ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ
ನಿಸ್ಸಾನ್ ಮ್ಯಾಗ್ನೈಟ್ 2020-2024 ಗಾಗಿ rohit ಮೂಲಕ ಸೆಪ್ಟೆಂಬರ್ 14, 2023 04:02 pm ರಂದು ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ವೇರಿಯಂಟ್ ಗಳು ಮ್ಯಾನುವಲ್ ಗಿಂತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ
- ನಿಸ್ಸಾನ್ ಸಂಸ್ಥೆಯು ಮ್ಯಾಗ್ನೈಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಿತ್ತು
- ಈ SUV ಯು, ರೆನಾಲ್ಟ್ ಕೀಗರ್ ನಲ್ಲಿ ಇರುವಂತೆ ತನ್ನ 1-ಲೀಟರ್ N.A. ಪೆಟ್ರೋಲ್ ಎಂಜಿನಿನಲ್ಲಿ AMT ಆಯ್ಕೆಯನ್ನು ಹೊಂದಲಿದೆ.
- ಅಟೋಮ್ಯಾಟಿಕ್ ಆಯ್ಕೆಯು ಸದ್ಯಕ್ಕೆ CVT ಆಯ್ಕೆಯೊಂದಿಗೆ 1 ಲೀಟರಿನ ಟರ್ಬೊ ಪೆಟ್ರೋಲ್ ಘಟಕಕ್ಕೆ ಸೀಮಿತವಾಗಿದೆ.
- 8 ಇಂಚಿನ ಟಚ್ ಸ್ಕ್ರೀನ್, 360 ಡಿಗ್ರಿ ಕ್ಯಾಮರಾ ಮತ್ತು ಅಟೋ AC ಇತ್ಯಾದಿ ವಿಶೇಷತೆಗಳನ್ನು ಇದು ಹೊಂದಿರಲಿದೆ.
- ಸದ್ಯಕ್ಕೆ ರೂ. 6 ರಿಂದ ರೂ. 11.02 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
ಸುಮಾರು ಮೂರು ವರ್ಷಗಳ ಮಾರಾಟದ ನಂತರ, ನಿಸ್ಸಾನ್ ಮ್ಯಾಗ್ನೈಟ್ ಮಾದರಿಯು ಹೊಸ ಟ್ರಾನ್ಸ್ ಮಿಶನ್ ಆಯ್ಕೆಯೊಂದಿಗೆ ಸಣ್ಣ ಮಟ್ಟದ ಬದಲಾವಣೆಗೆ ಸಿದ್ಧವಾಗಿದೆ. ಜಪಾನಿನ ಈ ಕಾರು ತಯಾರಕ ಸಂಸ್ಥೆಯು, ಯಾಂತ್ರಿಕ ರಚನೆಯಲ್ಲಿ ಸರಿಸುಮಾರು ಒಂದೇ ಎನಿಸಿರುವ ರೆನಾಲ್ಟ್ ಕೀಗರ್ ವಾಹನದಂತೆಯೇ, ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಸಬ್-4m SUV ಯು 5-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ ಎಂದು ಹೇಳಿದೆ.
ಇದನ್ನು ಯಾವ ಎಂಜಿನ್ ಜೊತೆಗೆ ನೀಡಲಾಗುತ್ತದೆ?
ನಿಸ್ಸಾನ್ ಸಂಸ್ಥೆಯು 5-ಸ್ಪೀಡ್ AMT ಗೇರ್ ಬಾಕ್ಸ್ ಅನ್ನು ಮ್ಯಾಗ್ನೈಟ್ ನ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (N.A.) ಪೆಟ್ರೋಲ್ ಎಂಜಿನ್ (72PS/96Nm) ಜೊತೆಗೆ ನೀಡಲಿದೆ. ಈ ಸಬ್ ಕಾಂಪ್ಯಾಕ್ಟ್ SUV ಯ 1 ಲೀಟರ್ ಟರ್ಬೊ ಪೆಟ್ರೋಲ್ ಯೂನಿಟ್ (100PS/ 160Nm ತನಕ) ಆಯ್ಕೆಯನ್ನು ಪಡೆಯಲಿದೆ. ಈ 5-ಸ್ಪೀಡ್ MT ಯು ಪ್ರಮಾಣಿತವಾಗಿ ಹೊರಬರಲಿದ್ದರೆ, ಟರ್ಬೊ ಎಂಜಿನ್ CVT ಆಯ್ಕೆಯನ್ನು ಪಡೆಯಲಿದೆ. ಈ ಎಲ್ಲಾ ಪವರ್ ಟ್ರೇನ್ ಗಳು (5-ಸ್ಪೀಡ್ AMT ಕೋಂಬೊ ಜೊತೆಗೆ 1 N.A. ಎಂಜಿನ್ ಸೇರಿದಂತೆ) ಈಗಾಗಲೇ ಬಿಡುಗಡೆಯಾದ ಸಮಯದಿಂದಲೇ ಮ್ಯಾಗ್ನೈಟ್ ಕಾರಿನ ದಾಯಾದಿ ಎನಿಸಿರುವ ರೆನಾಲ್ಟ್ ಕೀಗರ್ ವಾಹನದಲ್ಲಿ ದೊರೆಯುತ್ತಿವೆ.
ಇದನ್ನು ಸಹ ಓದಿರಿ: ಎರಡನೇ ಅತೀ ಹೆಚ್ಚು ಮಾರಾಟವಾಗುವ ಸಬ್-4m SUV ಆಗಿ 2023ರ ಆಗಸ್ಟ್ ನಲ್ಲಿ ಟಾಟಾ ನೆಕ್ಸನ್ ಅನ್ನು ಹಿಂದಿಕ್ಕಲಿರುವ ಹ್ಯುಂಡೈ ವೆನ್ಯು
ಬೇರೆ ಯಾವುದೇ ಬದಲಾವಣೆಗಳಿಲ್ಲ
ನಿಸ್ಸಾನ್ ಸಂಸ್ಥೆಯು ತನ್ನ ಮ್ಯಾಗ್ನೈಟ್ ಕಾರಿನ ಗುಣವೈಶಿಷ್ಯಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳು ಕಡಿಮೆ. ಈ ಸಬ್-4m SUV ಯು ಈಗಾಗಲೇ 8 ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ, 7 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ರಿಯರ್ ವೆಂಟ್ ಗಳ ಜೊತೆಗೆ ಅಟೋ AC ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಹೊಂದಿದೆ.
ಡ್ಯುವಲ್ ಫ್ರಂಟ್ ಏರ್ ಬ್ಯಾಗುಗಳು, ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು, 360-ಡಿಗ್ರಿ ಕ್ಯಾಮರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಇತ್ಯಾದಿಗಳ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಸಾಕಷ್ಟು ಒತ್ತು ನೀಡಲಾಗಿದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ನಿಸ್ಸಾನ್ ಮ್ಯಾಗ್ನೈಟ್ ಕಾರಿನ AMT ವೇರಿಯಂಟ್ ಗಳು ಮ್ಯಾನುವಲ್ ಗಿಂತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ. ಸದ್ಯಕ್ಕೆ ಈ ನಿಸ್ಸಾನ್ SUV ಯು ರೂ. 6 ರಿಂದ ರೂ. 11.02 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಇದು ರೆನಾಲ್ಟ್ ಕೀಗರ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಕಿಯಾ ಸೋನೆಟ್, ಮಹೀಂದ್ರಾ XUV300, ಮತ್ತು ಟಾಟಾ ನೆಕ್ಸನ್ ಜೊತೆಗೆ ಸ್ಪರ್ಧಿಸಲಿದ್ದು, ಸಿಟ್ರನ್ C3, ಮಾರುತಿ ಫ್ರಾಂಕ್ಸ್ ಮತ್ತು ಹ್ಯುಂಡೈ ಎಕ್ಸ್ಟರ್ ಗೆ ಬದಲಿ ಆಯ್ಕೆ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮ್ಯಾಗ್ನೈಟ್ ಆನ್ ರೋಡ್ ಬೆಲೆ