WWDC 2024 ರಲ್ಲಿ ಮುಂದಿನ ಜನರೇಶನ್‌ನ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ
ಜೂನ್ 13, 2024 10:48 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಈ ಹೊಸ ಅಪ್‌ಡೇಟ್ ಆಪಲ್‌ನ ಕಾರ್‌ಪ್ಲೇ ಅನ್ನು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಸಂಪೂರ್ಣವಾಗಿ ಇಂಟಿಗ್ರೇಟ್ ಮಾಡುತ್ತದೆ, ಇದು ವಿವಿಧ ಕಸ್ಟಮೈಸೇಶನ್ ಗಳನ್ನು ನೀಡುತ್ತದೆ ಮತ್ತು ನಿಮ್ಮ ಐಫೋನ್‌ನಲ್ಲಿರುವ ಪ್ರಮುಖ ಮಾಹಿತಿಯನ್ನು ಸ್ಕ್ರೀನ್ ನಲ್ಲಿ ತೋರಿಸುತ್ತದೆ
ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) ನಲ್ಲಿ US ಟೆಕ್ ದೈತ್ಯ ಆಪಲ್‌ನ ಪ್ರೆಸೆಂಟೇಷನ್ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ ಮತ್ತು 2024 ಸಮ್ಮೇಳನವು ಕೂಡ ಇದಕ್ಕೆ ಸಾಕ್ಷಿಯಾಗಿದೆ. iOS 18 ಮತ್ತು ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಪ್ರಮುಖ ಮುಖ್ಯಾಂಶಗಳಾಗಿದ್ದು ಅದರ ಜೊತೆಗೆ, ಆಪಲ್ ನೆಕ್ಸ್ಟ್ ಜನರೇಷನ್ ಕಾರ್‌ಪ್ಲೇಗೆ ಗಮನಾರ್ಹವಾದ ಅಪ್ಡೇಟ್ ಗಳನ್ನು ಘೋಷಿಸಿತು, ಇದು ಈ ವರ್ಷದ ಎರಡನೇ ಭಾಗದಲ್ಲಿ ಬರಲಿರುವ iOS 18 ನೊಂದಿಗೆ ಬಿಡುಗಡೆಯಾಗಲಿದೆ.
ಡ್ರೈವರ್ ಡಿಸ್ಪ್ಲೇಗೆ ಕಾರ್ಪ್ಲೇನ ಇಂಟೆಗ್ರೇಷನ್ ಬಗ್ಗೆ ಮಾಹಿತಿ
WWDC 2022 ರಲ್ಲಿ, ಕಾರ್‌ಪ್ಲೇಯನ್ನು ಶೀಘ್ರದಲ್ಲೇ ಕಾರಿನ ಅಂತರ್ನಿರ್ಮಿತ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ವೈರ್‌ಲೆಸ್ ಆಗಿ ಕನೆಕ್ಟ್ ಮಾಡಲಾಗುತ್ತದೆ ಎಂದು ಆಪಲ್ ಘೋಷಿಸಿತು. ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಯೂನಿಟ್, ಡ್ರೈವರ್ ಡಿಸ್‌ಪ್ಲೇ ಮತ್ತು ಪ್ಯಾಸೆಂಜರ್ ಸೈಡ್ ಸ್ಕ್ರೀನ್ (ಲಭ್ಯವಿದ್ದಲ್ಲಿ) ಸೇರಿದಂತೆ ನಿಮ್ಮ ಕಾರಿನ ಡಿಜಿಟಲ್ ಸ್ಕ್ರೀನ್‌ಗಳನ್ನು ಕಸ್ಟಮೈಸ್ ಮಾಡುವುದು ಪ್ರಮುಖ ಅಂಶವಾಗಿದೆ. ಇದು ಕಾರ್ಪ್ಲೇ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಐಫೋನ್ ನ ಇಂಟೆಗ್ರೇಷನ್ ಅನ್ನು ಇನ್ನಷ್ಟು ಸುಗಮವಾಗಿಸುತ್ತದೆ.
ಆಪಲ್ ಇಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಪ್ಲೇ ಅನ್ನು ಇಂಟೆಗ್ರೇಟ್ ಮಾಡುವಾಗ ಡ್ರೈವರ್‌ನ ಡಿಸ್‌ಪ್ಲೇ ಗೇಜ್‌ಗಳ ಇನ್ನಷ್ಟು ಕಸ್ಟಮೈಸೇಶನ್ ಅನ್ನು ನೀಡುತ್ತಿದೆ. ನೀವು ಫಾಂಟ್ ಶೈಲಿ ಮತ್ತು ಅಗಲ, ಕಲರ್ ಗಳನ್ನು (ಇದು ಫಂಕ್ಷನಲ್ ಕೂಡ ಆಗಿರುತ್ತದೆ) ಬದಲಾಯಿಸಬಹುದು ಅಥವಾ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಗೇಜ್ ಹೇಗೆ ಕಾಣುತ್ತದೆ ಎಂಬುದನ್ನು ಕೂಡ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಬಹುದು.
ಕಾರ್ಪ್ಲೇ ಡಿಸ್ಪ್ಲೇ ಇಂಧನ ಅಥವಾ ಚಾರ್ಜ್ ಲೆವೆಲ್ ಗಳು, ವೇಗ, ಎಂಜಿನ್ ತಾಪಮಾನ ಮತ್ತು ವೇಗ ಮಿತಿಗಳಂತಹ ಮಾಹಿತಿಯನ್ನು ಕೂಡ ತೋರಿಸುತ್ತದೆ (ಮ್ಯಾಪ್ ಗಳು ಅಥವಾ ರೋಡ್ ಸೈನ್ ಗಳ ಆಧಾರದ ಮೇಲೆ). ನಿರ್ದಿಷ್ಟ ಪವರ್‌ಟ್ರೇನ್ (ICE, ಹೈಬ್ರಿಡ್, ಅಥವಾ EV) ಅಥವಾ ನಿರ್ದಿಷ್ಟ ವೇರಿಯಂಟ್ ಗೆ ಸರಿಹೊಂದುವಂತೆ ಕಾರು ತಯಾರಕರು ಗೇಜ್ ಅನ್ನು ಕಸ್ಟಮೈಸ್ ಮಾಡಬಹುದು.
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಇಂಟೆಗ್ರೇಟ್ ಆಗಿರುವ ಆಪಲ್‌ನ ಹೊಸ ಕಾರ್ಪ್ಲೇ, ಕ್ಲೈಮೇಟ್ ಕಂಟ್ರೋಲ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳು (ADAS) ಸೇರಿದಂತೆ ವಿವಿಧ ವಾಹನ ಸಿಸ್ಟಮ್ ಗಳನ್ನು ನಿಯಂತ್ರಿಸಬಹುದು. ಡ್ರೈವರ್ ಡಿಸ್‌ಪ್ಲೇಯಲ್ಲಿ ಕಾರ್‌ಪ್ಲೇಯ ಇಂಟಿಗ್ರೇಶನ್ ನೊಂದಿಗೆ ನಿಮ್ಮ ಡಿಜಿಟಲ್ ಕ್ಲಸ್ಟರ್‌ನಲ್ಲಿ ಐಫೋನ್ ನ ನೋಟಿಫಿಕೇಶನ್ ಗಳನ್ನು ತೋರಿಸಲಾಗುತ್ತದೆ, ಆ ಮೂಲಕ ನೀವು ಡ್ರೈವಿಂಗ್ ಮಾಡುವಾಗ ನಿಮ್ಮ ಗಮನ ಫೋನ್ ಕಡೆಗೆ ಹರಿಯನದಂತೆ ನೋಡಿಕೊಳ್ಳುತ್ತದೆ. ಕಾರ್‌ಪ್ಲೇಯೊಂದಿಗೆ ತಮ್ಮ ಸಿಸ್ಟಮ್ ಗಳು ಸುಗಮವಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಆಪಲ್‌ನೊಂದಿಗೆ ಕಾರು ತಯಾರಕರ ಅನುಮೋದನೆ ಮತ್ತು ಸಹಕಾರ ಕೂಡ ಮುಖ್ಯವಾಗಿದೆ.
ಇದನ್ನು ಕೂಡ ಓದಿ: ನಿಮ್ಮ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸುವುದು ಹೇಗೆ: ಪ್ರಕ್ರಿಯೆ, ಕಾನೂನು, ಪ್ರಯೋಜನಗಳು ಮತ್ತು ವೆಚ್ಚಗಳು
ಯಾವ ಕಾರ್ ಬ್ರಾಂಡ್‌ಗಳು ಇದನ್ನು ಪರಿಚಯಿಸಲಿವೆ?
2022 ರಲ್ಲಿ ದೃಢಪಡಿಸಿದಂತೆ, ಪೋರ್ಷೆ ಮತ್ತು ಆಸ್ಟನ್ ಮಾರ್ಟಿನ್ ಈ ಹೊಸ-ಜನರೇಷನ್ ಕಾರ್‌ಪ್ಲೇ ಅನ್ನು ತಮ್ಮ ಮುಂಬರುವ ಮಾಡೆಲ್ ಗಳಲ್ಲಿ ಇಂಟಿಗ್ರೇಟ್ ಮಾಡಲಿರುವ ಮೊದಲ ಕಾರು ತಯಾರಕರಾಗಲಿದ್ದಾರೆ. ಆದರೆ, ಹೊಸ ಕಾರ್ಪ್ಲೇ ಜೊತೆಗೆ ಇಂಟಿಗ್ರೇಟ್ ಆಗಲಿರುವ ಈ ಎರಡು ಕಾರು ತಯಾರಕರ ನಿರ್ದಿಷ್ಟ ಮಾಡೆಲ್ ಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಪ್ರಸ್ತುತ, ಆಪಲ್ ಕಾರ್ಪ್ಲೇ ವಿಶ್ವಾದ್ಯಂತ 800 ಕ್ಕೂ ಹೆಚ್ಚು ಕಾರು ಮಾಡೆಲ್ ಗಳಿಗೆ ಸಪೋರ್ಟ್ ಮಾಡುತ್ತದೆ. ಭಾರತದಲ್ಲಿ, ಇದು ಎಂಟ್ರಿ ಲೆವೆಲ್ ಮಾರುತಿ ಆಲ್ಟೊ K10 (ಸ್ಮಾರ್ಟ್‌ಪ್ಲೇ ಸ್ಟುಡಿಯೊಗಾಗಿ 7-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ) ನಿಂದ ಹಿಡಿದು ಕಿಯಾ EV9 ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್‌ನಂತಹ ಪ್ರೀಮಿಯಂ ಕಾರುಗಳಲ್ಲಿ ಇಂಟಿಗ್ರೇಟ್ ಆಗಿದೆ.
ಈ ಫೀಚರ್ ಗಳ ನಿಖರವಾದ ಬಿಡುಗಡೆ ದಿನಾಂಕವನ್ನು ಆಪಲ್ ಇನ್ನೂ ಘೋಷಿಸಿಲ್ಲ. ಆದರೆ ಆರಂಭದಲ್ಲಿ, ಇದರ ಕೆಲವು ಫೀಚರ್ ಗಳು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರಬಹುದು. ಹಿಂದಿನ ಅಪ್‌ಡೇಟ್ ಗಳನ್ನು ನೋಡಿದರೆ, ಸಾಮಾನ್ಯವಾಗಿ ಸೆಪ್ಟೆಂಬರ್ 2024 ರ ಸುಮಾರಿಗೆ ಆಪಲ್ ನ ಹೊಸ-ಜನರೇಷನ್ ಐಫೋನ್ ಮತ್ತು ಜಾಗತಿಕವಾಗಿ ಬಿಡುಗಡೆಯಾಗಲಿರುವ iOS 18 ಅಪ್‌ಡೇಟ್ ನ ಒಟ್ಟಿಗೆ ಇದು ಬರಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಇತರ ಸುದ್ದಿಗಳಲ್ಲಿ..
ಕಳೆದ ಒಂದು ದಶಕಗಳಿಂದ ಆಪಲ್ ಸೆಲ್ಫ್ ಡ್ರೈವಿಂಗ್ ಎಲೆಕ್ಟ್ರಿಕ್ ಕಾರ್‌ನ ಮೇಲೆ ಕೆಲಸ ಮಾಡುತ್ತಿದೆ ಎಂಬ ಊಹಾಪೋಹಗಳ ಹೊರತಾಗಿಯೂ, ಇತ್ತೀಚೆಗೆ ಪ್ರಕಟವಾಗಿರುವ ಆನ್‌ಲೈನ್ ಲೇಖನಗಳ ಪ್ರಕಾರ ಕಂಪನಿಯು ಆ ಯೋಜನೆಗಳನ್ನು ಬದಿಗಿಡಲು ನಿರ್ಧರಿಸಿದೆ ಎಂದು ಸೂಚಿಸುತ್ತದೆ. ಬದಲಿಗೆ, ಆಪಲ್ ಈಗ ಐಫೋನ್ ಸೇರಿದಂತೆ ತನ್ನ ಸಾಧನಗಳಿಗೆ ಜನರೇಟಿವ್ AI ಅನ್ನು ಅಭಿವೃದ್ಧಿಪಡಿಸುವಲ್ಲಿ ಗಮನಹರಿಸುತ್ತಿದೆ ಎಂದು ಸುದ್ದಿಯಿದೆ.