Renault Kardian ಕಾರಿನ ಅನಾವರಣ: ನೀವು ತಿಳಿದಿರಬೇಕಾದ 5 ಅಂಶಗಳು ಇಲ್ಲಿವೆ

published on ಅಕ್ಟೋಬರ್ 27, 2023 04:17 pm by rohit for ರೆನಾಲ್ಟ್ ಕಾರ್ಡಿಯನ್

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ರೆನೋ ಕಾರ್ಡಿಯನ್‌ ಕಾರು ಹೊಸ ಮಾಡ್ಯುಲರ್‌ ಪ್ಲಾಟ್‌ ಫಾರ್ಮ್‌ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 6 ಸ್ಪೀಡ್‌ DCT ಜೊತೆಗೆ 1 ಲೀಟರ್‌, 3 ಸಿಲಿಂಡರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಗೆ ಚಾಲನೆ ನೀಡಲಿದೆ

Renault Kardian

ರೆನೋ ಕಾರ್ಡಿಯನ್‌ ಕಾರು, ಈ ಫ್ರೆಂಚ್‌ ಕಾರು ತಯಾರಿ ಸಂಸ್ಥೆಯ ಹೊಸ SUV ಆಗಿದ್ದು, ಲ್ಯಾಟಿನ್‌ ಅಮೇರಿಕಾ ಸೇರಿದಂತೆ ಯುರೋಪ್‌ ಹೊರಗಡೆ ಇದನ್ನು ಭವಿಷ್ಯದಲ್ಲಿ ಕಾಣಬಹುದಾಗಿದೆ. ಇದನ್ನು, 2027ರ ತನಕದ ಜಾಗತಿಕ ಯೋಜನೆಯ ಅಂಗವಾಗಿ ರಿಯೋ ಡಿ ಜನೈರೋ ನಗರದಲ್ಲಿ ಇತ್ತೀಚೆಗೆ ರೆನೋ ಸಂಸ್ಥೆಯು ನಡೆಸಿದ ಮಾಧ್ಯಮ ಗೋಷ್ಠೀಯಲ್ಲಿ ಅನಾವರಣಗೊಳಿಸಲಾಗಿದೆ. ರೆನೋ ಸಂಸ್ಥೆಯ SUV ಕುರಿತು ನೀವು ತಿಳಿದಿರಬೇಕಾದ 5 ಅಂಶಗಳು ಇಲ್ಲಿವೆ:

ಹೊಸ ಮಾಡ್ಯುಲರ್‌ ಪ್ಲಾಟ್‌ ಫಾರ್ಮ್‌  

Renault Kardian platform

 ಈ ಕಾರ್ಯಕ್ರಮದಲ್ಲಿ, ರೆನೋ ಸಂಸ್ಥೆಯು ಲ್ಯಾಟಿನ್‌ ಅಮೇರಿಕಾ ಮತ್ತು ಭಾರತ ಸೇರಿದಂತೆ 4 ವಿವಿಧ ಜಾಗತಿಕ ಮಾರುಕಟ್ಟೆಗಳಿಗೆ ಹೊಸ ಮ್ಯಾಡುಲರ್‌ ಪ್ಲಾಟ್‌ ಫಾರ್ಮ್‌ ಅನ್ನು ಘೋಷಿಸಿತು. ರೆನೋ ಕಾರ್ಡಿಯನ್‌ ಕಾರು ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿದ ವಿನ್ಯಾಸವನ್ನು ಆಧರಿಸಿದ ಮೊದಲ ಮಾದರಿ ಎನಿಸಿದೆ. ಈ ವಿನ್ಯಾಸವು 4 ಮತ್ತು 5 ಮೀಟರ್‌ ಉದ್ದದ ಕಾರುಗಳನ್ನು ಆಧರಿಸುತ್ತದೆ. ರೆನೋ ಸಂಸ್ಥೆಯ ಈ ಹೊಸ ಕಾಂಪ್ಯಾಕ್ಟ್ SUV ಕಾರು 4120mm ಉದ್ದ, 2025mm ಅಗಲ (ORVM ಗಳು ಸೇರಿದಂತೆ), 1596mm ಎತ್ತರ (ರೂಫ್‌ ರೇಲ್‌ ಗಳು ಸೇರಿದಂತೆ) ಇದ್ದು 2604mm ಉದ್ದದ ವೀಲ್‌ ಬೇಸ್‌ ಅನ್ನು ಹೊಂದಿದೆ. ಇದು 209mm ನಷ್ಟು ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಹೊಂದಿದೆ.

A post shared by CarDekho India (@cardekhoindia)

ಒಳಗಿನ ಮತ್ತು ಹೊರಗಿನ ವಿನ್ಯಾಸ

Renault Kardian front

ರೆನೋ ಕಾರ್ಡಿಯನ್‌ ವಾಹನವು ಸಂಪೂರ್ಣ LED ಹೆಡ್‌ ಲೈಟ್‌ ಸೆಟಪ್‌ ಹೊಂದಿರುವ ಶಾರ್ಪ್‌ ಫೇಶಿಯಾ, ಹಾಗೂ ರೆನೋ ಬ್ಯಾಡ್ಜ್‌ ಅನ್ನು ಹೋಲುವ ಅನೇಕ ವಜ್ರಾಕೃತಿಗಳನ್ನು ಹೊಂದಿದ ಗ್ರಿಲ್‌ ನಲ್ಲಿ ಗ್ಲೋಸ್‌ ಬ್ಲ್ಯಾಕ್‌ ಪ್ಯಾನೆಲ್‌ ಇನ್ಸರ್ಟ್‌ ಅನ್ನು ಹೊಂದಿದೆ.  ಈ LED DRL ಗಳು ಹ್ಯಾಮರ್‌ ಶೈಲಿನ ವೋಲ್ವೊ ಹೆಡ್‌ ಲೈಟ್‌ ಗಳನ್ನು ನೆನಪಿಸುತ್ತವೆ. ಇದರ ಬಂಪರ್‌ ನಲ್ಲಿ ದೊಡ್ಡದಾದ ಏರ್‌ ಡ್ಯಾಮ್‌, ಸಿಲ್ವರ್‌ ಸ್ಕಿಡ್‌ ಪ್ಲೇಟ್‌, ಫ್ರಂಟ್‌ ಪಾರ್ಕಿಂಗ್‌ ಸೆನ್ಸಾರ್‌ ಗಳು ಮತ್ತು ಫಾಗ್‌ ಲ್ಯಾಂಪ್‌ ಗಳು, ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ ಗಳಿಗಾಗಿ (ADAS) ಬಳಸಲಾಗುವ ರೇಡಾರ್‌ ಅನ್ನು ಕಾಣಬಹುದು.

Renault Kardian side
Renault Kardian rear

ಇದರ ಪ್ರೊಫೈಲ್‌ ನಲ್ಲಿ, ಎದ್ದು ಕಾಣುವ ಫಂಕ್ಷನಲ್‌ ರೂಫ್‌ ರೇಲ್‌ ಗಳು (80kg ತನಕದ ಭಾರವನ್ನು ಹೊತ್ತುಕೊಳ್ಳಬಲ್ಲದು), 17-ಇಂಚ್‌ ಡ್ಯುವಲ್‌ ಟೋನ್‌ ಅಲೋಯ್‌ ವೀಲ್‌ ಗಳು ಮತ್ತು ಫ್ಲೋಟಿಂಗ್‌ ರೂಫ್‌ ನಂತಹ ಪರಿಣಾಮವನ್ನು ಒಳಗೊಳ್ಳಲಾಗಿದೆ. ಹಿಂಭಾಗದಲ್ಲಿ ಈ SUV ಯು ಸರಳ ರೀತಿಯ ನೋಟವನ್ನು ಹೊಂದಿದು, ರೆನೋ ಕೈಗರ್‌ ನಲ್ಲಿರುವಂತಹ C ಆಕಾರದ LED ಟೇಲ್‌ ಲೈಟ್‌ ಗಳು, ಮತ್ತು ಸಿಲ್ವರ್‌ ಸ್ಕಿಡ್‌ ಪ್ಲೇಟ್‌ ಹೊಂದಿರುವ ದಪ್ಪನೆಯ ಬಂಪರ್‌ ಅನ್ನು ಇಲ್ಲಿ ನೋಡಬಹುದು.

Renault Kardian cabin
Renault Kardian 8-inch touchscreen

ರೆನೋ ಸಂಸ್ಥೆಯು ಕಾರ್ಡಿಯನ್‌ ಕಾರಿನ ಕ್ಯಾಬಿನ್‌ ಗೆ ಸಂಪೂರ್ಣ ಕಪ್ಪು ಥೀಮ್‌ ಆನ್ನು ಆರಿಸಿಕೊಂಡಿದ್ದು, ಸ್ಟೀಯರಿಂಗ್‌ ವೀಲ್‌, AC ವೆಂಟ್‌ ಗಳು ಮತ್ತು ಸೆಂಟರ್‌ ಕನ್ಸೋಲ್‌ ಗೆ ಬೆಳ್ಳಿಯ ಛಾಯೆಯನ್ನು ನೀಡಲಾಗಿದೆ. ಡ್ಯಾಶ್‌ ಬೋರ್ಡ್‌ ನಲ್ಲಿ ಗ್ಲೋಸ್‌ ಬ್ಲ್ಯಾಕ್‌ ಇನ್ಸರ್ಟ್‌ ಇದ್ದು, ಇದನ್ನು ಡ್ಯಾಶ್‌ ಬೋರ್ಡ್‌ ನ ಉದ್ದಕ್ಕೂ ಕಾಣಬಹುದಾಗಿದ್ದು ಎಲ್ಲಾ AC ವೆಂಟ್‌ ಗಳನ್ನು ಇದು ಒಳಗೊಂಡಿದೆ. ಈ SUV ಯು ಡೋರ್‌ ಪ್ಯಾಡ್‌ ಗಳು, ಫ್ರಂಟ್‌ ಸೆಂಟರ್‌ ಆರ್ಮ್‌ ರೆಸ್ಟ್‌, ಮತ್ತು ಸೀಟುಗಳ ಮೇಲೆ ಬಟ್ಟೆಯ ಅಫೋಲ್ಸ್ಟರಿ ಮತ್ತು ಕಂಟ್ರಾಸ್ಟ್‌ ಆರೆಂಜ್‌ ಹೊಲಿಗೆಯನ್ನು ಹೊಂದಿದ್ದು ರೆನೋ ಲೋಗೋವನ್ನು ಇದರ ಮೇಲೆ ಮೂಡಿಸಲಾಗಿದೆ. ರೆನೋ ಸಂಸ್ಥೆಯು, ಸಿಟ್ರಾನ್‌ eC3 ಮತ್ತು C5 ಏರ್‌ ಕ್ರಾಸ್‌ ಕಾರುಗಳಲ್ಲಿ ಇರುವಂತೆಯೇ ಜಾಯ್‌ ಸ್ಟಿಕ್‌ ಶೈಲಿಯ ಅತ್ಯಂತ ಆಧುನಿಕ ಗೇರ್‌ ಸೆಲೆಕ್ಟರ್‌ ಜೊತೆಗೆ ಹೊರಬರಲಿದೆ. 

 ಇದನ್ನು ಸಹ ನೋಡಿರಿ: ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಆರಿಸಿಕೊಂಡ ಶ್ರದ್ಧಾ ಕಪೂರ್‌, ಹೊಸ ರೇಂಜ್‌ ರೋವರ್‌ ಸ್ಪೋರ್ಟ್‌ ಪಡೆದ ಅನುಭವ್‌ ಸಿಂಗ್

ರೆನೋ ಕೈಗರ್‌ ಫೇಸ್‌ ಲಿಫ್ಟ್‌ ಅನ್ನು ಉತ್ತೇಜಿಸಬಹುದು

Renault Kiger

ವಿನ್ಯಾಸದಲ್ಲಿ ಮಾಡಲಾಗುವ ಈ ಬದಲಾವಣೆಗಳು ಪರಿಷ್ಕೃತ ರೆನೋ ಕೈಗರ್ ಕಾರಿನ ನೋಟಕ್ಕೆ ಪ್ರೇರಣೆ ನೀಡುವ ಸಾಧ್ಯತೆ ಇದೆ. ಪರಿಷ್ಕೃತ ಕೈಗರ್‌ ಅನ್ನು 2024ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೈಗರ್‌ ಕಾರಿನ ಹೊರಾಂಗಣದಂತೆಯೇ, ಒಳಾಂಗಣವನ್ನು ಪರಿಷ್ಕರಿಸುವ ಸಂದರ್ಭದಲ್ಲಿಯೂ ಕಾರ್ಡಿಯನ್‌ ಕಾರಿನ ಕ್ಯಾಬಿನ್‌ ನಿಂದ ಸುಳಿವನ್ನು ಪಡೆಯಬಹುದು.

 

ಗುಣಲಕ್ಷಣಗಳು ಮತ್ತು ಸುರಕ್ಷತೆ

Renault Kardian 7-inch digital driver's display

ರೆನೋ ಕಾರ್ಡಿಯನ್‌ ಕಾರು 7 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, 8 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ (ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ), 8 ಬಣ್ಣಗಳ ಆಂಬಿಯೆಂಟ್‌ ಲೈಟಿಂಗ್, ಪ್ಯಾಡಲ್‌ ಶಿಫ್ಟರ್‌ ಗಳು, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್, ಮತ್ತು ಅಟೋ AC ಇತ್ಯಾದಿಗಳನ್ನು ಹೊಂದಿದೆ. ಇದು ಒಟ್ಟು 4 USB ಪೋರ್ಟ್‌ ಗಳನ್ನು (ಮುಂಭಾಗದಲ್ಲಿ 2 ಮತ್ತು ಹಿಂಭಾಗದಲ್ಲಿ 2) ಕಾಣಬಹುದಾಗಿದೆ.

Renault Kardian 6 airbags

ಇದರ ಸುರಕ್ಷತಾ ಪಟ್ಟಿಯು 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC),‌ ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಬ್ರೇಕ್, ಮತ್ತು 360 ಡಿಗ್ರಿ ಕ್ಯಾಮರಾವನ್ನು ಹೊಂದಿದೆ. ಇದು 13 ADAS ವೈಶಿಷ್ಟ್ಯಗಳನ್ನು ಹೊಂದಿದ್ದು ಇದರಲ್ಲಿ ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್, ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್‌, ಮತ್ತು ಫ್ರಂಟ್‌ ಕೊಲಿಶನ್‌ ವಾರ್ನಿಂಗ್‌ ಇತ್ಯಾದಿಗಳು ಒಳಗೊಂಡಿವೆ.

ಇದನ್ನು ಸಹ ಓದಿರಿ: ಭಾರತದಲ್ಲಿ ವೈರ್‌ ಲೆಸ್‌ ಚಾರ್ಜರ್‌ ಹೊಂದಿರುವ ರೂ. 10 ಲಕ್ಷಕ್ಕಿಂತಲೂ ಕಡಿಮೆ ಬೆಲೆಯ 7 ಕಾರುಗಳು‌

ನವೀನ ಪವರ್‌ ಟ್ರೇನ್

ಈ ಫ್ರೆಂಚ್‌ ಕಾರು ತಯಾರಕ ಸಂಸ್ಥೆಯು ಕಾರ್ಡಿಯನ್‌ ಕಾರಿನ ಮೂಲಕ ಹೊಸ ಪವರ್‌ ಟ್ರೇನ್‌ ಅನ್ನು ಪರಿಚಯಿಸಲಿದೆ. ಇದು ಡೈರೆಕ್ಟ್‌ ಇಂಜೆಕ್ಷನ್‌ ಜೊತೆಗೆ 1-ಲೀಟರ್, 3-ಸಿಲಿಂಡರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಹೊಂದಿದ್ದು, 120PS ಮತ್ತು 220Nm ಉಂಟು ಮಾಡುತ್ತದೆ. ಇದನ್ನು 6 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ (DCT) ಜೊತೆಗೆ ಹೊಂದಿಸಲಾಗಿದ್ದು, ಮೊದಲ ಬಾರಿಗೆ ರೆನೋ ಸಂಸ್ಥೆಯು ಲ್ಯಾಟಿನ್‌ ಅಮೇರಿಕಾದಲ್ಲಿ ಈ ರೀತಿಯ ಸಂಯೋಜನೆಯನ್ನು ಪರಿಚಯಿಸುತ್ತದೆ. ಕಾರ್ಡಿಯನ್‌ ಕಾರು 3 ಡ್ರೈವಿಂಗ್‌ ಮೋಡ್‌ ಗಳನ್ನು ಹೊಂದಿರಲಿದೆ. ಅವೆಂದರೆ ಇಕೋ, ಸ್ಪೋರ್ಟ್‌ ಮತ್ತು ಮೈಸೆನ್ಸ್.

ಕಾರ್ಡಿಯನ್‌ ಕಾರು ಇಲ್ಲಿನ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದ್ದರೂ ರೆನೋ ಸಂಸ್ಥೆಯು ಒಂದೆರಡು ವರ್ಷದಲ್ಲಿ ಮೂರನೇ ತಲೆಮಾರಿನ ಡಸ್ಟರ್‌ ಕಾರನ್ನು ಭಾರತದಲ್ಲಿ ಪರಿಚಯಿಸಲಿದ್ದು, ಇದು ಸದ್ಯವೇ ಅನಾವರಣಗೊಳ್ಳಲಿದೆ. ಅಲ್ಲಿಯ ತನಕ ರೆನೋ ಕಾರ್ಡಿಯನ್‌ ಕುರಿತು ನೀವು ಏನೆಲ್ಲ ಅರಿತುಕೊಂಡಿದ್ದೀರಿ ಮತ್ತು ಭಾರತದಲ್ಲಿ ನೀವು ಈ ವಾಹನವನ್ನು ನೋಡಲು ಇಚ್ಛಿಸುತ್ತೀರಾ ಎಂಬುದನ್ನು ನಮಗೆ ತಿಳಿಸಿರಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಕಾರ್ಡಿಯನ್

1 ಕಾಮೆಂಟ್
1
A
alapati chandra sekhar
Nov 4, 2023, 4:57:38 PM

Which batteries are using and the capacity

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience