• English
  • Login / Register

ದೇಶದ ಸ್ಫೂರ್ತಿಯ ಸೆಲೆ ರತನ್‌ ಟಾಟಾ ಭಾರತೀಯ ಆಟೋಮೊಬೈಲ್‌ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕುರಿತು..

ಅಕ್ಟೋಬರ್ 10, 2024 08:30 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 69 Views
  • ಕಾಮೆಂಟ್‌ ಅನ್ನು ಬರೆಯಿರಿ

ರತನ್ ಟಾಟಾ ಅವರ ದಾರ್ಶನಿಕ ದೂರದೃಷ್ಟಿಯು ಭಾರತೀಯ ಆಟೋಮೊಬೈಲ್ ಉದ್ಯಮವನ್ನು ಮುನ್ನಡೆಸಿದ್ದು ಮಾತ್ರವಲ್ಲದೆ, ಮರ್ಸಿಡಿಸ್ ಬೆಂಜ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಸಹಾಯ ಮಾಡಿತು

Ratan Tata With Tata Indica

ಕೈಗಾರಿಕೋದ್ಯಮಿ, ಐಕಾನ್ ಮತ್ತು ಪದ್ಮವಿಭೂಷಣ ಪುರಸ್ಕೃತರಾದ ಸರ್ ರತನ್ ನೇವಲ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾದರು. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಕೊನೆಯುಸಿರೆಳೆದರು.

ಶ್ರೀಯುತ ಟಾಟಾ ಅವರು 1991 ರಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು ಮತ್ತು ಕಂಪನಿಯನ್ನು ದೊಡ್ಡ ಮತ್ತು ಹೆಚ್ಚು ವೈವಿಧ್ಯಮಯ ಸಂಸ್ಥೆಯಾಗಿ ಪರಿವರ್ತಿಸಿದರು, ಆರೋಗ್ಯ, ಶಿಕ್ಷಣ ಮತ್ತು ಮುಖ್ಯವಾಗಿ ಆಟೋಮೊಬೈಲ್‌ಗಳಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದರು. ರತನ್ ಟಾಟಾ ಅವರು ಟಾಟಾ ಮೋಟಾರ್ಸ್‌ಗೆ ಅಡಿಪಾಯ ಹಾಕಿದರು ಮತ್ತು ಭಾರತೀಯ ಆಟೋಮೊಬೈಲ್ ಉದ್ಯಮಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು.

ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಸಮೂಹದ ದುಃಖವನ್ನು ವ್ಯಕ್ತಪಡಿಸುತ್ತಾ, "ನಷ್ಟದ ಆಳವಾದ ಭಾವನೆಯೊಂದಿಗೆ ನಾವು ಶ್ರೀ ರತನ್ ನೇವಲ್ ಟಾಟಾ ಅವರಿಗೆ ವಿದಾಯ ಹೇಳುತ್ತೇವೆ, ಅವರ ಅಪಾರ ಕೊಡುಗೆಗಳು ಟಾಟಾ ಸಮೂಹವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ರಚನೆಯನ್ನು ರೂಪಿಸಿವೆ. ಟಾಟಾ ಗ್ರೂಪ್‌ಗೆ, ಶ್ರೀ ಟಾಟಾ ಆವರು ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಮಾರ್ಗದರ್ಶಕ, ಗುರು ಮತ್ತು ಸ್ನೇಹಿತರಾಗಿದ್ದರು. ಅವರು ಇತರರಿಗೆ ಸ್ಫೂರ್ತಿಯಾಗುವಂತೆ ಮಾದರಿಯಾಗಿ ಬದುಕಿದ್ದಾರೆ. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅಚಲವಾದ ಬದ್ಧತೆಯೊಂದಿಗೆ, ಟಾಟಾ ಗ್ರೂಪ್ ಅವರ ಉಸ್ತುವಾರಿಯಲ್ಲಿ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿತು ಮತ್ತು ಯಾವಾಗಲೂ ತನ್ನ ನೈತಿಕ ದಿಕ್ಸೂಚಿಗೆ ಬದ್ಧವಾಗಿದೆ. ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಶ್ರೀ ಟಾಟಾ ಅವರ ಸಮರ್ಪಣೆ ಲಕ್ಷಾಂತರ ಜನರ ಜೀವನವನ್ನು ಹಸನಾಗಿಸಿದೆ. ಶಿಕ್ಷಣದಿಂದ ಆರೋಗ್ಯದವರೆಗೆ, ಅವರ ಉದ್ದೇಶಗಳು ಆಳವಾದ ಬೇರೂರಿರುವ ಛಾಪನ್ನು ಬಿಟ್ಟಿವೆ, ಅದು ಮುಂದಿನ ಪೀಳಿಗೆಗೆ ಪ್ರಯೋಜನವನ್ನು ನೀಡುತ್ತದೆ. ಈ ಎಲ್ಲಾ ಕಾರ್ಯಗಳನ್ನು ಬಲಪಡಿಸುವುದು ಶ್ರೀ ಟಾಟಾ ಅವರ ಪ್ರತಿ ವೈಯಕ್ತಿಕ ಸಂವಹನದಲ್ಲಿ ನಿಜವಾದ ನಮ್ರತೆ. ಇಡೀ ಟಾಟಾ ಕುಟುಂಬದ ಪರವಾಗಿ, ನಾನು ಅವರ ಪ್ರೀತಿಪಾತ್ರರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ಸಾಹದಿಂದ ಪ್ರತಿಪಾದಿಸಿದ ತತ್ವಗಳನ್ನು ಎತ್ತಿಹಿಡಿಯಲು ನಾವು ಶ್ರಮಿಸುತ್ತಿರುವಾಗ ಅವರ ಪರಂಪರೆಯು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ."

