• English
  • Login / Register

ಸ್ಕೋಡಾ ಎನ್ಯಾಕ್ ಇವಿ 2024 ರ ಸಂಭಾವ್ಯ ಬಿಡುಗಡೆಗೂ ಮುನ್ನ ಮತ್ತೆ ಕೇಣಸಿಕ್ಕಿದೆ

ಸ್ಕೋಡಾ ಎನ್ಯಾಕ್ iV ಗಾಗಿ rohit ಮೂಲಕ ಜನವರಿ 10, 2024 05:34 pm ರಂದು ಪ್ರಕಟಿಸಲಾಗಿದೆ

  • 98 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೋಡಾ ಭಾರತಕ್ಕೆ ಎನ್ಯಾಕ್ iV ಇಲೆಕ್ಟ್ರಿಕ್ ಕ್ರಾಸ್‌ಓವರ್ ಅನ್ನು ನೇರ ಆಮದಿನ ಮೂಲಕ ತರುವ ಸಂಭವವಿದ್ದು ಬೆಲೆ ಅಂದಾಜು ಸುಮಾರು ರೂ 60 ಲಕ್ಷ (ಎಕ್ಸ್-ಶೋರೂಂ) ಇರಲಿದೆ.

Skoda Enyaq iV spied

ಸ್ಕೋಡಾ-ಈತನಕ- ತನ್ನ ಜಾಗತಿಕ ಮಾಡೆಲ್‌ಗಳ ವಿಶಾಲ ಶ್ರೇಣಿಯನ್ನು ತಂದಿದ್ದರೂ, ಉದಯೋನ್ಮುಖ ಇವಿ ವಿಭಾಗಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಹೌದು, 2024ರಲ್ಲಿ ಸ್ಕೋಡಾ ಎನ್ಯಾಕ್ iV ಪಾದಾರ್ಪಣೆ ಮಾಡುವ ಮೂಲಕ ಇದು ಬದಲಾಗಬಹುದು, ಕಾರು ತಯಾರಕರು ಇದನ್ನು CBU (ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್) ಆಫರಿಂಗ್ ಆಗಿ ಮಾರಾಟ ಮಾಡುವ ಸಂಭವ ಇದೆ. ಮೇಲಾಗಿ, ನಾವು ಮತ್ತೊಮ್ಮೆ ನಮ್ಮ ರಸ್ತೆಯಲ್ಲಿ ಸ್ಕೋಡಾ ಇವಿ ಪರೀಕ್ಷೆಯನ್ನು ಯಾವುದೇ ಮರೆಮಾಚುವಿಕೆ ಇಲ್ಲದೆಯೇ ಮಾಡಿರುವುದನ್ನು ಸೆರೆಹಿಡಿದಿದ್ದೇವೆ.

ಸ್ಪೈ ಶಾಟ್‌ಗಳಲ್ಲಿ ಗಮನಸಳೆದ ಸಂಗತಿಗಳು

Skoda Enyaq iV side spied

ಸ್ಪೈ ಶಾಟ್ ಮಾಡಲಾದ ಮಾಡೆಲ್ ವೈಟ್ ಎಕ್ಸ್‌ಟೀರಿಯರ್ ಪೈಂಟ್ ಆಯ್ಕೆಯ ಫಿನಿಷ್ ಹೊಂದಿದ್ದು ಇದಕ್ಕೆ ಯಾವುದೇ ಮರೆಮಾಚುವಿಕೆ ಇರಲಿಲ್ಲ ಅಲ್ಲದೇ ಇದು ಸಂಪೂರ್ಣ ಇಲೆಕ್ಟ್ರಿಕ್ ಸ್ವಭಾವಕ್ಕೆ ಏರೋ-ಸ್ಪೆಸಿಫಿಕ್ ಅಲಾಯ್‌ವ್ಹೀಲ್‌ಗಳನ್ನು  ಹೊಂದಿತ್ತು. ಇತರ ಪ್ರಮುಖ ಡಿಸೈನ್ ವಿವರಗಳೆಂದರೆ ಕೂಪ್‌ನಂತಹ ರೂಫ್‌ಲೈನ್ ಮತ್ತು ಸ್ಲೀಕ್ LED ಟೇಲ್‌ಲೈಟ್‌ಗಳು

ನಿರೀಕ್ಷಿಸಲಾದ ಕ್ಯಾಬಿನ್ ವಿವರಗಳು

Skoda Enyaq iV cabin

ಎನ್ಯಾಕ್‌ನ ಇಂಟೀರಿಯರ್ ನೋಟವು ನಮಗೆ ದೊರೆಯದಿದ್ದರೂ, ಜಾಗತಿಕವಾಗಿ ಮಾರಾಟ ಮಾಡಲಾದ ಈ ಮಾಡೆಲ್ ಆಯ್ಕೆ ಮಾಡಿದ ವೇರಿಯೆಂಟ್ ಅನ್ನು ಆಧರಿಸಿ ಕನಿಷ್ಠ ಲೇಔಟ್‌ಗಳು ಮತ್ತು ಅನೇಕ ಥೀಮ್‌ಗಳನ್ನು ಪಡೆದಿದೆ. ಈ ಇಲೆಕ್ಟ್ರಿಕ್ ಕ್ರಾಸ್ಓವರ್ ಫೀಚರ್‌ಗಳು ಹೆಡ್ಸ್-ಅಪ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು 13 ಇಂಚು ಇನ್ಫೋಟೇನ್‌ಮೆಂಟ್ ಯೂನಿಟ್ ಅನ್ನು ಒಳಗೊಂಡಿದೆ.

ಸುರಕ್ಷತಾ ತಂತ್ರಜ್ಞಾನಗಳ ವಿಷಯದಲ್ಲಿ ನಾವು ಎನ್ಯಾಕ್‌ನಿಂದ 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ಕೆಲವು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಇರಬಹುದು ಎಂದು ನಿರೀಕ್ಷಿಸುತ್ತೇವೆ.

ಇದನ್ನೂ ಓದಿ: ಕಳೆದ 2 ವರ್ಷಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡಿದ ಸ್ಕೋಡಾ

ಆಫರ್‌ನಲ್ಲಿರುವ ಇಲೆಕ್ಟ್ರಿಕ್ ಪವರ್‌ಟ್ರೇನ್‌ಗಳು

ಭಾರತ-ಸ್ಪೆಕ್ ಎನ್ಯಾಕ್‌ನ ಆಫರ್‌ನಲ್ಲಿರುವ ಬ್ಯಾಟರಿ ಪ್ಯಾಕ್ ಮತ್ತು ಇಲೆಕ್ಟ್ರಿಕ್ ಮೋಟರ್‌ನ ನಿಖರವಾದ ವಿವರಗಳು ಇನ್ನೂ ತಿಳಿದುಬಂದಿಲ್ಲ. ಅಂತರಾಷ್ಟ್ರೀಯವಾಗಿ, ಎನ್ಯಾಕ್ iV ಮೂರು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ: 52 kWh, 58 kWh, ಮತ್ತು 77 kWh. 52 kWh ಮತ್ತು 58 kWh ನ ಚಿಕ್ಕ ಬ್ಯಾಟರಿ ಪ್ಯಾಕ್‌ಗಳನ್ನು ರಿಯರ್-ವ್ಹೀಲ್ ಡ್ರೈವ್‌ಟ್ರೇನ್‌ ಜೊತೆಗೆ ಜೋಡಿಸಲಾಗಿದೆ, ಕೊನೆಯದನ್ನು ರಿಯರ್-ವ್ಹೀಲ್ ಮತ್ತು ಆಲ್-ವ್ಹೀಲ್ ಡ್ರೈವ್‌ಟ್ರೇನ್‌ನೊಂದಿಗೆ ಪಡೆಯಬಹುದು. 77 kWh ದೊಡ್ಡ ಬ್ಯಾಟರಿ ಪ್ಯಾಕ್ 510 km ಕ್ಲೈಮ್ ಮಾಡಲಾದ ರೇಂಜ್ ನೀಡುತ್ತದೆ.

ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ

Skoda Enyaq iV

ಸ್ಕೋಡಾ ಎನ್ಯಾಕ್ iV ಅನ್ನು ಭಾರತಲ್ಲಿ ಸೆಪ್ಟೆಂಬರ್ 2024ರ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದರ ಬೆಲೆಯನ್ನು ಸುಮಾರು 60 ಲಕ್ಷದಿಂದ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ. ಸ್ಕೋಡಾ EVಯು ಹ್ಯುಂಡೈ ಐಯಾನಿಕ್ 5, ಕಿಯಾ EV6, ಮತ್ತು BMW i4 ಗೆ ಪೈಪೋಟಿ ನೀಡಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಎನ್ಯಾಕ್ iV

Read Full News

explore ಇನ್ನಷ್ಟು on ಸ್ಕೋಡಾ ಎನ್ಯಾಕ್ iv

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience