ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ಅನ್ನು ನೋಡಲಾಗಿದೆ ಮರೆಮಾಚುವಿಕೆ ಇಲ್ಲದೆ ಬಿಡುಗಡೆಗೂ ಮುನ್ನ
ರೆನಾಲ್ಟ್ ಕ್ವಿಡ್ 2015-2019 ಗಾಗಿ rohit ಮೂಲಕ ಸೆಪ್ಟೆಂಬರ್ 27, 2019 04:45 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಇಂಡಿಯಾ ಸ್ಪೆಕ್ ಕ್ವಿಡ್ ಫೇಸ್ ಲಿಫ್ಟ್ ಹೇಗೆ ಕಾಣುತ್ತದೆ ಹೊರಗಡೆಯಿಂದ ಎಂದು ನೋಡಬಹುದು
- ಕ್ವಿಡ್ ಫೇಸ್ ಲಿಫ್ಟ್ ನೋಡಲು ಚೀನಾ ದಲ್ಲಿ ಮಾರಾಟವಾಗುತ್ತಿರುವ ಸಿಟಿ K-ZE ತರಹ ಇದೆ
- ಇದರಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ ಅಪ್ ಕೊಡಲಾಗಿದೆ ಜೊತೆಗೆ ಹೊಸ ಗ್ರಿಲ್ ಹಾಗು ಫ್ರಂಟ್ ಬಂಪರ್ ಸಹ
- ಇದರಲ್ಲಿ ಟ್ರೈಬೆರ್ ನಲ್ಲಿರುವ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ತರಹದ ಸಿಸ್ಟಮ್ ಕೊಡಲಾಗುವುದು
- ಇದನ್ನು ಅದೇ 800cc ಮತ್ತು 1.0-ಲೀಟರ್ ಪವರ್ ಟ್ರೈನ್ ಆಯ್ಕೆಯೊಂದಿಗೆ ಕೊಡಲಾಗುವುದು ಹಿಂದಿನಂತೆ
- ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ಬೆಲೆ ಪಟ್ಟಿ ಈಗಿರುವ ಮಾಡೆಲ್ ಗಿಂತ ಕಡಿಮೆ ಪ್ರೀಮಿಯಂ ನಲ್ಲಿ ಕೊಡಲಾಗಬಹುದು.
ಕ್ವಿಡ್ ಫೇಸ್ ಲಿಫ್ಟ್ , ಮುಂದಿನ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಅದನ್ನು ಮರೆಮಾಚುವಿಕೆಗಳು ಇಲ್ಲದೆ ಮೊದಲ ಬಾರಿಗೆ ನೋಡಲಾಗಿದೆ. ಇದು ಮಾರುತಿ ಸುಜುಕಿ S -ಪ್ರೆಸ್ಸೋ ಜೊತೆಗೆ ಸ್ಪರ್ದಿಸುತ್ತದೆ, ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಬಹಳಷ್ಟು ಹೊರಗಡೆಯ ಫೀಚರ್ ಗಳ ನವೀಕರಣ ಮಾಡಲಾಗಿದೆ ಈಗಿರುವ ಮಾಡೆಲ್ ಗಿಂತಲೂ ಹೆಚ್ಚಾಗಿ.
ಚೀನಾ ದಲ್ಲಿ ಮಾರಾಟವಾಗುತ್ತಿರುವ ಕ್ವಿಡ್ EV ಅವತರಣಿಕೆಯಾದ ಸಿಟಿ K-ZE, ಇಂದ ಪ್ರೇರಣೆ ಪಡೆದು, ಇದರಲ್ಲಿ ಸ್ಪ್ಲಿಟ್ ಹೆಡ್ ಲೈಟ್ ಸೆಟ್ ಅಪ್ ಜೊತೆಗೆ LED DRL ಗಳು ಕೊಡಲಾಗಿದೆ ಹೆಡ್ ಲ್ಯಾಂಪ್ ಗಳ ಮೇಲೆ ಲೋಯರ್ ಬಂಪರ್ ನಲ್ಲಿ ಸೇರಿರುವಂತೆ. ಹಾಗು, ರೆನಾಲ್ಟ್ ಗ್ರಿಲ್ ನ ಅಳತೆ ಹೆಚ್ಚಿಸಿದೆ ಮತ್ತು ಫ್ಯಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಸಹ ಕೊಡುತ್ತಿದೆ ಮುಂಬದಿ ಹಾಗು ಹಿಂಬದಿ ಬಂಪರ್ ಗಳ ಮೇಲೆ ಅವುಗಳನ್ನು ಹೊರಹೋಗುತ್ತಿರುವ ಕ್ವಿಡ್ ಕ್ಲಾಇಂಬರ್ ನಲ್ಲಿ ಕಾಣಬಹುದು. ರೇರ್ ಬಂಪರ್ ಡಿಸೈನ್ ಮತ್ತು ಟೈಲ್ ಲೈಟ್ ಗಳನ್ನು ಸಹ ಚೆನ್ನಾಗಿರುವಂತೆ ಮಾಡಲಾಗಿದೆ. ನೋಡಲಾದ ಆವೃತ್ತಿ ಕ್ಲಾಇಂಬೆರ್ ವೇರಿಯೆಂಟ್ ಆಗಿರಬಹುದು ಏಕೆಂದರೆ ಅದರಲ್ಲಿ ಆರೆಂಜ್ ಅಸ್ಸೇನ್ಟ್ ಗಳನ್ನು , ಡೆಕ್ಕಲ್ ಗಳನ್ನು , ರೂಫ್ ರೈಲ್ ಗಳನ್ನು ಹಾಗು ಗನ್ ಮೆಟಲ್ ಅಲಾಯ್ ಅನ್ನು ಕೊಡಲಾಗಿದೆ.
ಫ್ರೆಂಚ್ ಕಾರ್ ಮೇಕರ್ ನಲ್ಲಿ ಅದೇ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ ಮತ್ತು ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಕೊಡಲಾಗಿದೆ ಅದರ ಹೊಸದಾಗಿ ಬಿಡುಗಡೆ ಆದ ಟ್ರೈಬರ್ MPV ಯಂತೆ. ಇದರಲ್ಲಿ ಆರೆಂಜ್ ಬಣ್ಣದ ಬಣ್ಣಗಳ ಇನ್ಸರ್ಟ್ ಗಳು AC ವೆಂಟ್ ಗಳ ಮೇಲೆ ಮತ್ತು ಗೇರ್ ಕ್ನೋಬ್ ಮೇಲೆ ಕೊಡಲಾಗಿದೆ ಕ್ಲಇಂಬೆರ್ ವೇರಿಯೆಂಟ್ ನಲ್ಲಿ ಕೊಟ್ಟಿರುವಂತೆ.
ಎಂಜಿನ್ ಆಯ್ಕೆ ವಿಷಯದಲ್ಲಿ, ಇದರಲ್ಲಿ ಅದೇ 0.8- ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಆಯ್ಕೆಗಳನ್ನು ಕೊಡಲಾಗುವುದು ಹಿಂದಿನಂತೆ. ಮೊದಲನೆಯದು 54PS ಗರಿಷ್ಟ ಪವರ್ ಮತ್ತು 72Nm ಗರಿಷ್ಟ ಟಾರ್ಕ್ ಕೊಡುತ್ತದೆ , 1.0- ಲೀಟರ್ ಮೋಟಾರ್ ನಿಂದ 68PS ಗರಿಷ್ಟ ಪವರ್ ಹಾಗು 91Nm ಟಾರ್ಕ್ ದೊರೆಯುತ್ತದೆ. ಎರೆಡೂ ಎಂಜಿನ್ ಗಳು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಬರುತ್ತದೆ , 1.0- ಲೀಟರ್ ನಲ್ಲಿ ನಿಮಗೆ ಆಯ್ಕೆಯಾಗಿ 5- ಸ್ಪೀಡ್ AMT ದೊರೆಯುತ್ತದೆ. ರೆನಾಲ್ಟ್ ಅವುಗಳನ್ನು BS6- ಕಂಪ್ಲೇಂಟ್ ಯುನಿಟ್ ಗಳಾಗಿರುವಂತೆ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಬಹುದು 1 ಏಪ್ರಿಲ್ 2020 ನಂತರ.
ಕ್ವಿಡ್ ಫೇಸ್ ಲಿಫ್ಟ್ ಬೆಲೆ ಪಟ್ಟಿ ಈಗಿರುವ ಮಾಡೆಲ್ ಗಿಂತಲೂ ಹೆಚ್ಚಿನ ಪ್ರೀಮಿಯಂ ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು. ಅದರ ಬೆಲೆ ಪಟ್ಟಿ, ರೂ 2.76 ಲಕ್ಷ ದಿಂದ ರೂ 4.76 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಬಿಡುಗಡೆ ಆದಾಗ , ಅದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಆಲ್ಟೊ, ಡಾಟ್ಸನ್ ರೆಡಿ -GO ಮತ್ತು ಮುಂಬರುವ ಮಾರುತಿ S-ಪ್ರೆಸ್ಸೋ ಗಳ ಜೊತೆ ಇರುತ್ತದೆ.