ಶ್ರೇಷ್ಠ ಕೈಗಾರಿಕೋದ್ಯಮಿಯಾಗಿ, ಲೋಕೋಪಕಾರಿಯಾಗಿ ಮತ್ತು ವ್ಯಾಪಾರ ಪ್ರಪಂಚದ ಐಕಾನ್‌ಗಳಲ್ಲಿ ಒಬ್ಬರಾದ ರತನ್ ಟಾಟಾ ಗೌರವ ಸಲ್ಲಿಸಲು, ಟಾಟಾ ಅವರು ಹೇಗೆ ವಾಹನ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾದರು ಮತ್ತು ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ನೋಡೋಣ.

ಅವರ ಹಾದಿ ಎಂದಿಗೂ ಸುಲಭವಾಗಿರಲಿಲ್ಲ

ರತನ್ ಟಾಟಾ ಅವರು ದೂರದೃಷ್ಟಿ ಹೊಂದಿದ್ದರು, ಅವರ ಮಹತ್ವಾಕಾಂಕ್ಷೆಗಳು ಕೇವಲ ಆಟೋಮೊಬೈಲ್ ವ್ಯವಹಾರವನ್ನು ನಿರ್ಮಿಸುವುದಕ್ಕಿಂತಲೂ ಹೆಚ್ಚಾಗಿ ವಿಸ್ತರಿಸಿದೆ. ಅವರು ಅನೇಕ ಕ್ಷೇತ್ರಗಳು ಮತ್ತು ಉದ್ದೇಶಗಳಿಗಾಗಿ ಸೇವೆ ಸಲ್ಲಿಸುವ ಉದ್ಯಮವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದರು. ಹಾಗೆಯೇ, ಶ್ರೇಷ್ಠ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗುವ ಅವರ ಪ್ರಯಾಣವು ಹೂವಿನ ಹಾಸಿಗೆಯಾಗಿರಲಿಲ್ಲ. ಅವರು ಗೌರವಾನ್ವಿತ ಟಾಟಾ ಕುಟುಂಬದಿಂದ ಬಂದವರಾಗಿದ್ದರೂ, ಅದು ಆಗಲೇ ದೈತ್ಯ ಸಂಘಟಿತವಾಗಿ ವಿಕಸನಗೊಂಡಿತ್ತು, ರತನ್ ಟಾಟಾ ಅವರು ತಮ್ಮ ವೃತ್ತಿಜೀವನವನ್ನು TELCO (ಟಾಟಾ ಇಂಜಿನಿಯರಿಂಗ್ ಮತ್ತು ಲೋಕೋಮೋಟಿವ್ ಕಂಪನಿ ಲಿಮಿಟೆಡ್) ನಲ್ಲಿ ಪ್ರಾರಂಭಿಸಿದರು, ಇದನ್ನು ಈಗ ಟಾಟಾ ಮೋಟಾರ್ಸ್ ಎಂದು ಕರೆಯಲಾಗುತ್ತದೆ.

TELCO ನಲ್ಲಿ ಆರು ತಿಂಗಳು ಕಳೆದ ನಂತರ, ರತನ್ ಟಾಟಾ 1963 ರಲ್ಲಿ TISCO (ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ) ಗೆ ಸೇರಿದರು, ಇದನ್ನು ಈಗ ಟಾಟಾ ಸ್ಟೀಲ್ ಎಂದು ಕರೆಯಲಾಗುತ್ತದೆ. ರೋಲ್ಸ್ ರಾಯ್ಸ್ ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದ ರತನ್‌ ಟಾಟಾ ಜೆಮ್‌ಶೆಡ್‌ಪುರದ ಟಿಸ್ಕೊದಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದು ವ್ಯಕ್ತಿಯಾಗಿ ರತನ್ ಟಾಟಾ ಅವರ ನಮ್ರತೆ ಮತ್ತು ಔದಾರ್ಯವನ್ನು ಪ್ರತಿಬಿಂಬಿಸುತ್ತದೆ.

1991ರಲ್ಲಿ, ರತನ್ ನೇವಲ್ ಟಾಟಾ ಅವರು ಟಾಟಾ ಸಮೂಹವನ್ನು ಗುಂಪಿನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು. ಆದರೆ, 1993 ರಲ್ಲಿ ಅವರ ಚಿಕ್ಕಪ್ಪ ಜೆಆರ್‌ಡಿ ಟಾಟಾ ಅವರ ನಿಧನದ ನಂತರ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ, ರತನ್ ಟಾಟಾ ಅವರು ಅದನ್ನು ಸವಾಲಾಗಿ ತೆಗೆದುಕೊಂಡರು ಮತ್ತು ಅವರು ಟಾಟಾ ಮೋಟಾರ್ಸ್ ಅನ್ನು ನಾವು ಏನು ಇವತ್ತು ನೋಡುತ್ತಿದ್ದೇವೋ ಹಾಗೆ ಮಾಡಿದರು, ವಾಣಿಜ್ಯ ವಾಹನ ವ್ಯಾಪಾರದಿಂದ ಪ್ರಾರಂಭಿಸಿ ಭಾರತದಲ್ಲಿ ಪ್ರಸ್ತುತ ಇವಿ ಕಾರು ಮಾರುಕಟ್ಟೆಯವರೆಗೆ ಮುಂಚೂಣಿಯಲ್ಲಿದೆ.

ಬೇರ್‌ಬೋನ್ ಟ್ರಕ್‌ಗಳಿಂದ ಇವಿಗಳವರೆಗೆ

Remembering Ratan Tata And His Impact On India’s Automotive Landscape

ಟಾಟಾ ಮೋಟಾರ್ಸ್ ಅನ್ನು 1945 ರಲ್ಲಿ TELCO ಎಂದು ಸ್ಥಾಪಿಸಲಾಯಿತು, ಮೂಲತಃ ಲೊಕೊಮೊಟಿವ್ ತಯಾರಿಕೆಯಲ್ಲಿ ಕೇಂದ್ರೀಕೃತವಾಗಿತ್ತು. ನಂತರ, ಟಾಟಾ ಡೈಮ್ಲರ್-ಬೆನ್ಜ್ ಜೊತೆ ಒಪ್ಪಂದ ಮಾಡಿಕೊಂಡಿತು, ಇದು ಟಾಟಾ-ಮರ್ಸಿಡಿಸ್-ಬೆನ್ಜ್ ಪಾಲುದಾರಿಕೆಯ ಅಡಿಯಲ್ಲಿ ಮೊದಲ ಟ್ರಕ್ ಅನ್ನು ಹೊರತರಲು ಕಾರಣವಾಯಿತು. ಈ ಸಹಯೋಗವು ಟಾಟಾಗೆ ವಾಹನಗಳ ಉತ್ಪಾದನೆಯನ್ನು ಪ್ರಾರಂಭಿಸಲು ಸಾಧ್ಯವಾಗಿಸಿದ್ದು ಮಾತ್ರವಲ್ಲದೆ, ಮರ್ಸಿಡಿಸ್-ಬೆಂಜ್‌ಗೆ ಭಾರತದಲ್ಲಿ ಅಸ್ತಿತ್ವವನ್ನು ಸ್ಥಾಪಿಸಲು ಸಹಾಯ ಮಾಡಿತು. ಇದರ ಪರಿಣಾಮವಾಗಿ, Mercedes-Benz ತನ್ನದೇ ಆದ W124 E-ಕ್ಲಾಸ್ ಸೆಡಾನ್ ಅನ್ನು ಭಾರತದಲ್ಲಿ 1995 ರಲ್ಲಿ ತನ್ನದೇ ಆದ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆ ಮಾಡಿತು. ವಿಶೇಷ ಎಂಬಂತೆ, ಮೊದಲ ಮರ್ಸಿಡಿಸ್ ಅನ್ನು ಪುಣೆಯಲ್ಲಿರುವ ಟಾಟಾ ಮೋಟಾರ್ಸ್‌ನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಯಿತು.

Mercedes-Benz ಗಿಂತ ಮೊದಲು, ಟಾಟಾ ತನ್ನ ಮೊದಲ ಪ್ರಯಾಣಿಕ ವಾಹನವಾದ ಟಾಟಾ ಸಿಯೆರಾವನ್ನು 1991 ರಲ್ಲಿ ಪರಿಚಯಿಸಿತು. ಸಿಯೆರಾ ಅದರ ವಿನ್ಯಾಸ ಮತ್ತು ಅದು ನೀಡಿದ ಫೀಚರ್‌ಗಳೆರಡರಲ್ಲೂ ಕ್ರಾಂತಿಕಾರಿಯಾಗಿದೆ. 90ರ ದಶಕದಲ್ಲಿ, ಇದು ಪವರ್ ವಿಂಡೋಗಳು ಮತ್ತು ಪವರ್ ಸ್ಟೀರಿಂಗ್‌ನಂತಹ ಫೀಚರ್‌ಗಳನ್ನು ಒಳಗೊಂಡಿರುವ ಮೊದಲ ಭಾರತ-ನಿರ್ಮಿತ ವಾಹನಗಳಲ್ಲಿ ಒಂದಾಗಿದೆ. ನಂತರ 1992 ರಲ್ಲಿ ಟಾಟಾ ಎಸ್ಟೇಟ್ ಬಂದಿತು, ಇದು ದೇಶದಲ್ಲಿ ಸ್ಟೇಷನ್ ವ್ಯಾಗನ್ ಬಾಡಿಸ್ಟೈಲ್ ಅನ್ನು ಪರಿಚಯಿಸಿದ ಮೊದಲ ಭಾರತ-ನಿರ್ಮಿತ ವಾಹನವಾಗಿದೆ.

Remembering Ratan Tata And His Impact On India’s Automotive Landscape

ಸಿಯೆರಾ ಮತ್ತು ಎಸ್ಟೇಟ್ ನಂತರ ಟಾಟಾ ಹಿಂತಿರುಗಿ ನೋಡಲಿಲ್ಲ ಮತ್ತು ಅದರ ಪ್ರಯಾಣಿಕ ವಾಹನ ವ್ಯಾಪಾರವು ಪ್ರವರ್ಧಮಾನಕ್ಕೆ ಬಂದಿತು. 1994ರಲ್ಲಿ, ಸುಮೋವನ್ನು ಬಿಡುಗಡೆ ಮಾಡಲಾಯಿತು, ನಂತರ 1998 ರಲ್ಲಿ ಸಫಾರಿಯನ್ನು ಬಿಡುಗಡೆಗೊಳಿಸಲಾಯಿತು. ಯಾವುದೇ ಎಸ್‌ಯುವಿಯು ಅಸ್ತಿತ್ವದಲ್ಲಿಲ್ಲದ ಸಮಯದಲ್ಲಿ ಸಫಾರಿಯನ್ನು ಪರಿಚಯಿಸಲಾಯಿತು; ಸರಳವಾಗಿ ಹೇಳುವುದಾದರೆ, ಇದು ಭಾರತದಲ್ಲಿ ಸೊಗಸಾದ ಎಸ್‌ಯುವಿ ಸೆಗ್ಮೆಂಟ್‌ ಅನ್ನು ಪ್ರಾರಂಭಿಸಿತು ಮತ್ತು ಗ್ರಾಹಕರಲ್ಲಿ ಹೊಸ ಮಟ್ಟದ ಅಪೇಕ್ಷಣೀಯತೆಯನ್ನು ಸೃಷ್ಟಿಸಿತು.

ಇಂದು, ಟಾಟಾ ತನ್ನ ಕಾರುಗಳ ಪಟ್ಟಿಯಲ್ಲಿ ಐದು EV ಗಳನ್ನು ಹೊಂದಿದೆ: ಟಾಟಾ ಟಿಯಾಗೊ EV, ಟಾಟಾ ಟಿಗೊರ್ EV, ಟಾಟಾ ಪಂಚ್ EV, ಟಾಟಾ ನೆಕ್ಸಾನ್‌ EV, ಮತ್ತು ಟಾಟಾ ಕರ್ವ್‌ EV.

ಇದನ್ನು ಸಹ ಓದಿ: ಈ ಹಬ್ಬದ ಸಂಭ್ರಮದಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ 2 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience