ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಆರಿಸಿಕೊಂಡ ಶ್ರದ್ಧಾ ಕಪೂರ್, ಹೊಸ ರೇಂಜ್ ರೋವರ್ ಸ್ಪೋರ್ಟ್ ಪಡೆದ ಅನುಭವ್ ಸಿಂಗ್
ಲ್ಯಾಂಬೋರ್ಘಿನಿ ಹರಾಕನ್ ಇವೊ ಗಾಗಿ shreyash ಮೂಲಕ ಅಕ್ಟೋಬರ್ 26, 2023 12:54 pm ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಕಾರು ರೂ. 4.04 ಕೋಟಿಯಷ್ಟು ಬೆಲೆಯನ್ನು ಹೊಂದಿದ್ದರೆ, ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನ ಬೆಲೆಯು ರೂ. 1.64 ಕೋಟಿಯಿಂದ ಪ್ರಾರಂಭವಾಗುತ್ತದೆ.
- ಶ್ರದ್ಧಾ ಕಪೂರ್ ಅವರ ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಕಾರು ರೋಸೊ ಮಾರ್ಸ್ (ಕೆಂಪು) ಹೊರಾಂಗಣ ಛಾಯೆಯಲ್ಲಿ ಸಿದ್ಧಗೊಂಡಿದೆ.
- ಹುರಾಕನ್ ಟೆಕ್ನಿಕಾ ಕಾರು 5.2 ಲೀಟ್ V10 ಬಳಸಿಕೊಂಡು 639PS ಮತ್ತು 565Nm ಉಂಟು ಮಾಡುತ್ತದೆ.
- ಅನುಭವ್ ಸಿಂಗ್ ಬಸ್ಸಿ ಅವರು ಸಾಂತೋರಿನಿ ಬ್ಲ್ಯಾಕ್ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಖರೀದಿಸಿದ್ದಾರೆ.
- ಸದ್ಯಕ್ಕೆ ರೇಂಜ್ ರೋವರ್ ಸ್ಪೋರ್ಟ್ ಕಾರು ಭಾರತದಲ್ಲಿ ಡೀಸೆಲ್ ಎಂಜಿನ್ ನಲ್ಲಿ ಮಾತ್ರವೇ ಲಭ್ಯವಿದ್ದು 3 ಲೀಟರ್ ಎಂಜಿನ್ ಮೂಲಕ 345PS ಮತ್ತು 700Nm ಉಂಟು ಮಾಡುತ್ತದೆ.
ಈ ಬಾರಿಯ ಹಬ್ಬದ ಅವಧಿಯಲ್ಲಿ ಭಾರತೀಯ ನಟಿ ಶ್ರದ್ಧಾ ಕಪೂರ್ ಮತ್ತು ಹಾಸ್ಯನಟ ಅನುಭವ್ ಸಿಂಗ್ ಬಸ್ಸಿ ಇವರಿಬ್ಬರ ಮನೆಯ ಎದುರು ಹೊಸ ಕಾರುಗಳು ಕಂಗೊಳಿಸಲಿವೆ. ಶ್ರದ್ಧಾ ಅವರು ಲಾಂಬೋರ್ಗಿನಿ ಹುರಕಾನ್ ಟೆಕ್ನಿಕಾ ಕಾರನ್ನು ಖರೀದಿಸಿದರೆ, ಬಸ್ಸಿ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಆರಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ತಾರೆಗಳು ಇತ್ತೀಚೆಗೆ ʻತು ಜೂಠಿ ಮೈಂ ಮಕ್ಕರ್ʼ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದು, ಬಸ್ಸಿ ಅವರು ಪೋಷಕ ನಟನ ಪಾತ್ರವನ್ನು ನಿಭಾಯಿಸಿದ್ದಾರೆ. ಅವರ ಹೊಸ ಕಾರುಗಳು ಏನೆಲ್ಲ ವಿಶೇಷತೆಗಳನ್ನು ಹೊಂದಿವೆ ಎಂಬುದನ್ನು ನೋಡೋಣ.
ಶ್ರದ್ಧಾ ಅವರ ಲಾಂಬೋರ್ಗಿನಿ
ಶ್ರದ್ಧಾ ಅವರ ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಕಾರು ರೋಸೊ ಮಾರ್ಸ್ (ಕೆಂಪು) ಹೊರಾಂಗಣ ಛಾಯೆಯಲ್ಲಿ ಸಿದ್ಧಗೊಂಡಿದೆ. ಹುರಾಕನ್ ಟೆಕ್ನಿಕಾ ಕಾರು 5.2-ಲೀಟರ್ V10 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 639PS ಮತ್ತು 565Nm ನಷ್ಟು ಅಗಾಧ ಪ್ರಮಾಣದ ಶಕ್ತಿಯನ್ನುಂಟು ಮಾಡುತ್ತದೆ. ಇದು ಕೇವಲ 3.2 ಸೆಕೆಂಡುಗಳಲ್ಲಿ 100kmph ವೇಗವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಗರಿಷ್ಠ 325kmph ವೇಗದಲ್ಲಿ ಚಲಿಸಬಲ್ಲದು.
ಈ V10 ಸೂಪರ್ ಕಾರ್ ರೂ. 4.04 ಕೋಟಿಯಷ್ಟು (ಎಕ್ಸ್-ಶೋರೂಂ ಪಾನ್ ಇಂಡಿಯಾ) ಬೆಲೆಗೆ ಲಭ್ಯ.
ಇದನ್ನು ಸಹ ನೋಡಿರಿ: ಭಾರತದಲ್ಲಿ ವೈರ್ ಲೆಸ್ ಚಾರ್ಜರ್ ಹೊಂದಿರುವ ರೂ. 10 ಲಕ್ಷಕ್ಕಿಂತಲೂ ಕಡಿಮೆ ಬೆಲೆಯ 7 ಕಾರುಗಳು
ಬಸ್ಸಿ ಅವರು ರೇಂಜ್ ರೋವರ್ ಸ್ಪೋರ್ಟ್
ಬಸ್ಸಿ ಅವರು ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಕಾರು ಸಾಂತೋರಿನಿ ಬ್ಲ್ಯಾಕ್ ಹೊರಾಂಗಣ ಬಣ್ಣವನ್ನು ಹೊಂದಿದೆ. ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಕಾರು 3-ಲೀಟರ್ 6-ಸಿಲಿಂಡರ್ ಮೈಲ್ಡ್ ಹೈಬ್ರೀಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು 345PS ಮತ್ತು 700Nm ಉಂಟು ಮಾಡುತ್ತದೆ. ಇದನ್ನು ಪ್ರಮಾಣಿತ 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಮತ್ತು ಆಲ್ ವೀಲ್ ಡ್ರೈವ್ ಟ್ರೇನ್ (AWD) ಜೊತೆಗೆ ಹೊಂದಿಸಲಾಗುತ್ತದೆ.
ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಕಾರು ರೂ. 1.64 ಕೋಟಿಯಿಂದ ರೂ. 1.84 ಕೋಟಿಯಷ್ಟು ಬೆಲೆಯನ್ನು ಹೊಂದಿದೆ. ಈ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಹೊಸ ಪ್ಲಗ್ ಇನ್ ಹೈಬ್ರೀಡ್ ಪೆಟ್ರೋಲ್ ಆವೃತ್ತಿಯನ್ನು ಹೊರತರಲಿದ್ದು, ಇದರ ಬುಕಿಂಗ್ ಈಗಾಗಲೇ ಪ್ರಾರಂಭಗೊಂಡಿದೆ.
ಇದನ್ನು ಸಹ ನೋಡಿರಿ: ಈ ಹಬ್ಬದ ಅವಧಿಯಲ್ಲಿ ರಿಯಾಯಿತಿಯಲ್ಲಿ ದೊರೆಯಲಿರುವ ಏಕೈಕ ಮಾರುತಿ SUV ಇದು
ಇತ್ತೀಚೆಗೆ, ಲಾಂಬೋರ್ಗಿನಿ ಸಂಸ್ಥೆಯು ಭಾರತದಲ್ಲಿ ಮೊತ್ತಮೊದಲ ಹುರಾಕನ್ ಸ್ಟೆರಟೊ ಕಾರನ್ನು ವಿತರಣೆ ಮಾಡಿದ್ದು, ಇದು ಆಫ್ ರೋಡ್ ಮೇಲೆ ಗಮನ ಹರಿಸುವ ಹುರಾಕನ್ ಮಾದರಿಯಾಗಿದೆ. ಇದು ಸಹ 5.2-ಲೀಟರ್ V10 ಟರ್ಬೊ ಪೆೋಲ್ ಎಂಜಿನ್ ಅನ್ನು ಬಳಸುತ್ತಿದ್ದು, ಗರಿಷ್ಠ ವೇಗವು 260kmph ಕ್ಕೆ ಸೀಮಿತವಾಗಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಲಾಂಬೋರ್ಗಿನಿ ಹುರಾಕನ್ EVO ಅಟೋಮ್ಯಾಟಿಕ್