• English
  • Login / Register

ಟಾಟಾ Curvv EV ವರ್ಸಸ್‌ ಟಾಟಾ Nexon EV: ಯಾವುದು ವೇಗವಾಗಿ ಚಾರ್ಜ್‌ ಆಗುತ್ತದೆ ? ಇಲ್ಲಿದೆ ಉತ್ತರ..

ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಅಕ್ಟೋಬರ್ 14, 2024 08:03 pm ರಂದು ಪ್ರಕಟಿಸಲಾಗಿದೆ

  • 43 Views
  • ಕಾಮೆಂಟ್‌ ಅನ್ನು ಬರೆಯಿರಿ

ಕರ್ವ್‌ ಇವಿಯು ದೊಡ್ಡ 55 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಹಾಗೆಯೇ ನಾವು ಪರೀಕ್ಷಿಸಿದ ನೆಕ್ಸಾನ್‌ ಇವಿಯು 40.5 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು

Tata Curvv EV vs Tata Nexon EV: Which One Charges Quicker In Real World

ಟಾಟಾ ಕರ್ವ್‌ ಇವಿಯನ್ನು ಇತ್ತೀಚೆಗೆ ಭಾರತದಲ್ಲಿ ಮೊದಲ ಮಾಸ್‌ ಮಾರ್ಕೆಟ್‌ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್ ಆಗಿ ಬಿಡುಗಡೆ ಮಾಡಲಾಯಿತು ಮತ್ತು ಇದು ಪ್ರಸ್ತುತ ಟಾಟಾದ ಕಾರುಗಳ ಪಟ್ಟಿಯಲ್ಲಿ ಹೆಚ್ಚಿನ ಬೆಲೆಯ ಇವಿಯಾಗಿದೆ. ಕರ್ವ್‌ ಇವಿಯ ಕೆಳಗೆ, ಟಾಟಾ ನೆಕ್ಸಾನ್‌ ಇವಿ ಇದೆ, ಇದು ಕರ್ವ್‌ ಇವಿಗೆ ಹೋಲಿಸಿದರೆ ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರುವ ಸಬ್‌ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಎರಡೂ ಇವಿಗಳು ಡಿಸಿ ಫಾಸ್ಟ್‌ ಚಾರ್ಜರ್‌ಗಳನ್ನು ಬೆಂಬಲಿಸಿದರೆ, ಇದು 50 ಕಿ.ವ್ಯಾಟ್‌ವರೆಗೆ ಚಾರ್ಜಿಂಗ್ ಸಪೋರ್ಟ್‌ ಅನ್ನು ಹೊಂದಿರುವ ನೆಕ್ಸಾನ್‌ ಇವಿಗೆ ಹೋಲಿಸಿದರೆ ಹೆಚ್ಚಿನ 70 ಕಿ.ವ್ಯಾಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುವ ಕರ್ವ್‌ ಇವಿ ಆಗಿದೆ. ಈ ಟಾಟಾದ ಈ ಎರಡು ಇವಿಗಳಲ್ಲಿ ಯಾವುದು ವೇಗವಾಗಿ ಚಾರ್ಜ್ ಆಗುತ್ತದೆ ಎಂಬುದನ್ನು ನೋಡೋಣ.

ಫಲಿತಾಂಶಗಳತ್ತ ಗಮನಹರಿಸುವ ಮೊದಲು, ನಾವು ಪರೀಕ್ಷಿಸಿದ ಎರಡೂ ಇವಿಗಳ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ನೋಡೋಣ:

ಮೊಡೆಲ್‌

ಟಾಟಾ ಕರ್ವ್‌ ಇವಿ

ಟಾಟಾ ನೆಕ್ಸಾನ್‌ ಇವಿ

ಬ್ಯಾಟರಿ ಪ್ಯಾಕ್‌

55 ಕಿವ್ಯಾಟ್‌

40.5 ಕಿ.ವ್ಯಾಟ್‌

ಡ್ರೈವಿಂಗ್‌ ರೇಂಜ್‌ (MIDC ಪಾರ್ಟ್‌ I + ಪಾರ್ಟ್‌ II)

502 ಕಿ.ಮೀ

390 ಕಿ.ಮೀ

ಪವರ್‌

167 ಪಿಎಸ್‌

145 ಪಿಎಸ್‌

ಟಾರ್ಕ್‌

215 ಎನ್‌ಎಮ್‌

215 ಎನ್‌ಎಮ್‌

ಡಿಸಿ ಫಾಸ್ಟ್ ಚಾರ್ಜಿಂಗ್ ಸಪೋರ್ಟ್

70 ಕಿ.ವ್ಯಾಟ್‌

50 ಕಿ.ವ್ಯಾಟ್‌

ಕ್ಲೈಮ್ ಮಾಡಿದ ಚಾರ್ಜಿಂಗ್ ಸಮಯ (10-80 ಪ್ರತಿಶತ)

40 ನಿಮಿಷಗಳು

56 ನಿಮಿಷಗಳು

ನಮ್ಮ ಚಾರ್ಜಿಂಗ್ ಪರೀಕ್ಷೆಗಾಗಿ, ನಾವು ಕರ್ವ್‌ ಇವಿ ಲಾಂಗ್‌ ರೇಂಜ್‌  55 ಕಿ.ವ್ಯಾಟ್‌ ವೇರಿಯೆಂಟ್‌ ಅನ್ನು ಮತ್ತು ನೆಕ್ಸಾನ್‌ ಇವಿಯ 40.5 ಕಿ.ವ್ಯಾಟ್‌ ವೇರಿಯೆಂಟ್‌ ಅನ್ನು ಬಳಸಿದ್ದೇವೆ. ಬ್ರೋಷರ್‌ನಲ್ಲಿ ತಿಳಿಸಿದಂತೆ, ನೆಕ್ಸಾನ್‌ ಇವಿಯು 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು 16 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಸಹ ಪರಿಶೀಲಿಸಿ: Tata Curvv EV ಚಾರ್ಜಿಂಗ್ ಟೆಸ್ಟ್: ಕಂಪೆನಿ ಹೇಳಿದಷ್ಟು ವೇಗವಾಗಿ ಚಾರ್ಜ್‌ ಆಗುತ್ತಾ ?

ರಿಯಲ್ ವರ್ಲ್ಡ್ ಚಾರ್ಜಿಂಗ್ ಟೆಸ್ಟ್

ಪ್ರತಿಶತ

ಟಾಟಾ ಕರ್ವ್‌ ಇವಿ 55 ಕಿ.ವ್ಯಾಟ್‌

ಟಾಟಾ ನೆಕ್ಸಾನ್‌ ಇವಿ 40.5 ಕಿ.ವ್ಯಾಟ್‌

20-30%

6 ನಿಮಿಷಗಳು

9 ನಿಮಿಷಗಳು

30-40%

6 ನಿಮಿಷಗಳು

9 ನಿಮಿಷಗಳು

40-50%

7 ನಿಮಿಷಗಳು

8 ನಿಮಿಷಗಳು

50-60%

7 ನಿಮಿಷಗಳು

9 ನಿಮಿಷಗಳು

60-70%

7 ನಿಮಿಷಗಳು

8 ನಿಮಿಷಗಳು

70-80%

8 ನಿಮಿಷಗಳು

11 ನಿಮಿಷಗಳು

80-85%

3 ನಿಮಿಷಗಳು

6 ನಿಮಿಷಗಳು

85-90%

6 ನಿಮಿಷಗಳು

6 ನಿಮಿಷಗಳು

90-95%

9 ನಿಮಿಷಗಳು

11 ನಿಮಿಷಗಳು

95-100%

19 ನಿಮಿಷಗಳು

31 ನಿಮಿಷಗಳು

ತೆಗೆದುಕೊಂಡ ಒಟ್ಟು ಸಮಯ(20-100%)

1 ಗಂಟೆ 18 ನಿಮಿಷಗಳು

1 ಗಂಟೆ 48 ನಿಮಿಷಗಳು

ಗಮನಿಸಿದ ಪ್ರಮುಖ ಅಂಶಗಳು

Tata Curvv EV

  • ಟಾಟಾ ಕರ್ವ್‌ ಇವಿಯು ಹೆಚ್ಚಿನ ಡಿಸಿ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಬೆಂಬಲಿಸುವುದರಿಂದ, ಇದು ಮೊದಲಿನಿಂದಲೂ ನೆಕ್ಸಾನ್‌ ಇವಿಗಿಂತ ವೇಗವಾಗಿತ್ತು.

  • 20 ಮತ್ತು 70 ಪ್ರತಿಶತದ ನಡುವೆ, ಪ್ರತಿ 10 ಪ್ರತಿಶತಕ್ಕೆ ಸರಾಸರಿ ಚಾರ್ಜ್ ಸಮಯವು ಕರ್ವ್‌ ಇವಿಗೆ 6-7 ನಿಮಿಷಗಳು, ಆದರೆ ನೆಕ್ಸಾನ್‌ ಇವಿಗಾಗಿ ಇದು 8-9 ನಿಮಿಷಗಳು.

Tata Nexon EV

  • 90 ರಿಂದ 95 ಪ್ರತಿಶತದವರೆಗೆ, ಕರ್ವ್‌ ಇವಿಯು 9 ನಿಮಿಷಗಳನ್ನು ತೆಗೆದುಕೊಂಡರೆ, ನೆಕ್ಸಾನ್‌ ಇವಿ ಅದಕ್ಕಾಗಿ ಹೆಚ್ಚುವರಿ 3 ನಿಮಿಷಗಳನ್ನು ತೆಗೆದುಕೊಂಡಿತು.

  • ಕೊನೆಯ 5 ಪ್ರತಿಶತಕ್ಕೆ, ಕರ್ವ್‌ 19 ನಿಮಿಷಗಳನ್ನು ತೆಗೆದುಕೊಂಡಿತು ಆದರೆ ನೆಕ್ಸಾನ್‌ ಇವಿ ಸುಮಾರು ಅರ್ಧ ಗಂಟೆ ತೆಗೆದುಕೊಂಡಿತು.

  • ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದರೂ ಸಹ, ನೆಕ್ಸಾನ್ ಇವಿಯು ಕರ್ವ್‌ ಇವಿಗೆ ಹೋಲಿಸಿದರೆ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಂಡಿತು.

ಗಮನಿಸಿ:

  • ನಾವು ಟಾಟಾ ಕರ್ವ್‌ ಇವಿಯನ್ನು 0 ಪ್ರತಿಶತದಿಂದ ಚಾರ್ಜ್ ಮಾಡಲು ಪ್ರಾರಂಭಿಸಿದ್ದೇವೆ ಮತ್ತು 0 ರಿಂದ 20 ಪ್ರತಿಶತದಷ್ಟು ಚಾರ್ಜ್ ಮಾಡಲು 10 ನಿಮಿಷಗಳನ್ನು ತೆಗೆದುಕೊಂಡಿತು.

  • ಈ ಎರಡೂ ಚಾರ್ಜಿಂಗ್ ಪರೀಕ್ಷೆಗಳನ್ನು ವಿವಿಧ ತಿಂಗಳುಗಳಲ್ಲಿ ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ನಡೆಸಲಾಯಿತು.

ಟಿಪ್ಪಣಿ

  • ದೀರ್ಘಾವಧಿಯಲ್ಲಿ ಅದರ ಜೀವಿತಾವಧಿ ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಬ್ಯಾಟರಿ ಪ್ಯಾಕ್‌ನ ಅಧಿಕ ಬಿಸಿಯಾಗುವುದನ್ನು ತಡೆಯಲು ಎಲ್ಲಾ ಇವಿಗಳ ಚಾರ್ಜಿಂಗ್ ದರವು 80 ಪ್ರತಿಶತದ ನಂತರ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

  • ಹವಾಮಾನ, ತಾಪಮಾನ ಮತ್ತು ಬ್ಯಾಟರಿ ಆರೋಗ್ಯದಂತಹ ಅನೇಕ ಅಂಶಗಳನ್ನು ಅವಲಂಬಿಸಿ ಚಾರ್ಜಿಂಗ್ ಸಮಯ ಬದಲಾಗಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಟಾಟಾ ಕರ್ವ್‌ ಇವಿ ಆಟೋಮ್ಯಾಟಿಕ್‌ 

was this article helpful ?

Write your Comment on Tata ನೆಕ್ಸಾನ್ ಇವಿ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience