ಗೆ ಹೋಲಿಸಿದಾಗ. ಔಟ್ ಪುಟ್ ನ ಹೆಚ್ಚಳತೆ ಅಷ್ಟೇನು ಗಮನಾರ್ಹವಾಗಿಲ್ಲದಿದ್ದರೂ, ಅದು ಎರ್ಟಿಗಾ ವನ್ನು ಹಿಂದಿಗಿಂತಲೂ ಹೆಚ್ಚು ಶಕ್ತಿ ಭರಿತ ಗ್ರಾಹಕ ಸ್ನೇಹಿಯಾಗಿಸುತ್ತದೆ. ನಾವು ಮಾರುತಿ ಸುಜುಕಿ ಯವರು 1.4-ಲೀಟರ್ ಯೂನಿಟ್ ಬದಲು  1.5-ಲೀಟರ್ ಎಂಜಿನ್ ಅನ್ನು ಕೊಡುವಂತೆ ನಿರೀಕ್ಷಿಸಿದ್ದೇವೆ. 

4. ಹಗುರವಾಗಿರುವ ವಾಹನಗಳ  ವೇದಿಕೆಯಲ್ಲಿ ಮಾಡಲಾಗಿದೆಹೊಸ ಪೀಳಿಗೆಯ ಮಾರುತಿ ಎರ್ಟಿಗಾ ಹೆಅರ್ಟೆಕ್ಟ್ ವೇದಿಕೆ ಮೇಲೆ ಮಾಡಲಾಗಿದೆ ಅದು ಡಿಸೈರ್, ಸ್ವಿಫ್ಟ್ , ಬಲೆನೊ, ಮತ್ತು ಇಗ್ನಿಸ್ ಅನ್ನು ಹೋಲುತ್ತದೆ. ಈ ವೇದಿಕೆಯು ಕಡಿಮೆ ಬಾರವಿದ್ದರೂ ಹೆಚ್ಚು ದೃಢತೆ ಉಳ್ಳ ವೇದಿಕೆಯಾಗಿದೆ ಈಗಿರುವ ಎರ್ಟಿಗಾ ಗೆ ಹೋಲಿಸಿದರೆ. ಇದು ರಸ್ತೆಯಲ್ಲಿನ ನಡತೆ ಹಾಗು ಮೈಲೇಜ್ ಅನ್ನು ಕೂಡ ಉತ್ತಮವಾಗಿರಿಸಲು ಸಹಾಯವಾಗುತ್ತದೆ. 

2018 Maruti Suzuki Ertiga

5.  ಹೊಸ ಡಿಸೈನ್ :

2018 ಎರ್ಟಿಗಾ ನೋಡಲು ಮೊನಚಾಗಿದೆ ಮತ್ತು ಹೆಚ್ಚು ದೃಢವಾದ ನಿಲುವನ್ನು ಹೊಂದಿದೆ , ಅದಕ್ಕೆ ಮುಂಬದಿಯ  ಭಾಗದ ಡಿಸೈನ್ ಕಾರಣವಾಗಿದೆ. ಡಬಲ್ ಬ್ಯಾರೆಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಯೂನಿಟ್ ನೋಡಲು ಚೆನ್ನಾಗಿದೆ. ವಿಶೇಷವಾಗಿ ಹೋಂಡಾ CR-V ಯ ಟೈಲ್ ಲ್ಯಾಂಪ್ ಯೂನಿಟ್ ಗಳನ್ನು  ಹೋಲುತ್ತದೆ. ಎರ್ಟಿಗಾ ದಲ್ಲಿ LED  ರೇರ್ ಕಾಂಬಿನೇಶನ್ ಲ್ಯಾಂಪ್ ಗಳು ಮತ್ತು ಗೈಡ್ ಲೈಟ್ ಗಳು ದೊರೆಯುತ್ತದೆ ಅವು ಹಿಂಬದಿಯನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ.

2018 Maruti Suzuki Ertiga

ಈಗಾಗಲೇ ಒಂದು ಫ್ಯಾಮಿಲಿ ಕಾರ್ ಆಗಿ ಗುರುತಿಸಿಕೊಂಡಿರುವ ಮಾರುತಿ ಎರ್ಟಿಗಾ ದಲ್ಲಿ ಬಹಳಷ್ಟು ಉತ್ತಮ ಫೀಚರ್ ಗಳನ್ನು ಕೊಡಲಾಗಿದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಹೊಸ ಮಾಡೆಲ್ ಇರುವುದನ್ನು ಇನ್ನು ಚೆನ್ನಾಗಿರುವಂತೆ ಮಾಡಬೇಕಿದೆ ಭಾರತದಲ್ಲಿನ  ಬಜೆಟ್  MPV  ವೇದಿಕೆಗೆ ಅನುಗುಣವಾಗಿ, ಸದ್ಯದಲ್ಲಿ ಈ ವಿಭಾಗದಲ್ಲಿ ಹೆಚ್ಚು ಆಯ್ಕೆ ಗಳು ಇಲ್ಲ.

Recommended: New Ertiga 2018 Official Images, Features & Specs Revealed 

Read More on : Ertiga diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎರ್ಟಿಗಾ 2015-2022

1 ಕಾಮೆಂಟ್
1
R
ravi chavan
Sep 29, 2021, 9:34:21 PM

डिझेल मॉडेल कब अने वाले हे

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಮಾರುತಿ ಎರ್ಟಿಗಾ 2015-2022

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience