ಕೈಗರ್‌ನ ಕೇವಲ 1 ವೇರಿಯೆಂಟ್‌ನ ಬೆಲೆಯನ್ನು ಕಡಿತಗೊಳಿಸುತ್ತಿದೆ ರೆನಾಲ್ಟ್
ರೆನಾಲ್ಟ್ ಕೈಗರ್ 2021-2023 ಗಾಗಿ rohit ಮೂಲಕ ಮೇ 05, 2023 10:38 am ರಂದು ಮಾರ್ಪಡಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕೈಗರ್‌ನ RXT (O) ವೇರಿಯೆಂಟ್ ಅಲಾಯ್ ವ್ಹೀಲ್‌ಗಳು, ಎಲ್‌ಇಡಿ ಲೈಟಿಂಗ್ ಮತ್ತು ಟಚ್‌ಸ್ಕ್ರೀನ್ ಇನ್‌ಫೋಟೇನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತಿದೆ
- ರೆನಾಲ್ಟ್ RXT (O) ಎಂಟಿ ವೇರಿಯೆಂಟ್‌ನ ಬೆಲೆಯನ್ನು ರೂ. 25,000 ಗಳಷ್ಟು ಕಡಿತಗೊಳಿಸಿದ್ದು, ಈಗ ಅದನ್ನು ರೂ. 7.99 ಲಕ್ಷಕ್ಕೆ (ಎಕ್ಸ್-ಶೋರೂಂ) ಮಾರಾಟ ಮಾಡುತ್ತಿದೆ.
- ಈ RXT (O) 8-ಇಂಚಿನ ಟಚ್‌ಸ್ಕ್ರೀನ್ ಮತ್ತು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಪಡೆಯುತ್ತದೆ
- ಇದರ ಸುರಕ್ಷತಾ ಕಿಟ್ ನಾಲ್ಕು ಏರ್‌ಬ್ಯಾಗ್‌ಗಳು, ಇಎಸ್‌ಪಿ ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಒಳಗೊಂಡಿದೆ.
- ಎಸ್‌ಯುವಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: 1-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಯೂನಿಟ್ ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್.
- ರೆನಾಲ್ಟ್ ಈ ಕೈಗರ್‌ನ ಬೆಲೆಯನ್ನು ರೂ. 6.5 ಲಕ್ಷದಿಂದ ರೂ. 11.23 ಲಕ್ಷಕ್ಕೆ ನಿಗದಿಪಡಿಸಿದೆ (ಎಕ್ಸ್-ಶೋರೂಂ ದೆಹಲಿ).
ಈ ರೆನಾಲ್ಟ್ ಕೈಗರ್‌ನ ಟಾಪ್-ಸ್ಪೆಕ್‌ಗಿಂತಲೇ ಕೆಳಗಿನ ವೇರಿಯೆಂಟ್ ಆಗಿರುವ RXT (O) ಈಗ ಒಂದೆರಡು ಹೊಸ ನವೀಕರಣವನ್ನು ಪಡೆದಿದ್ದು ಇದು ಕೇವಲ ಮ್ಯಾನ್ಯುವಲ್ ಆಯ್ಕೆಗೆ ಮಾತ್ರ ಅನ್ವಯಿಸುತ್ತದೆ. ಒಂದು ಪ್ರಮುಖ ಫೀಚರ್ ಅಪ್‌ಗ್ರೇಡ್ ಜೊತೆಗೆ ಇದರ ಬೆಲೆಯಲ್ಲಿ ಸಹ ಕಡಿತವನ್ನು ಕಂಡಿದೆ.
ಪರಿಷ್ಕೃತ ಬೆಲೆ, ಅದೇ ಫೀಚರ್ ಸೆಟ್
ಇಲ್ಲಿಯವರೆಗೆ, ರೆನಾಲ್ಟ್ RXT (O) ಎಂಟಿಯ ಬೆಲೆಯನ್ನು ರೂ. 8.24 ಲಕ್ಷಕ್ಕೆ ನಿಗದಿಪಡಿಸಿತ್ತು, ಆದರೆ ಈಗ ರೂ. 7.99 ಲಕ್ಷಕ್ಕೆ ನೀಡಲಾಗುತ್ತಿದೆ, ಅಂದರೆ ರೂ. 25,000 ದಷ್ಟು ಬೆಲೆ ಕಡಿತವನ್ನು ಕಂಡಿದೆ.
ಇದು 8-ಇಂಚಿನ ಟಚ್‌ಸ್ಕ್ರೀನ್, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಮತ್ತು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.
ಇತ್ತೀಚಿನ ಸುರಕ್ಷತಾ ನವೀಕರಣ
ರೆನಾಲ್ಟ್ ಫೆಬ್ರವರಿ 2023 ರಲ್ಲಿ ಕಿಗರ್ ಸೇರಿದಂತೆ ತನ್ನ ಎಲ್ಲಾ ಹೊಸ ಕಾರುಗಳ ಸುರಕ್ಷತಾ ಫೀಚರ್ ಪಟ್ಟಿಯನ್ನು ನವೀಕರಣಗೊಳಿಸಿದೆ. ಈ ಎಸ್‌ಯುವಿ ಈಗ ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಗಳನ್ನು ಪ್ರಮಾಣಿತವಾಗಿ ಹೊಂದಿರುತ್ತದೆ. ನಾಲ್ಕು ಏರ್‌ಬ್ಯಾಗ್‌ಗಳು ಮತ್ತು ರಿವರ್ಸಿಂಗ್ ಕ್ಯಾಮರಾ ಸಹ ಇದರಲ್ಲಿ ಒಳಗೊಂಡಿದೆ.
ಇದನ್ನೂ ಓದಿ: ಆಧುನಿಕ ಬ್ರೇಕ್-ಇನ್ ವಿಧಾನಗಳ ಸುತ್ತಲಿನ ಮಿಥ್ಯೆ ಮತ್ತು ಕ್ರಮಾನುಸರಣೆಯನ್ನು ಬಯಲಿಗೆಳೆಯುವಿಕೆ
ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು
ಈ ಕೈಗರ್ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ: 1-ಲೀಟರ್ ನೈಸರ್ಗಿಕ ಆಸ್ಪಿರೇಟೆಡ್ ಯೂನಿಟ್ (72PS/96Nm) ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (100PS/160Nm). ಎರಡೂ ಸಹ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರಮಾಣಿತವಾಗಿ ಜೋಡಿಸಲಾಗಿದೆ, ಮತ್ತು ಎರಡೂ ಯೂನಿಟ್‌ಗಳಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೊದಲಿನದ್ದಕ್ಕೆ ಐಚ್ಛಿಕ 5-ಸ್ಪೀಡ್ ಎಎಂಟಿಯನ್ನು ಮತ್ತು ನಂತರದ್ದಕ್ಕೆ ಸಿವಿಟಿಯನ್ನು ನೀಡಲಾಗಿದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ರೆನಾಲ್ಟ್ ಕೈಗರ್ ಅನ್ನು ರೂ. 6.50 ಲಕ್ಷದಿಂದ ರೂ. 11.23 ಲಕ್ಷದವರೆಗೆ ಮಾರಾಟ ಮಾಡುತ್ತಿದೆ. ಈ ಕೈಗರ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮತ್ತು ನಿಸಾನ್ ಮ್ಯಾಗ್ನೈಟ್ ನಂತಹ ಸಬ್-4m ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ ಮಾತ್ರವಲ್ಲದೇ, ಸಿಟ್ರಾನ್ C3, ಮಾರುತಿ ಫ್ರಾಂಕ್ಸ್ ಮತ್ತು ಮುಂಬರುವ ಹ್ಯುಂಡೈ ಎಕ್ಸ್‌ಟರ್‌ನಂತಹ ಕ್ರಾಸ್-ಹ್ಯಾಚ್‌ಗಳಿಗೂ ಸಹ ಸ್ಪರ್ಧೆಯನ್ನು ಒಡ್ಡುತ್ತದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ
ಇನ್ನಷ್ಟು ಇಲ್ಲಿ ಓದಿ : ರೆನಾಲ್ಟ್ ಕೈಗರ್ AMT